ಪ್ರಚಲಿತ

2017ರಲ್ಲಿ ಅಮರನಾಥ ದರ್ಶನ ಮಾಡಿದ ಭಕ್ತಾಧಿಗಳ ಸಂಖ್ಯೆ ಎಷ್ಟು ಗೊತ್ತಾ? ಮೋದಿ ಕೈಚಳಕ ಹೇಗೆ ಕೆಲಸ ಮಾಡಿತು?!

ಸುಮಾರು ಐದು ಸಾವಿರ ವರ್ಷಗಳಷ್ಟು ಹಳೆಯದಿರಬಹುದೆಂದು ನಂಬಲಾಗಿರುವ ಹಿಂದೂಗಳ ಪವಿತ್ರ ಕ್ಷೇತ್ರವಾದ ಅಮರನಾಥ ದೇವಾಲಯವು ಹಿಂದೂ ಪುರಾಣದಲ್ಲಿಯೇ ಅತ್ಯಂತ ಮಹತ್ವವನ್ನು ಪಡೆದುಕೊಂಡಿರುವ ದೇವಾಲಯ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಹಿಂದೂಗಳ ಪವಿತ್ರ ಕ್ಷೇತ್ರ ಎಂದು ಕರೆಯಲ್ಪಡುವ ಅಮರನಾಥ ದೇವಾಲಯವು ಇಂದು ಉಗ್ರರ ಉಪಟಳದಿಂದ ಅಲ್ಲಿಗೆ ತೆರಳುವುದೇ ಅತೀ ಕಷ್ಟಕರ ಎಂದನಿಸಿದೆ.

ಆದರೆ ಗುಹೆಯೊಳಗೆ ಮಂಜಿನ ಗೆಡ್ಡೆಯೊಂದು ಲಿಂಗದ ಆಕಾರವನ್ನು ಪಡೆದು ವಿಶ್ವ ವಿಖ್ಯಾತಿಯನ್ನು ಪಡೆದಿದ್ದಲ್ಲದೇ, ಸುಮಾರು 3,888 ಮೀಟರ್ ಎತ್ತರದಲ್ಲಿ ಇರುವ ಈ ದೇವಾಲಯವು ಶ್ರೀನಗರದಿಂದ ಸುಮಾರು 141 ಕಿ.ಮಿ. ದೂರದಲ್ಲಿದೆ. ಆದರೆ ಉಗ್ರರ ಉಪಟಳದ ನಡುವೆಯೂ ಕಳೆದ ಮೂರು ವರ್ಷದಲ್ಲಿ ಸುಮಾರು ಎಂಟು ಲಕ್ಷ ಯಾತ್ರಾರ್ಥಿಗಳು ಹಿಮಾಲಯ ಪರ್ವತ ಶ್ರೇಣಿಗೆ ಸೇರಿದ ದಕ್ಷಿಣ ಕಾಶ್ಮೀರದ ಪವಿತ್ರ ಅಮರನಾಥ ಗುಹಾಂತರ ದೇಗುಲ ದರ್ಶನ ಮಾಡಿದ್ದಾರೆ ಎನ್ನುವ ವಿಚಾರವು ಇದೀಗ ತಿಳಿದು ಬಂದಿದೆ.

ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯೇರಿದ ಅಂದಿನಿಂದ ದೇಶವು ಸಾಕಷ್ಟು ಬದಲಾವಣೆಯನ್ನು ಕಾಣುತ್ತಾ ಹೋಗುತ್ತಿದ್ದು, ಅತೀ ಮುಖ್ಯವಾಗಿ ಭಾರತೀಯ ಸೇನೆ ಬಲಿಷ್ಠಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ಅಷ್ಟೇ ಅಲ್ಲದೇ, ಉಗ್ರರ ಬೆದರಿಕೆಯ ನಡುವೆಯೂ ಅಮರನಾಥ ಯಾತ್ರೆಯನ್ನು ಯಶಸ್ಸಿಯಾಗಿ ಪೂರೈಸಿರುವ ಲಕ್ಷಾಂತರ ಭಕ್ತಾಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರಲ್ಲದೇ, ಯಾತ್ರೆಯ ಸಂದರ್ಭದಲ್ಲಿ ಹೆಚ್ಚಿನ ಭದ್ರತೆಯನ್ನೂ ಪಡೆದುಕೊಳ್ಳುತ್ತಿರುವುದೇ ಯಾತ್ರೆಯಲ್ಲಿ ಭಕ್ತ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.

ಆದರೆ ಕಾಂಗ್ರೆಸ್ ಸರ್ಕಾರವು ಅಧಿಕಾರದಲ್ಲಿರಬೇಕಾದರೆ ಅಮರನಾಥ ಯಾತ್ರೆ ಕೈಗೊಳ್ಳುವುದೆಂದರೆ ಅದು ಸಾವಿನ ದವಡೆಗೆ ನೂಕುವಂತಹ ಪರಿಸ್ಥಿತಿಯು ಭಕ್ತರಿಗೆ ಎದುರಾಗಿತ್ತು!! ಅಷ್ಟೇ ಅಲ್ಲದೇ ಆ ಸಂದರ್ಭದಲ್ಲಿ ಅಮರನಾಥ ಯಾತ್ರೆ ಕೈಗೊಳ್ಳುವ ಭಕ್ತರಿಗೆ ಯಾವುದೇ ರೀತಿಯ ಸೂಕ್ತ ಭದ್ರತೆಯೂ ಇರಲಿಲ್ಲ ಎನ್ನುವುದು ವಿಪರ್ಯಾಸ. ಆದರೆ ಕಳೆದ ಮೂರು ವರ್ಷದಲ್ಲಿ ನರೇಂದ್ರ ಮೋದಿಯವರ ಉತ್ತಮ ಕಾರ್ಯವೈಖರಿಯಿಂದಾಗಿ ಸುಮಾರು ಎಂಟು ಲಕ್ಷ ಯಾತ್ರಾರ್ಥಿಗಳು ದಕ್ಷಿಣ ಕಾಶ್ಮೀರದ ಪವಿತ್ರ ಅಮರನಾಥ ದೇಗುಲವನ್ನು ದರ್ಶನ ಮಾಡಿರೋದು ಮಾತ್ರ ಹೆಮ್ಮೆಯ ವಿಚಾರವಾಗಿದೆ.

ಹಿಂದೂ ನಂಬಿಕೆಯ ಪ್ರಕಾರ, ಅಮರನಾಥ ಅತಿ ಮಹತ್ವದ ಪುಣ್ಯ ಕ್ಷೇತ್ರಗಳ ಪೈಕಿ ಒಂದಾಗಿದ್ದು, ಶ್ರೀನಗರದ ಅತ್ಯಂತ ಪ್ರಮುಖ ಆಕರ್ಷಣೆಯಾದ ಅಮರನಾಥ ಗುಹೆಯು ಶಿವನಿಗೆ ಮುಡಿಪಾಗಿದೆ. ಅಷ್ಟೇ ಅಲ್ಲದೇ ಸಮುದ್ರಮಟ್ಟದಿಂದ 3888 ಮೀ. (12,756 ಅಡಿಗಳು) ಎತ್ತರದಲ್ಲಿ ನೆಲೆಸಿರುವ ಈ ಗುಹೆಗಳು ಸುಮಾರು 5,000 ವರ್ಷಗಳಷ್ಟು ಪುರಾತನವಾದುದು ಎಂದು ನಂಬಲಾಗಿದೆ. ಇನ್ನು ಈ ಅಮರನಾಥ್ ಗುಹೆಯ ಉದ್ದ, ಎತ್ತರ ಹಾಗು ಅಗಲವು ಕ್ರಮವಾಗಿ 60ಅಡಿ, 15ಅಡಿ ಮತ್ತು 30ಅಡಿ ಇದೆಯಲ್ಲದೇ, ಈ ಗುಹೆಯಲ್ಲಿ ನೈಸರ್ಗಿಕವಾಗಿ ರೂಪಗೊಂಡಂತಹ ಹಿಮದ ‘ಶಿವಲಿಂಗ’ ವಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದರ್ಶನ ಪಡೆದು ಪುನೀತರಾಗಲು ಆಗಮಿಸುತ್ತಾರೆ.

ಆದರೆ ಅದೆಷ್ಟೋ ಸಂಖ್ಯೆಯ ಭಕ್ತರು ಉಗ್ರರ ಉಪಟಳಕ್ಕೆ ಬೇಸತ್ತು ಹೋಗಿದ್ದು, ಅಮರನಾಥ ಯಾತ್ರೆ ಕೈಗೊಳ್ಳುವುದು ಬಹಳ ಕಷ್ಟಕರ ಎಂದೆನಿಸಿ ಹೋಗಿದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಸುಮಾರು 8 ಲಕ್ಷ ಯಾತ್ರಾರ್ಥಿಗಳು ಹಿಮಾಲಯ ಪರ್ವತ ಶ್ರೇಣಿಗೆ ಸೇರಿದ ದಕ್ಷಿಣ ಕಾಶ್ಮೀರದ ಪವಿತ್ರ ಅಮರನಾಥ ಗುಹಾಂತರ ದೇಗುಲ ದರ್ಶನ ಮಾಡಿದ್ದಾರೆ ಎಂದು ಜಮ್ಮು ಕಾಶ್ಮೀರದ ವಿಧಾನಸಭೆ ಕಲಾಪದಲ್ಲಿ ಆರೋಗ್ಯ ಸಚಿವ ಬಾಲಿ ಭಗತ್ ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಕಲಾಪದಲ್ಲಿ ಈ ಕುರಿತ ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಆರೋಗ್ಯ ಸಚಿವ ಬಾಲಿ ಭಗತ್, 2015ರಲ್ಲಿ 3,52,771 ರಷ್ಟು ಸಂಖ್ಯೆಯ ಭಕ್ತರು ಅಮರನಾಥ ಯಾತ್ರೆಯನ್ನು ಕೈಗೊಂಡಿದ್ದರೆ, 2016ರಲ್ಲಿ 2,20,490 ರಷ್ಟು ಸಂಖ್ಯೆಯ ಭಕ್ತರು ಯಶಸ್ವಿಯಾಗಿ ಯಾತ್ರೆಯನ್ನು ಕೈಗೊಂಡಿದ್ದಾರೆ. ಇನ್ನು 2017ರಲ್ಲಿ 2,60,003 ಸಂಖ್ಯೆಯ ಯಾತ್ರಿಕರು ಅಮರನಾಥನ ದರ್ಶನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ, ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಸಾವಿನಿಂದ ಉಂಟಾದ ಗಲಭೆಯಿಂದ 2016ರಲ್ಲಿ ಯಾತ್ರಿಗಳ ಸಂಖ್ಯೆ ಇಳಿಮುಖವಾಗಿತ್ತು. ಯಾಕೆಂದರೆ ಆ ಸಂದರ್ಭದಲ್ಲಿ ಜುಲೈ 2016ರಲ್ಲಿ ಅನಂತನಾಗ್ ಜಿಲ್ಲೆ ಮೂಲಕ ಅಮರನಾಥ ಯಾತ್ರೆ ಕೈಗೊಂಡಿದ್ದ ಯಾತ್ರಿಕರ ಬಸ್ ಮೇಲೆ ಉಗ್ರರು ದಾಳಿ ನಡೆಸಿ 7 ಜನರನ್ನು ಕೊಂದು, 15 ಜನರನ್ನು ಗಾಯಗೊಳಿಸಿದ್ದರು. ಆದರೆ, ಪ್ರತಿ ಭಾರಿಯೂ ಒಂದಲ್ಲ ಒಂದು ರೀತಿಯಲ್ಲಿ ಹಿಂದೂಗಳನ್ನು ಮಟ್ಟ ಹಾಕಲು ಪ್ರಯತ್ನಿಸುತ್ತಿರುವ ಉಗ್ರರಿಗೆ ನಮ್ಮ ಭಾರತೀಯ ಸೈನಿಕರು ತಕ್ಕ ಪಾಠ ಕಲಿಸುತ್ತಿರುವುದು ತಿಳಿದೇ ಇದೆ.

 

 

ಹಾಗಾಗಿ ಉಗ್ರರ ಉಪಟಳದಿಂದ ಅದೆಷ್ಟೋ ಮಂದಿ ಭಕ್ತರು ಅವಕಾಶ ವಂಚಿತರಾಗಿದ್ದು, ಅಮರನಾಥ್ ಯಾತ್ರೆಯನ್ನು ಕೈಗೊಳ್ಳಲು ಭಯ ಪಟ್ಟುಕೊಳ್ಳುತ್ತಿರುವುದಂತೂ ಅಕ್ಷರಶಃ ನಿಜ. ಆದರೆ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಅಮರನಾಥ ಯಾತ್ರಾರ್ಥಿಗಳಿಗೆ ಉತ್ತಮ ಭದ್ರತೆಯನ್ನು ಕಲ್ಪಿಸುವುದರೊಂದಿಗೆ ಉಗ್ರರನ್ನು ಸದೆಬಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ!! ಇನ್ನು, ಎರಡು ತಿಂಗಳ ಅಮರನಾಥ ಯಾತ್ರೆ ಪ್ರತಿವರ್ಷ ಸಾಮಾನ್ಯವಾಗಿ ಜೂನ್ ತಿಂಗಳ ಕೊನೆಯ ವಾರದಲ್ಲಿ ಎರಡು ಮಾರ್ಗಗಳಾದ ಅನಂತ್‍ನಾಗ್ ಜಿಲ್ಲೆಯ ಪಹಲ್‍ಗಾಮ್ ಮತ್ತು ಗಂದರ್‍ಬಲ್ ಜಿಲ್ಲೆಯ ಬಲ್ತಾಲ್ ಮೂಲಕ ಪ್ರಾರಂಭವಾಗುತ್ತದೆ.

ಈಗಾಗಲೇ ಹಿಂದೂಗಳ ಪವಿತ್ರ ಯಾತ್ರಾ ಸ್ಥಳ ಎನಿಸಿಕೊಂಡಿರುವ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ಮಂದಿರ ಪ್ರದೇಶವನ್ನು “ನಿಶ್ಯಬ್ದ ವಲಯ” ಎಂದು ಘೋಷಿಸಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಹಸಿರು ಪೀಠ ಈ ಘೋಷಣೆಯನ್ನು ಹೊರಡಿಸಿದ್ದು, ಇನ್ನು ಮುಂದೆ ಅಮರನಾಥದ ಪ್ರವೇಶದ್ವಾರದಿಂದ ಹೊರಕ್ಕೆ ಯಾವುದೇ ಧಾರ್ಮಿಕ ಕಾರ್ಯಗಳನ್ನು ನಡೆಸುವಂತಿಲ್ಲ. ದೇಗುಲದ ಸುತ್ತಲ ಪ್ರದೇಶದ ಪರಿಸರವನ್ನು ಸ್ವಚ್ಛಂದವಾಗಿಟ್ಟುಕೊಳ್ಳುವುದು, ಯಾತ್ರಾರ್ಥಿಗಳಿಗೆ ಸರಾಗವಾಗಿ ದೇವರ ದರ್ಶನ ಪಡೆಯಲು ಅನುವು ಮಾಡಿಕೊಡುವುದು ಅಮರನಾಥ ದೇಗುಲ ಮಂಡಳಿಯ ಜವಾಬ್ದಾರಿ ಎಂದು ಹಸಿರು ಪೀಠದ ಮುಖ್ಯಸ್ಥ ನ್ಯಾ. ಸ್ವತಂತರ್ ಕುಮಾರ್ ಹೇಳಿದ್ದಾರೆ.

ಅಮರನಾಥ ಯಾತ್ರೆ ಕೈಗೊಳ್ಳುವ ಸಂದರ್ಭದಲ್ಲಿ ಪ್ರತಿ ಬಾರಿಯೂ ಉಗ್ರರ ಅಟ್ಟಹಾಸದಿಂದ ಮೆರೆಯುತ್ತಿರುವ ಭಾರತದ ಮುಕುಟಮಣಿ ಎಂದೇ ಪ್ರಖ್ಯಾತಿ ಪಡೆದಿರುವ ಕಾಶ್ಮೀರವು ಹಿಂದೂಗಳಿಗೆ ಸೂಕ್ತ ಭದ್ರತೆಯೇ ಇಲ್ಲದೇ ಯಾತ್ರಾರ್ಥಿಗಳು ಯಾತ್ರೆಯನ್ನು ಕೈಗೊಳ್ಳುವುದೇ ಅಸಾಧ್ಯವಾಗಿತ್ತು. ಆದರೆ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ಪ್ರಗತಿಯತ್ತ ಸಾಗುತ್ತಿರುವ ಭಾರತವೂ ಕಳೆದ ಮೂರು ವರ್ಷದಲ್ಲಿ ಅಮರನಾಥ ಯಾತ್ರಿಗಳ ಸಂಖ್ಯೆ ಹೆಚ್ಚುತ್ತಿದೆಯಲ್ಲದೇ ಯಾತ್ರಾರ್ಥಿಗಳಿಗೆ ಹೆಚ್ಚಿನ ಭದ್ರತೆ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

– ಅಲೋಖಾ

Tags

Related Articles

Close