ಪ್ರಚಲಿತ

ಪ್ರಧಾನಿ ಮೋದಿ ಬಗ್ಗೆ ಅಮೆರಿಕದ ಸಂಸದ ಬ್ರಾಡ್ ಶೇರ್ಮನ್ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಖ್ಯಾತಿ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ವಿದೇಶಗಳಲ್ಲೂ ಪ್ರಧಾನಿ ಮೋದಿ ಖ್ಯಾತಿ ಪಸರಿಸಿದೆ. ವಿದೇಶಗಳು ಇಂದು ಭಾರತದ ಸ್ನೇಹ ಬಯಸಿ ಮುಂದೆ ಬರುತ್ತಿವೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ಮೋದಿ ಅವರು ಎನ್ನುವುದರಲ್ಲಿ ಎರಡು ಮಾತಿಲ್ಲ.

ಪ್ರಧಾನಿ ಮೋದಿ ಅವರ ಬಗ್ಗೆ ಅಮೆರಿಕದ ಹಿರಿಯ ಸಂಸದ ಬ್ರಾಡ್ ಶೇರ್ಮನ್ ಮಾತನಾಡಿದ್ದು, ಪ್ರಧಾನಿ ನರೇಂದ್ರ
ಮೋದಿ ಅವರು ಭವಿಷ್ಯದಲ್ಲಿ ಭಾರತದ ಮುಖವಾಗಲಿದ್ದಾರೆ ಎಂದು ತಿಳಿಸಿದ್ದಾರೆ.

2014 ರ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ದೇಶದಲ್ಲಾಗಿರುವ ಆರ್ಥಿಕ ಪ್ರಗತಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಅಮೆರಿಕ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಸಿದೆ ಎಂದು ಅವರು ನುಡಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ದಿನಗಳಲ್ಲಿ ಭಾರತದ ಮುಖವಾಣಿಯಾಗಲಿದ್ದಾರೆ. ದೇಶದ ಆರ್ಥಿಕತೆಯು ಪ್ರಗತಿ ಪಥದಲ್ಲಿ ಸಾಗುತ್ತಿದೆ. ಇದನ್ನು ನಾವೆಲ್ಲರೂ ಕಾಣುತ್ತಿದ್ದೇವೆ. ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳಿಗೂ ತನ್ನದೇ ಆದ ಸವಾಲುಗಳು ಇರುತ್ತವೆ. ಪ್ರತಿ ನಾಯಕನಿಗೂ ಇರುತ್ತವೆ. ಭಾರತದ ನೂರ ಮೂವತ್ತು ಕೋಟಿ ಜನರು ದೇಶದ ಯಶಸ್ಸಿಗೆ ದುಡಿಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಹತ್ತು ವರ್ಷಗಳ ಹಿಂದೆ ಪ್ರಪಂಚ ಭಾರತವನ್ನು ನೋಡುತ್ತಿದ್ದ ದೃಷ್ಟಿಕೋನ ಮತ್ತು ಕಳೆದ ಹತ್ತು ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ದಲ್ಲಿನ ಭಾರತವನ್ನು ನೋಡುವ ದೃಷ್ಟಿ ಬದಲಾಗಿದೆ ಎನ್ನುವುದು ಸ್ಪಷ್ಟ. ಹತ್ತು ವರ್ಷಗಳ ಹಿಂದೆ ಜಗತ್ತಿನ ಹಿಂದೆ ಭಾರತ ಕೈ ಕಟ್ಟಿ ಕೂರುವ ಸ್ಥಿತಿ ಇತ್ತು. ಆದರೆ ಈಗ ಭಾರತದ ಹಿಂದೆ ಬರಲು ಹಲವಾರು ರಾಷ್ಟ್ರಗಳು ಮುಂದೆ ಬರುತ್ತಿವೆ. ಜಗತ್ತಿನ ದೊಡ್ಡಣ್ಞ ಎನಿಸಿಕೊಂಡ ಅಮೆರಿಕಾದಿಂದ ಹಿಡಿದು ಸಣ್ಣ ಸಣ್ಣ ರಾಷ್ಟ್ರಗಳು ಸಹ ಭಾರತದತ್ತ ಸ್ನೇಹ ಹಸ್ತ ಚಾಚಿ ಬರುತ್ತಿರುವುದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಸ್ನೇಹಪರ ಆಡಳಿತ ಎನ್ನುವುದು ಒಪ್ಪತಕ್ಕ ಮಾತು.

ಕೊರೋನಾದಂತಹ ಸಂಕಷ್ಟ ಸಮಯದಲ್ಲೂ ಭಾರತ ತನ್ನ ದೇಶದ ಜನರ ಜೊತೆಗೆ ವಿದೇಶಗಳ ಮೇಲೆಯೂ ಕಾಳಜಿ ವಹಿಸಿದ್ದು, ಅವರಿಗೆ ಅಗತ್ಯ ನೆರವು ಒದಗಿಸಿದ ಕಾರಣದಿಂದ ಪ್ರಧಾನಿ ಮೋದಿ ಅವರಿಗೆ ಮತ್ತು ಭಾರತಕ್ಕೆ ವಿದೇಶಗಳು ಹೆಚ್ಚು ಗೌರವ ನೀಡಿವೆ ಎನ್ನಬಹುದು. ಯಾವುದೇ ದೇಶ ಸಮಸ್ಯೆ ಎಂದು ಕೈ ಚಾಚಿದರೂ ಸಹಾಯಹಸ್ತ ನೀಡುವ ಮೂಲಕ, ಭಾರತದ ಆರ್ಥಿಕತೆಯನ್ನು ಮಾದರಿ ಆರ್ಥಿಕತೆಯನ್ನಾಗಿಸಿರುವುದರ ಜೊತೆಗೆ ಇಡೀ‌ವಿಶ್ವದ ಸ್ನೇಹ ಸಂಪಾದನೆ ಮಾಡಿರುವ ಪ್ರಧಾನಿ ಮೋದಿ ಅವರ ಜನಪ್ರಿಯತೆಗೆ ಅವರೇ ಸಾಟಿ.

Tags

Related Articles

Close