ಪ್ರಚಲಿತ

ಪಶ್ಚಿಮ ಬಂಗಾಳದಲ್ಲಿ ನಾವು ಒಳನುಸುಳುವಿಕೆ ನಿಲ್ಲಿಸುತ್ತೇವೆ: ಅಮಿತ್ ಶಾ

ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಸಿಎಎ ಕುರಿತಂತೆ ವಿರೋದ ಪಕ್ಷಗಳು ಸಾರ್ವಜನಿಕ ವಲಯದಲ್ಲಿ ತಪ್ಪು ಮಾಹಿತಿ ಹರಡುವ ಕೆಲಸ ಮಾಡುತ್ತಿವೆ. ಸಿಎಎ ಇಂದ ಭಾರತೀಯ ಮುಸಲ್ಮಾನರಿಗೆ ಅನ್ಯಾಯವಾಗುತ್ತದೆ ಎನ್ನುವ ಸುಳ್ಳು ಹಬ್ಬಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡಲು ಹೊರಟಿದೆ‌.

ಸಿಎಎ ಆಥವಾ ಪೌರತ್ವ ತಿದ್ದುಪಡಿ ಕಾಯ್ದೆಯು ಈ ದೇಶದ ಜನರಿಗೆ ಯಾವುದೇ ತರದ ಸಮಸ್ಯೆಗಳನ್ನು ಮಾಡುವುದಿಲ್ಲ. ಬದಲಾಗಿ ಪಾಕಿಸ್ತಾನ, ಬಾಂಗ್ಲಾದೇಶ ‌ಗಳಿಂದ ವಲಸೆ ಬಂದ ಅಲ್ಲಿನ ಅಲ್ಪಸಂಖ್ಯಾತರು ಭಾರತಕ್ಕೆ ವಲಸೆ ಬಂದು, ನೆಲೆ ಕಂಡುಕೊಂಡಿದ್ದರೆ ಅಂತಹ ಜನರಿಗೆ ಇಲ್ಲಿನ ಪೌರತ್ವ ಒದಗಿಸುವ ಕೆಲಸ ಮಾಡುತ್ತದೆ. ಹೀಗಿದ್ದರೂ ಜನರಲ್ಲಿ ಈ ಬಗ್ಗೆ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಸುಳ್ಳು ಬಿತ್ತುವ ಕೆಲಸವನ್ನು ವಿರೋಧ ಪಕ್ಷಗಳು, ವಿರೋಧಿಗಳು ಮಾಡುತ್ತಿದ್ದಾರೆ. ವಿರೋಧ ಪಕ್ಷಗಳ ನಾಯಕರು ಇದನ್ನು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧದ ಅಸ್ತ್ರವನ್ನಾಗಿಯೂ ಬಳಕೆ ಮಾಡುತ್ತಿದ್ದಾರೆ.

ಕೇಂದ್ರ ಸಚಿವ ಅಮಿತ್ ಶಾ ಅವರು ಸಿಎಎ ಸಂಬಂಧಿಸಿದ ಹಾಗೆ ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದು, ಯಾರು ಏನೇ ಮಾಡಿದರೂ ಸಿಎಎ ತಡೆಯುವುದು ಸಾಧ್ಯವಿಲ್ಲ. ನಾವು ಈ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಆದರೆ, ಪಶ್ಚಿಮ ಬಂಗಾಳದ ಸಿ ಎಂ ಮಮತಾ ಬ್ಯಾನರ್ಜಿ ಮಾತ್ರ ಇದನ್ನು ಭಾರತದಲ್ಲಿರುವ ಅಲ್ಪಸಂಖ್ಯಾತರ ಪೌರತ್ವ ರದ್ದಾಗುತ್ತದೆ ಎಂದು ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ನಾವು ನಿರಾಶ್ರಿತರಿಗೆ ಭಾರತದ ಪೌರತ್ವ ಪಡೆಯಲು ಅವಕಾಶ ನೀಡಿ, ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದೇವೆ. ಇದು ಭಾರತೀಯರಿಗೆ, ಭಾರತೀಯ ಮುಸಲ್ಮಾನರಿಗೆ‌ ಯಾವುದೇ ಸಮಸ್ಯೆ ಉಂಟುಮಾಡುವುದಿಲ್ಲ ಎಂಬ ಭರವಸೆ ನೀಡುವುದಾಗಿಯೂ ಅವರು ಹೇಳಿದ್ದಾರೆ.

ಸಶಕ್ತ ಭಾರತವನ್ನು ನಾವು ನಿರ್ಮಾಣ ಮಾಡಬೇಕಾದರೆ ಎಲ್ಲಾ ರಾಜ್ಯಗಳೂ ಸಶಕ್ತವಾಗಬೇಕು. ಪಶ್ಚಿಮ ಬಂಗಾಳವನ್ನು ಸಹ ಸಶಕ್ತ ಮಾಡಬೇಕು. ಆದರೆ ಪಶ್ಚಿಮ ಬಂಗಾಳದಲ್ಲಿ ನುಸುಳುಕೋರರು ಒಳನುಸುಳುವ ಪ್ರಮಾಣ ಹೆಚ್ಚಾಗಿದ್ದು, ಇದು ದೇಶದ ಅಭಿವೃದ್ಧಿಗೆ ತೊಡಕಾಗುತ್ತದೆ.‌ ಮಮತಾ ಬ್ಯಾನರ್ಜಿ ಅವರು ಈ ಒಳ ನುಸುಳುವಿಕೆ ತಡೆಯಲು ಯಾವುದೇ ಪ್ರಯತ್ನ ಮಾಡುತ್ತಾರೆಯೇ? ಇಂತಹ ನುಸುಳುಕೋರಕೇ ಅವರ ನಿಜವಾದ ಮತಬ್ಯಾಂಕ್ ಎಂದು ಶಾ ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ಮತ್ತು ಬಿಜೆಪಿ ಪಕ್ಷ ಮಾತ್ರವೇ ಇಂತಹ ಒಳನುಸುಳುವಿಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು. ಹಾಗಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಖಚಿತಪಡಿಸಿಕೊಳ್ಳಿ. ಪರಿವರ್ತನೆಯ ಗಾಳಿ ಬೀಸುವುದನ್ನು ನೋಡಿ ಎಂದಿದ್ದಾರೆ.

ಹಾಗೆಯೇ ನಾವು ಅಸ್ಸಾಂನಲ್ಲಿ ಒಳನುಸುಳುವಿಕೆ ತಡೆದಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಸಹ ಉತ್ತಮ ಪ್ರಗತಿಗಾಗಿ ಬಿಜೆಯನ್ನು ಬೆಂಬಲಿಸುವಂತೆ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಅಕ್ರಮ ಒಳ ನುಸುಳುವಿಕೆ ನಿಲ್ಲಿಸುವುದು ಪ್ರಧಾನಿ ಮೋದಿ ಸರ್ಕಾರ ನೀಡುವ ಗ್ಯಾರಂಟಿ ಎಂದು ಶಾ ತಿಳಿಸಿದ್ದಾರೆ.

Tags

Related Articles

Close