ದೇಶಪ್ರಚಲಿತ

6 ಸಚಿವರು ಹೊರಕ್ಕೆ, 22 ಸಚಿವರು ಒಳಗೆ!! ಮೋದಿ ಯವರ ಸಚಿವ ಸಂಪುಟದಲ್ಲಿಯಾಗುತ್ತಿದೆ ಅತೀ ದೊಡ್ಡ ಆಪರೇಷನ್ !!!

 

ಸದಾ ಒಂದಿಲ್ಲೊಂದು ವಿಚಾರದಲ್ಲಿ ಸಂಚಲನವನ್ನು ಮೂಡಿಸುತ್ತಿರುವ ಮೋದಿ ಈಗ ಇನ್ನೊಂದು ಆಪರೇಷನ್ ಗೆ ಸಜ್ಜಾಗಿದ್ದಾರೆ. ತಮ್ಮ ಸಚಿವ ಸಂಪುಟವನ್ನು ಪುನರ್ನಿರ್ಮಾಣ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.

ಇತ್ತೀಚೆಗೆ ವೆಂಕಯ್ಯ ನಾಯ್ಡು ರವರು ಪಕ್ಷ ತೊರೆದು ಉಪರಾಷ್ಟ್ರಪತಿಯಾಗಿ ಆಯ್ಕೆ ಆಗಿದ್ದರು, ಬಿಹಾರದ ನಿತೀಶ್ ಕುಮಾರ್ ಅವರು ಕೂಡ ಮೋದಿ ನೇತೃತ್ವದ ಸರಕಾರಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇದೆಲ್ಲ ಮೋದಿ ಸಚಿವ ಸಂಪುಟದ ಪುನರ್ನಿರ್ಮಾಣ ಕಾರ್ಯಕ್ಕೆ ಎಡೆ ಮಾಡಿಕೊಟ್ಟದೆ ಎನ್ನಬಹುದು. ಆ ಮೂಲಕ ತಮ್ಮ ಸಚಿವ ಸಂಪುಟದಲ್ಲಿಯೂ ಸರ್ಜಿಕಲ್ ಸ್ಟ್ರೈಕ್ ಮಾಡಲು ತಯಾರಾಗಿದ್ದಾರೆ ಪ್ರಧಾನಿ ಮೋದಿ.

ಇದು ಅತೀ ದೊಡ್ಡ ಆಪರೇಷನ್ !!

ನಿಜ. ಇದೇ ಕಾರಣಕ್ಕೆ ತಮಿಳುನಾಡಿನ ಪ್ರವಾಸವನ್ನು ರದ್ದುಗೊಳಿಸಿದ್ದರು ಅಮಿತ್ ಶಾ. ಮೋದಿಯವರಹೊಸ ಸಂಪುಟಕ್ಕೆ 13 ಹೊಸ ಮುಖಗಳು ಸಚಿವರಾಗಿ ಸೇರ್ಪಡೆಗೊಳ್ಳದ್ದಾರೆ. ಎಐಡಿಎಮ್ ಕೆ ಪಕ್ಷದ 6 ಸದಸ್ಯರೂ ಮೋದಿಯವರ ಸಂಪುಟಕ್ಕೆ ಸೇರಿಕೊಳ್ಳಲಿದ್ದಾರೆ. ನಿತೀಶ್ ಸಂಪುಟದಲ್ಲಿರುವ ಕೆಲವು ಸಚಿವರೂ ಸೇರ್ಪಡೆಯಾಗಲಿದ್ದಾರೆ. ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ 23 ಸದಸ್ಯರನ್ನು, ಅವುಗಳಲ್ಲಿ ಎಐಡಿಎಮ್‍ಕೆ ಯ 13 ಸದಸ್ಯರು ಹಾಗೂ ಜೆಡಿಯು ಪಕ್ಷದ 10 ಸದಸ್ಯರು ಮೋದಿ ನೇತೃತ್ವದ ಎನ್ ಡಿ ಎ ಸರಕಾರದ ಸಂಪುಟಕ್ಕೆ ಸೇರಲಿದ್ದಾರೆ. ಇದು ಒಂದು ಐತಿಹಾಸಿಕ ನಡೆಯಾಗಲಿದೆ. ಇದವರೆಗೆ ಕಾರ್ಯದಲ್ಲಿ ಹಿಂದೆ ಬಿದ್ದ 6 ಸಚಿವರನ್ನು ಕೈಬಿಡಲು ನಿರ್ಧರಿಸಲಾಗಿದೆ. ಪೀಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ರಾಥೋರ್,ಜಿತೇಂದ್ರ ಸಿಂಗ್, ಜಾವಡೇಕರ್ ಅವರು ಸಚಿವ ಸಂಪುಟದಿಂದ ಹೊರಗೆ ಹೋಗುವ ಸಾಧ್ಯತೆಗಳು ದಟ್ಟವಾಗಿವೆ.ದಕ್ಷಿಣ ಭಾರತದ ಮೇಲೆಯೇ ಹೆಚ್ಚಾಗಿ ಗಮನಹರಿಸುವ ಚಿಂತನೆಯನ್ನು ಮೋದಿ ಮಾಡಿದ್ದಾರೆ. ಮುಂದಿನ ಬಾರಿ ದಕ್ಷಿಣ ಭಾರತದಲ್ಲಿ ಅಭೂತಪೂರ್ವವಾಗಿ ವಿಜಯಿಯಾಗಲು ಪೂರ್ವ ತಯಾರಿಯನ್ನು ಈಗಾಲೇ ಮಾಡಿದಂತೆ ತೋರುತ್ತಿದೆ.

ಮುಂದಿನ ಚುನಾವಣೆಗೆ ಪೂರ್ವ ಸಿದ್ಧತೆಯೇ?

2019 ರ ಚುನಾವಣೆಗೆ ಇಂತಹ ತಯಾರಿ ಮಾಡಲಾಗುತ್ತಿದೆ ಎಂದೇ ಈ ಆಪರೇಷನ್ ಅನ್ನು ಬಣ್ಣಿಸಲಾಗುತ್ತಿದೆ. 2019 ರ ಚುನಾವಣೆಯಲ್ಲಿ 350 ಸೀಟುಗಳನ್ನು ಪಡೆಯುವ ಚಿಂತನೆಯನ್ನು ಹೊಂದಿದೆ ಬಿಜೆಪಿ. ದೂರದೃಷ್ಟಿಯನ್ನಿಟ್ಟುಕೊಂಡು ತಯಾರಿ ನಡೆಸಿತ್ತಿದೆ ಮೋದಿ, ಅಮಿತ್ ಶಾ ನೇತೃತ್ವದ ಸರಕಾರ. ಶಾ ಅವರು ಬಿಕೆಪಿ ಅಧ್ಯಕ್ಷರಾದ ನಂತರ ಸಚಿವ ಸಂಪುಟದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಈಗ ಬದಲಾಗುತ್ತಿರುವುದು ಕೂತೂಹಲವನ್ನು ಮೂಡಿಸುತ್ತಿದೆ. ಇದುವರೆಗೆ ಕಾರ್ಯದಲ್ಲಿ ಹಿಂದೆ ಬಿದ್ದವರನ್ನು ತಮ್ಮ ಸಂಪುಟದಿಂದ ಕೈಬಿಡಲೂ ನಿರ್ಧರಿಸಲಾಗಿದೆ.

ಮೋದಿಯವರ ಈ ನಿರ್ಧಾರ ಕೆಲವರಿಗೆ ಒಳಿತಾದರೆ, ಇನ್ನೂ ಕೆಲವರಿಗೆ ಆಘಾತವನ್ನು ಕೊಡಲಿದೆ. ಒಟ್ಟಾರೆಯಾಗಿ ಇದೊಂದು ಬದಲಾವಣೆಯ ಪರ್ವವಾಗಲಿದೆ ಅನ್ನುವುದು ಸ್ಪಷ್ಟ.

– ಆತ್ಮಿಕಾ

 

Tags

Related Articles

Close