ಪ್ರಚಲಿತ

ಪ್ರಧಾನಿ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ ಐಸಿಸ್ ಭಯೋತ್ಪಾದಕರ ಕೃತ್ಯವನ್ನು ಬಯಲಿಗೆಳೆದ ಗುಜರಾತ್ ಎ.ಟಿ.ಎಸ್! ಮೋದಿಯವರನ್ನು ಸ್ನೈಪರ್ ರೈಫಲ್ನಿಂದ ಕೊಲ್ಲಲು ತಯಾರಾಗಿದ್ದ ಉಗ್ರರು!!

ಗುಜರಾತ್ ಎಟಿಎಸ್ ಪೋಲಿಸರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ನೈಪರ್ ರೈಫಲ್ನೊಂದಿಗೆ ಹತ್ಯೆ ಮಾಡುವ ಉದ್ದೇಶದಿಂದಿದ್ದ ವ್ಯಕ್ತಿಗಳ ಮೇಲೆ ಅಂಕಲೇಶ್ವರ್ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿರುತ್ತಾರೆ. ಎಟಿಎಸ್ ಪೋಲಿಸರು ಸಲ್ಲಿಸಿರುವ ಚಾರ್ಜ್ ಶೀಟಿನಲ್ಲಿ ಐಸಿಸ್ ಗಾಗಿ ಕಾರ್ಯನಿರ್ವಹಿಸುವ ಉಬಿದ್ ಮಿರ್ಜಾ ಎನ್ನುವವನ ದೂರವಾಣಿ ಕರೆ, ಮೆಸೀಜಿಂಗ್ ಆಪ್ ಮತ್ತು ಪೆನ್ ಡ್ರೈವಿನಲ್ಲಿದ್ದ ಮಾಹಿತಿಯಿಂದ ಉಗ್ರರು ಪ್ರಧಾನ ಮಂತ್ರಿ ಮೋದಿ ಅವರನ್ನು ಕೊಲ್ಲಲು ಸ್ನೈಪರ್ ರೈಫಲ್ ಉಪಯೋಗಿಸುವುದರಲ್ಲಿದ್ದರು ಎಂದು ತಿಳಿದು ಬಂದಿದೆ. “Yeah, let’s take out Modi with a sniper rifle.” ಎಂಬ ಹೇಳಿಕೆ ಹೇಳಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಮೋದಿ ಹತ್ಯೆಯ ಸಂಚಿನ ಆರೋಪ ಎದುರುಸುತ್ತಿರುವ ವ್ಯಕ್ತಿಗಳು ಖುದ್ದು ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ ಎಂದು ಚಾರ್ಜಶೀಟ್ ನಲ್ಲಿ ತಿಳಿಸಲಾಗಿದೆ. ಸೂರತ್ ನ ನಿವಾಸಿಗಳಾದ ಉಬಿದ್ ಮಿರ್ಜಾ ಮತ್ತು ಕಾಸಿಮ್ ಸ್ಟಿಂಬರ್ ವಾಲಾ ಈ ಹತ್ಯೆಯ ಸಂಚು ರೂಪಿಸಿದವರು. ಮಿರ್ಜಾ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರೆ, ಕಾಸಿಮ್ ಸ್ಟಿಂಬರ್ ವಾಲಾ ಗುಜರಾತಿನ ಸರ್ದಾರ್ ಪಟೇಲ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಇದೆ ಆಸ್ಪತ್ರೆಯಲ್ಲಿ ಮೇಡಮ್ ಜಿ ಬಲಗೈ ಬಂಟ ಕಾಂಗ್ರೆಸಿನ ಅಹ್ಮದ್ ಪಟೇಲ್ 2015 ರವರೆಗೆ ಟ್ರಸ್ಟಿ ಆಗಿ ಕಾರ್ಯ ನಿರ್ವಹಿಸಿದ್ದನ್ನು ನೆನಪಿಸಿ. ಯೂಪಿಎ ಕಾಲದಲ್ಲೆ ಉಗ್ರರು ಭಾರತದಲ್ಲಿ ತಳವೂರಿದ್ದರು ಎನ್ನುವುದಕ್ಕೆ ಇಷ್ಟು ಪುರಾವೆ ಸಾಕು.

25 ಅಕ್ಟೋಬರ್ 2017 ರಂದು ಉಬಿದ್ ಮಿರ್ಜಾ ಮತ್ತು ಕಾಸಿಮ್ ಸ್ಟಿಂಬರ್ ವಾಲಾನನ್ನು ಗುಜರಾತ್ ಎಟಿಎಸ್ ನವರು ಅಂಕಲೇಶ್ವರದಲ್ಲಿ ಬಂಧಿಸಿದ್ದರು. ಕಾಸಿಮ್ ಬಂಧಿಯಾಗುವ ಮೂರೆ ವಾರಗಳ ಹಿಂದೆ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದ ಮತ್ತು ಜಿಹಾದಿ ಚಟುವಟಿಕೆಗಳನ್ನು ನಡೆಸಲು ಮೂಲಭೂತವಾದಿ ಶೇಖ್ ಅಬ್ದುಲ್ಲಾ ಅಲ್ ಫೈಸಲ್ ಗರಡಿಯಲ್ಲಿ ಪಳಗಲು ಭಾರತದಿಂದ ತಪ್ಪಿಸಿಕೊಂಡು ಜಮೈಕಾಗೆ ಪ್ರಯಾಣಿಸಲು ಯೋಜಿಸುತ್ತಿದ್ದ ಎಂದು ಕಾರ್ಯಚರಣೆಯಿಂದ ತಿಳಿದು ಬಂದಿದೆ.

ಭಾರತದಲ್ಲಿ ಈಗಾಗಲೇ ಐಸಿಸ್ ತನ್ನ ಕಬಂಧ ಬಾಹುಗಳನ್ನು ಹರಡಿ ಬಿಟ್ಟಿದೆ. ಕೇರಳ, ಕರ್ನಾಟಕ ಮತ್ತು ಬಂಗಾಳದಲ್ಲಿ ಐಸಿಸ್ ನ ಸಂಪರ್ಕದಲ್ಲಿರುವ ಹಲವಾರು ಯುವಕರ ಬಗ್ಗೆ ಪತ್ತೆ ಹಚ್ಚಲಾಗಿದೆ. ಪ್ರಧಾನ ಮಂತ್ರಿ ಮೋದಿಯವರನ್ನು ಶತಾಯ ಗತಾಯ ಮುಗಿಸಲೆ ಬೇಕೆಂದು ಪಣ ತೊಟ್ಟಿರುವ ಐಸಿಸ್ ಭಾರತದಲ್ಲಿ ತನ್ನ ಸ್ಲೀಪರ್ ಸೆಲ್ ಗಳನ್ನು ಸಕ್ರಿಯವಾಗಿಸಿವೆ. ಕೊಲ್ಲುವವನಿಗಿಂತ ಕಾಯುವವ ಮೇಲು ಎನ್ನುವ ಮಾತಿನಂತೆ ಮೋದಿಯವರ ಮೇಲಾಗಲಿದ್ದ ಅಪಾಯವೊಂದು ಪೋಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದೆ. ಭಾರತದಲ್ಲಿ ಕಾಣದ ” ಕೈ”ಗಳು ಐಸಿಸ್ ಉಗ್ರರಿಗೆ ತಮ್ಮ ಬೆಂಬಲವನ್ನು ನೀಡುತ್ತಿವೆ ಎನ್ನುವುದು ಗೊತ್ತಿರುವ ಸತ್ಯ.

ಮೋದಿಯವರಿಗೆ ಪ್ರಾಣಾಪಾಯವಿರುವುದು ಖಂಡಿತ. 2019 ರಲ್ಲಿ ಮೋದಿ ಮತ್ತೊಂದು ಅವಧಿಗೆ ಪ್ರಧಾನಮಂತ್ರಿಯಾಗುವುದು ನಿಶ್ಚಿತ. ಮೋದಿ ಅವರನ್ನು ತಡೆಯಲು ಇನಾವುದೆ ಮಾರ್ಗವಿಲ್ಲ ಎಂದು ಅರಿತ ವಿರೋಧಿಗಳು ಮೋದಿಯವರನ್ನು ಕೊಲ್ಲುವಷ್ಟರ ಮಟ್ಟಿಗೆ ಇಳಿದಿದ್ದಾರೆಂದರೆ ಅವರ ಅಧಿಕಾರದ ಹಪಹಪಿ ಎಷ್ಟು ಕೀಳು ಮಟ್ಟದ್ದು ಮತ್ತು ಎಷ್ಟು ಉಗ್ರ ರೀತಿಯದ್ದಾಗಿರಬೇಕು ಊಹಿಸಿ. ಸುಬಾಷ್ ಚಂದ್ರ ಬೋಸ್. ಶ್ಯಾಮಾ ಪ್ರಸಾದ್ ಮುಖರ್ಜಿ, ಲಾಲ್ ಬಹಾದ್ದೂರ್ ಶಾಸ್ತ್ರಿ, ರಾಜೀವ್ ದೀಕ್ಷಿತ್, ಸಂಜಯ್ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮಾಧವ ರಾವ್ ಸಿಂಧಿಯಾ, ರಾಜೇಶ್ ಪೈಲಟ್ ಅಂತಹ ಘಟಾನುಘಟಿ ನಾಯಕರನ್ನು ಮುಗಿಸಿದ “ಕೈ”ಗಳು ಈಗ ತಮ್ಮ ಕಬಂಧ ಬಾಹುಗಳನ್ನು ಮೋದಿಯೆಡೆಗೆ ಚಾಚುತ್ತಿವೆ. ಭಾರತೀಯರೆಲ್ಲರೂ ಎಚ್ಚರವಾಗಿದ್ದು ಶತ್ರುಗಳನ್ನು ಮಟ್ಟ ಹಾಕಬೇಕಾದ ಕಾಲವಿದು. ಪ್ರಧಾನ ಸೇವಕ ಮೋದಿಯವರ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲೋಣ…. ಅವರ ಮೇಲೆರಗುವ ಅಪಾಯ ಮೊದಲು ನಮ್ಮನ್ನೆದುರಿಸಲಿ…..ನಮ್ಮ ಕೈಯಿಂದ ಪಾರಾದರಲ್ಲವೆ ಮುಂದಿನ ವಿಚಾರ…

-ಶಾರ್ವರಿ

Tags

Related Articles

Close