ಪ್ರಚಲಿತ

ಪ್ರಧಾನಿ ಮೋದಿ ಅವರನ್ನು ಭೂತಾನ್ ಹೇಗೆ ಗೌರವಿಸಿತು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತ ಮಾತ್ರವಲ್ಲ ಇಡೀ ಪ್ರಪಂಚವೇ ಗೌರವ ನೀಡುತ್ತದೆ.‌ ವಿಶ್ವಕ್ಕೆಯೇ ಪ್ರಧಾನಿ ಮೋದಿ ಅವರೊಬ್ಬ ಮಾದರಿ ನಾಯಕ. ಆವರ ನಡೆ, ನುಡಿ ಅನುಕರಣೀಯ ಎನ್ನುವುದು ಆಗಾಗ್ಗೆ ಸಾಬೀತಾಗುತ್ತಲೇ ಇರುತ್ತದೆ.

ವಿಶ್ವದ ಅನೇಕ ರಾಷ್ಟ್ರಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ದೇಶದ ಅತ್ಯುನ್ನತ ನಾಗರಿಕ ಗೌರವ ಸೇರಿದಂತೆ, ಇನ್ನೂ ಹಲವಾರು ಪುರಸ್ಕಾರಗಳನ್ನು ನೀಡಿ ಗೌರವಿಸಿವೆ ಎಂದರೆ, ಪ್ರಧಾನಿ ಮೋದಿ ಅವರ ಶಕ್ತಿ, ಅವರ ಗುಣ ಎಂತದ್ದು ಎನ್ನುವುದು ನಮಗೆ ಅರಿವಾಗುತ್ತದೆ. ಕಳೆದ ಹತ್ತು ವರ್ಷಗಳ ಹಿಂದೆ ಪ್ರಪಂಚ ಗಣನೆಗೆಯೇ ತೆಗೆದುಕೊಂಡಿರಲಿಲ್ಲ. ಆದರೆ ಈಗ ಪ್ರಪಂಚದ ಪ್ರಮುಖ ನಾಯಕ ರಾಷ್ಟ್ರಗಳಲ್ಲಿ ಭಾರತ ಸಹ ಅಗ್ರಗಣ್ಯವಾಗಿರುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಉಪಕ್ರಮಗಳು, ದೂರದೃಷ್ಠಿ, ಮುಂದಾಲೋಚನೆಯೇ ಕಾರಣ ಎನ್ನುವುದು ನಿರ್ವಿವಾದ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್, ಯುಎಇ, ಸೌದಿ ಅರೇಬಿಯ ಮೊದಲಾದ ದೇಶಗಳನ್ನು ಒಳಗೊಂಡಂತೆ ಇನ್ನೂ ಹಲವಾರು ರಾಷ್ಟ್ರಗಳು ಪ್ರಧಾನಿ ಮೋದಿ ಅವರಿಗೆ ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿ ‘ಶ್ರೇಷ್ಠ ನಾಗರಿಕ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಈಗ ಭೂತಾನ್ ಸಹ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ದೇಶದ ಉನ್ನತ ಪ್ರಶಸ್ತಿ ‘ಅತ್ಯುತ್ತಮ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಆ ಮೂಲಕ ಭೂತಾನ್ ‌ನ ಸರ್ವಶ್ರೇಷ್ಟ ಪ್ರಶಸ್ತಿ ‘ಆರ್ಡರ್ ಆಫ್ ಡ್ರುಕ್ ಗ್ಯಾಲ್ಪೋ’ ಪಡೆದ ಮೊದಲು ವಿದೇಶಿ ಮುಖ್ಯಸ್ಥ ಎಂಬ ಕೀರ್ತಿಗೂ ಪ್ರಧಾನಿ ಭಾಜನರಾಗಿದ್ದಾರೆ. ಈ ಪುರಸ್ಕಾರವನ್ನು ಪ್ರಧಾನಿ ಮೋದಿ ಅವರಿಗೆ ಅಲ್ಲಿನ ರಾಜ ಪ್ರದಾನಿಸಿದ್ದಾರೆ.

ಈ ಪ್ರಶಸ್ತಿಯನ್ನು ಜೀವಮಾನದ ಸಾಧನೆಗಾಗಿ ಪ್ರದಾನ ಮಾಡಲಾಗುತ್ತದೆ. ಭೂತಾನ್ ದೇಶದ ಸರ್ವ ಶ್ರೇಷ್ಟ ಪ್ರಜೆಗೆ ಇದನ್ನು ನೀಡಲಾಗುತ್ತದೆ. ಇದು ಆ‌ ದೇಶದ ಎಲ್ಲಾ ಗೌರವ, ಪುರಸ್ಕಾರಗಳಿಗಿಂತಲೂ ಹೆಚ್ಚಿನ ಮೌಲ್ಯವುಳ್ಳದ್ದಾಗಿದೆ‌. ಈ ವರೆಗೆ ಈ ಪ್ರಶಸ್ತಿಯನ್ನು ಕೇವಲ‌ ನಾಲ್ಕೇ‌ ನಾಲ್ಕು ಮಂದಿಗೆ ನೀಡಲಾಗಿದೆ. ಈ ಪ್ರಶಸ್ತಿ ಪಡೆದ ವಿದೇಶಿ ಸರ್ಕಾರದ ಮೊದಲ ನಾಯಕ ಎಂಬ ಕೀರ್ತಿಯೂ ಪ್ರಧಾನಿ ಮೋದಿ ಅವರಿಗೆ ಲಭಿಸಿದೆ.

ಪ್ರಧಾನಿ ಮೋದಿ ಅವರಿಗೆ ಇದೇ ಸಂದರ್ಭದಲ್ಲಿ ಭೂತಾನ್ ರಾಜ ಖಾಸಗಿ ಭೋಜನ ಏರ್ಪಡಿಸಿದ್ದರು. ಈವರೆಗೆ ಯಾವುದೇ ದೇಶದ ಯಾರೊಬ್ಬ ಪ್ರಭಾವಿಗೂ ಭೂತಾನ್ ದೊರೆ ಭೋಜನ ಏರ್ಪಡಿಸಿದ ಇತಿಹಾಸವೇ ಇಲ್ಲವಾಗಿದ್ದು, ಈ ಬಾರಿ ಪ್ರಧಾನಿ ಮೋದಿ ಅವರಿಗೆ ಖಾಸಗಿ ಭೋಜನ ನೀಡುವ ಮೂಲಕ ಅವರ ವಿಶ್ವಾಸಾರ್ಹತೆಗೆ ವಿಶೇಷ ಗೌರವ ಸಲ್ಲಿಕೆ ಮಾಡಿದಂತಾಗಿದೆ. ಹಾಗೆಯೇ, ಕೆ5 ರೆಸಿಡೆನ್ಸಿ ಲಿಂಗಕಾನ ಪ್ಯಾಲೆಸ್‌ನಲ್ಲಿ ಪ್ರಧಾನಿ ಮೋದಿ ಅವರಿಗೆ ಆತಿಥ್ಯ ನೀಡಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಈ ಸ್ಥಳದಲ್ಲಿ ಭಾರತದ ಪ್ರಧಾನಿ ಒಬ್ಬರಿಗೆ ಆತಿಥ್ಯ ನೀಡುತ್ತಿರುವುದಾಗಿದೆ.

Tags

Related Articles

Close