ಪ್ರಚಲಿತ

ಹಿಂದುತ್ವದ ವಿಚಾರವಿದ್ದರೆ ಅಮೇಜಾನ್‌ನಲ್ಲಿ ಅವಕಾಶವಿಲ್ಲ: ಅಮೇಜಾನ್‌ನಿಂದ ಹಿಂದೂ ಧರ್ಮಕ್ಕೆ ಮತ್ತೊಮ್ಮೆ ಅವಮಾನ!

ಹಿಂದುತ್ವ ಎಂದರೆ ಕೆಲ ಲದ್ದಿ ಜೀವಿಗಳಿಗೆ ಮಾತ್ರ ಅಲರ್ಜಿ ಎಂಬುದು ಜಗಜ್ಜಾಹೀರಾದ ವಿಷಯ. ಆದರೆ ಇಂತಹ ಮನಸ್ಥಿತಿ ಆನ್‌ಲೈನ್ ಮೂಲಕ ಪುಸ್ತಕ ಮಾರಾಟ ಮಾಡುವವರಿಗೂ ಇದೆ ಎನ್ನುವುದನ್ನು ಅಮೆಜಾನ್ ಎಂಬ ಇ ಕಾಮರ್ಸ್ ದೈತ್ಯ ತೋರಿಸಿ ಕೊಟ್ಟಿದೆ.

ನಕಲಿ ಸೆಕ್ಯುಲರಿಸಂ‌ ಸಾಲಿಗೆ ಈ ದೇಶದ ಹಲವು ಗಂಜಿ ಗಿರಾಕಿ ಗಳ ಜೊತೆಗೆ ಅಮೆಜಾನ್ ಸಹ ಸೇರಿಕೊಂಡಿದೆ. ಕಾರಣ, ಲೇಖಕ ಸೌರವ್ ದತ್ ಅವರು ‘ಮೋದಿ ಆಂಡ್ ಮಿ – ಎ ಪೊಲಿಟಿಕಲ್ ರಿವೇಕನಿಂಗ್’ ಎಂಬ ಪುಸ್ತಕವನ್ನು ಅಮೆಜಾನ್ ನಿಷೇಧಿಸಿದೆ. ಆ ಮೂಲಕ ತಾನು ನಕಲಿ ಜಾತ್ಯಾತೀತವಾದಿ ಎಂಬುದನ್ನು ಸಾಬೀತು ಮಾಡಿದೆ. ಈ ಪುಸ್ತಕ ಹಿಂದು ತತ್ವದ ವಿಚಾರಗಳನ್ನು ಒಳಗೊಂಡಿದೆ ಎನ್ನುವ ಕಾರಣ ನೀಡಿ ಈ ಪುಸ್ತಕ ಮಾರಾಟಕ್ಕೆ ಅಮೆಜಾನ್ ವೇದಿಕೆ ಒದಗಿಸಿಲ್ಲ ಎನ್ನುವುದು ದುರಂತವಾದರೂ ಸತ್ಯ.

ಈ ಬಗ್ಗೆ ಈ ಪುಸ್ತಕ ಬರೆದ ಸೌರವ್ ದತ್ ಅವರೇ ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವೀಟ್‌ನಲ್ಲಿಯೂ ಅಮೆಜಾನ್ ಎಂಬ ಇ ಕಾಮರ್ಸ್ ದೈತ್ಯ ತನ್ನ ಪುಸ್ತಕವನ್ನು ತನ್ನ ಫ್ಲ್ಯಾಟ್ಫಾರಂ ನಲ್ಲಿ ಮಾರಲು ಅವಕಾಶ ನೀಡಿದ್ದಕ್ಕೆ ಏನು ಕಾರಣ ಎಂಬುದನ್ನು ತಿಳಿಸಿದ್ದಾರೆ. ತನ್ನ ಪುಸ್ತಕದಲ್ಲಿ ಹಿಂದುತ್ವದ ಬಗೆಗಿನ ವಿಚಾರಗಳಿದ್ದು, ಈ ಹಿನ್ನೆಲೆಯಲ್ಲಿ ಅಮೆಜಾನ್ ಈ ಪುಸ್ತಕವನ್ನು ಮಾರಾಟ ಮಾಡುವುದಿಲ್ಲ ಎಂದು ಸಂಸ್ಥೆ ಸಂದೇಶ ಕಳುಹಿಸಿರುವುದಾಗಿ ಅವರು ಹೇಳಿದ್ದಾರೆ.

ಲೇಖಕರು ಈ ಪುಸ್ತಕದಲ್ಲಿ ಪ್ರಧಾನಿ ಮೋದಿ ಆಡಳಿತ ಅಲ್ಪಸಂಖ್ಯಾತ ಮತ ಬ್ಯಾಂಕ್ ರಾಜಕಾರಣ, ಓಲೈಕೆಯ ರಾಜಕಾರಣದ ವಿರುದ್ಧ ಹೇಗೆ ತೊಡೆ ತಟ್ಟಿ ನಿಂತಿದೆ, ದೇಶ ವಿರೋಧಿ, ಹಿಂದೂ ವಿರೋಧಿ ಮನಸ್ಥಿತಿಗಳ ವಿರುದ್ಧ ಹೇಗೆ ನಿಂತಿದೆ, ಅಂತಹ ದೇಶದ್ರೋಹಿ ಮನಸ್ಥಿತಿಗಳಿಗೆ ಹೇಗೆ ತಡೆಗೋಡೆಯಾಗಿದೆ, ಹೇಗೆ ಎಡಪಂಥೀಯ ಪ್ರಾಬಲ್ಯವಾದಿ ‌ಸಿದ್ದಾಂತಗಳಿಂದ ಆಗುತ್ತಿರುವ ಧಾರ್ಮಿಕ ವಿಭಜನೆ, ಭಾರತ ಮತ್ತು ಅದರಾಚೆಗಿನ ಹಿಂದೂಫೋಬಿಯಾದ ಬೆದರಿಕೆಯನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದನ್ನು ವಿವರಿಸಿದ್ದಾರೆ.

ಒಟ್ಟಿನಲ್ಲಿ ಈ ದೇಶದಲ್ಲಿ ಹಿಂದೂ ವಿರೋಧಿ ನಿಲುವು ಹೊಂದಿರುವ ಕೆಲ ರಾಜಕೀಯ ಪಕ್ಷಗಳು, ಕೆಲ ಬುದ್ಧಿಜೀವಿಗಳ ಹಾಗೆಯೇ ಅಮೆಜಾನ್ ಸಹ ವರ್ತಿಸಿರುವುದು ಅದರ ಹಿಂದೂ ವಿರೋಧಿ ಮನಸ್ಥಿತಿಗೆ ಹಿಡಿದ ಕೈಗನ್ನಡಿ. ಅಮೆಜಾನ್ ಹಿಂದುತ್ವದ ಬಗ್ಗೆ ವಿರೋಧ ವ್ಯಕ್ತಪಡಿಸಿದ ಹಾಗೆಯೇ, ಹಿಂದೂಗಳು ಅಮೆಜಾನ್ ವಿರುದ್ಧ ನಿಂತಲ್ಲಿ ಭಾರತದಲ್ಲಿ ಅಮೆಜಾನ್ ನೆಲೆ ಕಂಡುಕೊಳ್ಳಲು ಸಾಧ್ಯವೇ ಎಂಬುದನ್ನು ಅಮೆಜಾನ್ ಅರಿತಲ್ಲಿ ಉತ್ತಮ. ಅಮೆಜಾನ್ ಬಳಕೆ ಮಾಡುವ ಹಿಂದೂಗಳು ಸಹ ಈ ಸಂಸ್ಥೆಯನ್ನು ಬೆಳೆಸಬೇಕೇ ಎಂಬುದನ್ನು ಯೋಚಿಸಿದಲ್ಲಿ ಉತ್ತಮ.

Tags

Related Articles

Close