ಪ್ರಚಲಿತ

ಹಿಂದೂ ಮುಸ್ಲಿಮರ ಮಧ್ಯೆ ಕಂದಕ ಸೃಷ್ಟಿಸಲು ಸಿದ್ದರಾಮಯ್ಯ ಸರಕಾರದಿಂದ ಮತ್ತೊಂದು ಯೋಜನೆ ಸಿದ್ಧವಾಗುತ್ತಿದೆ ಎಚ್ಚರ!!!

ಈ ಸಿದ್ದರಾಮಯ್ಯ ಸರಕಾರಕ್ಕೆ ಏನಾಗಿದೆ? ಯಾಕಾಗಿ ಹಿಂದೂ ಮುಸ್ಲಿಮರ ಮಧ್ಯೆ ಕಂದಕ ಈ ರೀತಿ ಕಂದಕ ಸೃಷ್ಟಿಸುತ್ತಾರೆ. ಇಂಥಾ ಕಿಲಾಡಿ ಐಡಿಯಾಗಳೆಲ್ಲಾ ಹೇಗೆ ಅವರ ತಲೆಯಲ್ಲಿ ಹೊಳೆಯುತ್ತದೆ..? ಮೊದಲೇ ಹಿಂದೂ ಮುಸ್ಲಿಮರ ಮಧ್ಯೆ ಕಂದಕ ಸೃಷ್ಟಿಸುವ ವ್ಯವಸ್ಥಿತ ಯೋಜನೆಗಳು ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ಮುಸ್ಲಿಂ ಓಟುಬ್ಯಾಂಕ್‍ಗಾಗಿ ನಾನಾ ಕುಟಿಲ ನೀತಿಗಳನ್ನು ಜಾರಿಗೊಳಿಸುತ್ತಿರುವ ಕಾಂಗ್ರೆಸ್ ಸರಕಾರ ಹಿಂದೂಗಳ ಮನಸ್ಸಿನಿಂದ ಎಂದೋ ದೂರವಾಗಿದೆ. ಇದೀಗ ಈ ಯೋಜನೆ ಜಾರಿಗೊಳಿಸಿದ್ದೇ ಆದರೆ ಮತ್ತಷ್ಟು ಅಪಾಯ ಸೃಷ್ಟಿಯಾಗುವ ಸಾಧ್ಯತೆ ಇದೆ. ಒಂದು ದೇಶದಲ್ಲಿ ಒಂದೇ ಕಾನೂನು ಇರಬೇಕು. ಕಾನೂನು ಪ್ರತೀಯೋರ್ವರಿಗೂ ಸಮಾನವಾಗಿರಬೇಕು. ಆದರೆ ಸಿದ್ದರಾಮಯ್ಯ ಮಾಡಿದ್ದೇನು?

ಜೈಲು ಪಾಲಾಗುತ್ತಿರುವ ಅಲ್ಪಸಂಖ್ಯಾತರ ರಕ್ಷಣೆಗೆ ಆಯೋಗ… ರಾಜ್ಯ ಸರಕಾರದಿಂದ ದೇಶದಲ್ಲೇ ಮೊದಲ ಉಪಕ್ರಮ… ಇಂಥದೊಂದು ಹಿಂದೂ-ಮುಸ್ಲಿಮರ ಮಧ್ಯೆ ಧ್ರುವೀಕರಣ ಸೃಷ್ಟಿಸುವ ಖತರ್ನಾಕ್ ಯೋಜನೆ ಇದೇ ಡಿ.18ರಂದು ಘೋಷಣೆಯಾಗಲಿದೆ.

ಹಿಂದೂಗಳು ಈ ಯೋಜನೆಯ ಬಗ್ಗೆ ಎಚ್ಚರ ವಹಿಸಿ ಸೂಕ್ತ ಪ್ರತಿಭಟನೆ ನಡೆಸದೇ ಇದ್ದರೆ ಹಿಂದೂ ಮುಸ್ಲಿಮರ ಮಧ್ಯೆ ಅಂತರ ಸೃಷ್ಟಿಸುವ ಅಪಾಯವಿದೆ.

ಏನಿದು ಯೋಜನೆ? ಇದು ಹಿಂದೂ-ಮುಸ್ಲಿಮರ ಮಧ್ಯೆ ಹೇಗೆ ಅಂತರ ಸೃಷ್ಟಿಸುತ್ತದೆ?

ವಿವಿಧ ಪ್ರಕರಣಗಳಲ್ಲಿ ಜೈಲು ಪಾಲಾಗುತ್ತಿರುವ ಅಲ್ಪಸಂಖ್ಯಾತ ಸಮುದಾಯದ ಅಮಾಯಕರ ರಕ್ಷಣೆಗಾಗಿ ದೇಶದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಆಯೋಗವನ್ನು ಸರಕಾರ ರಚನೆ ಮಾಡಿದ್ದು, ಇದು ಡಿಸೆಂಬರ್ 18ರಂದು ಅಲ್ಪಸಂಖ್ಯಾತರ ದಿನಾಚರಣೆಯಂದು ರಾಜ್ಯಸರಕಾರ ಘೋಷಿಸಲಿದೆ. ಈ ಬಗ್ಗೆ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷ, ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ತಿಳಿಸಿದ್ದಾರೆ.

ರಾಜ್ಯ ಅಲ್ಪಸಂಖ್ಯಾತರ ಆಯೋಗ ಕಳೆದ ಬುಧವಾರ ಆಯೋಜಿಸಿದ್ದ `ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಸ್ಥಿತಿಗತಿ’ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತಾಡಿ ಈ ವಿಚಾರ ತಿಳಿಸಿದ್ದಾರೆ.

ಇದರ ಪ್ರಕಾರ ಅಮಾಯಕರ ರಕ್ಷಣೆಗಾಗಿ ಕಾನೂನು ವಿರೋಧಿ ಚಟುವಟಿಕೆ ನಿಯಂತ್ರಣ ಕಾಯ್ದೆ(1967) ಸೆಕ್ಷನ್ 45(2) ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಂದು ಪ್ರತ್ಯೇಕ ಆಯೋಗ ರಚನೆ ಮಾಡಬೇಕಿದೆ. ಈ ಆಯೋಗದಲ್ಲಿ ಒಬ್ಬರು ನಿವೃತ್ತ ಹೈಕೋರ್ಟು ನ್ಯಾಯಾಧೀಶರು, ಇಬ್ಬರು ಹಿರಿಯ ನಾಗರಿಕ ಸೇವಾ ಸದಸ್ಯರು ಇರಲಿದ್ದಾರೆ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.

ಯಾವುದೇ ಪ್ರಕರಣದಲ್ಲಿ ಅಮಾಯಕರನ್ನು ಪೊಲೀಸರು ಬಂಧಿಸಿದ ವೇಳೆ ಸಂಬಂಧಪಟ್ಟವರು ಆಯೋಗಕ್ಕೆ ಅರ್ಜಿ ಸಲ್ಲಿಸಿದರೆ ತಕ್ಷಣವೇ ಆಯೋಗ ಕಾರ್ಯ ನಿರ್ವಹಿಸಲಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಆಯೋಗಕ್ಕೆ ಸಲ್ಲಿಸಿದರೆ ಆಪಾದಿತ ವ್ಯಕ್ತಿಯನ್ನು ಒಂದು ವಾರದೊಳಗಡೆ ಬಿಡುಗಡೆ ಮಾಡಿಸುವ ಕೆಲಸವನ್ನು ಆಯೋಗ ಮಾಡಲಿದೆ. ಇದರಿಂದ ನಿರಪರಾಧಿಗಳು ಒಂದು ವಾರದಲ್ಲಿ ಬಿಡುಗಡೆ ಮಾಡಿಸುವ ಕೆಲಸವನ್ನು ಆಯೋಗ ಮಾಡಲಿದೆ. ಇದರಿಂದ ನಿರಪರಾಧಿಗಳು ಜೈಲಿನಲ್ಲಿ ಕೊಳೆಯುವುದನ್ನು ತಪ್ಪಿಸಬಹುದು.

ಹೇಗಿದೆ ಪ್ಲಾನ್?

ನೆನಪಿಡಿ ಒಂದು ಪ್ರಕರಣದಲ್ಲಿ ಸಿಲುಕಿದ ಅಪಲ್ಪಸಂಖ್ಯಾತರಿಗೆ ಮಾತ್ರ ಈ ಕಾನೂನು ಅನ್ವಯವಾಗುತ್ತದೆ. ಇದರಿಂದ ಅಲ್ಪಸಂಖ್ಯಾತರಿಗೊಂದು ಕಾನೂನು ಹಿಂದೂಗಳಿಗೆ ಒಂದು ಕಾನೂನು ಎಂಬ ನೀತಿ ಬರಲಿದೆ.

ಉದಾಹರಣೆಗೆ ಒಂದು ಪ್ರಕರಣದಲ್ಲಿ ಹಿಂದೂ ಹಾಗೂ ಅಲ್ಪಸಂಖ್ಯಾತರು ಸಿಲುಕಿದರೆ ಅಲ್ಪಸಂಖ್ಯಾತರನ್ನು ಶೀಘ್ರವಾಗಿ ಬಿಡುಗಡೆಗೊಳಿಸುವ ಕೆಲಸವನ್ನು ಈ ಆಯೋಗ ಮಾಡಲಿದೆ. ಆದರೆ ಹಿಂದೂಗಳಿಗೆ ಈ ಕಾನೂನು ಅನ್ವಯವಾಗದ ಕಾರಣ ಹಿಂದೂಗಳೆಲ್ಲಾ ಜೈಲ್ಲಲ್ಲೇ ಕೊಳೆಯಬೇಕಾಗುತ್ತದೆ. ಇದರಿಂದ ಹಿಂದೂ ಹಾಗೂ ಮುಸ್ಲಿಮರಲ್ಲಿ ಅಂತರ ಇನ್ನಷ್ಟು ಹೆಚ್ಚಲಿದ್ದು ಕೋಮುಸಾಮರಸ್ಯಕ್ಕೆ ಧಕ್ಕೆ ಉಂಟಾಗಲಿದೆ.

ಕಾನೂನು ಎಲ್ಲರಿಗೂ ಸಮಾನವಾಗಿರಬೇಕು. ಅದರಲ್ಲಿ ಹಿಂದೂಗಳಿಗೊಂದು ನ್ಯಾಯ ಮುಸ್ಲಿಮರಿಗೊಂದು ನ್ಯಾಯ ಇರಬಾರದು. ಆದರೆ ಕರ್ನಾಟಕದಲ್ಲಿ ಮಾತ್ರ ಇದು ತದ್ವಿರುದ್ಧ. ಮುಸ್ಲಿಂ ಓಟುಬ್ಯಾಂಕಿಗಾಗಿ ಈ ಖತರ್ನಾಕ್ ಪ್ಲಾನ್ ಅನ್ನು ಜಾರಿಗೊಳಿಸಿ ಮತ್ತೊಮ್ಮೆ ಅಧಿಕಾರದಲ್ಲಿ ಸ್ಥಿರಸ್ಥಾಯಿಯಾಗುವ ಉದ್ದೇಶ ಇದರಲ್ಲಿದೆ.

ಗಲಭೆಯಾದರೆ?

ಒಂದು ವೇಳೆ ಕೋಮುಗಲಭೆಯಾದರೆ ಒಂದಷ್ಟು ಮಂದಿ ಹಿಂದೂ ಅಥವಾ ಅಲ್ಪಸಂಖ್ಯಾತರು ಅರೆಸ್ಟ್ ಆಗುತ್ತಾರೆ. ಆದರೆ ಬಂಧಿತ ಅಲ್ಪಸಂಖ್ಯಾತರು ತಕ್ಷಣ ಬಿಡುಗಡೆಗೊಳ್ಳುವುದರಿಂದ ಮತ್ತಷ್ಟು ಗಲಭೆ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಪಸಂಖ್ಯಾತರು ರಾಜಾರೋಷವಾಗಿ ಗಲಭೆ ಸೃಷ್ಟಿಸಲು ಪ್ರೇರಣೆ ನೀಡುವುದರಿಂದ ರಾಜ್ಯದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗಲಿದೆ. ಅಥವಾ ಆಪಾದಿತ ವ್ಯಕ್ತಿ ತಕ್ಷಣ ಬಿಡುಗಡೆ ಹೊಂದಿ ಆತ ಮತ್ತಷ್ಟು ಕಿಡಿಗೇಡಿ ಕೃತ್ಯದಲ್ಲಿ ತೊಡಗುವ ಸಾಧ್ಯತೆ ಇದೆ.

ಅಮಾಯಕ ಹಿಂದೂಗಳು ಜೈಲಲ್ಲೇ ಕೊಳೆಯಿಸಿ ಅಲ್ಪಸಂಖ್ಯಾತರನ್ನು ತಕ್ಷಣ ಬಿಡುಗಡೆಗೊಳಿಸುವ ಖತರ್ನಾಕ್ ಯೋಜನೆ ಇದಾಗಿದೆ. ಒಂದು ವೇಳೆ ಹಿಂದೂಗಳು ಅಮಾಯಕರಾಗಿದ್ದರೆ ಇದೆಲ್ಲಾ ಅನ್ವಯಿಸುವುದಿಲ್ಲ. ಅವರು ಕೋರ್ಟು ತೀರ್ಪು ಬರುವವರೆಗೆ ಸುಧೀರ್ಘ ಕಾಲ ಜೈಲಲ್ಲೇ ಕೊಳೆಯಬೇಕು. ಒಂದು ವೇಳೆ ಅಲ್ಪಸಂಖ್ಯಾತ ವ್ಯಕ್ತಿ ಅಪರಾಧ ಮಾಡಿಯೂ ಅದು ಸಾಬೀತಾಗದಿದ್ದರೆ ಅವನನ್ನು ಅಮಾಯಕ ಎಂಬ ಪಟ್ಟಕಟ್ಟಿ ಬಿಡುಗಡೆಗೊಳಿಸುವುದರಿಂದ ಮುಂದೆ ಅನೇಕ ತೊಂದರೆಯಾಗುವ ಸಾಧ್ಯತೆ ಇದೆ.

ಪೊಲೀಸ್ ತನಿಖೆಯೂ ಕಷ್ಟ

ಈ ಕಾನೂನಿನಿಂದ ಪೊಲೀಸ್ ತನಿಖೆಗೂ ಹಿನ್ನಡೆಯಾಲಿದೆ. ಯಾಕೆಂದರೆ ಆಯೋಗದ ತನಿಖೆಯಲ್ಲಿ ಅಮಾಯಕ ಎಂದು ತೀರ್ಪು ಬಂದರೆ ಪೊಲೀಸರು ಸಾಕ್ಷಿ ಸಂಗ್ರಹಿಸಿಯೂ ಅವರ ತನಿಖೆಗೆ ಅಡ್ಡಿಯಾಗುತ್ತದೆ. ಇದರಿಂದ ಹಿಂದೂಗಳಿಗೂ ತೊಂದರೆಯುಂಟಾಗುತ್ತದೆ. ಅಲ್ಪಸಂಖ್ಯಾತರಿಗೆ ಒಂದು ಕಾನೂನು ಹಿಂದೂಗಳಿಗೊಂದು ಕಾನೂನು ಇದರಿಂದ ರಾಜ್ಯದಲ್ಲಿ ಇನ್ನಷ್ಟು ಕೋಮುಗಲಭೆಗೆ ಪ್ರೇರಣೆ ನೀಡುತ್ತದೆ.

ಹೋರಾಟ ಅನಿವಾರ್ಯ

ಹಿಂದೂ-ಅಲ್ಪಸಂಖ್ಯಾತರ ಮಧ್ಯೆ ಧ್ರುವೀಕರಣ ಸೃಷ್ಟಿಸುವ ಇಂಥದೊಂದು ಕಿಲಾಡಿ ಯೋಜನೆಯ ಬಗ್ಗೆ ಹೋರಾಟ ನಡೆಸದಿದ್ದರೆ ಮುಂದೆ ಖಂಡಿತಾ ಅಪಾಯವಾಗಲಿದೆ. ಈ ಬಗ್ಗೆ ಯಾವ ಮಾಧ್ಯಮಗಳೂ ಗಂಭೀರ ಚರ್ಚೆ ನಡೆಸಿಲ್ಲ. ಅಲ್ಲದೆ ಇದರ ಸಾಧಕಬಾಧಕಗಳ ಬಗ್ಗೆಯೂ ಜನರಿಗೆ ಸ್ಪಷ್ಟ ತಿಳುವಳಿಕೆಯನ್ನು ಸರಕಾರವಾಗಲೀ, ಮಾಧ್ಯಮವಾಗಲೀ ಮಾಡಿಲ್ಲ. ಆದ್ದರಿಂದ ಈ ಯೋಜನೆ ಜಾರಿಯಾಗಿದ್ದೇ ಆದರೆ ಖಂಡಿತಾ ಅಪಾಯವಿದೆ. ಈ ಕಾನೂನು ರೂಪಿಸುವುದಾದದರೇ ಅದು ಎಲ್ಲರಿಗೂ ಅನ್ವಯವಾಗಬೇಕೇ ಹೊರತು ಕೇವಲ ಅಲ್ಪಸಂಖ್ಯಾರಿಗಷ್ಟೇ ಅನ್ವಯವಾಗಬಾರದು. ಆದ್ದರಿಂದ ಈ ಯೋಜನೆಯ ಬಗ್ಗೆ ಸ್ಪಷ್ಟವಾದ ಹೋರಾಟ ನಡೆಸಬೇಕು. ಮುಖ್ಯವಾಗಿ ಕರ್ನಾಟಕದಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತ ಬಿಜೆಪಿಯೂ ಈ ಯೋಜನೆಯ ವಿರುದ್ಧ ಸೊಲ್ಲೆತ್ತಿಲ್ಲ. ಈ ಬಗ್ಗೆ ಜನರು ಕೂಡಾ ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಮಾತ್ರ ಈ ಯೋಜನೆ ಜಾರಿಗೊಳಿಸದಂತೆ ಮಾಡಲು ಸಾಧ್ಯ. ಇಲ್ಲವಾದರೆ ಹಿಂದೂಗಳು ಪಶ್ಚಾತಾಪ ಪಡುವ ದಿನಗಳು ದೂರವಿಲ್ಲ.

-ಚೇಕಿತಾನ

Tags

Related Articles

Close