ಪ್ರಚಲಿತ

ಸೇನೆಗೂ ಬಿತ್ತು ಮಸೀದಿ ಮೇಲೆ ಕಣ್ಣು!! ಮದರಸಾಗಳ ಮೇಲೆ ಸೇನೆಗೂ ನಂಬಿಕೆ ಇಲ್ಲವೇ?! ಅಷ್ಟಕ್ಕೂ ಬಿಪಿನ್ ರಾವತ್ ಹೇಳಿದ್ದೇನು?!

ಭಾರತ ಪ್ರಜಾಪ್ರಭುತ್ವ ದೇಶ. ಇಲ್ಲಿ ಎಲ್ಲರಿಗೂ ಅವರದೇ ಆದ ರೀತಿಯಲ್ಲಿ ಬದುಕುವ ಹಕ್ಕು ನಮ್ಮ ಸಂವಿಧಾನ ಕಲ್ಪಿಸಿ ಕೊಟ್ಟಿದೆ. ಆದರೆ ಎಲ್ಲವೂ ಕಾನೂನಿನ ಚೌಕಟ್ಟಿನ ಒಳಗೆ ಇರಬೇಕೇ ಹೊರತು ಅದನ್ನು ಮೀರಬಾರದು.

ಜಗತ್ತಿನಾದ್ಯಂತ “ಭಯೋತ್ಪಾದನೆ” ಎಂಬುದು ಸಾಂಕ್ರಾಮಿಕ ರೋಗದ ಹಾಗೆ ಹರಡುತ್ತಿದೆ. ಇದರ ನಿಯಂತ್ರಣಕ್ಕಾಗಿ ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳು ಪ್ರಯತ್ನಿಸುತ್ತಲೇ ಇದೆ ಆದರೂ ಸಂಪೂರ್ಣವಾಗಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲಾಗಲಿಲ್ಲ. ಭಯೋತ್ಪಾದನೆ ಎಂಬುದು ಜಗತ್ತಿಗೆ ಅಂಟಿಕೊಂಡಂತಹ ಕೆಡುಕು.
ಈ ಕೆಡುಕನ್ನು ನಿರ್ನಾಮ ಮಾಡದೇ ಇದ್ದರೆ ಜಗತ್ತಿನ ನಾಶ ಖಂಡಿತ.

ಇದೇ ಕಾರಣಕ್ಕೆ ಭಯೋತ್ಪಾದನೆಯನ್ನು ನಿರ್ನಾಮಗೊಳಿಸುವ ನಿಟ್ಟಿನಲ್ಲಿ ಕೆಲವೊಂದು ರಾಷ್ಟ್ರಗಳು ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಂಡಿವೆ. ಭಾರತದಲ್ಲಿಯೂ ಭಯೋತ್ಪಾದಕ ಚಟುವಟಿಕೆಗಳು ನಡೆದಿವೆ.
ಭಯೋತ್ಪಾದನೆಗೆ ಆಶ್ರಯ ನೀಡುತ್ತಿರುವ ಪಾಕಿಸ್ಥಾನವನ್ನು ನೇರವಾಗಿ ಸೂಚಿಸಿದ ಭಾರತ ಜಗತ್ತಿನ ಮುಂದೆ ಪಾಕಿಸ್ತಾನವನ್ನು ಮೂಲೆಗುಂಪು ಮಾಡಿದೆ.

ಪಾಕಿಸ್ತಾನದ ಕೆಲ ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿರುವ ಭಾರತದ ಕೆಲವು ಸಂಘಟನೆಗಳನ್ನು ನಿಷೇಧಿಸುವಂತೆ ಇತ್ತೀಚೆಗೆ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ.

ಇತ್ತೀಚೆಗೆ ಶಿಯಾ ಮುಸ್ಲಿಂ ವಕ್ಫ್ ಮಂಡಳಿಯ ಅಧ್ಯಕ್ಷ ವಾಸೀಂ ರಿಜ್ವಿ “ಮದ್ರಾಸಗಳಲ್ಲಿ ಕಲಿಯುವವರು ಯಾರೂ ಇಂಜಿನಿಯರಿಂಗ್ ಅಥವಾ ಡಾಕ್ಟರ್ ಆಗಿ ಹೊರ ಬರುತ್ತಿಲ್ಲ.ಅವರು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.ಆದ್ದರಿಂದ ಮದ್ರಾಸಗಳು “ಸಿ ಬಿ ಎಸ್ ಇ ಮತ್ತು ಐ ಸಿ ಎಸ್ ಸಿ” ಯಿಂದ ಮಾನ್ಯತೆ ಪಡೆದುಕೊಳ್ಳಬೇಕು.

ಮಾನ್ಯತೆ ಪಡೆದುಕೊಳ್ಳದೇ ಇದ್ದಲ್ಲಿ ಅಂತಹ ಎಲ್ಲಾ ಮದ್ರಾಸಗಳನ್ನು ಮುಚ್ಚಿಬಿಡಬೇಕು” ಎಂದು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ.

ಮೊದಲಿನಿಂದಲೇ ಈ ರೀತಿಯ ಅನುಮಾನವನ್ನು ದೇಶದಲ್ಲಿ ಅನೇಕರು ವ್ಯಕ್ತಪಡಿಸಿದ್ದರು.
ಇದೀಗ ಸ್ವತಃ ಮುಸ್ಲಿಂ ಸಮುದಾಯದ ಮುಖಂಡರೇ ಪ್ರಧಾನಿ ಮೋದಿಯವರಿಗೆ ಈ ರೀತಿಯ ಮನವಿ ಮಾಡಿಕೊಂಡಿರುವುದು ಮದ್ರಾಸಗಳ ಮೇಲಿನ ಅನುಮಾನವನ್ನು ಹೆಚ್ಚುವಂತೆ ಮಾಡಿದೆ.

ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣ ಹಾಗು ಸರ್ಕಾರಿ ಶಾಲೆಗಳಲ್ಲಿ ಸುಳ್ಳುಸುದ್ದಿಗಳನ್ನು ಬಿತ್ತರಿಸುತ್ತಾ ಜನಗಳನ್ನು ಕೆರಳಿಸುತ್ತಾ ಇದ್ದಾರೆ ಎಂಬ ಗಂಭೀರ ವಿಷಯವನ್ನು ಭಾರತೀಯ ಸೇನಾ ಮುಖ್ಯಸ್ಥ “ಬಿಪಿನ್ ರಾವತ್” ತಿಳಿಸಿದ್ದಾರೆ.

ಇದೇ ಕಾರಣಕ್ಕೆ ‘ದೇಶದಲ್ಲಿ ಮಸೀದಿ ಮತ್ತು ಮದ್ರಾಸಗಳ ಮೇಲೆ ಸರ್ಕಾರ ಹಿಡಿತ ಸಾಧಿಸಬೇಕು’ ಎಂದು ಕರೆ ನೀಡಿದ್ದಾರೆ.
ಈ‌ ಮೂಲಕ ಮತ್ತೊಮ್ಮೆ ಮದ್ರಾಸಗಳ ಮೇಲಿನ ಅನುಮಾನವನ್ನು ಹೆಚ್ಚಿಸಿದ್ದಾರೆ.

ಯಾಕೆಂದರೆ ಪಾಕಿಸ್ಥಾನವು ಪ್ರತ್ಯೇಕ ದೇಶವಾದ ನಂತರ ಅಲ್ಲಿನ ಆರ್ಥಿಕ ಪರಿಸ್ಥಿತಿ, ಶಿಕ್ಷಣ, ವಿಜ್ಞಾನ ಹಾಗೂ ಅಭಿವೃದ್ಧಿಯಲ್ಲಿ ಯಾವುದೇ ಏಳಿಗೆ ಸಾದಿಸಲಿಲ್ಲ. ಇದಕ್ಕೆ ಕಾರಣ ಅಲ್ಲಿರುವ ಧರ್ಮಾಂದತೆಯೇ ಎಂದು ಬಿಪಿನ್ ರಾವತ್ ಹೇಳಿದ್ದಾರೆ.

ಸೇನಾದಿನವನ್ನು ಉದ್ದೇಶಿಸಿ ಮಾತನಾಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ‘ಮಸೀದಿ ಮತ್ತು ಮದ್ರಾಸಗಳಲ್ಲಿ ಏನು ನಡೆಯುತ್ತದೆ ಎಂದು ಗೊತ್ತಾಗುವುದಿಲ್ಲ.ಆದ್ದರಿಂದ ಅಲ್ಲಿ ಸರ್ಕಾರ ಹಿಡಿತ ಸಾಧಿಸಬೇಕು ಮತ್ತು ಅಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ಇಡುವುದಾಗಿ ತಿಳಿಸಿದ್ದಾರೆ.

ಜಮ್ಮು ಕಾಸ್ಮೀರದಲ್ಲಿ ಶಾಲೆಗಳಲ್ಲಿ ಭಾರತದ ನಕ್ಷೆಯಲ್ಲಿ ಜಮ್ಮು ಕಾಶ್ಮೀರ ಮತ್ತು ಭಾರತ ಬೇರೆ ಬೇರೆ ಎಂಬಂತೆ ಬಿಂಬಿಸಿ ಮಕ್ಕಳ ತಲೆಯನ್ನು ಕೆರಳಿಸುತ್ತದೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ದೊಡ್ಡ ಮಟ್ಟದಲ್ಲಿ ಜಮ್ಮು ಕಾಶ್ಮೀರದ ಯುವಕರನ್ನು ಕೆರಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬಿಪಿನ್ ರಾವತ್ ತಿಳಿಸಿದರು.

ಜಮ್ಮು ಕಾಶ್ಮೀರದಲ್ಲಿ ಯಾವುದೇ ಶಾಲೆಗಳಿಗೆ ಹೋದರು ಅಲ್ಲಿ ‘ಭಾರತ ಹಾಗು ಜಮ್ಮು ಕಾಶ್ಮೀರದ ಎರಡು ನಕ್ಷೆಗಳನ್ನು’ ಕಾಣಬಹುದು. ಇದು ಮಕ್ಕಳ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ ಎಂದು ಬಿಪಿನ್ ರಾವತ್ ಆರೋಪಿಸಿದ್ದಾರೆ.

ಸೇನಾ ಮುಖ್ಯಸ್ಥರ ಈ ಹೇಳಿಕೆಯನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಬೇಕಾಗಿದೆ.
ಯಾಕೆಂದರೆ ಮಸೀದಿ ಮದ್ರಾಸಗಳ ಮೇಲೆ ಯಾವುದೇ ಸರ್ಕಾರಿ ಹಸ್ತಕ್ಷೇಪ ಇಲ್ಲದೇ ಇರುವುದರಿಂದ ಅಲ್ಲಿ ಏನೇ ನಡೆದರು ಗೊತ್ತಾಗುವುದಿಲ್ಲ. ದೇಶ ವಿರೋಧಿ ಚಟುವಟಿಕೆಗಳು ನಡೆಯುವ ಎಲ್ಲಾ ರೀತಿಯ ಸಂಶಯಗಳು ಇತ್ತೀಚೆಗೆ ಮೂಡುತ್ತಿದೆ.

ಯಾಕೆಂದರೆ ಜಮ್ಮು ಕಾಶ್ಮೀರದಲ್ಲಿ ಸೇನೆಗಳು ನಡೆಸುತ್ತಿರುವ ಶಾಲೆಗಳಲ್ಲಿ ಕಲಿಯುವ ಮಕ್ಕಳು ಕಲ್ಲು ತೂರುವ ಕೆಲಸದಲ್ಲಿ ಭಾಗವಹಿಸಿಲ್ಲ ಎಂದು ರಾವತ್ ತಿಳಿಸಿದ್ದಾರೆ. ಇದೇ ವೇಳೆ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ ರಾವತ್, “ಪಾಕಿಸ್ತಾನ ಭಾರತದ ವಿರುದ್ಧ ಕತ್ತಿಮಸೆಯುತ್ತಲೇ ಇದೆ.ಯುದ್ದಗಳಲ್ಲಿ ಸೋತು ಕಂಗಾಲಾಗಿರುವ ಪಾಕಿಸ್ತಾನಕ್ಕೆ ಈಗಾಗಲೇ ಮನದಟ್ಟಾಗಿರಬೇಕು ಇನ್ನು ಭಾರತದ ಜೊತೆ ಯುದ್ದಕ್ಕೆ ನಿಂತರೆ ಪಾಕಿಸ್ತಾನದ ಸರ್ವನಾಶ ಖಂಡಿತಾ ಎಂದು”.

ಭಾರತದ ವಿರುದ್ಧ ನೇರವಾಗಿ ಹೋರಾಡಲು ಭಯಗೊಂಡ ಪಾಕಿಸ್ತಾನ ಸಂಪೂರ್ಣವಾಗಿ ಜಮ್ಮು ಕಾಶ್ಮೀರದ ಮೇಲೆ ಗುರಿ ಇಟ್ಟಿದೆ…! ಜಿಹಾದ್ ಎಂಬ ವಿಷಯವನ್ನು ಇಟ್ಟುಕೊಂಡು ಕಾಶ್ಮೀರದ ಯುವಕರ ಮನಸ್ಸಿನಲ್ಲಿ ಭಾರತದ ಮೇಲೆ ದ್ವೇಷ ಭಾವನೆ ಮೂಡುವಂತೆ ಮಾಡಿ ಜಮ್ಮು ಕಾಶ್ಮೀರ ಭಾರತದಿಂದ ಪ್ರತ್ಯೇಕವಾಗಬೇಕು ಅಥವಾ ಪಾಕಿಸ್ತಾನಕ್ಕೆ ಸೇರಬೇಕು ಎಂಬ ವಿಚಾರವನ್ನು ಜಮ್ಮು ಕಾಶ್ಮೀರದ ಯುವಕರ ತಲೆಯಲ್ಲಿ ತುಂಬಿ ಪ್ರತ್ಯೇಕತೆಯ ಹೋರಾಟ ನಡೆಸಲು ಪ್ರೇರೇಪಿಸಿತು.

ಪಾಕಿಸ್ತಾನದ ಈ ರೀತಿಯ ಕಪಟ ತಂತ್ರಕ್ಕೆ ಬುದ್ದಿ ಕಲಿಸುವ ಸಲುವಾಗಿಯೇ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ…! ಇದಕ್ಕಾಗಿಯೇ ಮಸೀದಿ ಮತ್ತು ಮದ್ರಾಸಗಳ ಮೇಲೆ ತಮ್ಮ ಹಿಡಿತ ಸಾಧಿಸುವಂತೆ ಕರೆ ಕೊಟ್ಟಿದ್ದಾರೆ.

ಬಿಪಿನ್ ರಾವತ್ ರವರ ಈ ಹೇಳಿಕೆ ಪಾಕಿಸ್ತಾನ ಮತ್ತು ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ ಕೆಲ ಭಾರತೀಯರು ಕಂಗಾಲಾಗಿರುವುದಂತೂ ಸತ್ಯ…!
— ಅರ್ಜುನ್

Tags

Related Articles

Close