ಪ್ರಚಲಿತ

ಹುತಾತ್ಮನಾದವನು ಭಾರತದ ಮುಸಲ್ಮಾನ ಯೋಧ! ಬರ್ಬರವಾಗಿ ಹತ್ಯೆ ಮಾಡಿದವರು ಮುಸಲ್ಮಾನ ಉಗ್ರಗಾಮಿಗಳು! ಅತಂತ್ರ ಸ್ಥಿತಿಯಲ್ಲಿರುವ ಬುದ್ಧಿಜೀವಿಗಳು!

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸವನ್ನು ನಿಯಂತ್ರಿಸುವಲ್ಲಿ ಯಶಸ್ಸನ್ನು ಕಾಣುತ್ತಿರುವ ಭಾರತೀಯ ಸೇನೆಯ ಬಗ್ಗೆ ಹತಾಶೆಗೊಂಡ ಉಗ್ರರು, ಯೋಧರ ಮನೆಯೊಳಗಿ ನುಗ್ಗಿ ದಾಂಧಲೆ ನಡೆಸುವ ಹೀನ ಮಟ್ಟಕ್ಕೆ ತಲುಪಿದ್ದಾರೆ!! ಹೌದು.. ರಜೆಗೆಂದು ಮನೆಗೆ ತೆರಳಿದ್ದ ಸೈನಿಕನ ಮನೆಗೆ ನುಗ್ಗಿದ ಉಗ್ರರು ಬಿಎಸ್‍ಎಫ್ ಯೋಧನನ್ನೇ ಗುಂಡಿಕ್ಕಿ ಕೊಲ್ಲುವ ದುಷ್ಕøತ್ಯವನ್ನು ಎಸಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ!!

ಬೆನ್ನ ಹಿಂದೆ ಚೂರಿ ಹಾಕುವ ಈ ಉಗ್ರರ ಅಟ್ಟಹಾಸಕ್ಕೆ ಅದೆಷ್ಟೂ ಅಮಾಯಕರು ಬಲಿಯಾಗಿದ್ದಾರೋ ಗೊತ್ತಿಲ್ಲ! ಆದರೆ ನಮ್ಮ ಸೈನಿಕರ ಬಗ್ಗೆ ಮಾಹಿತಿ ತಿಳಿದು ಮನೆಗೆ ಬಂದು ರಣಹೇಡಿಗಳಂತೆ ಗುಂಡಿಟ್ಟು ಹತ್ಯೆಗೈದಿದ್ದಾರೆ!! ಜಮ್ಮು ಮತ್ತು ಕಾಶ್ಮೀರದ ಬಂಡೀಪುರ ಜಿಲ್ಲೆಯ ಹಜಿನ್ ಟೌನ್ ನಲ್ಲಿರುವ ಭದ್ರತಾ ಪಡೆಯ ಜವಾನ್ ಮೊಹ್ಮದ್ ರಂಜಾನ್ ಫಾರ್ರಿ ಮನೆಗೆ ನುಗ್ಗಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಈ ಉಗ್ರರ ದಾಳಿಯಲ್ಲಿ ಯೋಧ ಮೊಹ್ಮದ್ ರಂಜಾನ್ ಫಾರ್ರಿ(30) ಹುತಾತ್ಮರಾಗಿದ್ದು, ಅವರ ಕುಟುಂಬದ ನಾಲ್ವರು ಸದಸ್ಯರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಉಗ್ರರ ದಾಳಿಗೆ ಬಿಎಸ್‍ಎಫ್ ಜವಾನ್ ಮೊಹ್ಮದ್ ರಂಜಾನ್ ಫಾರ್ರಿ ಹುತಾತ್ಮರಾಗಿದ್ದು, ಗಾಯಗೊಂಡಿರುವ ಕುಟುಂಬದ ಸದಸ್ಯರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯೋಧ ಮೊಹ್ಮದ್ ರಂಜಾನ್ ಫಾರ್ರಿ ಅವರು 5 ದಿನಗಳ ರಜೆ ನಿಮಿತ್ತ ಮನೆಗೆ ಬಂದಿದ್ದರು! ಮೊಹ್ಮದ್ ರಂಜಾನ್ ಫಾರ್ರಿ ಮನೆಗೆ ಬಂದಿರುವ ವಿಚಾರ ತಿಳಿದ ಉಗ್ರರು ಕಳೆದ ರಾತ್ರಿ ಮನೆಗೆ ನುಗ್ಗಿದ್ದು, ಈ ವೇಳೆ ಕುಟುಂಬಸ್ಥರು ಮುಖಾಮುಖಿಯಾದಾಗ ಅವರ ಗುಂಡಿನ ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಈ ಸಂದರ್ಭದಲ್ಲಿ ಮೊಹ್ಮದ್ ರಂಜಾನ್ ಫಾರ್ರಿ ಅವರನ್ನು ಅಪಹರಣ ಮಾಡಲು ಉಗ್ರರು ಯತ್ನ ನಡೆಸಿದ್ದಾರೆ. ಈ ವೇಳೆ ಉಗ್ರರ ವಿರುದ್ದ ಮೊಹ್ಮದ್ ರಂಜಾನ್ ಫಾರ್ರಿ ತಿರುಗಿ ಬಿದ್ದಿದ್ದರಿಂದ ಮನೆಯ ಹೊರಗೆ ಎಳೆದು ತಂದು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮೇ ತಿಂಗಳಿನಲ್ಲಿಯೂ ಕೂಡ ಉಗ್ರರು ಇದೇ ರೀತಿಯಲ್ಲಿಯೇ ಲೆ. ಉಮರ್ ಫಯಾಜ್ ರನ್ನು ಅಪಹರಿಸಿ ಹತ್ಯೆ ಮಾಡಿದ್ದರು. ಮೇ.9 ರಂದು ಉಮರ್ ಫಯಾಜ್ ಅವರು ರಜೆ ನಿಮಿತ್ತ ಊರಿಗೆ ಬಂದಿದ್ದರು. ಈ ವೇಳೆ ಸಂಬಂಧಿಯೊಬ್ಬರ ಮದುವೆಗೆ ಹೋದಾಗ ಅಲ್ಲಿಂದ ಯೋಧನನ್ನು ಉಗ್ರರು ಅಪಹರಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಶೋಪಿಯಾನ್ ಜಿಲ್ಲೆಯಲ್ಲಿ ತಲೆ ಮತ್ತು ಹೊಟ್ಟೆಗೆ ಗುಂಡೇಟು ಬಿದ್ದಿರುವ ಸ್ಥಿತಿಯಲ್ಲಿ ಉಮರ್ ಅವರ ಮೃತದೇಹ ಪತ್ತೆಯಾಗಿತ್ತು.

ಮೊಹ್ಮದ್ ರಂಜಾನ್ ಫಾರ್ರಿ ಬಿಎಸ್‍ಎಪ್ 73 ಬೆಟಾಲಿಯನ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಉಗ್ರರು ಅನಾಗರೀಕ ಹಾಗೂ ಅಮಾನವೀಯ ಕೃತ್ಯ
ಎಸಗಿದ್ದಾರೆ!! ಈ ಸಂದರ್ಭದಲ್ಲಿ ರಂಜಾನ್ ಅವರ ತಂದೆ, ಇಬ್ಬರು ಸಹೋದರರು ಹಾಗೂ ಚಿಕ್ಕಮ್ಮ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ರಂಜಾನ್ ಅವರ ಚಿಕ್ಕಮ್ಮ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಉಳಿದ ಮೂವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆಂದು ವರದಿಗಳು ತಿಳಿಸಿವೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಪೆÇಲೀಸ್ ಅಧಿಕಾರಿ ಎಸ್.ಪಿ. ವೈದ್ ಅವರು ಈಗಾಗಲೇ ಹೇಳಿದ್ದಾರೆ!!

ಇದೀಗಾಗಲೇ ಪಾಕಿಸ್ತಾನವು ವಿಶ್ವ ಸಂಸ್ಥೆಯಲ್ಲಿ ಗಾಜಾ ಪಟ್ಟಿಯ ದಾಳಿಗೊಳಗಾದ ಮಹಿಳೆಯ ಭಾವಚಿತ್ರವನ್ನು ತೋರಿಸಿ ಇದು ಕಾಶ್ಮೀರದ ಮಹಿಳೆ ಎಂದು ಬಿಂಬಿಸಲು ಹೋಗಿ ಇಡೀ ಜಗತ್ತಿನ ಮುಂದೆ ತನ್ನ ಮರ್ಯಾದೆಯನ್ನು ಕಳೆದುಕೊಂಡಿತ್ತು.! ಆದರೆ ಉಗ್ರರ ವಿರುದ್ದ ಸಮರ ಸಾರಿರುವ ಭಾರತದ ನಡೆಯಿಂದ ಹತಾಶಗೊಂಡ ಉಗ್ರರು ಇಂದು ರಣಹೇಡಿಗಳಂತೆ ಯೋಧರ ಮನೆಗೇ ನುಗ್ಗಿ ಕೊಂದು ಹಾಕುವ ನೀಚ ಕೃತ್ಯಕ್ಕೆ ಇಳಿದಿದ್ದಾರೆ. ಈ ಕೃತ್ಯದಲ್ಲಿ ಮೂವರು ಪಾಕಿಸ್ತಾನದ ಉಗ್ರರು ಪಾಲ್ಗೊಂಡಿರುವುದು ಬೆಳಕಿಗೆ ಬಂದಿರುವುದು ಪಾಕಿಸ್ತಾನದ ನರಿ ಬುದ್ದಿ ವಿಶ್ವದ ಮುಂದೆ ಇನ್ನೊಮ್ಮೆ ಹರಾಜಾಗಿದೆ. ಅಷ್ಟೇ ಅಲ್ಲದೇ, ಈ ಘಟನೆಯಿಂದ ಪಾಕಿಸ್ತಾನ ಮುಂದೊಂದು ದಿನ ಭಾರೀ ಬೆಲೆ ತೆರಬೇಕಾದ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬುದ್ಧಿಜೀವಿಗಳೆನಿಸಿದ ಅದೆಷ್ಟೋ ಮಂದಿ ಇವತ್ತು ಈ ಹತ್ಯೆಯ ಬಗ್ಗೆ ಯಾರ ಪರ ನಿಲ್ಲಬಹುದೆಂಬ ಗೊಂದಲವೂ ಇದೆ! ಯಾಕೆಂದರೆ, ಪ್ರತೀ ಬಾರಿಯೂ ಮುಸಲ್ಮಾನ ಉಗ್ರರ ಪರ ನಿಲ್ಲುವ ಭಯೋತ್ಪಾದಕರ ಹಿತೈಷಿಗಳ ಸ್ಥಿತಿ ಅತಂತ್ರವಾಗಿರುವುದು ಹಾಸ್ಯಾಸ್ಪದವೇ ಸರಿ! ಇವರ ಜೊತೆ ಜೊತೆಗೇ ಬೊಬ್ಬಿರಿಯುವ ಕೆಲ ಮಾನವ ಹಕ್ಕುಗಳ ಆಯೋಗಗಳು ಈಗ ಯಾರ ಪರ ಘೋಷಣೆಗಳನ್ನು ಕೂಗುತ್ತದೋ ಎಂಬುದು ಪ್ರಶ್ನಾರ್ಥಕವಾಗಿದೆ. ಹಾಗಾದರೆ, ದೇಶ ಕಾಯುವ ಯೋಧನಿಗಿಂತ ಭಯೋತ್ಪಾದನೆಗೆ ಹುರಿದುಂಬಿಸುವ ಬುದ್ಧಿ ಜೀವಿಗಳು ಈ ಒಂದು ಹತ್ಯೆಗೆ ಉತ್ತರ ನೀಡುತ್ತವೆಯೇ?

– ಅಲೋಖಾ

Tags

Related Articles

Close