ಪ್ರಚಲಿತ

ವಿಶ್ವಕ್ಕೆ ಭಾರತವೇ ಫ್ಯಾಶನ್ ಗುರು ಅನ್ನೋದಕ್ಕೆ ಸಾಕ್ಷಿ ಇಲ್ಲಿದೆ!

ಭಾರತದ ಸಾಂಸ್ಕೃತಿಕ ಹಿರಿಮೆಯನ್ನು ಜಗತ್ತಿನ ಯಾವ ದೇಶವೂ ಹೊಂದಿಲ್ಲ. ಅಷ್ಟೊಂದು ಶ್ರೀಮಂತ ಪರಂಪರೆ ನಮ್ಮದು. ನಮ್ಮ ಪೂರ್ವಜರು ಬಹಳಷ್ಟು ಹಿಂದೆಯೇ ಅಳವಡಿಸಿಕೊಂಡಿದ್ದ ಸಂಸ್ಕೃತಿಯನ್ನು ವಿದೇಶಿಗರು ಇಂದು ಫ್ಯಾಷನ್ ಹೆಸರಿನಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಭಾರತೀಯರು ಅದನ್ನು ಬಹಳಷ್ಟು ಹಿಂದೆಯೇ ಬಳಕೆ ಮಾಡುತ್ತಿದ್ದರು ಎನ್ನುವುದಕ್ಕೆ ನಮ್ಮ ಶಿಲ್ಪಕಲಾ ವೈಭವಗಳು ಸಾಕ್ಷ್ಯ ನುಡಿಯುತ್ತವೆ.

ಪ್ರಧಾನಿ ಮೋದಿ ಅವರು ಕೆಲ ದಿನಗಳ ಹಿಂದೆ ದೆಹಲಿಯ ಭಾರತ ಮಂಟಪದಲ್ಲಿ ಮೊದಲ ರಾಷ್ಟ್ರೀಯ ಕ್ರಿಯೇಟರ್ ಪುರಸ್ಕಾರಗಳನ್ನು ಪ್ರದಾನಿಸಿ ಮಾತನಾಡಿ, ಫ್ಯಾಷನ್ ಜಗತ್ತಿನಲ್ಲಿ ಭಾರತವು ಬಹಳಷ್ಟು ಹಿಂದಿನಿಂದಲೂ ಅಗ್ರ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.

ಮಿನಿ ಸ್ಕರ್ಟ್ ಧರಿಸುವುದನ್ನು ಆಧುನೀಕತೆ ಎಂದು ತಿಳಿದುಕೊಂಡಿದ್ದೇವೆ. ಆದರೆ ಕೊನಾರ್ಕ್‌ಗೆ ತೆರಳಿ ನೋಡಿದರೆ ಅಲ್ಲಿನ ನೂರಾರು ವರ್ಷಗಳ ಹಳೆಯ ದೇವಾಲಯಗಳ‌ ಶಿಲ್ಪಕಲೆಗಳು ಈ ರೂಢಿ ಬಹಳ ಹಿಂದೆಯೇ ನಮ್ಮಲ್ಲಿತ್ತು ಎನ್ನುವುದಕ್ಕೆ ಸಾಕ್ಷಿ ನುಡಿಯುತ್ತವೆ. ಭಾರತದ ಪುರಾತನ ಐಹಿತ್ಯ ಹೊಂದಿರುವ ದೇವಾಲಯಗಳಲ್ಲಿನ ಪ್ರಾಚೀನ ಶಿಲ್ಪಗಳು ಸ್ಕರ್ಟ್ ಧರಿಸಿ, ಬ್ಯಾಗ್ ಹಿಡಿದಿರುವುದನ್ನು ನಾವು ಕಾಣಬಹುದು ಎಂದಿದ್ದಾರೆ.

ಪ್ರಸ್ತುತ ಪರ್ಸ್‌ ಕೈಯಲ್ಲಿ ಹಿಡಿದು ನಡೆಯುವ ಮಹಿಳೆಯರು ಅದನ್ನು ಫ್ಯಾಶನ್ ಎಂದುಕೊಳ್ಳುತ್ತಾರೆ. ಆದರೆ, ಕೊನಾರ್ಕ ನಲ್ಲಿನ ಒಂದು ಪ್ರತಿಮೆ ಸ್ಕರ್ಟ್ ಧರಿಸಿ, ಬ್ಯಾಗ್ ಹಿಡಿದಿರುವುದನ್ನು ನಾವು ಕಾಣಬಹುದು. ನಮ್ಮ ಪೂರ್ವಜರು ಫ್ಯಾಶನ್ ಜ್ಞಾನವನ್ನು ಬಹಳಷ್ಟು ಹಿಂದೆಯೇ ಹೊಂದಿದ್ದರು ಎಂದು ಈ ಶಿಲ್ಪಕಲಾ ಪ್ರೌಢಿಮೆಗಳೇ ಹೇಳುತ್ತವೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಫ್ಯಾಶನ್ ಅನ್ನು ಪಾಶ್ಚಿಮಾತ್ಯರು ಜಗತ್ತಿಗೆ ಪರಿಚಯಿಸಿದರು ಎಂದು ಬಿಂಬಿಸಲಾಗುತ್ತಿದೆ. ಅವರಿಗಿಂತ‌ ಮೊದಲೇ ಭಾರತದಲ್ಲಿ ಇಂತಹ ಸಂಸ್ಕೃತಿ ರೂಢಿಯಲ್ಲಿ ಇತ್ತು ಎಂದು ದೇಗುಲಗಳ ವಾಸ್ತುಶಿಲ್ಪಗಳ ಮೂಲಕ ತಿಳಿಯಬಹುದು ಎಂದು ಪಿ ಎಂ ಮೋದಿ ತಿಳಿಸಿದ್ದಾರೆ. ಹಾಗೆಯೇ ಹೈ ಹೀಲ್ಡ್ ಚಪ್ಪಲಿಗಳನ್ನು ಧರಿಸುವ‌ ಸಂಸ್ಕೃತಿ ಸಹ ನಮ್ಮಲ್ಲಿ ಹಿಂದಿನಿಂದಲೇ ರೂಢಿಯಲ್ಲಿತ್ತು ಎಂಬುದನ್ನು ತೆಲಂಗಾಣ ರಾಮಪ್ಪ ದೇವಾಲಯದ ವಾಸ್ತುಶಿಲ್ಪ ಗಳಲ್ಲಿ ಕಾಣಬಹುದಾಗಿದೆ. ದರ್ಪಣ ಬಳಕೆ, ಹೇರ್ ಡಿಸೈನ್ಸ್, ಮುಖದ ಸೌಂದರ್ಯ ವೃದ್ಧಿಗೆ ಸೌಂದರ್ಯ ವರ್ಧಕಗಳ ಬಳಕೆ ಇತ್ಯಾದಿಗಳ ಶಿಲ್ಪಗಳೂ ಇದ್ದು, ಇದು ಭಾರತದಲ್ಲಿ ಫ್ಯಾಶನ್ ಬಹಳ ಮುಂಚಿನಿಂದಲೇ ಕಾಣಬಹುದು.

Tags

Related Articles

Close