ಪ್ರಚಲಿತ

ಹಿಂದೂಗಳೇ ವಿರೋಧಿಸಿದ್ದ ಗೋವು ರಾಷ್ಟ್ರ ಪ್ರಾಣಿಯಾಗಬೇಕೆಂಬ ಬೇಡಿಕೆಯನ್ನು ಈ ವಿಶ್ವ ಮುಸ್ಲಿಂಮರು ಬೆಂಬಲಿಸಿದ್ದಾದರೂ ಯಾಕೆ? ರಾಷ್ಟ್ರ ಪ್ರಾಣಿಯಾಗುತ್ತಾ ಗೋವು?!

ಶಿಕ್ಷಣವನ್ನು ತಿರುಚಿ ವಿದ್ಯಾರ್ಥಿಗಳನ್ನು ಭಯೋತ್ಪಾದನಾ ಕಡೆಗೆ ಸೆಳೆಯುತ್ತಿರುವ ಮದರಸಾಗಳನ್ನು ಮುಚ್ಚಬೇಕೆಂದು ಶಿಯಾ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಂ ರಿಜ್ವಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಆಗ್ರಹಿಸಿರುವ ಬೆನ್ನಲ್ಲೇ ಇದೀಗ ಮುಸ್ಲಿಂ ಇಮಾಮ್ ಗಳು ಮಹತ್ತರವಾದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಆ ವಿಚಾರ ಇದೀಗ ಬಹಳಷ್ಟು ಸುದ್ದಿಯಾಗಿದೆ.

ನಡೆದಾಡುವ ಆರೋಗ್ಯಧಾಮ, ಅಸಂಖ್ಯಾತ ಹಿಂದುಗಳ ಆರಾಧ್ಯದೈವ, ಮಾತೃ ಸ್ವರೂಪಿ ಎಂದೆಲ್ಲಾ ಗೋವನ್ನು ಪೂಜಿಸಿ ಆರಾಧಿಸುತ್ತೇವೆ. ಆದರೆ ಕೆಲ ಷಂಡರು, ಹಿಂದೂಗಳು ಪೂಜ್ಯ ಭಾವನೆಯಲ್ಲಿ ಕಾಣುವ ಗೋವನ್ನೇ ಮಾಂಸಕ್ಕಾಗಿ ಕಳ್ಳತನ ಮಾಡಿ, ಚಿತ್ರಹಿಂಸೆ ನೀಡಿ ಕೊಲ್ಲುತ್ತಿದ್ದು, ಗೋ ಹತ್ಯೆಯ ಬಗ್ಗೆ ಎಷ್ಟೇ ಹೋರಾಡಿದರು ಕೂಡ ಅದಕ್ಕೆ ನ್ಯಾಯವೇ ಸಿಗದಂತಾಗಿದೆ. ಆದರೆ ಇದಕ್ಕೆಲ್ಲಾ ಪುಷ್ಟಿ ನೀಡುವಂತಹ ಕೆಲಸ ಮುಸ್ಲಿಂ ಇಮಾಮ್ ಗಳಿಂದಲೇ ಆಗುತ್ತಿದ್ದು, ಗೋಮಾತೆಯ ಕುರಿತಾಗಿ ಇದೀಗ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.

ಘಜ್ನಿ-ಘೋರಿಯರಿಂದ ಹಿಡಿದು ಇತ್ತೀಚಿನ ಬುದ್ದಿಜೀವಿಗಳವರೆಗೆ ಎಲ್ಲರಿಗೂ ಕೂಡ “ಗೋವು” ಹಿಂದುಗಳ ಶ್ರದ್ಧಾ ಸಂಕೇತವೆನ್ನುವುದೇ ಅವರ ಆಕ್ರೋಶ. ದಿನ ಬೆಳಗಾದರೆ ಸಾಕು ದನ ಕಳುವಾಗಿದೆ ಎನ್ನುವ ಸುದ್ದಿ ಕೇಳಿ ಬರುತ್ತಲೇ ಇದ್ದು, ಇದಕ್ಕೆ ಕೊನೆಯೇ ಇಲ್ಲದಂತಾಗಿದೆ. ಅಷ್ಟೇ ಅಲ್ಲದೇ ಕತ್ತಿ, ತಲವಾರ ತೆಗೆದು ಹಿಂದೂಗಳನ್ನು ಹೆದರಿಸಿ ಗೋವುಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸಿ ಕ್ರೂರ ಹಿಂಸೆ ನೀಡಿ ಗೋವುಗಳನ್ನು ಕೊಲ್ಲುತ್ತಿದ್ದಾರೆ. ಹಿಂದೂಗಳು ಗೋವನ್ನು ಪೂಜಿಸುತ್ತಾರೆ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಗೋವನ್ನು ಹತ್ಯೆ ಮಾಡುತ್ತಿರುವುದು ಒಂದು ಬೇಸರದ ಸಂಗತಿ.

ಆದರೆ ಮುಸ್ಲಿಂ ಇಮಾಮ್ ಗಳು ಗೋಮಾತೆಯ ಕುರಿತಾಗಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡು ತಮ್ಮದೇ ಧರ್ಮದ ಇಮಾಮ್ ಗಳ ನಿರ್ಧಾರಕ್ಕೆ ಕಟ್ಟರ್ ಮುಸ್ಲಿಮರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಭಾರತ ಕೋಮು ಸೌಹಾರ್ದದ ರಾಷ್ಟ್ರ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರವೆಂದು ಪದೇ ಪದೇ ಸಾಬೀತಾಗುತ್ತಲೇ ಇದ್ದು, ಇದಕ್ಕೆ ಪ್ರತಿಯಂತೆ ಕೆಲ ಮುಸಲ್ಮಾನರು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಬೆಂಬಲ ನೀಡುತ್ತಿದ್ದಾರೆ.

ಹೌದು…. ಇಮಾಮ್ ಗಳ ಸಮೂಹವೊಂದು ಗೋವನ್ನು ರಾಷ್ಟ್ರೀಯ ಪ್ರಾಣಿ ಅಂತ ಘೋಷಿಸಲು ನಿರ್ಧಾರ ಕೈಗೊಂಡಿದ್ದಾರೆ. ಹಿಂದುಗಳೂ ಕೂಡ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಲು ಅನೇಕ ವರ್ಷಗಳಿಂದ ಸರ್ಕಾರಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದು, ಈ ಬಗ್ಗೆ ಅನೇಕ ಆಂದೋಲನಗಳೂ, ಪ್ರತಿಭಟನೆಗಳೂ ನಡೆದಿರುವ ವಿಚಾರ ಗೊತ್ತೇ ಇದೆ. ಆದರೆ ಇದೀಗ ಇಮಾಮ್ ಮುಸಲ್ಮಾನರೇ ಗೋ ರಕ್ಷಣೆಗೆ ಮುಂದಾಗಿದ್ದು, ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಮುಂದಾಗಿದ್ದಾರೆ.

ಇಮಾಮ್ ಗಳ ಈ ನಿರ್ಧಾರಕ್ಕೆ ಕಟ್ಟರ್ ಮುಸ್ಲಿಮರು ಸಿಕ್ಕಾಪಟ್ಟೆ ಗರಂ ಆಗಿದ್ದು, ಇಮಾಮ್ ಮುಸಲ್ಮಾನರ ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿಲ್ಲ. ಆದರೆ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್ (ಎಐಐಒ) ನ ಮುಖ್ಯಸ್ಥ ಡಾ. ಇಮಾಮ್ ಉಮರ್ ಅಹ್ಮದ್ ಇಲಿಯಾಸಿ ಗೋವನ್ನು ಭಾರತದ ರಾಷ್ಟ್ರ ಪ್ರಾಣಿಯಾಗಿ ಘೋಷಿಸಬೇಕೆಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಇದರಿಂದ ಅಮಾಯಕ ಗೋವುಗಳ ಹತ್ಯೆ ನಿಲ್ಲುತ್ತವೆ ಹಾಗು ಇದರ ಜೊತೆ ಜೊತೆಗೆ ಗೋವುಗಳ ರಕ್ಷಣೆಗಾಗಿ ಖಡಕ್ ಕಾನೂನನ್ನು ಜಾರಿಗೊಳಿಸಬೇಕು, ಗೋವನ್ನು ಕಡಿಯುವವರಿಗೆ ಕಠಿಣಾತಿ ಕಠಿಣ ಶಿಕ್ಷೆಗೆ ಗುರಿಪಡಿಸಿ ಜೈಲಿಗಟ್ಟುವಂತೆ ಮಾಡಬೇಕೆಂದು ಅವರು ಹೇಳಿದ್ದಾರೆ.

ಭಾರತ ಕೋಮು ಸೌಹಾರ್ದದ ರಾಷ್ಟ್ರ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರವೆಂದು ಪದೇ ಪದೇ ಸಾಬೀತಾಗುತ್ತಲೇ ಇದ್ದು, ಇದಕ್ಕೆ ಪ್ರತಿಯಂತೆ ಕೆಲ ಮುಸಲ್ಮಾನರು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಿ ಅಂತ ಬೆಂಬಲ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಅಷ್ಟೇ ಅಲ್ಲದೇ, ಹಿಂದುಗಳ ಕೂಗಿಗೆ ಮುಸಲ್ಮಾನರ ಕೂಗೂ ಹಿಂದುಗಳ ಅಭಿಯಾನಕ್ಕೆ ಆನೆ ಬಲ ತಂದಿದೆ.

8 ನೆಯ ಭಾರತೀಯ ವಿದ್ಯಾರ್ಥಿಗಳ ಸಂಸದ್ ಕಾರ್ಯಕ್ರಮವನ್ನು ವರ್ಲ್ಡ್ ಪೀಸ್ ಯೂನಿವರ್ಸಿಟಿಯಲ್ಲಿ (ಎಂಐಟಿ ಡಬ್ಲ್ಯುಪಿಯು) ಆಯೋಜಿಸಲಾಗಿದ್ದು, ಮೂರು ದಿನಗಳ ಕಾಲ ನಡೆದ 8 ನೆಯ ಬಿಸಿಎಸ್ ಅನ್ನು ಪುಣೆಯ ಎಂಐಟಿ ಹಾಗು ಡಬ್ಲ್ಯುಪಿಯು ಜಂಟಿಯಾಗಿ ಆಯೋಜನೆ ಮಾಡಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸುತ್ತ ಮಾತನಾಡಿದ ಇಲಿಯಾಸಿ ಗೋವಿನ ವಿಷಯ “ರಾಷ್ಟ್ರನೀತಿ”ಗೆ ಸಂಬಂಧಿಸಿದೆ, ಇದರ ಜೊತೆಗೆ ತ್ರಿವಳಿ ತಲಾಕ್ “ಧರ್ಮನೀತಿ”ಗೆ ಸಂಬಂಧಿಸಿದ ವಿಷಯವಾಗಿದೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಇಸ್ಲಾಮಿನಲ್ಲೂ ಕೆಲ ಬದಲಾವಣೆಗಳ ಅವಶ್ಯಕತೆ ಇದೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಇಮಾಮ್ ಹೇಳಿದ ಪ್ರಕಾರ ಗೋವು ಹಾಗು ತಲಾಕ್ ವಿಚಾರಕ್ಕೆ ದೇಶದಲ್ಲಿನ ಓವೈಸಿಯಂತಹ ಕಟ್ಟರ್ ಮುಸಲ್ಮಾನರೇನೋ ವಿರೋಧ ವ್ಯಕ್ತಪಡಿಸಬಹುದು ಆದರೆ ನೈಜ ಮುಸ್ಲಿಂ ಸಮುದಾಯ ಮಾತ್ರ ಈ ಇಮಾಮ್ ಹೇಳಿದ್ದರಲ್ಲಿ ನೂರಕ್ಕೆ ನೂರು ಸತ್ಯ ಇದೆ ಎನ್ನುತ್ತಿದ್ದಾರೆ. ಈಗಾಗಲೇ, ಹಿಂದುಗಳ ಪವಿತ್ರ ಸ್ಥಳ ಅಯೋಧ್ಯೆಯ ವಿಚಾರವಾಗಿ ಸಾಕಷ್ಟು ಗದ್ದಲಗಳು ಎಂದಿದ್ದು, ಇದು ಹಿಂದೂಗಳ ಭಾವನಾತ್ಮಕ ವಿಚಾರವೂ ಆಗಿತ್ತು. ಈ ವಿಚಾರದ ಬಗ್ಗೆ ಸಾಕಷ್ಟು ಮುಸಲ್ಮಾನರ ಬೆಂಬಲವನ್ನು ವ್ಯಕ್ತಪಡಿಸಿದ್ದರಲ್ಲದೇ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸ್ವತಃ ಮುಸಲ್ಮಾನರೇ ಮುಂದಾಗಿರುವ ವಿಚಾರ ಗೊತ್ತೇ ಇದೆ.

ಅಷ್ಟೇ ಅಲ್ಲದೇ, ಶಿಕ್ಷಣವನ್ನು ತಿರುಚಿ ವಿದ್ಯಾರ್ಥಿಗಳನ್ನು ಭಯೋತ್ಪಾದನಾ ಕಡೆಗೆ ಸೆಳೆಯುತ್ತಿರುವ ಮದರಸಾಗಳನ್ನು ಮುಚ್ಚಬೇಕೆಂದು ಶಿಯಾ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಂ ರಿಜ್ವಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದು, ತಮ್ಮಲ್ಲಿರುವ ಲೋಪ ದೋಷವನ್ನು ಎತ್ತಿ ತೋರಿಸಿದ್ದರು.

ಆದರೆ ಇದೀಗ ಮುಸ್ಲಿಂ ಇಮಾಮ್ ಗಳು ಗೋಮಾತೆಯ ಕುರಿತಾಗಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಿ ಅಂತ ಬೆಂಬಲ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಒಟ್ಟಿನಲ್ಲಿ ದೇಶದಲ್ಲಿ ಹಿಂದೂ ಮುಸಲ್ಮಾನರು ಒಟ್ಟಾಗಿ ಸಾಮರಸ್ಯದಿಂದ ಬಾಳಬೇಕಾದರೆ ಇಮಾಮ್ ಹೇಳಿದಂತೆ ಕೆಲ ಬದಲಾವಣೆಗಳು ಇಸ್ಲಾಮಿನಲ್ಲೂ ತರುವ ಅಗತ್ಯವಿದೆ.

– ಅಲೋಖಾ

Tags

Related Articles

Close