ಇತಿಹಾಸದೇಶಪ್ರಚಲಿತ

ಹಳದೀಘಾಟ್ ಯುದ್ಧವನ್ನು ಗೆದ್ದಿದ್ದು ಅಕ್ಬರ್ ಅಲ್ಲ, ಗೆದ್ದ ವೀರ ಮಹಾರಾಣ ಪ್ರತಾಪ್!!! ರಾಜಸ್ಥಾನದ ಸರಕಾರ ಮತ್ತೆ ಬರೆಯಿತೊಂದು ಇತಿಹಾಸವನು!!!

ಭಾರತದ ಇತಿಹಾಸಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಅಪಾರ ಬೇಡಿಕೆಗಳು ಇವೆ, ಹಾಗೆನೇ ಇತಿಹಾಸದ ಬರವಣಿಗೆಯಲ್ಲಿ ನಮ್ಮ ಜನರಿಗೆ ಅಸಮಾಧಾನವು ಕೂಡ
ಬೆಳೆಯುತ್ತಲೆ ಇದೆ. ನಮ್ಮ ಇತಿಹಾಸ ತಜ್ಞರು ಭಾರತದ ಇತಿಹಾಸದ ನಿಗೂಢ ರಹಸ್ಯಗಳನ್ನು ವಿಕೃತಗೊಳಿಸಿದ್ದು ಸತ್ಯವನ್ನು ಮುಚ್ಚಿ ಹಾಕಿದ್ದಾರೆ. ನಮ್ಮ ಇತಿಹಾಸ ತಜ್ಞರ ಪಕ್ಷಪಾತ, ಹುಸಿ ಜಾತ್ಯತೀತತೆ ಇಲ್ಲಿ ಎತ್ತಿ ಕಾಣುತ್ತದೆ. ಹಾಗೂ ಇವರುಗಳು ಇತಿಹಾಸದಲ್ಲಿ ಬೃಹತ್ ಬದಲಾವಣೆಗಳನ್ನು ಮಾಡಿದ್ದಾರೆ ಎಂಬುವುದು ನಾನು ಇಂದೂ ಹೇಳಲು ಹೊರಟಿರುವ ಭಾರತದ ಇತಿಹಾಸದ ಕತೆಯಲ್ಲಿ ಸ್ಪಷ್ಟವಾಗುತ್ತದೆ.

ಹೌದು! ಪ್ರಸ್ತುತ ರಾಜಸ್ಥಾನ ಸರ್ಕಾರವು ಒಂದು ಪ್ರಕ್ರಿಯೆಯನ್ನು ಅಳವಡಿಸಿಕೊಂಡಿದ್ದು, ಇದು ಇತಿಹಾಸವನ್ನೇ ಪುನಃ ಮೆಲುಕು ಹಾಕುವ ಕಾರ್ಯದಲ್ಲಿ ತೊಡಗಿದೆ. ರಾಜಸ್ಥಾನದ “ಬೋರ್ಡ್ ಆಪ್ ಸೆಕೆಂಡರಿ ಎಜ್ಯುಕೇಶನ್” ಸಂಸ್ಥೆಗೆ 10 ನೇ ತರಗತಿಯ ಸಮಾಜವಿಜ್ಞಾನದ ಪುಸ್ತಕದಲ್ಲಿ ಇತಿಹಾಸದ ಭಾಗವನ್ನು ಬದಲಾಯಿಸಲು ಸರ್ಕಾರವು ಅನುಮೋದನೆ ನೀಡಿದೆ. ಈ ಪರಿಷ್ಕತ ಇತಿಹಾಸ ಪುಸ್ತಕವು ಪ್ರಸ್ತುತವಾಗಿ ರಾಜಸ್ಥಾನದ ಮಕ್ಕಳಿಗೆ ಕಲಿಸಲಾಗಿದ್ದ ಪ್ರಕಾರ ಮಹಾರಾಣ ಪ್ರತಾಪ್ ನಿರ್ಣಾಯಕವಾಗಿ ಮೊಘಲ್ ಚಕ್ರವರ್ತಿ ಅಕ್ಬರ್‍ನನ್ನು ಹಳದಿಘಾಟಿ ಯುದ್ಧದಲ್ಲಿ ಸೋಲಿಸುತ್ತಾನೆ.

ಈವರೆಗೂ ರಾಜಸ್ಥಾನದ ವಿದ್ಯಾರ್ಥಿಗಳು ಮತ್ತು ಇತರರೂ ಕಲಿತ ಪ್ರಕಾರ ಹಳದಿಘಾಟಿಯ ಯುದ್ಧವು ಅನಿಶ್ಚಿತವಾಗಿ ಘೋಷಿಸಿದ ಸ್ಥಳದಲ್ಲಿ ಜೂನ್, 18, 1576
ರಲ್ಲಿ ನಡೆದಿತ್ತು, ಮತ್ತು ಇತಿಹಾಸಕಾರರು ಅಕ್ಬರನ ಮೇಲಿನ ಒಲವಿನ ಮೇರೆಗೋ ಅಥವಾ ಆತನ ಮೇಲಿನ ಕಾಳಜಿಯ ಮೇಲೆಯೋ ಈ ಯುದ್ಧಕ್ಕೆ ಒಪ್ಪಂದದಿಂದ ಮುಗಿಯಿತೆಂದು ಅಂತ್ಯಹಾಡಿದರು. ಆದರೆ ಈಗ ತಿಳಿದಿರುವ ಮಾಹಿತಿಯ ಪ್ರಕಾರ ಈ ಯುದ್ಧವು ಒಪ್ಪಂದದಿಂದ ಕೊನೆಯಾಗಲಿಲ್ಲ,
ಮಹಾರಾಣ ಪ್ರತಾಪ್‍ನ ಬೃಹತ್ ಪ್ರಮಾಣದ ಸೈನ್ಯವು ಅವರ ತಾಯ್ನಾಡಾದ ಮೆವಾರ್‍ನ ರಕ್ಷಣೆಗಾಗಿ ಶೌರ್ಯದಿಂದ ಹೋರಾಡಿದರು. ಮಹಾರಾಣ ಪ್ರತಾಪ್ ಸೈನ್ಯವು ವೀರೋಚಿತ ಯುದ್ದದಲ್ಲಿ ಹೋರಾಡಿದ್ದು ಮತ್ತು ಬಲವಂತವಾಗಿ ಅಕ್ಬರ್ ಸೈನ್ಯದ ಜೊತೆ ಯುದ್ಧಭೂಮಿಯಲ್ಲಿ ಏಕಾಂತವಾಗಿ ಹೋರಾಡಿದರು. ಈ ರೀತಿಯಾಗಿ ರಾಜಸ್ಥಾನ ಶಿಕ್ಷಣ ಸಂಸ್ಥೆಯು ಪ್ರಸ್ತುತವಾಗಿ ವಿದ್ಯಾರ್ಥಿಗಳಿಗೆ ಇತಿಹಾಸ ಬೋಧನೆ ಮಾಡುತ್ತಿದ್ದಾರೆ.

ರಾಜಸ್ಥಾನದ ಪ್ರಾಥಮಿಕ ಹಾಗೂ ದ್ವೀತಿಯ ಹಂತದ ಶಿಕ್ಷಣ ಮಂತ್ರಿಯಾಗಿರುವ ವಾಸುದೇವ್ ದೇವಯಾನಿ “ ಈ ಮೊದಲು ರಾಜ್ಯವು ಕಲಿಸಿದ ಇತಿಹಾಸವು
ತಪ್ಪಾಗಿತ್ತು ಹಾಗು ಅದು ಪಕ್ಷಪಾತೀಯವಾಗಿತ್ತು,ಆದರೆ 10 ನೇ ತರಗತಿಯ ಇತಿಹಾಸ ಪುಸ್ತಕದಲ್ಲಿ ಮಾಡಿದ ಬದಲಾವಣೆಯು ನಿಜವಾದ ಇತಿಹಾಸವಾಗಿದ್ದು ಇದು ಯಾವಾಗಲೂ ಸ್ಥಿರವಾಗಿರುತ್ತದೆ.” ಎಂದು ಹೇಳಿದರು.

ತದನಂತರ ಶಿಕ್ಷಣ ಮಂತ್ರಿಯಾದ ದೇವನಾನಿ ಪ್ರಶ್ನೋತ್ತರಗಳನ್ನು ಸಂಗ್ರಹ ಮಾಡುತ್ತಾರೆ. ಅದರಲ್ಲಿ “ಮೊಘಲ್ ಚಕ್ರವರ್ತಿ ಅಕ್ಬರ್ ಮಹಾರಾಣ
ಪ್ರತಾಪ್‍ನ ಸೈನ್ಯದ ಮೇಲೆ ಸತತವಾಗಿ 6 ಬಾರಿ ದಾಳಿ ಮಾಡಿದ್ದು, ಇದು ಹಳದಿಘಾಟ್ ಯುದ್ಧದ ನಂತರ ನಡೆದ ಯುದ್ಧ ನಿಜವಾದ ಯುದ್ಧ ಇದಾಗಿತ್ತು. ಅಕ್ಬರ್
ಮಹಾರಾಣ ಪ್ರತಾಪ್ ನ ಮೇಲೆ ಪದೇ ಪದೇ ದಾಳಿ ಮಾಡುತ್ತಲೇ ಇದ್ದರು, ಯಾಕೆಂದರೆ ಆತ ಪ್ರತಿ ದಾಳಿಯಲ್ಲೂ ಪ್ರತಾಪನ ಎದುರು ಸೋಲುತ್ತಲೆ ಇದ್ದನು” ಎಂದು ತಿಳಿಸಿದರು.

ವಸುಂಧರ ರಾಜೆ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಆ ಅಧ್ಯಾಯದ ಶೀರ್ಷಿಕೆಯಾಗಿದ್ದ “ ಅಕ್ಬರ್ ಮಹಾನ್” ( ಅಕ್ಬರ್ ದಿ ಗ್ರೇಟ್ ) ಎಂಬುವುದನ್ನು
ತೆಗೆದುಹಾಕಬೇಕೆಂದು ಆದೇಶಿಸಿತು.

ಶಿಕ್ಷಣಮಂತ್ರಿಯು ಆ ಆದೇಶದ ಮೇರೆಗೆ ಶಾಲಾ ಪುಸ್ತಕದ ಶೀರ್ಷಿಕೆಯ ಬದಲಾವಣೆಯನ್ನು ಮಾಡುತ್ತಾರೆ. ಆದರೆ, ಅವರುಅಲ್ಲೊಂದು ಪ್ರಶ್ನೆಯನ್ನು ಮೆಲುಕು ಹಾಕಿ ಯಾಕೆ ಅಕ್ಬರನು ಗ್ರೇಟ್, ಮಹಾರಾಣ ಪ್ರತಾಪ್ ಯಾಕೆ ಅಲ್ಲ? ಎಂದು ಕೇಳಿದರು.

ಪ್ರೊಪೆಸರ್ ಚಂದ್ರಶೇಖರ್ ಶರ್ಮ ಯಾವ ಕಾರಣದಿಂದ ರಜಪೂತರು ಹಳದಿಘಾಟ್ ಯುದ್ಧದಲ್ಲಿ ನಿರ್ಣಾಯಕವಾಗಿ ಗೆಲುವು ಸಾಧಿಸಿದ್ದಾರೆ ಎಂಬುವುದಕ್ಕೆ ವಾದ
ಹಾಗೂ ಶೋಧನೆಗಳ ಮೂಲವನ್ನು ಪ್ರಕಟಿಸುತ್ತಾರೆ. ಇವರ ಶೋಧನೆಯು 16 ನೇ ಶತಮಾನದ ದಾಖಲೆಗಳ ಆಧಾರದ ಮೇಲಿದೆ.

ಜೂನ್ 18, 157 ಯುದ್ಧದಲ್ಲಿ ಮಹಾರಾಣ ಪ್ರತಾಪ್ ಹಳದಿಘಾಟ್‍ನ ಹತ್ತಿರದ ಗ್ರಾಮಗಳ ಭೂಮಿಯ ಹಕ್ಕನ್ನು ತಾಮ್ರದ ಪ್ರತಿಫಲಕಗಳಲ್ಲಿ ಬರೆಸಿ ದಿವಾನನಾದ
ಏಕಲಿಂಗನಾಥ್‍ಗೆ ಹಸ್ತಾಂತರಿಸಿದ್ದ. ಶರ್ಮ ಪುನಃ ಆ ವಾದವನ್ನು ಬೆನ್ನಟ್ಟಿ ಕೇವಲ ರಾಜ ಮಾತ್ರ ತನ್ನ ಪ್ರಾಂತ್ಯಗಳ ಪ್ರದೇಶಗಳನ್ನು ಹಸ್ತಾಂತರ ಮಾಡಲು ಸಾಧ್ಯ! ಈ ಎಲ್ಲಾ ಸಾಕ್ಷ್ಯಾಧಾರಗಳು ಮಹಾರಾಣ ಪ್ರತಾಪ್ ವಾಸ್ತವವಾಗಿ ಹಳದಿಘಾಟ್ ಯುದ್ಧದಲ್ಲಿ ಗೆಲುವು ಸಾಧಿಸಿದ್ದಾನೆ ಎಂಬುವುದನ್ನು ಸಾಬೀತುಪಡಿಸುತ್ತದೆ. ಡಾ|| ಶರ್ಮರವರ ವಾದವು ಹಳದಿಘಾಟ್ ಯುದ್ಧದಲ್ಲಿದ್ದ ಇಬ್ಬರು ಮೊಘಲ್ ಸೇನಾಧಿಪತಿಗಳಾದ ಮಾನ್ ಸಿಂಗ್ ಮತ್ತು ಆಸಿಫ್ ಖಾನ್‍ಗೆ ಅಕ್ಬರ್ ನ ದರ್ಬಾರ್ ನ ಒಳಗೆ ಪ್ರವೇಶ ನೀಡಿರಲಿಲ್ಲ. ಇದು ಅವರು ಯುದ್ಧದಲ್ಲಿ ಸೋತಿರುವ ಕಾರಣ ಅವರಿಗೆ ನೀಡಿದ ಶಿಕ್ಷೆ ಎಂಬುವುದನ್ನು ತಿಳಿಸುತ್ತದೆ. ಹಾಗೂ ಇದು ಅವರು ಹಳದಿಘಾಟ್ ಯುದ್ಧದಲ್ಲಿ ಅವರು ಸೋತಿರುವುದನ್ನು ರುಜುವಾತುಪಡಿಸುತ್ತದೆ.

ಶರ್ಮರವರ ಈ ಸಂಶೋಧನೆಯು ರಾಜಸ್ಥಾನದ ಶಿಕ್ಷಣ ಸಂಸ್ಥೆಯ ಸಚಿವಾಲಯದ ಮೋಹನ್‍ಲಾಲ್ ಗುಪ್ತರ ಗಮನಕ್ಕೆ ತಂದಿತ್ತು, ಇವರು ಕಿಶಾನ್‍ಪೊಲೆ ಯ ಬಿಜೆಪಿ ಎಂ.ಎಲ್.ಎ ಆಗಿದ್ದರು. ಇವರು ಈ ಸಂಶೋಧನೆ ಒತ್ತು ನೀಡಿ ಅದರ ಪ್ರಕಾರ ರಾಜ್ಯದ ಇತಿಹಾಸ ಪುಸ್ತಕವನ್ನು ಬದಲಾಯಿಸಲು ಆದೇಶಿಸಿದರು. ರಾಜಸ್ಥಾನದ ವಿಶ್ವವಿದ್ಯಾನಿಲಯವು ಶರ್ಮರವರ ಸಂಶೋಧನೆಯ ಬಗ್ಗೆ ಚರ್ಚೆಗಳನ್ನು ನಡೆಸಿ ಅದರ ಅರ್ಹತೆಗೆ ಅನುಗುಣವಾಗಿ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಲಾಯಿತು. ಆ ವಿಶ್ವವಿದ್ಯಾನಿಲಯದ ಇತಿಹಾಸ ಇಲಾಖೆಯು ಕೂಡ ಒಂದು ಪ್ರಮುಖ ಬದಲಾವಣೆಯನ್ನು ಮಾಡಿತು, ಇವರು 1200-1700 ರ ಅವಧಿಯನ್ನು ಹೆಣಗಾಡುತ್ತಿರುವ ಭಾರತದ ಯುಗದ ಬದಲಾಗಿ ಬಂಗಾರದ ಯುಗದ ಭಾರತವನ್ನಾಗಿ ಬದಲಾಯಿಸಿದರು.

-ಕಾವ್ಯ ಅಂಚನ್

Tags

Related Articles

Close