ಪ್ರಚಲಿತ

ಬಿಜೆಪಿ ಗೆದ್ದಮೇಲೆ ಚರ್ಚ್ ದಾಳಿಯಿಂದ ಕಾಂಗ್ರೆಸ್ ನಾಯಕರ ಸುಳ್ಳು ಮುಖ ಬಯಲು!! ನಡೆದದ್ದೇನು ಗೊತ್ತಾ?!

ಮೊನ್ನೆ ತಾನೇ ಚುನಾವಣೆಯ ಫಲಿತಾಂಶ ಹೊರಬಿದ್ದು ಭಾರತೀಯ ಜನತಾ ಪಕ್ಷಕ್ಕೆ ಅತೀ ಹೆಚ್ಚಿನ ಸ್ಥಾನ ದೊರಕ್ಕುತ್ತಿದ್ದಂತೆಯೇ ಇತ್ತ ಕೋಮುಗಲಭೆ ಸೃಷ್ಠಿಸುವಂತಹ ಕೆಲವೊಂದು ಹಳೆಯ ವಿಡೀಯೋಗಳು ಕೆಲ ಫೋಟೋಸ್‍ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಜನರನ್ನು ತಪ್ಪುದಾರಿಗೆಳೆಯುವ ಉದ್ಧೇಶ ಕಾಂಗ್ರೆಸ್ಸಿಗರಿಂದ ನಡೆಯುತ್ತಿದೆ!! ಈಗಾಗಲೇ ಬಿಜೆಪಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಿದ್ದಂತೆ ಎಲ್ಲಿ ಇಡೀ ಕರ್ನಾಟಕ ಶಾಂತಿಯುತವಾಗುತ್ತದೆ ಎಂಬ ದುರುದ್ಧೇಶದಿಂದ ಈ ರೀತಿಯಾಗಿ ವರ್ತಿಸುತ್ತಿದ್ದಾರೆ!!

ಘಟನೆ ನಡೆದು ಸುಮಾರು ವರ್ಷಗಳು ಕಳೆದರೂ ಸುಖಾಸುಮ್ಮನೆ ವಿಡೀಯೋ ಹಾಗೂ ಫೋಟೋಗಳನ್ನು ವೈರಲ್ ಆಗುವುದರ ಹಿಂದೆ ದೊಡ್ಡ ರಹಸ್ಯವೇ ಅಡಗಿದಂತೆ ಎಂದು ಕಾಣುತ್ತಿದೆ!! ಯಾವಾಗ ಚುನಾವಣೆ ಮುಗಿದು ಮತಎಣಿಕೆ ಆರಂಭವಾಯಿತೋ ಉಡುಪಿ ಮತ್ತು ಮಂಗಳೂರಿನಲ್ಲಿ ಭಾರತೀಯ ಜನತಾ ಪಾರ್ಟಿ ಅತೀ ಹೆಚ್ಚಿನ ಸ್ಥಾನಗಳಿಸಿತೋ ಅಂದಿನಿಂದ ವಿಡೀಯೋ ಮತ್ತು ಕೆಲವು ಫೋಟೋಸ್‍ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದಕ್ಕೆ ಕೆಲವು ಪ್ರಮುಖ ಕಾರಣಗಳಿವೆ!!

ಕರ್ನಾಟಕದಲ್ಲಿ ಕೋಮುಗಲಭೆಯನ್ನು ಸೃಷ್ಠಿಸಲು ಈ ಬಾರಿ ಮತ್ತೆ ಕಾಂಗ್ರೆಸ್ ಸರಕಾರ ಪಿತೂರಿ ನಡೆಸುತ್ತಿದೆ!! ಯಾವಾಗ ಬಿಜೆಪಿ ಬಹುಮತದತ್ತ ದಾಪುಗಾಲು ಹಾಕಿದೆ ಎಂಬ ಮಾಹಿತಿ ಸಿಕ್ಕಿತೋ ಆ ಕ್ಷಣದಿಂದ ಕಾಂಗ್ರೆಸ್ಸಿಗರು ಬಿಜೆಪಿಯ ವಿರುದ್ಧ ಇಂತಹ ಕೃತ್ಯವನ್ನು ಎಸಗಲು ತಯಾರಿರುವ ಸುದ್ಧಿ ಈಗಾಗಲೇ ಎಲ್ಲೆಡೆ ಹಬ್ಬಿದೆ!!

ಯಾವಾಗ ಇಂತಹ ಸುದ್ಧಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯತೊಡಗಿತೋ ಆ ಕ್ಷಣದಿಂದ ಮಾಧ್ಯಮದವರು ಮತ್ತು ಪೊಲೀಸ್ ಇಲಾಖೆಯವರು ಈ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಸ್ಪಷ್ಟತೆಯನ್ನು ತಿಳಿಯಲು ಹುಡುಕಾಟವನ್ನು ಆರಂಭಿಸುತ್ತಾರೆ!! ಆದರೆ ಈ ಬಗ್ಗೆ ವಿಚಾರಣೆಯನ್ನು ನಡೆಸಿದಾಗ ಆ ಘಟನೆ ನಡೆದು ಅದೆಷ್ಟೋ ವರ್ಷಗಳು ಕಳೆದಿರುವ ಮಾಹಿತಿ ದೊರಕುತ್ತದೆ!! ಕೋಮು ಗಲಭೆಯನ್ನು ಸೃಷ್ಠಿಸಲು ಕಾಂಗ್ರೆಸ್ಸಿಗರು ಇಂತಹ ಕೃತ್ಯವನ್ನು ಎಸಗಿದ್ದಾರೆ ಎಂಬ ಮಾಹಿತಿ ಹೊರ ಬೀಳುತ್ತದೆ!!

ಬಿಜೆಪಿ ಮತ್ತು ಸಂಘ ಪರಿವಾರ ಕಾರ್ಯಕರ್ತರು ಮಂಗಳೂರಿನ ಚರ್ಚ್ ಮೇಲೆ ದಾಳಿ ನಡೆಸಿ ಬಿಜೆಪಿ ಧ್ವಜವನ್ನು ಹಿಡಿದು ಪಕ್ಷದ ವಿಜಯವನ್ನು ಆಚರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಮೊಹಮ್ಮದ್ ಮೊಹ್ಸಿನ್ ಎಂಬ ವ್ಯಕ್ತಿಯೊಬ್ಬ ತನ್ನ  ಟ್ವಿಟರ್‍ನಲ್ಲಿ ಮೇ 16 ರಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆ ವಿಡೀಯೊವನ್ನು ಪರಿಶೀಲಿಸಿದಾಗ ಅದು ಸುಮಾರು 10 ವರ್ಷ ಹಳೆಯದ್ದಾಗಿತ್ತು!! ವೀಡಿಯೋದಲ್ಲಿ ತೋರಿಸಲಾಗಿರುವ ಚರ್ಚ್ ಉಳ್ಳಾಲ ಬಳಿಯ ಪೆರ್ಮನೂರ್‍ನಲ್ಲಿರುವ ಸೇಂಟ್ ಸೆಬಾಸ್ಟಿಯನ್ ಚರ್ಚ್ ಆಗಿದ್ದು ಆ ಯೂಟ್ಯೂಬ್‍ನಲ್ಲಿದ್ದ ವೀಡಿಯೋದಲ್ಲಿ ಟಿವಿ9 ಲೋಗೋ ಇದ್ದಿರುವುದು ಕಂಡುಬರುತ್ತವೆ!!

ಮೇಲಿನ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರಗೊಂಡಿದ್ದು ,  ಉದ್ದೇಶಪೂರ್ವಕವಾಗಿ ಟ್ವಿಟರ್ ಮತ್ತು ವಾಟ್ಸಾಪ್ ಅಪ್ಲಿಕೇಶನ್ಗಳ ಮೂಲಕ ವೈರಲ್ ಆಗುತ್ತಿದೆ!! ಸೇಂಟ್ ಲಾರೆನ್ಸ್ ಚರ್ಚ್ ಬೋಂದೆಲ್ ಮುಂದೆ ಬಿಜೆಪಿ ಬೆಂಬಲಿಗರನ್ನು ತೋರಿಸುವ ಒಂದು ಪ್ರತ್ಯೇಕ ಛಾಯಾಚಿತ್ರವನ್ನು ಮೇ 15 ರ ಸಂಜೆ ಪ್ರಸಾರ ಮಾಡಲಾಯಿತು. ಈ ಚಿತ್ರವು ಬಿಜೆಪಿ ಬೆಂಬಲಿಗರನ್ನು ಚರ್ಚ್‍ನ ಮುಂಭಾಗದಲ್ಲಿ ತೋರಿಸುತ್ತದೆ!! ಅವರ ಪಕ್ಷದ ವಿಜಯವನ್ನು ಆಚರಿಸಿದ್ದರು ಹೊರತು ಇನ್ನೇನೂ ಅಲ್ಲ ಎಂಬುದನ್ನು ಅರಿತುಕೊಳ್ಳಬೇಕು!!

ಆದರೆ ಆ ಪೋಟೋ ಮತ್ತು ವೀಡಿಯೋ ಉದ್ದೇಶಪೂರ್ವಕವಾಗಿ ಹರಡಿರುವ ಸಂದೇಶ!! ಬಿಜೆಪಿ ಕಾರ್ಯಕರ್ತರು ಈಗಾಗಲೇ ಚುನಾವಣೆಯಲ್ಲಿ ಜಯಗಳಿಸಿದ ನಂತರ ಸಮಾಜದಲ್ಲಿ ಶಾಂತಿಯನ್ನು ಕಾಪಾಡಲು ಪ್ರಾರಂಭಿಸಿದ್ದಾರೆ!! ವಾಸ್ತವ ಚೆಕ್ ಮಾಡಿದ ನಂತರ, ಆ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು ತಮ್ಮ ಗೆಲುವಿನ ಸಂಭ್ರಮಾಚರಣೆಯನ್ನು ಆಚರಿಸಲು ಒಂದು ಕಾರಣವಿತ್ತು ಎಂದು ತಿಳಿದುಬಂದಿದೆ.

ಸೇಂಟ್ ಲಾರೆನ್ಸ್ ಚರ್ಚ್‍ಗೆ ಕಾವೂರ್, ಪಡವಿನಂಗಡಿ ಮತ್ತು ವಾಮಂಜೂರು ಮಾರ್ಗ ಸಂಪರ್ಕ ಹೊಂದಿದ್ದು ಇದು ಎಲ್ಲಾ ಮೂರು ಸ್ಥಳಗಳು ಮತ ಎಣಿಕೆಯ ಕೇಂದ್ರಕ್ಕೆ ಬಹಳ ಸಮೀಪದಲ್ಲಿದ್ದು ಭದ್ರತಾ ಕಾರಣಗಳಿಗಾಗಿ ಅಲ್ಲಿನ ಹತ್ತಿರ ಕೆಲವು ಪ್ರದೇಶಗಳನ್ನು ಬ್ಲಾಕ್ ಮಾಡಿದ್ದರು!! ಯಾವುದೇ ಘಟನೆಗಳು ಆಗಬಾರದು ಎಂದು ಪೋಲೀಸರು ನಿರ್ಬಂಧಿಸಿದ್ದರು!! ಆ ಕಾರಣದಿಂದಾಗಿ ಬಿಜೆಪಿ ಕಾರ್ಯಕರ್ತರು ಚರ್ಚ್‍ಗೆ ಯಾವುದೇ ಹಾನಿ ಮಾಡದೆ ಅಲ್ಲಿ ಗೆದ್ದ ಸಂಭ್ರವನ್ನು ಆಚರಿಸುತ್ತಿದ್ದರು ಅಷ್ಟೇ!!

ಹಾಗಾಗಿ ಈ ಬಾರಿ ಬಿಜೆಪಿ ಕಾರ್ಯಕರ್ತರನ್ನು ಧೂಷಿಸುವಲ್ಲಿ ಯಾವುದೇ ಕಾರಣವಿಲ್ಲ. ಅದಲ್ಲದೆ ಈ ರೀತಿ ಘಟನೆಗಳು ನಡೆದಿದ್ದರೆ, ಹತ್ತಿರದ ಪೋಲೀಸ್ ಅಧಿಕಾರಿಗಳು ಸಲ್ಲಿಸಿದ ಒಂದು ಪ್ರಕರಣವೂ ಇಲ್ಲ. ಇದು ಸುಖಾಸುಮ್ಮನೆ ಬಿಜೆಪಿ ಕಾರ್ಯಕರ್ತರನ್ನು  ಗುರಿಯಾಗಿಸಿ  ಕಾಂಗ್ರೆಸ್‍ನವರು ಗಲಭೆ ಎಬ್ಬಿಸಬೇಕು ಎನ್ನುವ ಉದ್ಧೇಶದಿಂದ ಈ ರೀತಿಯಾಗಿ ಮಾಡಿದ್ದಾರೆ ಎನ್ನುವುದು ಸ್ವತಃ ಪೊಲೀಸ್ ಇಲಾಖೆಯೇ ಸ್ಪಷ್ಪಡಿಸಿದೆ!!

ಅದಲ್ಲದೆ ಮೊನ್ನೆ ತಾನೆ ಗೆದ್ದಿರುವ ಬಿಜೆಪಿಯ ಕಾರ್ಯಕರ್ತರು ಸಂಭ್ರಮ ಆಚರಿಸುವ ಸಂಧರ್ಭದಲ್ಲಿ ಹಲವಾರು ಹಿಂದುಗಳಿಗೆ ಈ  ಜಾತ್ಯಾತೀತರು ಮನಬಂದಂತೆ ವರ್ತಿಸಿರುವುದು ಯಾರ ಕಣ್ಣಿಗೂ ಕಾಣದಿರುವುದು ವಿಪರ್ಯಾಸವೇ ಸರಿ!! ಹಿಂದೂಗಳು ಮಾತ್ರ ತಾವು ಯಾವ ತಪ್ಪು ಮಾಡದಿದ್ದರೂ ಮಾಡದ ತಪ್ಪಿಗೆ ಇಡೀ ಸಾಮಾಜಿಕ ಜಾಲತಾನದಲ್ಲಿ ಇಂತಹ ವಿಡೀಯೋ ಫೋಟೋಸ್‍ಗಳನ್ನು ಅಪ್‍ಲೋಡ್ ಮಾಡುತ್ತಾರೆ!! ಮೊದಲು ಸುದ್ಧಿ ಹಬ್ಬಿಸುವವರನ್ನು ಹಿಡಿದು ಜೈಲಿಗಟ್ಟಿದರೆ ದೇಶ ಸುಭೀಕ್ಷವಾಗುವುದು!!

source: http://www.daijiworld.com/news/newsDisplay.aspx?newsID=509922#.Wv5JmMuV0G4.whatsapp

  • ಪವಿತ್ರ
Tags

Related Articles

Close