ಪ್ರಚಲಿತ

ಅಯೋಧ್ಯಾ ರಾಮ ಮಂದಿರದ ವಿವಾದಕ್ಕೆ ಮತ್ತೊಂದು ಟ್ವಿಸ್ಟ್! ಮುಸ್ಲಿಂ ಕಾನೂನು ಮಂಡಳಿಯಿಂದ ಮಹತ್ವದ ಮಾಹಿತಿ ಬಹಿರಂಗ!

ಮದರಸಾ ಶಿಕ್ಷಣಗಳನ್ನೇ ತಿರುಚಿ ಕೆಲವು ಮದರಸಾಗಳು ಜಿಹಾದ್ ಪಾಠವನ್ನು ಹೇಳಿಕೊಡುವ ಮೂಲಕ ಉಗ್ರರನ್ನು ಹುಟ್ಟು ಹಾಕುತ್ತಿದೆ. ಹಾಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುವ ಮುಸ್ಲಿಮರು ಪಾಕಿಸ್ತಾನ ಇಲ್ಲವೇ ಬಾಂಗ್ಲಾದೇಶಕ್ಕೆ ಹೋಗಬೇಕು ಎಂದು ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ ಹೇಳಿರುವ ಬೆನ್ನಲ್ಲೇ ಇಸ್ಲಾಮ್ ನಲ್ಲಿ ಮಸೀದಿ ಸ್ಥಳಾಂತರಕ್ಕೆ ಅವಕಾಶವಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಹೇಳಿದ್ದಾರೆ.

ಹೌದು… ಈಗಾಗಲೇ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿರುವಂತೆ, ರಾಜ್ಯ ಸಭೆಯಲ್ಲಿ ಬಿಜೆಪಿ ಬಹುಮತವನ್ನು ಪಡೆದುಕೊಂಡರೆ, 2018ರಲ್ಲಿ ರಾಮಮಂದಿರವನ್ನು ಕಟ್ಟುತ್ತೇವೆ ಎನ್ನುವ ಮಾತನ್ನು ಹೇಳಿದ್ದರು. ಅದರಂತೆ ರಾಮಮಂದಿರದ ಮರುನಿರ್ಮಾಣಕ್ಕೆ ಅಯೋಧ್ಯೆ ಸಜ್ಞಾಗಿದೆ. ಅದೆಷ್ಟೋ ಮಾಧ್ಯಮಗಳು ತನ್ನ ಟಿ.ಆರ್.ಪಿಯನ್ನು ಹೆಚ್ಚಿಸಿಕೊಳ್ಳಲು, ರಾಮಮಂದಿರದ ಸಮಸ್ಯೆಗಳನ್ನು ಎತ್ತಿತೋರಿಸುತ್ತಿದ್ದರು. ಇದೀಗ ರಾಮ ಮಂದಿರದ ಸಮಸ್ಯೆಗಳಿಗೆ ಬ್ರೇಕ್ ಬಿದ್ದಂತಾಗಿದೆ!! ಯಾಕೆಂದರೆ, ಹಿಂದೂ ಮುಸ್ಲಿಂ ಜಗಳದಲ್ಲಿ ರಾಮಮಂದಿರವನ್ನು ಕಟ್ಟಲು ಮುಸಲ್ಮಾನರೇ ಬಿಡುತ್ತಿಲ್ಲ ಎನ್ನುತ್ತಿದ್ದ ವಿಚಾರ ಇದೀಗ ಹುಸಿಯಾಗಿದೆ.

ಯಾಕೆಂದರೆ ರಾಮ ಮಂದಿರವನ್ನು ಮರುನಿರ್ಮಾಣಕ್ಕೆ ಮುಂದಾಗಿರುವುದು, ಮುಸಲ್ಮಾನ ಸ್ನೇಹಿತರು!! ಅಯೋಧ್ಯ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ಹೊರಬಂದಿದ್ದು, ಇಸ್ಲಾಮ್ ನಲ್ಲಿ ಮಸೀದಿ ಸ್ಥಳಾಂತರಕ್ಕೆ ಅವಕಾಶವಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಮೌಲಾನಾ ಸೈಯದ್ ಸಲ್ಮಾನ್ ಹುಸೈನ್ ನಾದ್ವಿ ತಿಳಿಸಿದ್ದಾರೆ.

ಅಯೋಧ್ಯೆ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಹಿಂದು ಹಾಗೂ ಮುಸ್ಲಿಂ ಸಂಘಟನೆಗಳ ನಡುವೆ ಒಮ್ಮತಕ್ಕೆ ಯತ್ನ ನಡೆಸುತ್ತಿರುವ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಧರ್ಮಗುರು ಶ್ರೀ ಶ್ರೀ ರವಿಶಂಕರ ಗುರೂಡಿಯವರ ಯತ್ನ ಫಲ ನೀಡುವ ಬೆಳವಣಿಗೆಗಳು ಕಂಡು ಬರುತ್ತಿವೆ. ಬೆಂಗಳೂರಿನ ಶಿವಾಜಿನಗರದ ಖಾಸಗಿ ಬಂಗಲೆಯೊಂದರಲ್ಲಿ ನಿನ್ನೆಯಷ್ಟೇ ರವಿಶಂಕರ್ ಗುರೂಜಿಯವರು ಮುಸ್ಲಿಂ ಧಾರ್ಮಿಕ ಮುಖಂಡರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಮೂರು ಗಂಟೆಗಳ ಕಾಲ ಸುದೀರ್ಘ ಮಾತುಕತೆ ನಡೆಸಿದ್ದರು.

ಸಭೆಯಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ 16 ಸದಸ್ಯರು, ಉತ್ತರಪ್ರದೇಶ ಸುನ್ನಿ ವಕ್ಫ್ ಮಂಡಳಿ ಮುಖ್ಯಸ್ಥ ಝುಫರ್ ಅಹಮದ್, ಅಯೋಧ್ಯೆ ಪ್ರಕರಣದ ಪ್ರಮುಖ ಅರ್ಜಿದಾರರಲ್ಲಿ ಒಬ್ಬರಾದ ಹಾಜಿ ಮೆಹಬೂಬ್, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕರ್ನಾಟಕ, ತಮಿಳುನಾಡು ಹಾಗೂ ಕೇರಳದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರು ವಿವಾದಿತ ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದು, ಅರ್ಜಿದಾರ ಹಾಜಿ ಮೆಹಬೂಬ್ ಅವರೂ ಕೂಡ ಮಂದಿರ ನಿರ್ಮಾಣಕ್ಕೆ ಜಾಗ ಬಿಟ್ಟುಕೊಟ್ಟು ಬೇರೆಡೆ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಾರೆಂದು ತಿಳಿದುಬಂದಿದೆ.

ಹಾಗಾಗಿ ಈ ಬಗ್ಗೆ ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಜೊತೆ ಬೆಂಗಳೂರಿನಲ್ಲಿ ಮುಸ್ಲಿಂ ಕಾನೂನು ಮಂಡಳಿಯ ಆರು ಸದಸ್ಯರು ಮಾತುಕತೆ ನಡೆಸಿದನಂತರ ಮೌಲಾನಾ ಸೈಯದ್ ಈ ಹೇಳಿಕೆ ನೀಡಿದ್ದಾರೆ. ಶ್ರೀ ರವಿಶಂಕರ್ ಗುರೂಜಿ ಜೊತೆ ಮೂರು ಗಂಟೆ ಸಭೆ ನಡೆಸಿದ ನಂತರ ಈ ಮಹತ್ವದ ಹೇಳಿಕೆ ಬಿಡುಗಡೆಯಾಗಿದೆ.

ಶಿಯಾ, ಸುನ್ನಿ ಸೇರಿ ಮುಸ್ಲಿಂ ಧರ್ಮದ ನಾನಾ ಪಂಗಡಗಳ, ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದು, ಮುಂದಿನ ಸಭೆ ಮಾರ್ಚ್ ನಲ್ಲಿ ಅಯೋಧ್ಯೆಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಅಲಹದಾಬಾದ್ ಹೈ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತೀರುವ ವೇಳೆಯೇ ಈ ಮಹತ್ವದ ತೀರ್ಪು ಹೊರ ಬಂದಿರುವುದು ದೇಶದ ಗಮನ ಸೆಳೆದಿದ್ದು, ಶೀಘ್ರದಲ್ಲಿ ಅಯೋಧ್ಯೆ ವಿವಾದಕ್ಕೆ ಇತಿಶ್ರೀ ಬೀಳುವ ಲಕ್ಷಣಗಳು ಗೋಚರಿಸಿವೆ.

ಅಯೋಧ್ಯೆ ವಿವಾದದ ಅಂತಿಮ ವಿಚಾರಣೆಯನ್ನು ಸರ್ವೋಚ್ಛ ನ್ಯಾಯಾಲಯ ನಿನ್ನೆ ಆರಂಭಿಸಿದ್ದು, ವಿವಾದದ ಕುರಿತ ಕಡತಗಳ ಆಂಗ್ಲಭಾಷಾ ತರ್ಜುಮೆಯ ಪ್ರತಿಗಳನ್ನು 2 ವಾರದೊಳಗೆ ಸಲ್ಲಿಸುವಂತೆ ನ್ಯಾಯಾಪೀಠ ತಿಳಿಸಿದೆ. ಅಲ್ಲದೆ, ವಿಚಾರಣೆಯನ್ನು ಮಾ.14ಕ್ಕೆ ಮುಂದೂಡಿದೆ. ವಿಚಾರಣೆ ಆರಂಭಿಸಿದ್ದ ಮುಖ್ಯ ನ್ಯಾಯಾಧೀಶ ನ್ಯಾ.ದೀಪಕ್ ಮಿಶ್ರಾ, ನ್ಯಾ.ಅಬ್ದುಲ್ ನಜೀರ್ ಹಾಗೂ ನ್ಯಾ.ಅಶೋಕ್ ಭೂಷಣ್ ಅವರ ಪೀಠ, ಅಪೀಲುಗಳನ್ನು ಮಾ.14 ರಂದು ವಿಚಾರಣೆ ಮಾಡುವುದಾಗಿ ಹೇಳಿತಲ್ಲದೇ, ತಾನೂ ಯಾವತ್ತೂ ದೈನಂದಿನ ವಿಚಾರಣೆ ನಡೆಸುವ ಇರಾದೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಈ ಹಿಂದೆ ಸರಯೂ ನದಿ ತೀರದಲ್ಲಿ ಉತ್ತರಪ್ರದೇಶ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ 100 ಮೀಟರ್ ಎತ್ತರದ ಶ್ರೀರಾಮನ ವಿಗ್ರಹಕ್ಕೆ ಗೌರವದ್ಯೋತಕವಾಗಿ 10 ಬೆಳ್ಳಿಯ ಬಾಣಗಳನ್ನು ಉಡುಗೊರೆ ನೀಡುವುದಾಗಿ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ಘೋಷಿಸಿತ್ತು. ಅಷ್ಟೇ ಅಲ್ಲದೇ, ಈ ಕುರಿತು ಸಿಎಂ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದಿರುವ ವಕ್ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ, ಶ್ರೀರಾಮನ ವಿಗ್ರಹ ಸ್ಥಾಪಿಸುವುದರಿಂದ ಉತ್ತರಪ್ರದೇಶವು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುತ್ತದೆ. ಈ ಭಾಗದ ನವಾಬರು ಯಾವಾಗಲೂ ಅಯೋಧ್ಯೆಯ ದೇವಸ್ಥಾನಗಳನ್ನು ಗೌರವಿಸುತ್ತಿದ್ದರು ಎಂದು ಹೇಳಿದ್ದರು.

ಅಷ್ಟೇ ಅಲ್ಲದೇ, ಪ್ರತಿ ಬಾರಿಯೂ ಅಯೋಧ್ಯೆ ರಾಮ ಮಂದಿರದ ವಿಚಾರವಾಗಿ ಹಿಂದೂಗಳ ಪರ ನಿಲ್ಲುತ್ತಾ ಸಾಮರಸ್ಯ ಕಾಪಾಡಲು ಮುಂದಾಗುತ್ತಿರುವ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ ರಾಮಜನ್ಮಭೂಮಿಯ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ರಿಜ್ವಿ ಅವರು ಮಾತನಾಡುತ್ತಾ, “ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ದೇವಳ ನಿರ್ಮಾಣವನ್ನು ವಿರೋಧಿಸುವ ಕಟ್ಟಾ ಮೂಲಭೂತವಾದಿ ಮುಸ್ಲಿಮರು ಪಾಕಿಸ್ತಾನಕ್ಕೆ ಮತ್ತು ಬಾಂಗ್ಲಾದೇಶಕ್ಕೆ ಹೋಗಬೇಕು; ಅಂತಹ ಮುಸ್ಲಿಮರಿಗೆ ಭಾರತದಲ್ಲಿ ಅವಕಾಶ ಇಲ್ಲ’ ಎಂದು ಹೇಳಿದ್ದರು.

ಅಷ್ಟೇ ಅಲ್ಲದೇ, ಮಸೀದಿ ಹೆಸರಲ್ಲಿ ಜಿಹಾದ್ ಅನ್ನು ಹರಡಲು ಬಯಸುವವರು ಸಿರಿಯಾಕ್ಕೆ ಹೋಗಿ ಐಸಿಸ್ ಮುಖ್ಯಸ್ಥ ಅಬು ಬಕರ್ ಬಾಗ್ಧಾದಿಯ ಪಡೆಯನ್ನು ಸೇರಿಕೊಳ್ಳಲು ಹೋಗಬೇಕು. ಮೂಲಭೂತವಾದಿ ಮುಸ್ಲಿಂ ಧರ್ಮಗುರುಗಳು ದೇಶವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂದು ರಿಜ್ವಿ ಹೇಳಿದ್ದರು.

ಅಯೋಧ್ಯೆಯಲ್ಲಿ ರಾಮಮಂದಿರ ಮರು ನಿರ್ಮಾಣವಾಗಬೇಕು ಎಂದು ಎದ್ದ ಸಮಸ್ಯೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಂಡವರೇ ಹೆಚ್ಚು. ಆದರೆ ಉತ್ತರಪ್ರದೇಶದ ಚುನಾವಣೆಯಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಯಾಕೆಂದರೆ ರಾಮ ಮಂದಿರದ ಮರು ನಿರ್ಮಾಣದ ಬಗೆಗಿನ ಬಿಕ್ಕಟ್ಟಿಗೆ ಉತ್ತರಪ್ರದೇಶದಲ್ಲಿ ನಡೆದ ಚುನಾವಣೆಯ ಜಯ ದೊಡ್ಡ ಯಶಸ್ಸಿಗೆ ಕಾರಣವಾಗಿದೆ.

ಆದರೆ ಇದೀಗ, ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ ಜೊತೆ ಬೆಂಗಳೂರಿನಲ್ಲಿ ಮುಸ್ಲಿಂ ಕಾನೂನು ಮಂಡಳಿಯ ಆರು ಸದಸ್ಯರು ಮಾತುಕತೆ ನಡೆಸಿದ ನಂತರ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಮೌಲಾನಾ ಸೈಯದ್, “ಅಯೋಧ್ಯ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ಹೊರಬಂದಿದ್ದು, ಇಸ್ಲಾಮ್ ನಲ್ಲಿ ಮಸೀದಿ ಸ್ಥಳಾಂತರಕ್ಕೆ ಅವಕಾಶವಿದೆ” ಎಂದು ಹೇಳಿದ್ದಾರೆ. ಹಾಗಾಗಿ ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರ ಕಟ್ಟುವ ಕನಸು ನನಸಾಗಲಿದ್ದು, ಶೀಘ್ರದಲ್ಲಿ ಅಯೋಧ್ಯೆ ವಿವಾದಕ್ಕೆ ಇತಿಶ್ರೀ ಬೀಳುವ ಲಕ್ಷಣಗಳು ಗೋಚರಿಸಿವೆ.

– ಅಲೋಖಾ

Tags

Related Articles

Close