ಪ್ರಚಲಿತ

ಜ್ಞಾನವಾಪಿ ವೈಜ್ಞಾನಿಕ ಸಮೀಕ್ಷೆ ಆರಂಭಿಸಿದ ಎಎಸ್‌ಐ

ನಮ್ಮ ದೇಶದಲ್ಲಿ ಮಸೀದಿಗಳಡಿ ಸಯಲ್ಲಿ ಹಿಂದೂ ದೇಗುಲಗಳ ಕುರುಹು ಪತ್ತೆಯಾಗುತ್ತಿರುವುದು, ಹಿಂದೂ ದೇವಾಲಯಗಳನ್ನು ನಾಶ ಮಾಡಿ ಅವುಗಳ ಮೇಲೆ ಮಸೀದಿಗಳನ್ನು ‌ನಿರ್ಮಾಣ ಮಾಡುತ್ತಿರುವುದು ಬಹಳ ಹಿಂದಿನಿಂದಲೂ ನಡೆದ ದುರಂತ. ಭಾರತಕ್ಕೆ ಮುಸಲ್ಮಾನರ ದಾಳಿಯಾದ ‌ಸಂದರ್ಭದಲ್ಲಿಯೇ ಇಂತಹ ದುರಂತ ಕೃತ್ಯಗಳು ನಮ್ಮ ದೇಶದಲ್ಲಿ ನಡೆದು ಹೋಗಿವೆ.

ಹೀಗೆ ಮಸೀದಿಗಳ ಅಡಿಯಲ್ಲಿ ಹುದುಗಿ ಹೋಗಿರುವ ಹಿಂದೂ ದೇವಾಲಯಗಳ ಸತ್ಯಗಳು ಕಾಲ ಕಳೆದಂತೆ ತನ್ನ ಗುರುತನ್ನು ಎದ್ದು ನಿಲ್ಲುವ ಹಾಗೆ ಮಾಡುತ್ತಿರುವುದು, ಆ ಮೂಲಕ ಹಿಂದೂ ಧರ್ಮ, ದೇವರಿಗಾದ ಅನ್ಯಾಯಗಳು ಬೆಳಕಿಗೆ ಬರುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೊಸತೇನಲ್ಲ. ಸಣ್ಣ ಸಣ್ಣ ದೇವಾಲಯಗಳಿಂದ ಹಿಡಿದು, ಅಯೋಧ್ಯೆಯ ಶ್ರೀರಾಮ ಮಂದಿರದ ವರೆಗೆ ಇಂತಹ ಇತಿಹಾಸವಿರುವುದನ್ನು ನಾವು ಕಾಣಬಹುದಾಗಿದೆ.

ಅಯೋಧ್ಯೆಯ ಬಳಿಕ ವಾರಣಾಸಿಯ ಜ್ಞಾನವಾಪಿಯೂ ಹಿಂದೂ ದೇವಾಲಯವಿದ್ದ ಕುರುಹನ್ನು ಹೊಂದಿದ್ದು, ಇದರ ಮೇಲೆ ಮಸೀದಿ ನಿರ್ಮಾಣ ಮಾಡಲಾಗಿದೆ ಎನ್ನುವ ಕೂಗು ಬಹುಕಾಲದ್ದು. ಅಯೋಧ್ಯೆಯ ಶ್ರೀರಾಮನಿಗೆ ಮಸೀದಿಯಡಿಯಿಂದ ಮುಕ್ತಿ ದೊರೆತ ಬಳಿಕ, ಹೀಗೆಯೇ ಅನ್ಯಾಯಕ್ಕೆ ಒಳಗಾದ ದೇವಾಲಯಗಳಿಗೆ ತಮಗೂ ಮುಕ್ತಿ ದೊರೆಯಬಹುದು ಎಂಬ ಆಸೆ ಮೊಳಕೆಯೊಡೆದಿದೆ. ಅದರಂತೆ ವಾರಣಾಸಿಯ ಜ್ಞಾನವಾಪಿ ಮಸೀದಿಯನ್ನು ಹಿಂದೂ ದೇವಾಲಯದ ಮೇಲೆ ಕಟ್ಟಲಾಗಿದೆಯೇ ಎನ್ನುವ ಬಗ್ಗೆ ಸರ್ವೇ ನಡೆಸಲು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುವುದಕ್ಕೆ ಅನುಮತಿ ನೀಡಿದ್ದು, ಆ ಮೂಲಕ ಹಿಂದೂಗಳು ಸಲ್ಲಿಸಿದ್ದ ಅರ್ಜಿಗೆ ನ್ಯಾಯ ದೊರಕಿದಂತಾಗಿದೆ. ಅಲಹಾಬಾದ್ ಹೈಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನು ಪ್ರಶ್ನೆ ಮಾಡಿ ಮುಸಲ್ಮಾನರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ ಘನ ನ್ಯಾಯಾಲಯ ಅಲಹಾಬಾದ್ ಹೈ ಕೋರ್ಟ್ ನೀಡಿದ್ದ ಆಜ್ಞೆಗೆ ತಡೆ ನೀಡಲು ನಿರಾಕರಿಸಿದೆ. ಜೊತೆಗೆ ಯಾವುದೇ ಆಕ್ರಮಣಕಾರಿ ನೀತಿಯನ್ನು ಅನುಸರಿಸದೆ ಈ ಸರ್ವೇ ಕಾರ್ಯವನ್ನು ನಡೆಸುವಂತೆಯೂ ಕೋರ್ಟ್ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಇಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ವಾರಣಾಸಿಯಲ್ಲಿರುವ ಹದಿನೇಳನೇ ಶತಮಾನದ ಮಸೀದಿಯನ್ನು, ಹಿಂದೂ ದೇಗುಲದ ನಿರ್ಮಾಣದ ಮೇಲೆ ಕಟ್ಟಲಾಗಿದೆಯೇ ಎಂಬುದಾಗಿ ಸಮೀಕ್ಷೆ ನಡೆಸಲು ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಎಎಸ್‌ಐಯು ತನ್ನ ವೈಜ್ಞಾನಿಕ ಸಮೀಕ್ಷೆ ಕಾರ್ಯವನ್ನು ಆರಂಭ ಮಾಡಿದೆ. ಇಂದು ಬೆಳಗ್ಗಿನಿಂದಲೇ ಇಲಾಖೆ ಈ ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದು, ಇದು ಸಂಜೆ ಐದು ಗಂಟೆಯ ವರೆಗೂ ನಡೆಯಲಿದೆ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪಿಗೆ ಮುಸ್ಲಿಂ ಸಮುದಾಯ ಪ್ರತಿಕ್ರಿಯೆ ನೀಡಿದ್ದು, ಇದು ಹಳೆ ಗಾಯಗಳನ್ನು ಮತ್ತೆ ಕೆದಕುತ್ತಿದೆ ಎಂದು ತಿಳಿಸಿವೆ. ಆ ಮೂಲಕ ತಮ್ಮ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿಯೂ ತಿರಸ್ಕೃತವಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ.

ಒಟ್ಟಿನಲ್ಲಿ ದೇಶದಲ್ಲಿ ಹಿಂದೂ ಧಾರ್ಮಿಕ ನೆಲೆಗಳ ಮೇಲೆ ಮುಸ್ಲಿಂ ಪಾರುಪತ್ಯ ‌ಸ್ಥಾಪಿತವಾದ ಕುಕೃತ್ಯಗಳು ಹೆಚ್ಚು ಪ್ರಮಾಣದಲ್ಲಿ ಮುನ್ನೆಲೆಗೆ ಬರುವಂತಾಗಿದೆ. ಹಿಂದೂ ದೇವಾಲಯಗಳನ್ನು ಕೆಡವಿ, ಅದರ ಮೇಲೆ ತಮ್ಮ ನೆಲೆಗಳನ್ನು, ಗುರುತುಗಳನ್ನು ಸ್ಥಾಪಿಸಿರುವ ಇಸ್ಲಾಂ ಧೋರಣೆಗಳು ಬಯಲಾಗುತ್ತಿವೆ. ಮುಸ್ಲಿಂ ಆಕ್ರಮಣದಿಂದ ಭಾರತದ ಸಂಸ್ಕೃತಿ ಯಾವ ಪ್ರಮಾಣದಲ್ಲಿ ಮಣ್ಣಿನೊಳಗೆ ಹುದುಗಿ ಹೋಗಿದೆ ಎಂಬುದಕ್ಕೂ ಇಂತಹ ಕುರುಹುಗಳೇ ಸಾಕ್ಷ್ಯ ನುಜಿಯುತ್ತಿವೆ ಎನ್ನುವುದು ಸತ್ಯ.

Tags

Related Articles

Close