ಅಂಕಣದೇಶಪ್ರಚಲಿತ

“ನನ್ನನ್ನು ನಗ್ನ ಮಾಡ್ತೀನಿ ಅಂತೀಯಲ್ಲ, ತಾಕತ್ತಿದ್ದರೆ ಮಾಡು ನೋಡೋಣ.” ತಿರುಗಿಬಿದ್ದ ಬಸವ ಜ್ಯೋತಿ ಸಂಪಾದಕಿ ಕವನಾ!!!!

ಪ್ರತ್ಯೇಕ ಧರ್ಮವನ್ನು ಸ್ಥಾಪಿಸುವಲ್ಲಿ ಹೋರಾಟ ನಡೆಸುತ್ತಿರುವ ವೀರಶೈವ ಹಾಗೂ ಲಿಂಗಾಯತ ಸಮಾಜದಲ್ಲಿ ಇನ್ನೊಂದು ಹೊಸ ಸುದ್ದಿ ಹೊರಬಿದ್ದಿದೆ. ಈಗಾಗಲೇ ಪರಸ್ಪರ ಕಿತ್ತಾಡಿಗೊಂಡು ಬೀದಿಜಗಳ ಮಾಡುತ್ತಿರುವ ವೀರಶೈವ ಹಾಗೂ ಲಿಂಗಾಯತ ಧರ್ಮ ಪ್ರತ್ಯೇಕವಾಗಬೇಕು ಎನ್ನುವುದರ ವಿರುದ್ಧ ಸಾಕಷ್ಟು ವಾಗ್ದಾಳಿ ನಡೆದಿದೆ. ಸಮಾಜದ ಎಲ್ಲ ವರ್ಗದ ಜನರನ್ನು ಒಂದುಗೂಡಿಸಿದ ಬಸವಣ್ಣ, ಜಾತೀಯತೆಯ ವಿರುದ್ಧ ಸಮರ ಸಾರಿದ ವಿಶ್ವಗುರು ಎನಿಸಿದ ಮಹಾನ್‍ಯೋಗಿ. “ಹೊಲೆಯನೆಂಬುವವನು ಊರ ಹೊರಗಿಹನೇ? ಊರ ಒಳಗಿಲ್ಲವೆ? ಎಂದು ಪ್ರಶ್ನಿಸಿ, ಅಸ್ಪ್ರಶ್ಯತೆಯ ಹೆಸರಿನಲ್ಲಿ ಊರ ಹೊರಗೆ ಇರಿಸಲಾದ ದಲಿತರನ್ನು ಕರೆತಂದು ಸಮಾಜದ ಭಾಗವನ್ನಾಗಿ ಮಾಡಿದ್ದಲ್ಲದೇ, ಪುರೋಹಿತಶಾಹಿ ವ್ಯವಸ್ಥೆ ಮತ್ತು ಧರ್ಮದ ಹೆಸರಿನಲ್ಲಿ ಜನಸಾಮಾನ್ಯರ ಶೋಷಣೆಯನ್ನು ಖಂಡಿಸಿದ್ದಾರೆ ಕೂಡ.

ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣವಾದರು. ಕಾಯಕ ನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿದ್ದ ಇವರ ತತ್ವಗಳನ್ನು ಇಂದು ಎಷ್ಟು ಜನ ಪಾಲಿಸುತ್ತಾರೋ ನಾ ಕಾಣೆ!!!. ಪ್ರತ್ಯೇಕ ಧರ್ಮವನ್ನು ಸೃಷ್ಟಿಸಲು ಮುಂದಾದ ವೀರಶೈವ ಹಾಗೂ ಲಿಂಗಾಯತ ಸಮಾಜದಲ್ಲಿ ಒಂದು ಹೆಣ್ಣು ತನ್ನದೇ ಆದ ವಿಚಾರಧಾರೆಯನ್ನು ಹೇಳಿದ್ದಕ್ಕೇ ಆಕೆಗೆ ಸಿಕ್ಕ ಬಹುಮಾನವಾದರೂ ಏನೂ ಗೊತ್ತ?… ಆ ಹೆಣ್ಣಾದರೂ ಯಾರು ಗೊತ್ತಾ?

‘ಬಸವ ಜ್ಯೋತಿ’ ಮಾಸಿಕ ಪತ್ರಿಕೆಯ ಮುಖ್ಯ ಸಂಪಾದಕರಾದ ಕವನಾ ಫೇಸ್‍ಬುಕ್‍ನಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ ದಿಟ್ಟ ಮಹಿಳೆ. ಆದರೆ ತಮ್ಮ ಅಭಿಪ್ರಾಯ ಮಂಡಿಸಿದ್ದೇ ತಪ್ಪಾಯಿತೋ ಏನೋ ಗೊತ್ತಿಲ್ಲ!!! ಆದರೆ ಈಕೆಗೆ ನಗ್ನವಾಗಿಸುವ ಬೆದರಿಕೆಯನ್ನು ಒಡ್ಡಿದ್ದಾರೆ.

ವೀರಶೈವ ಹಾಗೂ ಲಿಂಗಾಯತ ಸಮಾಜ ಪ್ರತ್ಯೇಕ ಧರ್ಮ ಬೇಕು ಎಂದು ಬೀದಿರಂಪ ಮಾಡಿರುವುದು ಈಗಾಗಲೇ ತಿಳಿದ ವಿಚಾರ. ಆದರೆ ತಮ್ಮದೇ ಆದ ನಿಲುವನ್ನು ಇಟ್ಟುಕೊಂಡಿರುವ ಕವನ ವೀರಶೈವ ಸಮುದಾಯದ ಪ್ರಧಾನ ಮಠವಾದ ರಂಭಾಪುರಿ ಮಠದ ಅನುಯಾಯಿಗಳು ಸಭೆ ಸೇರಿದ್ದಾಗ, ಆ ಸಭೆಗೆ ಬಂದಿದ್ದ ಹಿರಿಯ ನಾಗರಿಕರೊಬ್ಬರು ಲಿಂಗಾಯತ ಪ್ರತ್ಯೇಕ ಧರ್ಮದ ಕರಪತ್ರವನ್ನು ಕೈಯ್ಯಲ್ಲಿ ಹಿಡಿದಿದ್ದಕ್ಕೆ ರಂಭಾಪುರಿ ಮಠದ ಭಕ್ತರು ಆ ಹಿರಿಯರನ್ನು ಹೊಡೆದು ಆಚೆ ಅಟ್ಟಿದ ಪ್ರಸಂಗ ನಡೆದಿತ್ತು. ಈ ವಿಚಾರವಾಗಿ ತಮ್ಮದೇ ಆದ ನಿಲುವನ್ನು ಹೊಂದಿರುವ ಕವನಾ, ಸಭೆಗೆ ಬಂದಿದ್ದ ಹಿರಿಯ ನಾಗರಿಕರೊಬ್ಬನ್ನು ತರಾಟೆ ತೆಗೆದುಕೊಂಡಿದ್ದ ಹಾಗೂ ಹೊಡೆದಟ್ಟಿದ ವಿಡಿಯೋ ತುಣುಕುಗಳನ್ನು ಫೇಸ್‍ಬುಕ್‍ನಲ್ಲಿ ಹಾಕಿದ್ದಾರೆ.

ಅದಲ್ಲದೇ ಈ ವಿಡೀಯೊ ತುಣಿಕಿನೊಂದಿಗೆ ತಮ್ಮದೇ ಆದ ಅನಿಸಿಕೆಯನ್ನು ವ್ಯಕ್ತಪಡಿಸಿರುವ ಕವನಾ, ಹಿರಿಯರ ಮೇಲೆ ಕೈ ಮಾಡಿದ್ದವರ ವಿರುದ್ಧ ಕಿಡಿಕಾರಿದ್ದರು. ಅಷ್ಟೇ ಅಲ್ಲದೆ, ಹಾದಿರಂಪ ಬೀದಿ-ಜಗಳ ಮಾಡುವ ಮೂಲಕ ಲಿಂಗಾಯತರ ಮಾನ-ಮರ್ಯಾದೆಗಳನ್ನು ಮಣ್ಣುಪಾಲು ಮಾಡಿದ ವೀರಶೈವ ಹಾಗೂ ಲಿಂಗಾಯತ ಸಮಾಜ – ಈ ಎರಡೂ ಪಂಗಡಗಳಿಗೆ ಛೀಮಾರಿ ಹಾಕಿದ್ದರು.

ತಮ್ಮ ವಿಚಾರಧಾರೆಯನ್ನು ಮಂಡಿಸಿದ ಕವನಾರ ವಿಚಾರವನ್ನು ಕೆಲವರು ಬೆಂಬಲಿಸಿದ್ದರೆ, ಇನ್ನೂ ಕೆಲವರು ಉಗಿದು ಛೀಮಾರಿ ಹಾಕಿರುವ ಸಂಗತಿಯೂ ನಡೆದಿದೆ. ಮಾತ್ರವಲ್ಲದೇ ಈಕೆಗೆ ನಗ್ನಗೊಳಿಸುವುದಾಗಿ ಬೆದರಿಕೆಯನ್ನೂ ಒಡ್ಡಿ ಹೇಯ ಕೃತ್ಯವನ್ನು ರಾಜೇಶ್ ಎನ್ನುವಾತ ಮಾಡಿದ್ದಾನೆ. ಇದಕ್ಕೆ ಪ್ರತ್ಯುತ್ತರವಾಗಿ, ದಿಟ್ಟತನದಿಂದಲೇ ಉತ್ತರಿಸಿರುವ ಕವನಾ, ”ನಿನ್ನಂಥ ಸಾವಿರಾರು ರಾಜೇಶ್‍ಗಳು ಬಂದರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ನನ್ನನ್ನು ನಗ್ನ ಮಾಡ್ತೀನಿ  ತಾಕತ್ತಿದ್ರೆ ಮಾಡು ನೋಡೋಣ” ಎಂದು ತಿರುಗೇಟು ನೀಡಿದ್ದಾರೆ.

ಬಸವೇಶ್ವರರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ, ನೆಮ್ಮದಿ ಜೀವನ ಕಂಡು ಕೊಳ್ಳಲು ಸಾಧ್ಯ ಎನ್ನುವ ಸಮಾಜ. ವೀರಶೈವ ಹಾಗೂ ಲಿಂಗಾಯಿತರು ತಮಗೆ ಪ್ರತ್ಯೇೀಕ ಧರ್ಮ ಬೇಕೇಂದು ಬೀದಿ ಜಗಳಕ್ಕೆ ಇಳಿದು ತಮ್ಮ ಧರ್ಮದ ನೀತಿಯನ್ನು ಮರೆಯುತ್ತಿದ್ದಾರೋ ಹೇಗೆ?. ಯಾಕಂದರೆ ವೀರಶೈವ ಹಾಗೂ ಲಿಂಗಾಯತರ ನಡುವೆ ಪ್ರತ್ಯೇಕ ಧರ್ಮದ ವಿಚಾರದಲ್ಲಿ, ಫೇಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಕ್ಕೇ ಬೆದರಿಕೆಯನ್ನು ಒಡ್ಡಿರುವುದು ಎಷ್ಟರಮಟ್ಟಿಗೆ ನ್ಯಾಯಯುತವಾಗಿದೆ??

https://www.facebook.com/kavanabasavakumar9/posts/1498533070202199

ಜಾತೀಯತೆಯ ವಿರುದ್ಧ ಸಮರ ಸಾರಿದ ವಿಶ್ವಗುರು ಎನಿಸಿದ ಮಹಾನ್‍ಯೋಗಿಯ ತತ್ವವನ್ನು ಪಾಲಿಸುವ ವೀರಶೈವ ಹಾಗೂ ಲಿಂಗಾಯತ ಸಮಾಜ ಪ್ರತ್ಯೇಕ ಧರ್ಮ ಸ್ಥಾಪಿಸಬೇಕೆನ್ನುವುದು ವಿಪರ್ಯಾಸವೇ ಸರಿ. ಯಾಕಂದರೆ ಬಸವಣ್ಣನವರ ದೃಷ್ಟಿಯಲ್ಲಿ ದೇವನು ಒಬ್ಬನೇ ಮತ್ತು ಅವನು ಮಾನವನಲ್ಲಿದ್ದಾನೆಯೇ ಹೊರತು ಗುಡಿ-ಗುಂಡಾರಗಳಲ್ಲಿ ಅಲ್ಲ. ಕೆಲಸ ಮಾಡಿ ಜೀವನ ನಡೆಸಬೇಕು, ಆಲಸಿ ಜೀವನ ಸಲ್ಲದು ಎಂದಿದ್ದಲ್ಲದೇ. ಸುಳ್ಳು ಹೇಳುವುದು, ವಂಚಿಸುವುದು, ಕೊಲೆ-ಸುಲಿಗೆ ಮಾಡುವುದು, ಪ್ರಾಣಿಬಲಿ ನೀಡುವುದು, ಪರಧನ ಹರಣ, ಪರಸ್ತ್ರೀ ವ್ಯಾಮೋಹ ಹೊಂದುವುದು ಘೋರ ಅಪರಾಧ ಎಂದೂ ಹೇಳಿದ್ದಾರೆ. ಹೀಗಿರಬೇಕಾದರೆ ತನ್ನ ಬಸವಣ್ಣನವರ ತತ್ವವನ್ನು ಪಾಲಿಸುವ ಮಂದಿ ಒಬ್ಬ ಹೆಣ್ಣು ಮಗಳಿಗೆ ಬೆದರಿಕೆಯನ್ನು ಒಡ್ಡಿರುವುದು ಸರಿಯೇ?.

https://www.facebook.com/kavanabasavakumar9/posts/1499063733482466?pnref=story

Tags

Related Articles

Close