ಪ್ರಚಲಿತ

ವಿಶೇಷ ಸುದ್ದಿ!!! ರಾಜಕಾರಣಿಯ ಮಕ್ಕಳು ಸೇನೆಗೆ ಸೇರುವುದಿಲ್ಲವೆಂಬುದಕೆ ಅಪವಾದವಾಗಿ ನಿಂತರು ಬಿಜೆಪಿಯ ಹಣಕಾಸು ಸಚಿವರ ಪುತ್ರಿ!!!!

ಯಾವ ರಾಜಕಾರಣಿಯೂ ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುವುದಿಲ್ಲ ಎಂಬುದು ಅರ್ಧ ಸತ್ಯ! ಅದಕ್ಕೆ ಅಪವಾದವೆಂಬಂತೆ ಉತ್ತರಾಖಂಡದ ಬಿಜೆಪಿಯ
ಸಚಿವರೊಬ್ಬರು ತಮ್ಮ ಮಗಳನ್ನು ಸೇನೆಗೆ ಸೇರಿಸಿದ್ದಾರೆ!

ಹೌದು! ಉತ್ತರಾಖಂಡದ ಹಣಕಾಸು ಸಚಿವರಾದ ಪ್ರಕಾಶ್ ಪಂಥ್ ತಮ್ಮ ಮಗಳಾದ ನಮಿತಾ ಪಂಥ್ ರನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದ್ದಾರೆ ಎಂದೇ
ಹೇಳಬಹುದೇನೋ! ಸೇನೆಯ ಚಿಹ್ನೆಗಳನ್ನು ತೊಡಿಸಿದ ಪ್ರಕಾಶ್ ಪಂಥ್ ರವರ ಕಣ್ಣಲ್ಲಿ ಬಹುಷಃ ಮಗಳ ಮುಂದಿನ ಭವಿಷ್ಯದ ಹಾದಿಯೊಂದು ಮಿಂಚಿತ್ತು!

ನಮಿತಾ ಪಂಥ್ ಚೆನ್ನೈನ ಅಧಿಕಾರಿ ತರಬೇತಿ ಕೇಂದ್ರದಲ್ಲಿ ಶನಿವಾರ, ಸೇನೆಯ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಒಂದು ವರ್ಷದ ಕಠಿಣ ತರಬೇತಿಯನ್ನೂ ಮುಗಿಸಿರುವ ನಮಿತಾ ಪಂಥ್ ಕಾನೂನು ವಿದ್ಯಾರ್ಥಿ! ಆದರೆ, ಸೇನೆಗೆ ಸೇರಬೇಕೆಂಬ ಪ್ರಬಲ ಇಚ್ಛೆ ಕೊನೆಗೂ ಅವರ ಕನಸನ್ನು ನನಸಾಗಿಸಿದೆ. ಇಡೀ ದೇಶದಲ್ಲಿಯೇ ಎಸ್ ಎಸ್ ಬಿ ಪದವಿಯನ್ನು ಪಡೆದ ನಾಲ್ಕು ಮಹಿಳೆಯರಲ್ಲಿ ಇವರೂ ಒಬ್ಬರು! ಉತ್ತರಾಖಂಡದಿಂದ ತರಬೇತಿಗೆ ನೇಮಕವಾಗಿದ್ದು ಇವರೊಬ್ಬರೇ!

ತದನಂತರದಲ್ಲಿ ಅಧಿಕಾರವನ್ನು ಸ್ವೀಕರಿಸಲಿರುವ ನಮಿತಾ ಪಂಥ್ ರವರ ಸೇನೆಯ ಕಠಿಣ ಹಾಗೂ ದೇಶ ಕೈಂಕರ್ಯದ ಬದುಕು ಇನ್ನಷ್ಟೇ ಪ್ರಾರಂಭವಾಗಲಿದೆ! ಅವರ ನಿರ್ಧಾರಕ್ಕೆ ದೇಶದಲ್ಲೆಡೆ ಸಂತಸ ವ್ಯಕ್ತವಾಗಿದೆ ಎಂಬುದೂ ಅಷ್ಟೇ ಪ್ರಶಂಸನೀಯ!

ರಕ್ಷಣಾ ಕಾರ್ಯಕ್ಕೆ ಮಹಿಳೆಯರು!

ಪ್ರಾರಂಭದಲ್ಲಿ, ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಅವಕಾಶವಿರಲಿಲ್ಲ. ಆದರೆ, ಮಹಿಳೆಯರನ್ನೂ ಸೇನೆಗೆ ಸೇರಿಸುವ ಮಹತ್ವದ ನಿರ್ಧಾರವೊಂದು ಮೋದಿಯ ಸರಕಾರದಲ್ಲಾಗಿರುವುದಕ್ಕೆ ಮಹಿಳಾ ಸಬಲೀಕರಣಕ್ಕೆ ಮತ್ತೆ ಮತ್ತೆ ಕನ್ನಡಿ ಹಿಡಿಯುವುದು ಬೇಕಿಲ್ಲ!

ರಕ್ಷಣಾ ಸಚಿವರಾಗಿ ನಿರ್ಮಲಾ ಸೀತಾರಾಮನ್ ಅಧಿಕಾರ ಸ್ವೀಕರಿಸಿದ್ದು ಇಡೀ ಜಗತ್ತನ್ನು ನಿಬ್ಬೆರಗಾಗಿಸಿದ್ದಲ್ಲದೇ, ಪಾಕಿಸ್ಥಾನ ಹಾಗೂ ಚೀನಾಕೆ ಮೋದಿಯ ನಡೆಯ ಬಗ್ಗೆ ಹೆದರಿಕೆ ಶುರುವಾಗಿದ್ದು ಸುಳ್ಳಲ್ಲ. ಅದಕ್ಕೆ ತಕ್ಕನಾಗಿ, ಮೊದಲ ದಿನವೇ ಸೇನೆಯ ನಿರ್ವಹಣೆಗೆ ಅನುದಾನವನ್ನು ನೀಡಿದ ನಿರ್ಮಲಾ ಸೀತಾರಾಮನ್ ಗೆ ಜೊತೆಯಾಗುವಂತೆ ಮಹಿಳಾ ಅಧಿಕಾರಿಗಳೂ ಜೊತೆಯಾಗಲಿದ್ದಾರೆ!

ನಮಿತಾ ಪಂಥ್ ರಂತೆ ಇನ್ನದೆಷ್ಟೋ ಹೆಣ್ಣು ಮಕ್ಕಳು ಬಹುಷಃ ಮುಂದಿನ ದಿನಗಳಲಿ ಸೇನೆಯನ್ನು ಸೇರುವ ನಿರ್ಧಾರ ಕೈಗೊಳ್ಳಬಹುದೇನೋ!

ಒಂದು ಮಾತಿದೆ! ಸಮಾಜಕೆ ಸಂದೇಶ ಹೇಳುವ ಬದಲು, ಉದಾಹರಣೆಯಾಗಿ ಬದುಕು ಎಂದು! ಎಲ್ಲಾ ರಾಜಕಾರಣಿಗಳೂ ಸಹ ಮೈಕಿನ ಮುಂದೆ ಸೇನೆಗೆ ಸೇರಿ ಎಂದು ಭಾಷಣ ಕೊಟ್ಟವರೇ ಹೆಚ್ಚು! ಸೇನೆ ಬೇಕು, ಆದರೆ ಸೈನಿಕ ನಮ್ಮ ಮನೆಯಲ್ಲಿ ಹುಟ್ಟದಿರಲಿ ಎಂದು ಪ್ರಾರ್ಥಿಸುವವರೂ ಇದ್ದಾರೆ!

ಆದರೆ, ಸ್ವತಃ ಪ್ರಕಾಶ್ ಪಂಥ್ ತಮ್ಮ ಮಗಳನ್ನು ಸೇನೆಗೆ ಹಸ್ತಾಂತರಿಸಿರುವುದು ಭಾರತದ ಇತಿಹಾಸದಲ್ಲಿಯೇ ಒಂದು ಗುರುತು ಮೂಡಿಸಿತೆಂದರೂ ತಪ್ಪಿಲ್ಲ.

ನಮಿತಾ ಪಂಥ್ ರಂತೆ ಇನ್ನೂ ಹೆಚ್ಚಿನ ಮಹಿಳೆಯರು ಸೇನೆಗೆ ಸೇರಿ ದೇಶದ ರಕ್ಷಣೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸುವಂತಾಗಲಿ ಎಂಬ ಹಾರೈಕೆಯೊಂದು ಸದಾಕಾಲವೂ ಇರಲೆಂಬ ಆಶಯದ ಜೊತೆಗೆ ಪೋಸ್ಟ್ ಕಾರ್ಡ್ ತಂಡ ನಮಿತಾ ಪಂಥ್ ರವರಿಗೆ ಅಭಿನಂದಿಸುತ್ತಿದೆ.

– ಪೋಸ್ಟ್ ಕಾರ್ಡ್

Tags

Related Articles

Close