ಪ್ರಚಲಿತ

ಸಿಎಂ ವಿರುದ್ಧ ತೊಡೆತಟ್ಟಲಿದ್ದಾರೆ ಬಳ್ಳಾರಿ ಕಿಂಗ್..! ಎರಡೂ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯನವರನ್ನು ಮಣಿಸಲು ಷಾ ಮಾಸ್ಟರ್ ಪ್ಲಾನ್.!

ರಾಜ್ಯದಲ್ಲಿ ಪ್ರತಿಯೊಬ್ಬರ ಬಾಯಲ್ಲೂ ಕೇಳಿ ಬರುತ್ತಿರುವ ವಿಚಾರ ಚುನಾವಣೆ, ಚುನಾವಣೆ, ಚುನಾವಣೆ. ರಾಜ್ಯ ಮಾತ್ರವಲ್ಲದೆ ಇಡೀ ದೇಶದ ಚಿತ್ತ ಕರ್ನಾಟಕದತ್ತ ಇದೆ ಎಂದರೆ ಈ ಬಾರಿಯ ವಿಧಾನಸಭಾ ಚುನಾವಣೆ ಅದ್ಯಾವ ಮಟ್ಟದಲ್ಲಿ ಕಾವೇರುತ್ತಿದೆ ಎಂಬುದು ತಿಳಿಯುತ್ತದೆ. ಯಾಕೆಂದರೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಕರ್ನಾಟಕ ಪ್ರತಿಷ್ಠೆಯ ಕಣವಾಗಿದ್ದು, ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದೆ. ಇತ್ತ ದೇಶಾದ್ಯಂತ ನೆಲಕಚ್ಚಿರುವ ಕಾಂಗ್ರೆಸ್ ಗೆ ಕರ್ನಾಟಕ ಒಂದೇ ಬಲವಾಗಿರುವ ರಾಜ್ಯ.

ಆದರೆ ರಾಜ್ಯದಲ್ಲೂ ಕಾಂಗ್ರೆಸ್ ಗೆ ಸೋಲಿನ ಭೀತಿ ಹೆಚ್ಚಾಗಿದೆ ಎಂಬುದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನೋಡಿದರೆ ತಿಳಿಯುತ್ತದೆ. ಯಾಕೆಂದರೆ ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತದ ಸಂದರ್ಭದಲ್ಲಿ ರಾಜ್ಯಕ್ಕೆ ಒಳಿತಾಗುವಂತಹ ಕೆಲಸ ಮಾಡಿದಿದ್ದರೆ ಇಂದು ರಾಜ್ಯದ ಯಾವ ಮೂಲೆಯಿಂದ ಸ್ಪರ್ಧಿಸಿದರು ಗೆಲ್ಲುವ ವಿಶ್ವಾಸವಿರಬೇಕಿತ್ತು. ಆದರೆ ಸಿದ್ದರಾಮಯ್ಯನವರು ಮಾಡಿರುವ ಜನವಿರೋಧಿ ನೀತಿಗೆ ಸದ್ಯ ಸರಕಾರದ ವಿರುದ್ಧ ಜನತೆ ತಿರುಗಿಬಿದ್ದಿದ್ದು ಅದಕ್ಕಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜ್ಯದ ಎರಡೆರಡು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಇತ್ತ ದೇಶಾದ್ಯಂತ ಕೇಸರಿ ಪತಾಕೆ ಹಾರಿಸಿ ಸಂಭ್ರಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ರಾಜಕೀಯ ಚಾಣಕ್ಯ ಅಮಿತ್ ಷಾ ಕರ್ನಾಟಕದಲ್ಲೂ ಅಧಿಪತ್ಯ ಸಾಧಿಸಲು ಸಜ್ಜಾಗಿದ್ದಾರೆ.

ಸಿಎಂ ಸೋಲಿಸಲು ಚಾಣಕ್ಯನ ಮಾಸ್ಟರ್ ಪ್ಲಾನ್..!

ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಎರಡು ಕ್ಷೇತ್ರಗಳಿಂದ ಅಖಾಡಕ್ಕೆ ಇಳಿದು ಒಂದಾದರೂ ಗೆಲುವು ಸಾಧುಸಬೇಕೆಂದು ಯೋಜನೆ ರೂಪಿಸಿದರೆ ಇತ್ತ ಅಮಿತ್ ಷಾ ಸಿದ್ದರಾಮಯ್ಯನವರನ್ನು ಸ್ಪರ್ಧಿಸಿದ ಎರಡು ಕ್ಷೇತ್ರಗಳಲ್ಲೂ ಸೋಲಿಸಲು ತಂತ್ರ ರೂಪಿಸಿದ್ದಾರೆ. ಈಗಾಗಲೇ ಬಿಜೆಪಿ ೩ ಸುತ್ತಿನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಆದರೆ ಬಿಜೆಪಿಯ ಇನ್ನೂ ಒಟ್ಟು ೧೧ ಕ್ಷೇತ್ರಗಳ ಅಭ್ಯರ್ಥಿ ಹೆಸರು ಘೋಷಣೆಯಾಗಿಲ್ಲ , ಇದರಿಂದಲೇ ಕಾಂಗ್ರೆಸ್ ಗೆ ತಲೆನೋವಾಗಿದೆ.

ಯಾಕೆಂದರೆ ಕಾಂಗ್ರೆಸ್ ಲೆಕ್ಕಾಚಾರ ಪ್ರಕಾರ ಬಿಜೆಪಿಯ ಅಭ್ಯರ್ಥಿಗಳನ್ನು ನೋಡಿ ತಾವು ಕಣಕ್ಕಿಳಿಯುವ ಉಪಾಯ ಹೂಡಿದ್ದರು, ಆದರೆ ಚಾಣಕ್ಯನ ತಂತ್ರವೇ ಬೇರೆ ಆಗಿತ್ತು. ಯಾಕೆಂದರೆ ಇನ್ನು ಬಾಕಿ ಇರುವ ೧೧ ಕ್ಷೇತ್ರಗಳು ರಾಜ್ಯದ ಪ್ರಮುಖ ಕ್ಷೇತ್ರ. ಅದಕ್ಕಾಗಿಯೇ ಬಿಜೆಪಿ ಈ ಕ್ಷೇತ್ರಗಳ ಹೆಸರು ಘೋಷಿಸಿಲ್ಲ.

ಸಿದ್ದು ಮುಂದೆ ಬಳ್ಳಾರಿ ಕಿಂಗ್ ಕಣಕ್ಕೆ..?!

ಸಿದ್ದರಾಮಯ್ಯನವರು ರಾಜ್ಯದ ಯಾವ ಕ್ಷೇತ್ರದಿಂದ ಸ್ಪರ್ಧಿಸಿದರು ಅವರನ್ನು ಮಣಿಸಲು ಬಿಜೆಪಿ ಸಿದ್ಧವಾಗಿದೆ. ಅದಕ್ಕಾಗಿಯೇ ಸಿಎಂ ಸ್ಪರ್ಧಿಸುವ ಬಾದಾಮಿಯಿಂದ ಬಳ್ಳಾರಿ ಕಿಂಗ್ , ಅಪರೂಪದ ರಾಜಕಾರಣಿ ಶ್ರೀ ರಾಮುಲು ಅವರನ್ನು ಕಣಕ್ಕಿಳಿಸಲು ಅಮಿತ್ ಷಾ ಪ್ಲಾನ್ ಮಾಡಿದ್ದಾರೆ. ಯಾಕೆಂದರೆ ಶ್ರೀ ರಾಮುಲುಗೆ ಬಿಜಿಪಿಯಿಂದ ಯಾವುದೇ ಕ್ಷೇತ್ರದಿಂದ ಆಯ್ಕೆ ಮಾಡಿದರು ಗೆಲ್ಲುವ ವಿಶ್ವಾಸವಿದೆ. ಅದಕ್ಕಾಗಿಯೇ ಪ್ರಬಲ ಸ್ಪರ್ಧಿಗಳಾದ ಸಿದ್ದರಾಮಯ್ಯನವರ ವಿರುದ್ಧ ಶ್ರೀ ರಾಮುಲು ಅವರನ್ನು ನಿಲ್ಲಿಸುವ ನಿರ್ಧಾರ ಅಮಿತ್ ಷಾ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.!

ಈ ಆಫರ್ ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನವರಿಗೆ ನೀಡುವ ಯೋಜನೆ ರೂಪಿಸಿದ್ದರು ಅಮಿತ್ ಷಾ , ಆದರೆ ಇದಕ್ಕೆ ಯಡಿಯೂರಪ್ಪ ಸಮ್ಮತಿ ಸೂಚಿಸದ ಕಾರಣ ಇದೇ ಕ್ಷೇತ್ರದಿಂದ ಶ್ರೀ ರಾಮುಲು ಅವರನ್ನು ಆಯ್ಕೆ ಮಾಡಲಾಗಿದೆ.

Related image

ಇತ್ತ ಸಿದ್ದರಾಮಯ್ಯನವರು ಸೋಲುವ ಭೀತಿಯಿಂದ ರಾಜ್ಯದ ಎರಡೆರಡು ಕಡೆಗಳಲ್ಲಿ ಸ್ಪರ್ಧಿಸಿದರೆ , ಬಿಜೆಪಿ ಸಿದ್ದರಾಮಯ್ಯನವರನ್ನು ಎರಡೂ ಕ್ಷೇತ್ರಗಳಲ್ಲೂ ಸೋಲಿಸಲು ತಂತ್ರ ರೂಪಿಸಿದೆ.‌ ಅದೇನೇ ಆದರೂ ಈ ಬಾರಿಯ ಚುನಾವಣೆ ಸದ್ಯ ಎಲ್ಲರ ಹುಬ್ಬೇರಿಸುತ್ತಿರುವುದು ಸತ್ಯ..!

–ಅರ್ಜುನ್

 

Tags

Related Articles

Close