ಪ್ರಚಲಿತ

ಗುಜರಾತ್ ನಂತರ ಕರ್ನಾಟಕದಲ್ಲಿ “ನೀಚ” ರಾಜಕೀಯ!! ಗುರುಗಳೇ ಸಿದ್ದರಾಮಯ್ಯನನ್ನು ನೀಚ ಅಂದಿದ್ಯಾಕೆ?!

ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷಗಳು ಪರಸ್ಪರ ಒಬ್ಬರನ್ನೊಬ್ಬರು ದೂರುವುದು ಸಾಮಾನು. ಆದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಆಡಳಿತಕ್ಕೆ ಇಡೀ ರಾಜ್ಯವೇ ಶಾಪ ಹಾಕುತ್ತಿದೆ.ಅಧಿಕಾರಕ್ಕೆ ಬಂದ ದಿನದಿಂದಲೇ ಜನವಿರೋಧಿ ನೀತಿಯಿಂದಲೇ ಮೆರೆಯುತ್ತಿರುವ ಸಿದ್ದರಾಮಯ್ಯನವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ಸಿಗುವ ಎಲ್ಲಾ ಸಾಧ್ಯತೆಗಳು ಇದೆ..!

ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರ ಗರಡಿಯಲ್ಲೇ ರಾಜಕೀಯ ಪ್ರವೇಶಿಸಿದ ಸಿದ್ದರಾಮಯ್ಯ ಅಧಿಕಾರದ ಆಸೆಗಾಗಿ ದೇವೇಗೌಡರನ್ನು ಮತ್ತು ಜೆಡಿಎಸ್ ನ್ನು ತೊರೆದು ಕಾಂಗ್ರೆಸ್ ಸೇರಿದ್ದರು.ಕೇವಲ ಅಧಿಕಾರಕ್ಕಾಗಿಯೇ ನಾಟಕವಾಡುತ್ತಿದ್ದ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಮುಖ್ಯಮಂತ್ರಿ ಪಟ್ಟ ಕೊಟ್ಟು ಗದ್ದುಗೆ ಏರಿಸಿತ್ತು..!
ಸರ್ಕಾರ ರಚನೆಗೆ ದೇವೇಗೌಡರ ಜೆಡಿಎಸ್ ನ ಜೊತೆ ಕೈಜೋಡಿಸಿಕೊಂಡಿದ್ದ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರುತ್ತಲೇ ದೇವೇಗೌಡರನ್ನು ದೂರಲು ಪ್ರಾರಂಭಿಸಿದ್ದರು.ಇದೇ ರೀತಿ ಅಧಿಕಾರದ ಮದದಿಂದ ಸಹಾಯ ಮಾಡಿದವರನ್ನು ದೂರುತ್ತಲೇ ಬಂದಿದ್ದರು..!

ಅಧಿಕಾರದ ಮದದಲ್ಲಿ ತನ್ನ ರಾಜಕೀಯ ಗುರು ದೇವೇಗೌಡರನ್ನೇ ಕಡೆಗಣಿಸಿದ ಸಿದ್ದರಾಮಯ್ಯ ನವರು ತನ್ನ ಅಧಿಕಾರವನ್ನು ದುರುಪಯೋಗ ಪಡಿಸುತದ್ತಲೇ ಬಂದಿದ್ದಾರೆ…! ತನಗೆ ಬೇಕಾದ ರೀತಿಯಲ್ಲಿ ಆಡಳಿತ ನಡೆಸುತ್ತಾ ಬಂದಿರುವ ಸಿದ್ದರಾಮಯ್ಯ ನವರು ರಾಜ್ಯದ ಹಿತಕ್ಕಾಗಿ ಯಾವುದೇ ಯೋಜನೆಗಳನ್ನು ಜಾರಿ ತರಲಿಲ್ಲ.ಕೇವಲ ಭ್ರಷ್ಟಾಚಾರ, ಹಗರಣಗಳಿಂದಲೇ ಹೆಸರುವಾಸಿಯಾಗಿರುವ ಸಿದ್ದರಾಮಯ್ಯನವರು ತನ್ನ ಅಧಿಕಾರದ ವೈಫಲ್ಯವನ್ನು ಪ್ರಶ್ನಿಸುವವರ ವಿರುದ್ಧ ಕೇಸ್ ,ಕೊಲೆ ,ಹಲ್ಲೆ ಮಾಡಲು ಕುಮ್ಮಕ್ಕು ನೀಡುತ್ತಾರೆ..!

ಸಿದ್ದರಾಮಯ್ಯನವರ ಆಡಳಿತದ ವೈಫಲ್ಯವನ್ನು ಪ್ರಶ್ನಿಸಿದ ದೇವೇಗೌಡರನ್ನು ಕೂಡ ಕಡೆಗಣಿಸಲಾಯಿತು.ಅಧಿಕಾರಕ್ಕಾಗಿ ಜೆಡಿಎಸ್ ಜೊತೆ ಕೈಜೋಡಿಸಿಕೊಂಡಿದ್ದ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರುತ್ತಲೇ ಜೆಡಿಎಸ್ ನ್ನು ಕ್ಯಾರೇ ಮಾಡಲಿಲ್ಲ.

ಸಿದ್ದರಾಮಯ್ಯ ಸರಕಾರ ಈಗಾಗಲೇ ಹಲವಾರು ಹಗರಣ , ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದು ತನಿಖೆಯ ವೇಳೆ ಸತ್ಯ ಬಯಲಾಗಿತ್ತು.ಸಿದ್ದರಾಮಯ್ಯನವರ ಹಿಂದೂ ವಿರೋಧಿ ನೀತಿಯಿಂದಾಗಿ ರಾಜ್ಯದಲ್ಲಿ ಸಾಲು ಸಾಲು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಕೊಲೆ ನಡೆಯುತ್ತಿದೆ.ಇಂತಹ ಘಟನೆಗಳು ಮರುಕಳಿಸುತ್ತಲೇ ಇದ್ದರೂ ರಾಜ್ಯ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.ಪೋಲೀಸರ ಮೇಲೆ ಹಲ್ಲೆ , ದಕ್ಷ ಪ್ರಾಮಾಣಿಕ ಅಧಿಕಾರಗಳ ಮೇಲೆ ಒತ್ತಡ ಹೇರಿ ಆತ್ಮಹತ್ಯೆ ಗೆ ಕಾರಣವಾಗುತ್ತಿರುವ ಕಾಂಗ್ರೆಸ್ ಸಚಿವರು, ಸಾವಿರ ಸಾವಿರ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣ…ಹೀಗೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಲೇ ಇದೆ..!

‘ರಾಜಕೀಯ ದುರುದ್ದೇಶದಿಂದ ಮೆರೆಯುತ್ತಿರುವ ಸಿದ್ದರಾಮಯ್ಯನವರ ಸರಕಾರ ಇನ್ನೆಷ್ಟು ದಿನ ಅಧಿಕಾರದಲ್ಲಿ ಇರುತ್ತದೆಯೋ ನಾನೂ ನೋಡುತ್ತೇನೆ’ ಎಂದ ದೇವೇಗೌಡರು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಯಾವ ಕಾರಣಕ್ಕೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಖಾರವಾಗಿ ನುಡಿದರು..!

ಇದೇ ಕಾರಣಕ್ಕಾಗಿ ದೇವೇಗೌಡರು ಸಿದ್ದರಾಮಯ್ಯನವರ ವಿರುದ್ಧ ಕೆಂಡಕಾರಿದ್ದಾರೆ..!ಬೆಂಗಳೂರಿನ ಕೆಂಗೇರಿಯಲ್ಲಿ ನಡೆಯುತ್ತಿರು ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡರು ‘ಸಿದ್ದರಾಮಯ್ಯ ನಂತಹ ನೀಚನನ್ನು ನನ್ನ ಅಡಿಯಲ್ಲಿ ಬೆಳೆಸಿದ್ದೇ ನನ್ನ ಜೀವನದ ದೊಡ್ಡ ಅಪರಾಧ ವಾಗಿದೆ’ ಎಂದು ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದರು.ಸಿದ್ದರಾಮಯ್ಯ ಕೇವಲ ಅಧಿಕಾರದ ಆಸೆಗಾಗಿ ರಾಜಕೀಯ ನಡೆಸುವವರು,ರಾಜ್ಯದ ಅಭಿವೃದ್ಧಿ ಯ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲ.ಮಾತನಾಡುವ ವೇಳೆ ಕೈ ಎತ್ತಿ ಮಾತನಾಡುತ್ತಾರೆ.ಇದು ಅಧಿಕಾರದ ಮದದಿಂದ ಈ ರೀತಿ ವರ್ತಿಸುತ್ತಿದ್ದಾರೆ.ಈ ಅಧಿಕಾರ ಎಷ್ಟು ದಿನ ಎಂದು ನಾವೂ ನೋಡುತ್ತೇವೆ’ ಎಂದು ಸಿದ್ದರಾಮಯ್ಯನವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.


ಸಿದ್ದರಾಮಯ್ಯನವರು ಕೀಳು ಮಟ್ಟದ ರಾಜಕಾರಣಿ. ರಾಜಕೀಯ ಲಾಭಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ಸಿದ್ದ.ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕದ ಕಾರ್ಯಕ್ರಮದಲ್ಲಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ.ಇಂತಹ ರಾಜಕೀಯ ಮಾಡುವವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾ.? ಎಂದು ಅಸಮಧಾನ ವ್ಯಕ್ತಪಡಿಸಿದರು.

ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಎಲ್ಲಾ ಪಕ್ಷಗಳು ತೀವ್ರ ಅಸಮಧಾನ ಹೊರಹಾಕಿದ್ದು, ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದೆ.ತನ್ನ ಅಧಿಕಾರ ಅವಧಿಯಲ್ಲಿ ರಾಜ್ಯದ ಹಿತದ್ರಷ್ಟಿಯಿಂದ ಯಾವುದೇ ಯೋಜನೆಗಳನ್ನು ಕಾರ್ಯರೂಪಕ್ಕೆ ತರದ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರ ಭ್ರಷ್ಟ ರಾಜಕಾರಣಿಗಳನ್ನೇ ತನ್ನ ಸಂಪುಟದಲ್ಲಿ ಇಟ್ಟುಕೊಂಡಿದೆ.ಸ್ವತಃ ಸಚಿವರೇ ಕೆಲ ಹಲ್ಲೆ ಕೊಲೆಗಳಂತಹ ಕ್ರತ್ಯಗಳಲ್ಲಿ ಭಾಗಿಯಾಗಿದ್ದು ಕಾಂಗ್ರೆಸ್ ನ ನೈಜ ಮುಖ ರಾಜ್ಯದ ಜನತೆಯ ಮುಂದೆ ಬಯಲಾಗಿದೆ..!

ಚುನಾವಣೆ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಳ್ಳಲು ಜೆಡಿಎಸ್ ನ ಸಹಾಯ ಪಡೆದಿದ್ದ ಸಿದ್ದರಾಮಯ್ಯನವರು ಸರಕಾರ ರಚನೆಯಾಗುತ್ತಲೇ ದೇವೇಗೌಡರನ್ನು ಮತ್ತು ಜೆಡಿಎಸ್ ಕಡೆಗಣಿಸಿದ್ದರು.ಇದೇ ಕಾರಣಕ್ಕಾಗಿ ದೇಶದ ದೇವೇಗೌಡರು ಜೆಡಿಎಸ್ ಸಮಾವೇಶದಲ್ಲಿ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದರು.

-ಅರ್ಜುನ್

Tags

Related Articles

Close