ಪ್ರಚಲಿತ

ಚುನಾವಣೆಯ ಸಮಯದಲ್ಲಿಯೇ ಕೇಸರೀ ವೀರರಾದ ಹಿಂದೂಗಳಿಗೆ ಭರ್ಜರಿ ಜಯ! ಕೇಸರೀ ಭಯೋತ್ಪಾದನೆಯ ಷಡ್ಯಂತ್ರ ಹೂಡಿದ್ದ ಕಾಂಗ್ರೆಸ್ ಈಗ ಸಂಪೂರ್ಣ ಬೆತ್ತಲಾಗಿ ನಿಂತಿದೆ!

ಹನ್ನೊಂದು ವರ್ಷ!! ಬರೋಬ್ಬರಿ ಹನ್ನೊಂದು ವರ್ಷಗಳ ಕಾಲ ‘ಕೇಸರೀ ಭಯೋತ್ಪಾದನೆ’ ಎಂಬುದಷ್ಟನ್ನೇ ಹಿಡಿದು ಕೂತ ಕಾಂಗ್ರೆಸ್ಸಿಗರಿಗೆ ಬಹುಷಃ ಸಾಧ್ವಿ ಪ್ರಗ್ಯಾ ಸಿಂಗ್ ಒಬ್ಬರು ಮಹಿಳೆ, ಬಡಿದರೆ ಬಗ್ಗಬಹುದು ಎಂಬ ತೀರಾ ಹೀನಾಯ ಎನ್ನುವಷ್ಟು ಕಿರುಕುಳ ನೀಡಿದರಲ್ಲ?! ಸ್ವಾಮಿ ಅಸೀಮಾನಂದರು ಮತ್ತು, ಇನ್ನೂ ಹಲವು ಹಿಂದೂ ಮುಖಂಡರ ವಿರುದ್ಧವಾಗಿ ಹೇಳಿಕೆ ನೀಡುವಂತೆ ಒತ್ತಾಯಿಸಿ ಕೊಟ್ಟ ಕಿರುಕುಳ, ಹಿಂಸೆಯನ್ನು ಯಾರಿಂದಲಾದರೂ ಊಹಿಸಲೂ ಸಾಧ್ಯವಿದೆಯೇ?! ಉಹೂಂ! ಸಾಧ್ವಿ ಕೊನೆಗೂ ಬಗ್ಗಲಿಲ್ಲ!! ಸಾವಾದರೂ ಸರಿಯೇ! ಕಾಂಗ್ರೆಸ್ಸಿನ ಕೇಸರೀ ಭಯೋತ್ಪಾದನೆಯ ಹುನ್ನಾರಕ್ಕೆ ವಿರೋಧ ಒಡ್ಡಿದರು! ಅದೆಷ್ಟೋ ವರ್ಷಗಳ ನಂತರ, ನ್ಯಾಯಾಲಯ ಆಕೆಯನ್ನು ಬಿಡುಗಡೆಗೊಳಿಸಿತು!!

ವಿಚಾರ ವಿಷ್ಟೇ!! ಯಾವುದನ್ನು ತಾನು ಸಾಧಿಸಬಲ್ಲೆ ಎಂದು ಹೊರಟಿತ್ತೋ, ಜಿಹಾದಿ ಶಕ್ತಿಗಳನ್ನು ಸಮರ್ಥಿಸಿಕೊಳ್ಳುವ ಹಾದಿಯಲ್ಲಿ ಮಿಥ್ಯವಾದ ‘ಕೇಸರೀ ಭಯೋತ್ಪಾದನೆ’ ಯ ಬೀಜವೊಂದನ್ನು ಬಿತ್ತಿತ್ತಲ್ಲವೇ?! ಅವತ್ತು ಮತ್ತದೇ ದಿಗ್ವಿಜಯ್ ಸಿಂಗ್, ರಾಹುಲ್ ಗಾಂಧಿ ಅಂತಹ ಕಾಂಗ್ರೆಸ್ ನಾಯಕರು ಪುಂಖಾನು ಪುಂಖವಾಗಿ ಹಿಂದುತ್ವದ ಮೇಲೆ ದ್ವೇಷ ಸಾರಿದ್ದೇ ಆಯಿತಷ್ಟೇ! ಆದರೆ, ಈಗ?! ಅಸೀಮಾನಂದರಿಂದ ಹಿಡಿದು ಐದು ಜನ ಆರೋಪಿಗಳು ನಿರ್ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ!!

ಹೌದು! ಹೈದರಾಬಾದ್ ನ ವಿಶೇಷ ನ್ಯಾಯಾಲಯ ಇವತ್ತು, ಮೆಕ್ಕಾ ಮಸೀದಿಯ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಬಂಧಿಸಿದ್ದ ಎಲ್ಲಾ ಆರೋಪಿಗಳನ್ಮೂಣ ಸಹ ಸಾಕ್ಷ್ಯಾಧಾರಗಳು ತೃಪ್ತಿಕರವಾಗಿಲ್ಲ ಎಂದು ಪ್ರಕರಣದಿಂದ ಖುಲಾಸೆಗೊಳಿಸಿದೆ! ಮೇ ೧೮, ೨೦೦೭ ರಂದು ನಡೆದಿದ್ದ ಸ್ಫೋಟ ಒಂಭತ್ತು ಜನರ ಪ್ರಾಣ ತೆಗೆದಿದ್ದಲ್ಲದೇ, ೫೮ ಜನರು ಗಂಭೀರವಾಗಿ ಗಾಯಗೊಂಡಿದ್ದರು! ಅದಕ್ಕೆ, ಸರಿಯಾಗಿ ಭುಗಿಲೆದ್ದ ಹಿಂಸಾಚಾರದಿಂದ ಪೋಲಿಸರ ಪಿಸ್ತೂಲಿಗೆ ಬಲಿಯಾದದ್ದು ಐದು ಜನ ನಾಗರಿಕರು! ಮೂಲಗಳ ಪ್ರಕಾರ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೋಲಿಸರಿಗೆ ಮೊದಲು ಅನುಮಾನ ಬಂದಿದ್ದು ಹಿಂದೂ ಸಂತರ ಮೇಲಲ್ಲ! ಬದಲಾಗಿ, ಪಾಕಿಸ್ಥಾನಿ ಮೂಲದ ಭಯೋತ್ಪಾದಕ ಸಂಘಟನೆಯಾದ ಹರ್ಕತ್ – ಅಲ್ – ಜಿಹಾದ್ – ಇ – ಇಸ್ಲಾಮಿ ಕೈವಾಡವಿದೆ ಎಂಬ
ಸ್ಫೋಟ ಸತ್ಯ! ಹೈದರಾಬಾದ್ ಪೋಲಿಸರು ಪ್ರಕರಣದ ಹಿಂದೆ ಬಿದ್ದಾಗ, ೯೦ ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದರು! ಬಿಲ್ಲಾಲ್ ಎಂಬುವವನೂ ಸೇರಿದಂತೆ ೨೧ ಜನರ ಮೇಲೆ ಚಾರ್ಜ್ ಶೀಟ್ ಸಿದ್ಧ ಪಡಿಸಿದರು! ಈ ಬಿಲ್ಲಾಲ್ ಬೇರಾರೂ ಅಲ್ಲ! ಬದಲಾಗಿ, ಇಡೀ ಸ್ಫೋಟದ ಪ್ರಮುಖ ರೂವಾರಿಯಾಗಿದ್ದ ಎಂಬುದನ್ನು ಅವತ್ತು ಹೈದರಾಬಾದ್ ಪೋಲಿಸರು ಶಂಕಿಸಿದ್ದಕ್ಕೆ ಕಾರಣವೂ ಇತ್ತು! ಆತನಿಗೆ ಹರ್ಕತ್ ಸಂಘಟನೆಯ ಜೊತೆಗಿದ್ದ ನಿಕಠವದ ಸಂಪರ್ಕ! ಜನವರಿ ೧, ೨೦೦೯ ರಲ್ಲಿ ಪೋಲಿಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಿಲ್ಲಾಲ್ ಶೂಟ್ ಔಟ್ ಗೆ ಬಲಿಯಾದ! ಅವನ ಸಾವಿನ ಜೊತೆಗೇ, ಉಳಿದ ೨೦ ಜನರ ಮೇಲಿದ್ದ ಆರೋಪವನ್ನೂ ಸಹ ನಂಪಲ್ಲಿ ಕ್ರಿಮಿನಲ್ ನ್ಯಾಯಾಲಯ ಖುಲಾಸೆ ಗೊಳಿಸಿತು!!

ವಿಷಯ ಇಲ್ಲಿಗೇ ಮುಗಿದು ಹೋಗಲಿಲ್ಲ! ಬದಲಾಗಿ ಕೇಸರೀ ಭಯೋತ್ಪಾದನೆಯ ಹೊಸ ಸೃಷ್ಟಿಯೊಂದು ಪ್ರಾರಂಭವಾಗಿತ್ತು!! ಎಲ್ಲಾ ಆರೋಪಿಗಳನ್ನೂ ಖುಲಾಸೆಗೊಳಿಸಿದ ನಂತರ, ಪ್ರಕರಣವನ್ನು ಸಿಬಿಐ ಗೆ ೨೦೦೯ ರಲ್ಲಿ ಹಸ್ತಾಂತರಿಸಲಾಯಿತು! ಅಷ್ಟೇ!! ಇಡೀ ಪ್ರಕರಣವನ್ನು ಪೂರ್ತಿಯಾಗಿ ತಿರುಗಿಸಿದ ಇದೇ ಸಿಬಿಐ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ್ ಆದ ದೇವೇಂದ್ರ ಗುಪ್ತಾ, ಕಾರ್ಯಕರ್ತರಾದ ಲೋಕೇಶ್ ಶರ್ಮಾ, ಸುನಿಲ್ ಜೋಶಿ ಯಂತಹ ಮಧ್ಯಪ್ರದೇಶದ ಕಾರ್ಯಕರ್ತರನ್ನು ಗುರಿಯಾಗಿಸಿ ಚಾರ್ಜ್ ಶೀಟ್ ಸಿದ್ಧಪಡಿಸಿತು! ಅಲ್ಲಿಗೂ ಮುಗಿಯದ ನಾಟಕವೊಂದು, ಕೊನೆಯ ಹೆಜ್ಜೆ ಎಂಬಂತೆ ಪ್ರಕರಣವನ್ನು ೨೦೧೧ ರಲ್ಲಿ ಎನ್ಐಎ ಗೆ ಹಸ್ತಾಂತರಿಸಿತು! ಎನ್ಐಎ ಇಂದಲೂ ಪ್ರಾರಂಭವಾದ ತನಿಖೆಯೊಂದು ‘ಬಲಪಂಥೀಯ ವಿಚಾರಧಾರೆಗಳುಳ್ಳ ಕಾರ್ಯಕರ್ತರನ್ನೇ ಗುರಿಯಾಗಿಸಿತೇ ವಿನಃ ಮುಂಚೆ ಪ್ರಾಥಮಿಕ ತನಿಖೆಯಲ್ಲಿ ದೊರಕಿದ್ದ ಸಾಕ್ಷ್ಯಗಳ ಬಗ್ಗೆ ಒಂದಿನಿತೂ ತಲೆಕೆಡಿಸಿಕೊಳ್ಳಲೇ ಇಲ್ಲ ಎನ್ಐಎ! ಪ್ರತಿಫಲವಾಗಿ, ಸ್ವಾಮಿ ಅಸೀಮಾನಂದರು ಸೇರಿದಂತೆ ದೇವೆಂದ್ರ ಗುಪ್ತಾ, ಲೋಕೇಶ್ ಶರ್ಮಾ, ಸಂದೀಪ್ ದಂಗೆ, ರಾಮಚಂದ್ರ ಕಲಸಂಗ್ರ, ಸುನಿಲ್ ಜೋಶಿ, ಭರತ್ ರತೇಶ್ವರ್, ರಾಜೇಂದ್ರ ಚೌಧರಿ, ತೇಜರಾಮ್ ಪರ್ಮಾರ್, ಅಮಿತ್ ಚೌಹಾಣ್ ಎಂಬ ಒಂಭತ್ತು ಜನ ಹಿಂದೂ ನಾಯಕರ ಮೇಲೆ ಎನ್ಐಎ ಪ್ರಕರಣ ದಾಖಲಿಸಿತು!

ಇಷ್ಟರಲ್ಲಿ, ವಿಚಾರಣೆಯ ನೆಪದಲ್ಲಿ ಹಿಂಸೆ ಮತ್ತು ಬಂಧನವನ್ನೆದುರಿಸಿದ್ದು ಅಸೀಮಾನಂದ, ಲೋಕೇಶ್, ದೇವೇಂದ್ರ , ಭರತ್ ಮತ್ತು ರಾಜೇಂದ್ರ! ಸುನಿಲ್
ಜೋಷಿಯ ಹತ್ಯೆಯಾಯಿತು! ದಾಂಗೆ ಮತ್ತು ಕಲ್ಸಂಗ್ರಾ ತಪ್ಪಿಸಿಕೊಂಡರೆ, ಪರ್ಮಾರ್ ಮತ್ತು ಚೌಹಾಣ್ ರ ಮೇಲಿನ ವಿಚಾರಣೆ ಇನ್ನೂ ನಡೆಯುತ್ತಿದೆ!

೪೪೧ ದಾಖಲೆಗಳನ್ನು, ೨೨೦ ಸಾಕ್ಷ್ಯಾಧಾರರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು! ಆದರೆ, ಅದ್ಯಾವ ಸಾಕ್ಷಿಗಳೂ, ದಾಖಲೆಗಳೂ ಸಹ ತೃಪ್ತಿಕರವಾಗಿರುವುದು ಹೋಗಲಿ, ಅಸಮರ್ಥವಾಗಿ ಹೋಗಿತ್ತು! ಯಾವ ಸಾಕ್ಷಿಗಳೂ ಸಹ ಹಿಂದೂ ಮುಖಂಡರನ್ನು ಆರೋಪಿಯಾಗಿಸುವಲ್ಲಿ ಯಶಸ್ವಿಯಾಗಲಿಲ್ಲ! ಅಲ್ಲಿಗೆ, ಹಿಂದೂ ವಿರೋಧಿ ಪಕ್ಷದ ಮತ್ತದೇ ಕೇಸರೀ ಭಯೋತ್ಪಾದನೆ ಮಿಥ್ಯವೊಂದು ನೆಲಕಚ್ಚತೊಡಗಿತ್ತು! ಯಾಕೆಂದರೆ, ಇದಷ್ಟೂ ಆರೋಪಗಳು, ಕೇಸರಿ ಭಯೋತ್ಪಾದನೆ ಎಂಬ ಮಿಥ್ಯೆಗಳು ಪ್ರಾರಂಭವಾಗಿದ್ದು ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿದ್ದಾಗ! ಗದ್ದುಗೆಯಲ್ಲಿ ಕುಳಿತದ್ದು ಬೇರಾರೂ ಅಲ್ಲ! ಬದಲಾಗಿ, ಮುಂಚೆ ಇಂದಲೂ ಹಿಂದುತ್ವಕ್ಕೆ ತದ್ವಿರುದ್ಧವಾಗಿ ನಡೆದುಕೊಂಡು ಬಂದ ಕಾಂಗ್ರೆಸ್! ೨೦೦೬ ರಲ್ಲಿ ನಡೆದ ಮಾಲೆಗಾಂವ್ ಸ್ಫೋಟದಿಂದ ಹಿಡಿದು, ನಂತರ ನಡೆದ ಯಾವ ಭಯೋತ್ಪಾದಕ ಚಟುವಟಿಕೆಗಳಲ್ಲಿಯೂ ಸಹ ಕೇವಲ ಹಿಂದೂ ಕಾರ್ಯಕರ್ತರ ಹೆಸರುಗಳನ್ನೇ ಹಿಡಿದು ನಿಂತ ಕಾಂಗ್ರೆಸ್ ಸಾಕ್ಷ್ಯವನ್ನು ನಾಶ ಪಡಿಸತೊಡಗಿತ್ತು! ಮಾಲೆಗಾಂವ್ ಸ್ಫೋಟದಲ್ಲಿ ಅತ್ಯಂತ ದಕ್ಷರಾಗಿದ್ದ ಲೆಫ್ಟಿನೆಂಟ್ ಕಾಲೋನೆಲ್ ಪುರೋಹಿತ್ ಮತ್ತು ಸಾಧ್ವಿ ಪ್ರಗ್ಯಾ ಸಿಂಗ್ ರನ್ನು ಗುರಿಯಾಗಿಸಿದ್ದಲ್ಲದೇ, ಸಾಧ್ವಿಯನ್ನು ಮುಂದಿಟ್ಟೇ ಹಿಂದೂ ಭಯೋತ್ಪಾದನೆಯೆಂಬ ಇಲ್ಲದ ಅಸ್ತಿತ್ವಕ್ಕೆ ಸರಿಯಾಗಿ ಪ್ರಚಾರ ಪ್ರಾರಂಭಿಸಿತ್ತು! ಬಿಡಿ! ಪ್ರಕರಣ ೨೦೦೯ ರಲ್ಲಿ ಸಿಬಿಐ ಪ್ರಕರಣ ತೆಗೆದುಕೊಂಡ ನಂತರ, ಈ ಆರೋಪಗಳೆಲ್ಲ ಕೇವಲ ಕಾಂಗ್ರೆಸ್ ನ ಹುನ್ನಾರದಿಂದಾದದ್ದು ಎಂಬುದು ಬಹುತೇಕರಿಗೆ ಅರಿವಾಗಿ ಹೋಗಿತ್ತು!

ಮಾಲೇಗಾವ್ ನಿಂದ ಸಂಝೋತಾ ಎಕ್ಸ್ ಪ್ರೆಸ್ ಸ್ಫೋಟದವರೆಗೆ, ಅಜ್ಮೇರ್ ಸ್ಫೋಟದಿಂದ ಹೈದರಾಬಾದ್ ಸ್ಫೋಟದವರೆಗೆ, ಕೇವಲ ಕೇಳಿ ಬಂದಿದ್ದು ಕೇಸರೀ ಭಯೋತ್ಪಾದನೆ ಎಂಬ ನರೇಟಿವ್ವುಗಳೇ ಹೊರತು ಇನ್ನೇನು?! ಆದರೆ, ಅದಷ್ಟೂ ಸಹ ಸಾಕ್ಷ್ಯಾಧಾರಿತವಾಗಿತ್ತೇ?! ಇಲ್ಲ!! ಬದಲಾಗಿ,ಇದಷ್ಟೂ ಸ್ಫೋಟಗಳಿಗೆ ಕಾರಣವನ್ನಾಗಿಸಿದ್ದು ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು! ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಂಬಲಿಸುವ ಅಭಿನವ ಭಾರತ ಎಂಬ ಸಂಘಟನೆಯ ಪ್ರಮುಖರನ್ನು ಈ ಮಸೀದಿಯ ಸ್ಫೋಟದ ಪ್ರಕರಣದಲ್ಲಿ ಬಂಧಿಸಲಾಯಿತು! ಪಿ ಚಿದಂಬರಮ್ ರಿಂದ ಹಿಡಿದು ಸುಶೀಲ್ ಕುಮಾರ್ ಶಿಂಧೆಯಂತಹವರು ಮತ್ತದೇ ಕೇಸರೀ ಭಯೋತ್ಪಾದನೆ ಎಂದರು! ಮಾಧ್ಯಮಗಳೂ ಬೊಬ್ಬಿರಿದವು! ಜೊತೆ ಜೊತೆಗೇ ಇಡೀ ಕಾಂಗ್ರೆಸ್ಸೂ ಅದೇ ನಿಲುವನ್ನು ತಾಳಿತು!

‘ Times Now’ ಬಿಡುಗಡೆಗೊಳಿಸಿದ ನಾರ್ಕೊ ಅನಾಲಿಸಿಸ್ ಸಾಕ್ಷಿಯೊಂದು ಕಾಂಗ್ರೆಸ್ ನನ್ನು ಬೀದಿಗೆ ತಂದು ನಿಲ್ಲಿಸಿತು! ಉಗ್ರತ್ವದ ಹೆಸರಿನಲ್ಲಿ ಹಿಂದೂ
ನಾಯಕರನ್ನು ಗುರಿ ಮಾಡಿದ ಅದ್ಭುತ ಚಾಣಾಕ್ಷತನವೊಂದು ಗೊತ್ತಾಗಿ ಹೋಯಿತು. ಮಾಲೇಗಾವ್ ಸ್ಫೋಟದ ಹೆಸರಿನಲ್ಲಿ ಮತ್ತದೇ ಉಗ್ರರನ್ನು ಕೈ ಬಿಟ್ಟು ಸಾಧ್ವಿ ಪ್ರಜ್ಞಾ ಸಿಂಗ್ ನನ್ನು ಒಳಗಟ್ಟಿತು ಕಾಂಗ್ರೆಸ್! ಆಕೆ ಬೆಂಕಿಯ ಚೆಂಡು! ವಿಚಾರಣೆಯ ನೆಪದಲ್ಲಿ ಆಕೆಯನ್ನದೆಷ್ಟು ಹಿಂಸಿಸಿತೆಂದರೆ ಕೊನೆಗೆ ಆಕೆಗೆ ಸ್ವಂತ ಕಾಲಿನ ಮೇಲೂ ನಿಲ್ಲಲಾಗಲಿಲ್ಲ! ಆಕೆಯನ್ನು ಆಹಾರ ನೀರು ಕೊಡದೇ 24 ದಿನ ಕೊಳೆ ಹಾಕಿದ್ದರು! ಚರ್ಮದ ಬೆಲ್ಟಿನಿಂದ ಬಡಿಯಲಾಗಿತ್ತು! ಆಕೆ ಸಾಧ್ವಿ! ಅಶ್ಲೀಲ ಭಾಷೆಗಳಿಂದ ಮಾನಸಿಕವಾಗಿಯೂ ಕುಗ್ಗಿಸಿದರು. ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಆಕೆಗೆ ಸರಿಯಾದ ವೈದ್ಯಕೀಯ ತಪಾಸಣೆಯೂ ಆಗಲಿಲ್ಲ! ಚಾರ್ಜ್ ಶೀಟ್ ಇಲ್ಲದೆಯೇ ಆಕೆಯನ್ನ ಒಂಭತ್ತು ವರ್ಷ ಕೂಡಿ ಹಾಕಿದ ಕಾಂಗ್ರೆಸ್ ಗೆ ‘ಇಶ್ರತ್ ಜಹಾನ್’ ಎಂಬ ಆತ್ಮಾಹುತಿ ಬಾಂಬ್ ರ್ ಳನ್ನು ಮಾತ್ರ ‘ಸಹೋದರಿ’ ಎಂದು ಕರೆದು ಸತ್ಕರಿಸಿತು!!!

ವಾಸ್ತವವಾಗಿ ಅವತ್ತೂ ಸಹ, ಸಿಬಿಐ ಗೆ ಸಿಕ್ಕಿದ್ದಿ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳ ಕೈವಾಡವೇ! ಪಾಕಿಸ್ಥಾನಿ ಜಿಹಾದಿಗಳ ಬಗ್ಗೆ ವಿಶೇಷವಾದ ಅಧ್ಯಯನ ಮಾಡಿದ್ದ ಕಾಲೋನೆಲ್ ಪುರೋಹಿತ್ ನ ಬಾಯಿ ಮುಚ್ಚಿಸಲೇ ಬೇಕಿತ್ತು ಕಾಂಗ್ರೆಸ್ ಗೆ! ಸಾಕ್ಷ್ಯಗಳನ್ನು ನಾಶ ಮಾಡುವಲ್ಲಿ ಹೆಸರಾದ ಮತ್ತದೇ ಪಕ್ಷವೊಂದು ಪುರೋಹಿತ್ ರನ್ನು ಜೈಲಿಗಟ್ಟುವಲ್ಲಿ ಯಶಸ್ವಿಯೂ ಆಯಿತು!

ಇದೆಲ್ಲ ನೋಡಿಯೇ ಗೃಹ ಸಚಿವಾಲಯದ ಮಾಜಿ ಅಂಡರ್ ಸೆಕ್ರಟರಿಯಾದ ಆರ್ ವಿಎಸ್ ಮಣಿ ಮತ್ತೆ ಮಾತಿಗಿಳಿದಿದ್ದು! “ನಾನಿದನ್ನು ನಿರೀಕ್ಷಿಸಿದ್ದೆ! ಕೇಸರೀ ಭಯೋತ್ಪಾದನೆಯನ್ನು ಹೇಗಾದರೂ ಸಾಬೀತು ಪಡಿಸಲಿಕ್ಕಾಗಿಯೇ ಪ್ರತೀ ಸಾಕ್ಷಿಗಳೂ ಸಹ ಹೊಸತಾಗಿ ಸೃಷ್ಟಿ ಹೊಂದಿದ್ದವು ! ಇಲ್ಲದಿದ್ದರೆ, ಅಲ್ಲಿ ಯಾವ ಕಡೆಯಿಂದಲೂ ಸಹ ಕೇಸರೀ ಭಯೋತ್ಪಾದನೆ ಎಂಬುದೇ ಇರಲಿಲ್ಲ!” ಎಂದರಲ್ಲ?! ಬಿಡಿ! ಸಾಧ್ವಿ ಪ್ರಗ್ಯಾ ಸಿಂಗ್ ರನ್ನು ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಜೈಲಿನಲ್ಲಿ ಕೊಳೆಸಿದರಲ್ಲ?! ಆಕೆಗೆ, ಅರ್ಧ ಗಂಟೆಯಲ್ಲಿ ಜಾಮೀನು ಸಿಗಬೇಕಿತ್ತಾದರೂ ಬರೋಬ್ಬರಿ ಏಳೆಂಟು ವರ್ಷ ಸಾಧ್ವಿಯ ಸ್ವಾಭಿಮಾನ ಕೆಣಕಿದ್ದರು!

ಕಾಂಗ್ರೆಸ್ ನ ದುರಾದೃಷ್ಟ ಹೇಗಿದೆ ನೋಡಿ! ಯಾವ ಕಾಂಗ್ರೆಸ್ ಸಾಧ್ವಿ ಪ್ರಗ್ಯಾ ಸಿಂಗ್ ರನ್ನು ಹಿಂಸಿಸಿತ್ತೋ, ಯಾವ ಕಾಂಗ್ರೆಸ್ ಒಬ್ಬ ದಕ್ಷ ಸೈನ್ಯಾಧಿಕಾರಿಯಾದ ಪುರೋಹಿತ್ ರನ್ನು ದೇಶದ್ರೋಹಿ ಎಂಬ ಪಟ್ಟ ಕಟ್ಟಿ ಬಂಧಿಸಿತ್ತೋ, ಇವತ್ತು ಅವರಿಬ್ಬರೂ ಪ್ರಕರಣದಿಂದ ಖುಲಾಸೆಯಾಗಿದ್ದಾರೆ! ಪುರೋಹಿತ್ ರವರಿಗೆ ಒಂಭತ್ತು ವರ್ಷಗಳ ನಂತರ ಜಾಮೀನು ನೀಡಲಾಯಿತು! ಮತ್ತದೇ ಸೇನೆಯ ಪದವಿಗಳು ಅವರಿಗಾಗಿ ಕಾದು ಕುಳಿತಿದ್ದವು! ಸಾಧ್ವಿಗೆ ಕೊಟ್ಟ ಹಿಂಸೆಯಿಂದಲೂ ಸಹ ಆಕೆಯ ಬಾಯಿಯಿಂದ ಹಿಂದುತ್ವದ ವಿರುದ್ಧ ಒಂದೇ ಒಂದು ಹೇಳಿಕೆಯನ್ನು ಕೊಡಿಸಲಾಗಲೇ ಇಲ್ಲ! ಇವತ್ತು?! ವಿಶೇಷ ನ್ಯಾಯಾಲಯವೊಂದು ಅಭಿನವ ಭಾರತದ ಪ್ರಮುಖರು, ಕಾರ್ಯಕರ್ತರನ್ನು ನಿರ್ದೋಷಿಯೆಂದು ತೀರ್ಪು ನೀಡಿ ಆರೋಪ ಮುಕ್ತ ಗೊಳಿಸಿದ ಮರುಕ್ಷಣವೇ ಕಾಂಗ್ರೆಸ್ ಬೆತ್ತಲೆಯಾಗಿ ಹೋಗಿದೆ! ಅಮೋಘವಾಗಿ ಹಿಂದುತ್ವ ವಿರೋಧಿ ಹುನ್ನಾರಗಳನ್ನೇ ನಡೆಸಿಕೊಂಡು ಬಂದ ಕಾಂಗ್ರೆಸ್ ನ ಸುಳ್ಳುಗಳು ಇವತ್ತುಬಯಲಾಗಿ ಹೋಗಿದೆ!

ವಾಸ್ತವವಾಗಿ ಕಾಂಗ್ರೆಸ್ ಅತ್ಯಂತ ಹೀನಾಯವಾಗಿ ಸೋತಿದೆ! ಹಿಂದುತ್ವದ ವಿರುಧ್ಧ ಟೊಂಕ ಕಟ್ಟಿ ನಿಂತ ಇದೇ ಕಾಂಗ್ರೆಸ್ ಅದೆಷ್ಟು ಆಟವಾಡಿಲ್ಲ?! ಅದೆಷ್ಟು
ಹಿಂದೂಗಳ ಬದುಕು ಕಸಿದಿಲ್ಲ?! ಸಂತ ಕಪಾತ್ರಿಯವರ ಬೆಂಬಲಕ್ಕಿದ್ದ ಆ ಸಾಸಿರ ಹಿಂದೂಗಳನ್ನು ಹಿಂಸೆಗೊಳಿಸಿದ್ದಲ್ಲಿಂದ ಹಿಡಿದು, ಪ್ರತೀ ಬಾರಿಯೂ ಅಧಿಕಾರಕ್ಕೆ ಬಂದ ಉಮೇದಿನಲ್ಲಿ ಮತ್ತದೇ ಹಿಂದೂಗಳ ಬಲಿಗೆ ಕಾರಣವಾದ ಕಾಂಗ್ರೆಸ್ ಕೊನೆಗೂ ಸೋತಿದೆ! ಅಷ್ಟೇ!


ಸುಶ್ಮಿತಾ ಸಪ್ತರ್ಷಿ

Tags

Related Articles

Close