ಅಂಕಣಇತಿಹಾಸದೇಶಪ್ರಚಲಿತ

‘ವೈಭವಯುತ ಬ್ರಿಟಿಷ್ ರಾಜ್’ ಎಂಬ ಸುಳ್ಳಿನ ಹಿಂದೆ, ಬ್ರಿಟಿಷರು ಬಿಟ್ಟು ಹೋದ ಇತಿಹಾಸದ ಪುಟಗಳು!!

ಬ್ರಿಟಿಷ್ ಆಳ್ವಿಕೆಯ ತೆಕ್ಕೆಯಲ್ಲಿ ಭಾರತ ಅಭಿವೃದ್ದಿಯ ಪತದತ್ತ ಸಾಗಿದೆ ಎಂದು ವಾದ ಮಾಡುವಾಗ ಭಾರತ ರೈಲುಮಾರ್ಗಗಳು, ರಸ್ತೆಗಳು ಮತ್ತು ಇತರ ಮೂಲಭೂತ ಸೌಕರ್ಯಗಳು ಬ್ರಿಟಿಷರು ನಮಗೆ ನೀಡಿರುವ ಕೊಡುಗೆ ಎಂದು ಹೇಳ್ತಾರೆ. ಅಲ್ಲದೇ ಸ್ವಾತಂತ್ರದ ನಂತರವೂ ಭಾರತಕ್ಕೆ ಸಹಾಯ ಮಾಡಿದ್ದರು ಎಂದು ವಾದಕ್ಕಿಳಿದದ್ದಿದೆ. ಸರಿ ಇದನ್ನೆಲ್ಲ ನಾವು ಒಂದು ಕಡೆ ಒಪ್ಪುತ್ತೇವಾದರೇ, ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಭಾರತೀಯರಿಗೆ ಮಾಡಿದ ದುಷ್ಕøತ್ಯಗಳು ಏನು ಕಡಿಮೆಯೇ?. ಅದೆಷ್ಟೋ ಚಿತ್ರಹಿಂಸೆಯನ್ನು ನೀಡಿ ಭಾರತೀಯರನ್ನು ಹಸಿವಿನ ಕೂಪಕ್ಕೆ ತಳ್ಳಿ ಮೆರೆದಾಟಿದವರೇ ಬ್ರಿಟಿಷರು. ಹೌದು…

ಇಲ್ಲಿದೆ ಕೆಲವು ಸತ್ಯಾಂಶಗಳು-

1757 ರಿಂದ 1947ರವರೆಗೆ ಬ್ರಿಟಿಷರ ಆಳ್ವಿಕೆಯಲ್ಲಿ ಭಾರತೀಯರಿಗೆ ಮಾಡಿದ ಹಿಂಸಾತ್ಮಕ-ಅಹಿಂಸಾತ್ಮಕ ದೌರ್ಜನ್ಯಕ್ಕೆ 85ದಶಲಕ್ಷ ಮಂದಿ ಸಾವನ್ನಪ್ಪಿದ್ದಾರೆ.
ಬ್ರಿಟಿಷರು ಭಾರತಕ್ಕೆ ಬಂದಾಗ ಜಿಡಿಪಿಯು 23% ರಷ್ಟಿದ್ದರೆ, ಬ್ರಿಟಿಷರ ಹೋಗುವ ಸಂದರ್ಭದಲ್ಲಿ 4% ರಷ್ಟಾಗಿತ್ತು.
ಅಲ್ಲದೇ ಬ್ರಿಟಿಷರು ಭಾರತಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿಶ್ವವ್ಯಾಪಾರ ಮಟ್ಟದಲ್ಲಿ 27% ನಷ್ಟು ಗಣನೀಯ ಏರಿಕೆಯನ್ನು ಪಡೆದಿದ್ದು, ಬ್ರಿಟಿಷರು ಭಾರತ ಬಿಟ್ಟು
ತೊಲಗಿದಾಗ ಕೇವಲ 2% ರಷ್ಟಾಗಿತ್ತು.

ಬ್ರಿಟಿಷರ ಕಾಲದಲ್ಲಿದ್ದ ಬರಗಾಲದ ನೀತಿಗಳು –

ಬ್ರಿಟಿಷರ ಆಡಳಿತದಲ್ಲಿ ಬರಗಾಲ ಮತ್ತು ಆಹಾರ ನಿಯಂತ್ರಣವನ್ನು ಉದ್ದೇಶಪೂರ್ವಕವಾಗಿ ಮಾಡಿದ್ದರು. 11ನೇ ಶತಮಾನದ ಆರಂಭದಿಂದ, 18ನೇ ಶತಮಾನದ ಕೊನೆಯವರೆಗೆ 14 ಪ್ರಮುಖ ಬರಗಾಲಗಳು ಭಾರತದಲ್ಲಿ ಎದುರಾಗಿದ್ದವು ಅಂದರೆ ಪ್ರತಿ ಒಂದು ಶತಮಾನದಲ್ಲಿ ಎರಡು ಕ್ಷಾಮಗಳು ಎದುರಾಗುತ್ತಿದ್ದವು. ಆದರೆ 1756 ರಿಂದ 1858ರ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲಿ 16 ಭೀಕರ ಕ್ಷಾಮಗಳು ಎದುರಾಗಿದ್ದವು!!

1959 ರಿಂದ 1914ರವರೆಗಿದ್ದ ಬ್ರಿಟಿಷ್ ವಸಾಹತುಗಳ ಅವಧಿಯಲ್ಲಿ, ಕ್ಷಾಮದಿಂದಾಗಿ, ಭಾರತದ ಸರಾಸರಿಯಲ್ಲಿ ಪ್ರತಿ ವರ್ಷವು ಭಾರಿ ಇಳಿಕೆ ಕಂಡುಬಂದಿದೆ!!
ಅಂದರೆ ಈ ಬರಗಾಲದ ಕಾರಣದಿಂದಾಗಿ, 1914ರಲ್ಲಿ ಸುಮಾರು 220 ಮಿಲಿಯನ್ನಷ್ಟು ಜನಸಂಖ್ಯೆಯು ಭಾರತದಲ್ಲಿತ್ತು. ಬ್ರಿಟಿಷರು ಉದ್ದೇಶಪೂರ್ವಕವಾಗಿ
ಕೆಲವೊಂದು ಪ್ರದೇಶಗಳಲ್ಲಿ ಕ್ಷಾಮವನ್ನು ಸೃಷ್ಟಿಸಿದ್ದಲ್ಲದೇ ಜನರು ಹಸಿವೆಯಿಂದ ನರಳಿದಾಗ ತನ್ನ ಬೊಕ್ಕಸವನ್ನು ತುಂಬಿಸುವುದಕ್ಕೋಸ್ಕರ ಬಾಲಕಾರ್ಮಿಕರನ್ನು ತಮ್ಮ ಗುಲಾಮರನ್ನಾಗಿಸಲಾಯಿತು. ಬಹುಶಃ ಭಾರತದ ಇತಿಹಾದಲ್ಲಿ ಬೆಂಗಾಲ್‍ನಲ್ಲಿ ನಡೆದ ಕ್ಷಾಮ ಬಹಳ ಶೋಚನಿಯವಾಗಿದ್ದು, ಇದರಲ್ಲಿ ಸುಮಾರು 10ಮಿಲಿಯನ್‍ನಷ್ಟು ಜನ ಅಸುನಿಗಿದ್ದರು.

ತೆರಿಗೆ ಕೃಷಿ-

ಕೃಷಿಭೂಮಿಗೆ ತೆರಿಗೆ ನೀಡುವ ಹಕ್ಕನ್ನು ಜಾರಿಗೆ ತಂದ ಬ್ರಿಟಿಷರು ‘ಹೊರಗುತ್ತಿಗೆ’ಯಿಂದ ಕಂಪೆನಿಯ ಬೊಕ್ಕಸವನ್ನು ತುಂಬಿಸಲಾಗುತ್ತಿತ್ತು. ಅಂದರೆ ಕೃಷಿಭೂಮಿಯಲ್ಲಿ ಬೆಳೆದ ಬೆಳೆಗೆ ತೆರಿಗೆ ಪದ್ಧತಿಯನ್ನು ತರಲಾಯಿತು. ತೆರಿಗೆ ಸಂಗ್ರಹಕಾರನಿಗೆ ಇಂತಿಷ್ಟೇ ತೆರಿಗೆ ಪಡೆದಿಕೊಳ್ಳುವ ನಿಯಮ ಇರಲಿಲ್ಲ. ಆದರೆ ಆತ ತನ್ನ ಇಚ್ಛೆಯ ಅನುಸಾರವಾಗಿ ಹೆಚ್ಚಿನ ತೆರಿಗೆಯನ್ನು ಜನರಿಂದ ಪಡೆಯುತ್ತಿದ್ದರು.

ಜಮೀನ್ದಾರಿ ಪದ್ಧತಿಯಲ್ಲಿ ತೆರಿಗೆ ಸಂಗ್ರಹಕ ತನ್ನ ಇಚ್ಛೆಯಂತೆ ತೆರಿಗೆ ಪಡೆಯುತ್ತಿದ್ದು ಮತ್ತು ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ಬಡ ಕಾರ್ಮಿಕರಿಂದ ಕೂಡ ತೆರಿಗೆಯನ್ನು ಪಡೆಯುತ್ತಿದ್ದರು. ಜಮೀನ್ದಾರಿ ಪದ್ಧತಿಯು ಕೇವಲ ಕಂಪನಿಯ ತೆರಿಗೆಗೆ ಮೀಸಲಾಗಿತ್ತು ಮಾತ್ರವಲ್ಲದೇ, ಭೂಮಿ ಮತ್ತು ಬೆಳೆಗಾರರ ಮೇಲೆ ಸಂಪೂರ್ಣ ಅಧಿಕಾರವನ್ನು ಹೊಂದಿತ್ತು. ಯಾಕಂದರೆ ಬ್ರಿಟಿಷರು ಗರಿಷ್ಠ ಸಂಪತ್ತನ್ನು ಪಡೆಯುವ ಹುನ್ನಾರದಿಂದ ಬಡ ಜನರನ್ನು ಬಳಸಿಕೊಳ್ಳಲಾಗಿತ್ತು.
ಈ ಲೂಟಿ ವ್ಯವಸ್ಥೆಯಿಂದ ಬ್ರಿಟಿಷರ ಬೊಕ್ಕಸ ತುಂಬುತ್ತಿತ್ತೇ ಹೊರತು ಬಡವರಿಗೆ ಏನೂ ಲಾಭ ಸಿಗುತ್ತಿರಲಿಲ್ಲ ಮತ್ತು ಮಳೆಗಾಲದ ಸಮಯದಲ್ಲಿ ಬೆಳೆ ನಾಶವಾದಗಳುಯಾವುದೇ ರೀತಿಯ ಮೀಸಲಾತಿ ನಿಯವು ಇರುತ್ತಿರಲಿಲ್ಲ. ನೀರಾವರಿ ಹೂಡಿಕೆಯಲ್ಲಿ ಯಾವುದೇ ರೀತಿಯ ಹೂಡಿಕೆಯೂ ಇರಲಿಲ್ಲ. ಆದರೆ ಬರಗಾಲದ ಸಮಯದಲ್ಲಿ ಮಳೆಯೇ ಕೃಷಿಕರನ್ನು ಸಂರಕ್ಷಣೆ ಮಾಡುತ್ತಿತ್ತು.

ಗುಲಾಮ ಕಾರ್ಮಿಕ ಪದ್ಧತಿ

ಸಿಪಾಯಿ ದಂಗೆಯ ಸಂದರ್ಭದಲ್ಲಿ ಜಮೀನ್ದಾರಿ ಪದ್ಧತಿಯು ಬಹುತೇಕ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಅವನತಿಯನ್ನೂ ತಲುಪಿದರೂ ಕೂಡ ಈಸ್ಟ್ ಇಂಡಿಯಾ ಕಂಪನಿ ತನ್ನಆಡಳಿತಕ್ಕೆ ಬಂದಾಗ ಗರ್ವನರ್- ಜನರಲ್ ಮತ್ತು ವಸಾಹತು ಆಡಳಿತಕ್ಕೆ ವರ್ಗಾಯಿಸಲಾಯಿತು. ಆಯೋಗದ ಪ್ರಕಾರ (ಇದು ಆಡಳಿತದಲ್ಲಿ ಹೊಸ ಬಲಾವಣೆಯನ್ನುಸೂಚಿಸಿತ್ತು) ಉತ್ತಮ ಸಾರಿಗೆ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವತ್ತ ಮುಂದಾದದಲ್ಲದೇ, ಭಾರತೀಯ ಆಡಳಿತ ವರ್ಗಗಳು ಬ್ರಿಟಿಷ್ವಸಾಹತುಗಳಿಗೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುವ ಅಗತ್ಯ ಅವರಿಗೆ ಬೇಕಾಗಿತ್ತು.

ಆ ಸಂದರ್ಭದಲ್ಲಿ ಮೂಲಭೂತ ಸೌಕರ್ಯಗಳು-ಕಟ್ಟಡಗಳನ್ನು ಕಟ್ಟುವ ಸಮಸ್ಯೆಗಳು ಹೆಚ್ಚಾಗಿದ್ದವು. ಹಾಗಾಗಿ ಬ್ರಿಟಿಷರು ಭಾರತೀಯರ ಸಂಪತ್ತನ್ನು ಲೂಟಿ ಮಾಡಲು ಬಯಸಿದ್ದಲ್ಲದೇ, ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲು ಮುಂದಾದರು. ಆದರೆ ಆ ಸಂದರ್ಭದಲ್ಲಿ ಭಾರತ ಭೂರಹಿತ ಕಾರ್ಮಿಕವರ್ಗವನ್ನು ಹೊಂದಿರಲಿಲ್ಲ. ಅದಕ್ಕಾಗಿ ಅಗ್ಗದ ಕಾರ್ಮಿಕರನ್ನಾಗಿ ಭಾರತೀಯರನ್ನು ಬಳಸಿಕೊಂಡರು ಈ ಬ್ರಿಟಿಷರು. ಮಾತ್ರವಲ್ಲದೇ ಈ ಕೆಲಸ ಬರಪರಿಹಾರ ಕೆಲಸಕ್ಕೆ ಪರಿಹಾರವು ಕೂಡ ಸಿಕ್ಕಂತಾಗಿತ್ತು.

ಬ್ರಿಟಿಷರು ಕ್ಷಾಮದ ರೀತಿಯ ವಿವಿಧತರದ ನಾನಾ ಪರಿಸ್ಥಿತಿಗಳನ್ನು ಸೃಷ್ಠಿಸಿದ್ದಲ್ಲದೇ ಹಸಿವಿನಿಂದ ಒದ್ದಡುತ್ತಿದ್ದ ಮಂದಿಗೆ, ಕ್ಷಾಮ ಪರಿಹಾರ ಕೇಂದ್ರಕ್ಕೆ ಹೋಗಲೇ
ಬೇಕಾದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ರು. ಭಾರತೀಯರಿಗೆ ಆಹಾರ ಬೇಕಾದರೆ ಅದರ ಬದಲಾಗಿ ಜನರು ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವ ಕೆಲಸ ಮಾಡಲೇ ಬೇಕಾಗಿತ್ತು. ಕ್ಷಾಮ ಪರಿಹಾರ ಕೇಂದ್ರಕ್ಕೆ ಸೇರಿಕೊಂಡ ಸಂದರ್ಭದಲ್ಲಿ ಭಾರತೀಯರು ತಮ್ಮ ಜಾತಿ ಸಂಬಂಧವನ್ನು ಕಳೆದುಕೊಂಡರಲ್ಲದೇ ಸೌಲಭ್ಯದಿಂದಲೂ ವಂಚಿತರಾದರು. ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿ ಅದೆಷ್ಟೋ ಮಂದಿ ಹಸಿವಿನಿಂದ ಸತ್ತರು, ಇನ್ನೂ ಒಂದಷ್ಟು ಜನ ಆಹಾರಕ್ಕಾಗಿ ಈ ಕೇಂದ್ರಗಳಿಗೆ ಬರುತ್ತಿದ್ದರು, ಹೀಗೆ ಇದು ಮುಂದುವರೆಯುತ್ತಲೇ ಇತ್ತು.

ವ್ಯಾಪಾರ- ವಹಿವಾಟುಗಳು

ರೈಲುಮಾರ್ಗಗಳ ಸಂಖ್ಯೆ ನಂಬಲಾಗದ ರೀತಿಯಲ್ಲಿ ಬೆಳೆಯುತ್ತಿದ್ದಂತೆ ಬ್ರಿಟಿಷರ ಮಧ್ಯವರ್ತಿಗಳಾಗಿದ್ದ ಭಾರತೀಯರ ಲೇವಾದೇವಿಗಾರರು ತೊಂದರೆಗೆ
ಸಿಲುಕಿಕೊಂಡರು. ಇದು ಬ್ರಿಟಿಷರಿಗೆ ಪರಿಣಾಮಕಾರಿಯಾಗಿ ಲಾಭವನ್ನೇ ತಂದಿತ್ತು, ಅಲ್ಲದೇ ಭಾರತೀಯರ ಮೇಲೆ ನಿಯಂತ್ರಣವನ್ನು ಸಾಧಿಸಲು
ಕಾರಣವಾಯಿತಾದರೂ ಕ್ಷಾಮ ಪೀಡಿತರ ಪರಿಹಾರಕ್ಕಲ್ಲ.

ಈ ಕ್ಷಾಮ-ರಕ್ಷಿತ ಪ್ರದೇಶದಲ್ಲಿ ಆಹಾರಗಳ ಬೆಲೆ ದುಬಾರಿಯಾಯಿತಲ್ಲದೇ ದೇಶದ ಇತರದ ಭಾಗಗಳಿಗೆ ಆಹಾರದ ಪೂರೈಕೆ ಅಗತ್ಯವಾಗಿತ್ತು. ಲೇವಾದೇವಿಗಾರರು ಬ್ರಿಟಿಷ್ ಸಾಮಾಗ್ರಿಗಳನ್ನು ಭಾರತೀಯರಿಗೆ ಮಾರಟ ಮಾಡಿ ಕಡಿಮೆ ದರದಲ್ಲಿ ತಮ್ಮ ಧಾನ್ಯಗಳನ್ನು ಖರೀದಿಸಿಕೊಂಡರು. ನಂತರ ಅದೇ ಧಾನ್ಯಗಳನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಅದೇ ಜನರಿಗೆ ಮಾರಾಟ ಮಾಡುತ್ತಿದ್ದರು!! ಯಾಕೆಂದರೆ ಹೆಚ್ಚಿನ ಬೆಲೆಯನ್ನು ಭಾರತೀಯರೇ ಪಾವತಿಸಬೇಕಾಗಿತ್ತು. ಈ ಎಲ್ಲಾ ವಹಿವಾಟುಗಳನ್ನು ಕ್ರೆಡಿಟ್ ಆಧಾರದ ಮೇಲೆ ನಡೆಸಲಾಗುತ್ತಿತ್ತದಲ್ಲದೇ ಹೆಚ್ಚಿನವರು ಸಾಲದ ಗುಲಾಮರಾದರು.

ಆದರೆ ಬಹಳ ವಿಷಾದಕರ ಸಂಗತಿಯೆಂದರೆ ದೇಶದಲ್ಲಿ ರೈಲು ಮಾರ್ಗಗಳು ಹೆಚ್ಚಾದಂತೆ ಅದೆಷ್ಟೋ ಜನರು ಕ್ಷಾಮದಿಂದಾಗಿ ಸಾವನ್ನಪ್ಪಿರುವ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು. ರೈಲು ಮಾರ್ಗಗಳು ಬ್ರಿಟಿಷರ ಕಾಲದಲ್ಲಿ ಎಷ್ಟು ಮೈಲುಗಳು ನಿರ್ಮಾಣವಾಗಿತ್ತು ಗೊತ್ತೇ?- 187ರಲ್ಲಿ 288 ಮೈಲು ರೈಲುಮಾರ್ಗ ನಿರ್ಮಾಣವಾದರೆ , 1861ರಲ್ಲಿ 1,599 ಮೈಲು, 186ರಲ್ಲಿ 3371 ಮೈಲು, 1881ರಲ್ಲಿ 19,555 ಮೈಲು, 1914ರಲ್ಲಿ ಬೃಹತ್ ಆದ 34,656 ಮೈಲುಗಳಷ್ಟು ರೈಲುಮಾರ್ಗ ನಿರ್ಮಾಣವಾಗಿತ್ತು. ಹಾಗಾದರೆ ಆ ಸಂದರ್ಭದಲ್ಲಿ ಅದೆಷ್ಟೂ ಭಾರತೀಯರು ತಮ್ಮ ಪ್ರಾಣವನ್ನು ಕಳೆದುಕೊಂಡಿರಬೇಕು, ನೀವೆ ಯೋಚಿಸಿ??

ಅಲ್ಲದೇ, ಬ್ರಿಟಿಷರು ಉದ್ದೇಶಪೂರ್ವಕವಾಗಿ ಸೃಷ್ಟಿಸಿದ ಕ್ಷಾಮದಲ್ಲಿ ಅಕ್ಕಿ ಮತ್ತು ಧಾನ್ಯಗಳ ರಫ್ತುಗಳ ಬಗ್ಗೆ ಮಾಹಿತಿಯನ್ನು ಕಲೆಹಾಕುವುದಾದರೆ- 1867-68 ರಿಂದ 1877-78ರವರೆಗೆ 1.45ರಷ್ಟು ಅಕ್ಕಿಯನ್ನು ರಫ್ತು ಮಾಡಲಾಗಿದೆ. ಇದೇ ಅವಧಿಯಲ್ಲಿ 22ಕ್ಕೂ ಹೆಚ್ಚು ಸಲ ಗೋಧಿಯನ್ನೂ ರಫ್ತು ಮಾಡಲಾಗಿದೆ ಅಂದರೆ ಬ್ರಿಟಿಷರ ಬೊಕ್ಕಸ ತುಂಬಿತೇ ಹೊರತು, ಇಷ್ಟು ಬೆಳೆಯನ್ನು ಬೆಳೆದ ರೈತರಿಗೆ ಸಿಕ್ಕಿದ್ದು ಮಾತ್ರ ಸಾವು!!

ಆಧುನಿಕ ಚೀನಾದ ಸಂಸ್ಥಾಪಕ ಸನ್ ಯಾತ್-ಸೆನ್ ಎನ್ನುವಾತ, ಭಾರತದಲ್ಲಿ ಬ್ರಿಟಿಷರ ಆಡಳಿತದ ಬಗ್ಗೆ 1917ರಲ್ಲಿ ತನ್ನ ಪುಸ್ತಕದಲ್ಲಿ ಬರೆದು ಉಲ್ಲೇಖಿಸಿದ್ದಾನೆ.
ಏನಂದರೆ- ‘ಪ್ರತಿ ವರ್ಷ ಇಂಗ್ಲೆಂಡ್‍ಗೆ ಬಹಳ ದೊಡ್ಡ ಮೊತ್ತದ ಆಹಾರ ಪದಾರ್ಥಗಳನ್ನು ಭಾರತದಿಂದ ತೆಗೆದುಕೊಳ್ಳುತ್ತಿದ್ದರು ಆದರೆ ಭಾರತದಲ್ಲಿ 19ಮಿಲಿಯನ್‍ನಷ್ಟು ಜನ ಹಸಿವೆಯಿಂದ ಮೃತಪಟ್ಟಿದ್ದಾರೆ. ಭಾರತ ಕಡಿಮೆ ಉತ್ಪಾದನೆಯಲ್ಲಿ ಜನರು ಸತ್ತರು ಎಂದರೆ ಅದನ್ನು ಕಲ್ಪಿಸಲು ಆಗದು. ಸತ್ಯವೆಂದರೆ ಭಾರತ ತನಗಾಗಿ ಸಂಪಾದಿಸಿದನ್ನು ಇಂಗ್ಲೆಂಡ್ ವಶಪಡಿಸಿಕೊಂಡಿದೆ….ಇದು ಜಲಾಂತಗಾರ್ಮಿ ಯುದ್ಧಕ್ಕಿಂತ ಉತ್ತಮವಾದದ್ದೇ? ನಿಜವಾಗಿಯೂ, ಹೌದು.. ಯಾಕೆಂದರೆ ಬ್ರಿಟಿಷರು ಲೂಟಿ ಮಾಡಿದ್ದಲ್ಲ, ಬದಲಾಗಿ ಅತಿಯಾದ ತೆರಿಗೆ ಮತ್ತು ದಬ್ಬಾಳಿಕೆಯ ನಿಯಮ. ಇಷ್ಟೇ ಅಲ್ಲದೇ ಭಾರತದಲ್ಲಿದ್ದ ಸ್ಥಳೀಯ ಜನರ ಜೀವನೋಪಾಯವನ್ನು ನಿರ್ವಹಿಸಲು ಅಸಾಧ್ಯವಾಗುವಂತೆ ಮಾಡುವುದು ದೊಡ್ಡ ಪ್ರಮಾಣದ ಲೂಟಿಯಾಗುತ್ತದೆ ಎಂದಿದ್ದಾನೆ.

ಹಸಿದಿರುವ ಜನರಿಗೆ ಆಹಾರವನ್ನು ಕೊಡುವ ಬದಲು ಧಾನ್ಯಗಳನ್ನು ರಫ್ತು ಮಾಡಿಸಿದ್ದು ಅಲ್ಲದೇ, ಅದರಲ್ಲಿ ಜಾಸ್ತಿಯಾದ ತೆರಿಗೆ ನೀತಿಯನ್ನು ತಂದು, ಹಸಿದಿರುವ
ಜನರನ್ನು ಜೀತಕ್ಕೆ ತಳ್ಳಿ ಇದರಿಂದ ಬ್ರಿಟಿಷ್ ಆಳ್ವಿಕೆ ವೈಭವಯುತ ರಾಷ್ಟ್ರದ ಚೌಕಟ್ಟನ್ನೇ ನಿರ್ಮಿಸಿಕೊಂಡಿದೆ ಎಂದರೆ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಅಭಿವೃದ್ದಿಯ ಸಲುವಾಗಿ ನರಮೇಧವನ್ನು ಸೃಷ್ಟಿಮಾಡಿತ್ತು ಅಲ್ಲವೇ?..

ಬ್ರ್ರಿಟಿಷ್ ಆಳ್ವಿಕೆಯಲ್ಲಿ ಭಾರತೀಯರಿಗೆ ಯಾವುದೇ ರೀತಿಯ ಧೈರ್ಯ ಇರಲಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದು ಬ್ರಿಟಿಷರ ಉದ್ದೇಶಪೂರ್ವಕವಾದ ನರಮೇಧವನ್ನು ಸೃಷ್ಟಿಸುವಲ್ಲಿ ಕಾರಣವಾಯಿತು ಮಾತ್ರವಲ್ಲದೆ, ಜನರ ನೈತಿಕ ಹಕ್ಕಿಗೂ ಧಕ್ಕೆಯುಂಟು ಮಾಡಿತು ಎಂದರೆ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತ ತನ್ನ ಎಷ್ಟು ಸಂಪತ್ತುಗಳನ್ನು ಕಸಿದುಕೊಂಡಿರಬೇಕು? ಎಷ್ಟು ಜನರ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿರಬೇಕು ಒಮ್ಮೆ ನೀವೇ ಯೋಚಿಸಿ…

-ಅಲೋಖಾ

Tags

Related Articles

Close