ಪ್ರಚಲಿತ

ವಿಜಯದ ನಗೆ ಬೀರಿದ ಮೋದಿ! ಹಾರ್ದಿಕ್ ಪಟೇಲ್‍ಗೆ ಭಾರೀ ಮುಖಭಂಗ! ರಾಹುಲ್ ಹೋದಲ್ಲೆಲ್ಲಾ ಸೋಲೇ ಸೋಲು.. ಇದು ಗುಜರಾತ್ ಚುನಾವಣೆಯ ಈವರೆಗಿನ ಫಲಿತಾಂಶ!!

ಗುಜರಾತ್ ವಿಧಾನ ಸಭಾ ಚುನಾವಣೆ. ಇದು ಕೇವಲ ಗುಜರಾತ್ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ನಡೆಯುವ ಲೋಕಸಭಾ ಚುನಾವಣಾ ರೀತಿಯಂತಿತ್ತು ಈ ಚುನಾವಣೆ. ಒಂದರ್ಥದಲ್ಲಿ ಈ ಚುನಾವಣೆಯನ್ನು ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿತ್ತು. ಚೀನಾ ಅಂತೂ ಬಹಿರಂಗವಾಗಿಯೇ ಗುಜರಾತ್ ಚುನಾವಣೆಯ ಬಗ್ಗೆ ಮಾತನಾಡಿತ್ತು. ಅಂದಹಾಗೆ ಇದು ಕೇವಲವಾದ ಚುನಾವಣೆ ಅಂತು ಖಂಡಿತಾ ಆಗಿರಲೇ ಇಲ್ಲ.

ಎಲ್ಲಾ ಸಮೀಕ್ಷೆಗಳೂ ಈ ಬಾರಿಯೂ ಭಾರತೀಯ ಜನತಾ ಪಕ್ಷವೇ ಅಧಿಕಾರ ಹಿಡಿಯುತ್ತೆ ಅನ್ನುವ ಸಂದೇಶವನ್ನು ಸಾರಿತ್ತು. ಸಮೀಕ್ಷೆಗಳೂ ನಿಜವಾದವು. ಗುಜರಾತ್‍ನಲ್ಲಿ ಮತ್ತೆ ಐತಿಹಾಸಿಕ ಜಯವನ್ನು ಗುಜರಾತ್ ಭಾರತೀಯ ಜನತಾ ಪಕ್ಷ ಸಾಧಿಸುವತ್ತ ದಾಪುಗಾಲಿಡುತ್ತಿದೆ. 22 ವರ್ಷಗಳ ಅಧಿಕಾರವನ್ನು ಸಮರ್ಥವಾಗಿ ಅನುಭವಿಸಿ ಮತದಾರರನ್ನು ಗೆಲ್ಲುವಲ್ಲಿ ಈ ಬಾರಿಯೂ ಯಶಸ್ವಿಯಾಗಿದೆ.

ಒಟ್ಟು 182 ವಿಧಾನ ಸಭಾ ಕ್ಷೇತ್ರಗಳುಲ್ಲ ಗುಜರಾತ್ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲು 92 ಸ್ಥಾನಗಳು ಬೇಕು. 92 ಸ್ಥಾನಗಳನ್ನು ಗಳಿಸಿದರೆ ಗುಜರಾತ್‍ನಲ್ಲಿ ಅಧಿಕಾರವನ್ನು ಹಿಡಿಯಬಹುದಾಗಿದೆ. ಆದರೆ ಈ ಬಾರಿಯೂ ಭಾರತೀಯ ಜನತಾ ಪಾರ್ಟಿ ಐತಿಹಾಸಿಕ ವಿಜಯವನ್ನು ದಾಖಲಿಸುವತ್ತ ಮುನ್ನಡೆ ಸಾಧಿಸುತ್ತಿದ್ದು ಬಿಜೆಪಿಗೆ ಅಧಿಕಾರ ಅಭಾಧಿತ ಎಂಬಂತಿದೆ.

ಚುನಾವಣಾ ಫಲಿತಾಂಶ ನಡೆಯುತ್ತಲೇ ಕಾಂಗ್ರೆಸ್ ಆರಂಭದಲ್ಲಿ ಮುನ್ನಡೆಯಲ್ಲಿತ್ತು. ಆದರೆ ನಂತರ ಬಂದ ಫಲಿತಾಂಶದಂತೆ ಬಿಜೆಪಿಯೇ ಮುನ್ನಡೆಯನ್ನು ಸಾಧಿಸುತ್ತಿದೆ. ಸದ್ಯ 12 ಗಂಟೆಯ ಹೊತ್ತಿಗೆ ಅಧಿಕೃತವಾಗಿ ಗೆದ್ದಿದ್ದು ಇದರಲ್ಲಿ ಗುಜರಾತ್ ಸಿಎಂ ವಿಜಯ ರೂಪಾಣಿ ಬಿಜೆಪಿಯಿಂದ ಗೆದ್ದಿದ್ದರೆ ಯುಸೂಫ್ ಇಮ್ರಾನ್ ಹಾಗೂ ಅಲ್ಪೇಶ್ ಠಾಕೂರ್ ಕಾಂಗ್ರೆಸ್‍ನಿಂದ ಗೆಲುವು ಸಾಧಿಸಿದ್ದಾನೆ. ಇನ್ನು ದಲಿತ ನಾಯಕ ಜಿಗ್ನೇಶ್ ಮೇವಾನಿ ಕೂಡಾ ಗೆಲುವು ಕಂಡಿದ್ದಾರೆ.

ಈವರಗೂ ಬಿಜೆಪಿ 105 ಸ್ಥಾನಗಳಲ್ಲಿ ಮುನ್ನಡೆಯನ್ನು ಅನುಭವಿಸುತ್ತಿದ್ದು ಕಾಂಗ್ರೆಸ್ 71 ಸ್ಥಾನಗಳಲ್ಲಿ ಮುನ್ನೆಡೆಯನ್ನು ಅನುಭವಿಸುತ್ತಿದೆ. ಇನ್ನು ಪಕ್ಷೇತರರ 6 ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸುತ್ತಿದ್ದು ಕಮಲ ಪಡೆ ವಿಜಯದ ನಗೆ ಬೀರುವಲ್ಲಿ ಯಶಸ್ವಿಯಾಗುತ್ತಿದೆ.
ಬಿಜೆಪಿ-      106
ಕಾಂಗ್ರೆಸ್-  70
ಪಕ್ಷೇತರ-   4

ಮೋದಿ ಕ್ಷೇತ್ರದಲ್ಲಿ ಭರ್ಜರಿ ಗೆಲುವು…

ಪ್ರಧಾನಿ ಮೋದಿ ಕ್ಷೇತ್ರವಾದ ಮಣಿನಗರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ 50 ಸಾವಿರ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಪ್ರತಿಷ್ಟಿತ ಕಣವಾಗಿದ್ದ ಮೋದಿ ಕ್ಷೇತ್ರ ಮಣಿನಗರದಲ್ಲಿ ಅತ್ಯಧಿಕ ಮತಗಳ ಅಂತರವನ್ನು ಬಿಜೆಪಿ ಅಭ್ಯರ್ಥಿ ಪಡೆದಿದ್ದು ಹೊಸ ಭಾಷ್ಯವನ್ನೇ ಬರೆದಿದೆ.

ವಿಜಯದ ಸಂಕೇತ ತೋರಿಸಿದ ನಮೋ…

ಇನ್ನು ಗುಜರಾತ್‍ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವನ್ನು ದಾಖಲಿಸುವತ್ತ ದಾಪುಗಾಲಿಡುತ್ತಲೇ ಸಂಸತ್‍ಗೆ ಆಗಮಿಸಿದ ಮೋದಿ ವಿಜಯದ ಸಂಕೇತವನ್ನು ತೋರಿದ್ದಾರೆ. ಸಂಸತ್ ಪ್ರವೇಶಕ್ಕೂ ಮುನ್ನ ಕಾರಿನಿಂದ ಇಳಿದ ಪ್ರಧಾನಿ ಮೋದಿ, ಮಾಧ್ಯಮ ಮಿತ್ರರತ್ತ ತಿರುಗಿ ವಿಜಯದ ಸಂಕೇತವನ್ನು ಸೂಚಿಸಿದ್ದಾರೆ.

2 ಗಂಟೆಗೆ ಅಮಿತ್ ಶಾ ಸುದ್ಧಿಗೋಷ್ಟಿ…

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಮಧ್ಯಾಹ್ನ 2 ಗಂಟೆಗೆ ಸುದ್ಧಿಗೋಷ್ಟಿ ನಡೆಸಲಿದ್ದಾರೆ. ಗುಜರಾತಿನಲ್ಲಿ ಭಾರತೀಯ ಜನತಾ ಪಕ್ಷ ಮತ್ತೆ ಅಧಿಕಾರ ಹಿಡಿಯುವ ಹಂತದಲ್ಲಿದ್ದು ಸುದ್ಧಿಗೋಷ್ಟಿ ನಡೆಸಲಿದ್ದಾರೆ. ಈ ವೇಳೆ ಗುಜರಾತಿನಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ವಿಜಯ್ ರೂಪಾಣಿ ಹಾಗೂ ಉಪಮುಖ್ಯಮಂತ್ರಿಯಾಗಿ ನಿತಿನ್ ಪಟೇಲ್‍ರನ್ನು ಮುಂದುವರೆಸುವ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳಿವೆ.

ಹಾರ್ದಿಕ್ ಪಟೇಲ್‍ಗೆ ಭಾರೀ ಮುಖಭಂಗ…

ಇನ್ನು ಸರಸ ಸಲ್ಲಾಪಗಳಲ್ಲೇ ಹೆಸರುವಾಸಿಯಾಗಿದ್ದ ಸ್ವಘೋಷಿತ ಪಟೇಲ್ ಸಮುದಾಯದ ನಾಯಕ ಹಾರ್ಧಿಕ್ ಪಟೇಲ್‍ಗೆ ಭಾರೀ ಮುಖಭಂಗವಾಗಿದೆ. ರಾಹುಲ್ ಗಾಂಧಿಯೊಡನೆ ಕೈಜೋಡಿಸಿ ಕಾಂಗ್ರೆಸ್‍ನೊಂದಿಗೆ ತೂರಿಕೊಂಡಿದ್ದ ಹಾರ್ಧಿಕ್ ಪಟೇಲ್‍ಗೆ ಭಾರೀ ಮುಖಭಂಗವಾಗಿದೆ.

ಕಳೆದ ಬಾರಿಗಿಂತ ಶೇಖಡಾವಾರು ಮತ ಹೆಚ್ಚಿಸಿಕೊಂಡ ಬಿಜೆಪಿ…

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇಕಡಾವಾರು ಮತಗಳು ಹೆಚ್ಚಿವೆ. ಈವರೆಗೂ ಭಾರತೀಯ ಜನತಾ ಪಕ್ಷ 49% ಹಾಗೂ ಕಾಂಗ್ರೆಸ್ 41% ವನ್ನು ದಾಖಲಿಸಿದೆ. ಈ ಮೂಲಕ ಶೇಕಡಾ 8% ಅಂತರವನ್ನು ಕಾಯ್ದಕೊಂಡಿದೆ.

ಅರ್ಜುನ್ ಮೇದ್ವಾಡಿಯಾಗೆ ಭಾರೀ ಸೋಲು…

ಕಾಂಗ್ರೆಸ್‍ನ ಪ್ರಭಾವಿ ನಾಯಕ ಅರ್ಜುನ್ ಮೇದ್ವಾಡಿಯಾಗೆ ಭಾರೀ ಮುಖಭಂಗವಾಗಿದೆ. ಪೋರ್ ಬಂದರಿನಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ ನಾಯಕ ಅರ್ಜುನ್ ಮೇದ್ವಾಡಿಯಾ ಸೋಲನ್ನನುಭವಿಸಿದ್ದಾರೆ.

ರಾಹುಲ್ ಹೋದ ಕಡೆಗಳಲ್ಲಿ ಕಾಂಗ್ರೆಸ್‍ಗೆ ಸೋಲು…

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೋದ ಕಡೆಗಳಲ್ಲೆಲ್ಲಾ ಕಾಂಗ್ರೆಸ್ ಸೋಲನ್ನನುಭವಿಸುತ್ತಿದೆ. ಒಟ್ಟು 65 ಕಡೆಗಳಲ್ಲಿ ರಾಹುಲ್ ಪ್ರಚಾರ ಸಭೆಗಳನ್ನು ನಡೆಸಿದ್ದು ಇದರಲ್ಲಿ ಅರ್ಧದಷ್ಟೂ ಅಧಿಕ ಸ್ಥಾನಗಳನ್ನು ಭಾರತೀಯ ಜನತಾ ಪಕ್ಷ ಪಡೆದಿದೆ. ಈ ಮೂಲಕ ರಾಹುಲ್ ಗಾಂಧಿಯ ಆಟ ನಮ್ಮಲ್ಲಿ ನಡೆಯುವುದಿಲ್ಲ ಎಂಬ ಸಂದೇಶವನ್ನು ಗುಜರಾತ್ ಜನತೆ ಸಾರಿದ್ದಾರೆ.

ಅಂದಹಾಗೆ ಈ ಬಾರಿಯ ಚುನಾವಣೆ ಸುಲಭದ ತುತ್ತಾಗಿರಲಿಲ್ಲ. ಏಳು ಬೀಳುಗಳನ್ನು ದಾಟಿಯೇ ಭಾರತೀಯ ಜನತಾ ಪಕ್ಷ ಜಯವನ್ನು ದಾಖಲಿಸಿದೆ. ಇದು ಕೇವಲ ಗುಜರಾತ್ ಮಾತ್ರವಲ್ಲದೆ ಭಾರತೀಯ ಜನತಾ ಪಕ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮತ್ತು ಕಾಂಗ್ರೆಸ್‍ನಲ್ಲಿ ಮೊನ್ನೆ ತಾನೇ ಅಧ್ಯಕ್ಷನ ಪಟ್ಟಕ್ಕೇರಿದ ರಾಹುಲ್ ಗಾಂಧಿಯ ಪಾಲಿಗೆ ಇದು ತುಂಬಾನೆ ಮಹತ್ವದ್ದಾಗಿತ್ತು.

ಒಂದು ಕಡೆಯಲ್ಲಿ ಪ್ರಧಾನಿಯಾದ ನಂತರ ತನ್ನ ರಾಜ್ಯವನ್ನು ಕೇಸರಿ ಮಯವಾಗಿಯೇ ಉಳಿಸಿಕೊಳ್ಳುವಲ್ಲಿ ಪ್ರಯತ್ನ ಪಡುತ್ತಿದ್ದ ನರೇಂದ್ರ ಮೋದಿ ಹಾಗೂ ಮತ್ತೊಂದು ಕಡೆ ತಾನು ಹೋದ ಕಡೆಗಳೆಲ್ಲಾ ಕಾಂಗ್ರೆಸ್ ಸೋಲುತ್ತಿದೆ ಎಂಬ ಪಟ್ಟವನ್ನು ಕಳಚಲು ಹರಸಾಹಸ ಪಡುತ್ತಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ. ಇದರ ಮಧ್ಯೆ ಮೋದಿಯನ್ನು ಈ ಬಾರಿಯಾದರೂ ಸೋಲಿಸಬೇಕು ಎಂದು ಶತಾಯಗತಾಯ ಪ್ರಯತ್ನ ಪಟ್ಟು, ಜಾತಿ ಜಾತಿಗಳ ಮಧ್ಯೆ ವೈಶಮ್ಯವನ್ನುಂಟುಮಾಡಿ, ಪಟೇಲ್ ಸಮುದಾಯವನ್ನು ಎತ್ತಿಕಟ್ಟಿ ಭಾರತೀಯ ಜನತಾ ಪಕ್ಷವನ್ನು ಸೋಲಿಸಲು ಕಾಂಗ್ರೆಸ್ ಜೊತೆ ಫಿಕ್ಸಿಂಗ್ ಮಾಡಿಕೊಂಡಿದ್ದ ಹಾರ್ಧಿಕ್ ಪಟೇಲ್. ಮಾತ್ರವಲ್ಲದೆ ಈ ದೇಶದಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ದೇಶದ್ರೋಹದ ಹೇಳಿಕೆಗಳನ್ನು ನೀಡುತ್ತಾ ದಲಿತ ನಾಯಕನೆಂದು ಬಿಂಬಿಸಿಕೊಂಡು ಕಾಂಗ್ರೆಸ್ ಪಕ್ಷದ ಅಡಿಯಾಳಾಗಿದ್ದ ಜಿಗ್ನೇಶ್ ಮೇವಾನಿ. ಇವರೆಲ್ಲರ ಅಜೆಂಡಾ ಒಂದೇ ಆಗಿತ್ತು. ಅದು ಮೋದಿ ಹಾಗೂ ಭಾರತೀಯ ಜನತಾ ಪಕ್ಷವನ್ನು ಸೋಲಿಸುವುದು.

ಎದೆಬಡಿತವನ್ನು ಹೆಚ್ಚಿಸಿತ್ತು ಚುನಾವಣಾ ಫಲಿತಾಂಶ…

ಹೌದು. ಈ ಬಾರಿಯ ಗುಜರಾತ್ ವಿಧಾನ ಸಭಾ ಚುನಾವಣಾ ಫಲಿತಾಂಶ ಉಭಯ ಪಕ್ಷಗಳಲ್ಲಿ ಎದೆಬಡಿತವನ್ನು ಹೆಚ್ಚಿಸಿತ್ತು. ಫಲಿತಾಂಶ ತೀರಾ ಕುತೂಹಲವನ್ನು ಸೃಷ್ಟಿಸಿತ್ತು. ಕ್ಷಣ ಕ್ಷಣಕ್ಕೂ ಈ ಫಲಿತಾಂಶ ಹೊಸ ಇತಿಹಾಸವನ್ನು ಬರೆಯುವತ್ತ ದಾಪುಗಾಲಿಡುತ್ತಿತ್ತು. ಇನ್ನೇನು ಕಾಂಗ್ರೆಸ್ ಗೆದ್ದೇ ಬಿಟ್ಟಿತು ಎನ್ನುವಷ್ಟರ ಮಟ್ಟಿಗೆ ಇದ್ದ ಫಲಿತಾಂಶ ಅನಿರೀಕ್ಷಿತ ದಾರಿಯಲ್ಲಿ ನಡೆದಿತ್ತು. ಅಕ್ಷರಷಃ ಭಾರತೀಯ ಜನತಾ ಪಕ್ಷದ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದರು.

ಕಾಂಗ್ರೆಸ್ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಆಗಾಗಲೇ ಕಾಂಗ್ರೆಸ್ ಕಾರ್ಯಕರ್ತರು ಬಹುಮತ ಬಂದೇ ಬಿಟ್ಟಿತು ಎಂಬ ಸಂಭ್ರಮದಲ್ಲಿ ಬೀದಿಗಿಳಿದು ಸಂಭ್ರಮಿಸಿದ್ದರು. ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಲೋಸುಗ ಪಟಾಕಿ ಅಂಗಡಿಗಳಿಗೆ ತೆರಳಿ ಪಟಾಕಿಗಳನ್ನು ಖರೀದಿಸಿಯೂ ಆಗಿತ್ತು. ಸುದ್ಧಿ ಮಾಧ್ಯಮಗಳಲ್ಲಿ ನೇರ ಪ್ರಸಾರದ ಚರ್ಚೆಗೆ ಕುಳಿತಿದ್ದ ಕಾಂಗ್ರೆಸ್ ರಾಜಕಾರಣಿಗಳು ಉಲ್ಲಾಸಭರಿತ ವಾತಾವರಣವನ್ನು ಆಸ್ವಾದಿಸಿದರು.

ಆದರೆ ಈ ಸಂತಸ ಹೆಚ್ಚು ಸಮಯ ಉಳಿಯಲೇ ಇಲ್ಲ. ಹಾವು ಏಣಿ ಆಟದಂತಿದ್ದ ಚುನಾವಣಾ ಫಲಿತಾಂಶ ಮತ್ತಷ್ಟು ಕತೂಹಲವನ್ನು ಕೆರಳಿಸಿಬಿಟ್ಟಿತ್ತು. ಇನ್ನೇನು ಚುನಾವಣಾ ಪೂರ್ವ ಸಮೀಕ್ಷೆಗಳು ಉಲ್ಟಾ ಆಗುತ್ತಿವೆಯಾ ಎಂಬ ಅನುಮಾನದಲ್ಲಿದ್ದಾಗಲೇ ಭಾರತೀಯ ಜನತಾ ಪಕ್ಷ ಮತ್ತೆ ಪುಟಿದೆದ್ದು ಬಿಟ್ಟಿತ್ತು. ಕಾಂಗ್ರೆಸ್‍ಗಿಂತ ಹಿನ್ನೆಡೆಯನ್ನು ಅನುಭವಿಸಿದ್ದ ಭಾರತೀಯ ಜನತಾ ಪಕ್ಷ ಮುನ್ನಡೆಯತ್ತ ದಾಪುಗಾಲಿಟ್ಟಿತ್ತು. ಮೋದಿ ಮೋಡಿ ಮತ್ತೆ ಮರುಕಳಿಸಿತು. ಗುಜರಾತ್ ಮತ್ತೆ ಕೇಸರಿಮಯವಾಗುವತ್ತ ಹಾರಿ ಬಿಟ್ಟಿತು.

ಮತ್ತೆ ಸರ್ಕಾರ ರಚಿಸಲಿದೆ ಭಾರತೀಯ ಜನತಾ ಪಕ್ಷ…

ಈವರೆಗೂ ನಡೆದ ಚುನಾವಣಾ ಫಲಿತಾಂಶದ ಪ್ರಕಾರ ಈ ಬಾರಿಯೂ ಭಾರತೀಯ ಜನತಾ ಪಕ್ಷ ಗುಜರಾತ್‍ನಲ್ಲಿ ಸ್ಪಷ್ಟ ಬಹುಮತವನ್ನು ಬಿಜೆಪಿಗೆ ದಕ್ಕಿಸಿಕೊಟ್ಟಿದ್ದಾರೆ ಗುಜರಾತ್ ಮತದಾರರು. ಈ ಮೂಲಕ ಕಳೆದ 22 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವನ್ನು ಒಪ್ಪಿಕೊಂಡು ಮತದಾರ ಈ ಬಾರಿಯೂ ಅಧಿಕಾರವನ್ನು ಕರುಣಿಸಿದ್ದಾನೆ.

ನಿಜವಾಗಲಿದೆಯಾ ಪೋಸ್ಟ್ ಕಾರ್ಡ್ ಸಮೀಕ್ಷೆ…?

ಎಲ್ಲಾ ಸುದ್ಧಿ ಸಂಸ್ಥೆಗಳ ಸಮೀಕ್ಷೆಯಂತೆ ನಮ್ಮ ಸುದ್ಧಿ ಸಂಸ್ಥೆಯಾದ ಪೋಸ್ಟ್ ಕಾರ್ಡ್ ಸುದ್ಧಿ ಮಾಧ್ಯಮವೂ ಸಮೀಕ್ಷೆಯೊಂದನ್ನು ನಡೆಸಿದ್ದು, ಅದರಲ್ಲಿ 98ರಿಂದ 105 ಸ್ಥಾನಗಳನ್ನು ಭಾರತೀಯ ಜನತಾ ಪಕ್ಷ ಗೆಲ್ಲುತ್ತೆ ಅನ್ನುವ ಸಮೀಕ್ಷೆಯನ್ನು ಬಿತ್ತರಿಸಿದ್ದೆವು. 80 ಸಾವಿರ ಜನರೊಂದಿಗೆ ನಡೆಸಿದ್ದ ಸಮೀಕ್ಷೆಯಲ್ಲಿ ಈ ಈ ರೀತಿಯ ಫಲಿತಾಂಶ ಬರಬಹುದೆಂದು ಅಂದಾಜಿಸಿದ್ದು ಇದು ನಿಜವಾಗುವ ಹಂತಕ್ಕೆ ತಲುಪುತ್ತಿದೆ.
-ಸುನಿಲ್ ಪಣಪಿಲ

Tags

Related Articles

Close