ಪ್ರಚಲಿತ

ಬಿಗ್ ಬ್ರೇಕಿಂಗ್: 10% ಸರ್ಕಾರ ಎಂಬ ಮೋದಿ ಆರೋಪವನ್ನು ಒಪ್ಪಿಕೊಂಡ ಸಿದ್ದರಾಮಯ್ಯ..! ನಿಜವಾಯಿತು ಮಾಧ್ಯಮಗಳ ಸಮೀಕ್ಷೆ!!

ಪ್ರಧಾನಿ ನರೇಂದ್ರ ಮೋದಿಯವರು ಏನೇ ಹೇಳಲಿ. ಅದಕ್ಕೊಂದು ಅರ್ಥವಿರುತ್ತೆ. ಆಧಾರ ರಹಿತ ಆರೋಪವನ್ನು ನರೇಂದ್ರ ಮೋದಿ ಮಾಡೋದಿಲ್ಲ ಅನ್ನೋದು ಮತ್ತೆ ಸಾಭೀತಾಗಿದೆ. ಮೊನ್ನೆ ತಾನೇ ಬೆಂಗಳೂರಿನಲ್ಲಿ ಭಾರತೀಯ ಜನತಾ ಪಕ್ಷದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಆರ್ಭಟಿಸಿದ್ದರು. ಕರ್ನಾಟಕ ರಾಜ್ಯ ಕಾಂಗ್ರೆಸ್ 10% ಸರಕಾರ ಎಂದು ತೀವ್ರ ವಾಗ್ಧಾಳಿ ನಡೆಸಿದ್ದರು.

ಬೆಚ್ಚಿ ಬಿದ್ದಿತ್ತು ಕಾಂಗ್ರೆಸ್..,

ಮೋದಿ ಬೆಂಗಳೂರಿನಲ್ಲಿ ಆರ್ಭಟಿಸುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಚ್ಚಿ ಬಿದ್ದಿತ್ತು. ರಾಜ್ಯದಲ್ಲಿ ನಡೆಯುತ್ತಿರುವಂತಹಾ ಪಿನ್ ಟೂ ಪಿನ್ ದಾಖಲೆಗಳು ನರೇಂದ್ರ ಮೋದಿಯವರ ಬಳಿ ಇವೆ. ಎಷ್ಟು ಭ್ರಷ್ಟಾಚಾರವಾಗಿದೆ, ಎಷ್ಟು ಅನಾಚಾರಗಳಾಗಿವೆ ಎಂಬುವುದರ ಮಾಹಿತಿಯೂ ಪ್ರಧಾನಿಯವರ ಬಳಿ ಇವೆ. ಮುಖ್ಯವಾಗಿ ರಾಜ್ಯದ ಭಾರತೀಯ ಜನತಾ ಪಕ್ಷದ ನಾಯಕರಿಗೆ ಗೊತ್ತಿಲ್ಲದ ಮಾಹಿತಿಗಳೇ ಪ್ರಧಾನಿ ನರೇಂದ್ರ ಮೋದಿಯವರ ಕೈಯಲ್ಲಿ ಇದೆ.

ಹೀಗಾಗಿಯೇ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕಂಡರೆ ಭಾರೀ ಭಯ ಉಂಟಾಗೋದು. ಅವರ ಪ್ರತಿಯೊಂದು ಹೇಳಿಕೆಗೂ ಒಂದೊಂದು ಉತ್ತರವನ್ನು ನೀಡುತ್ತಾ ನಮ್ಮದು ತಪ್ಪೇ ಇಲ್ಲ ಎಂದು ಹೇಳಿಕೊಂಡೇ ಬರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿ ಅಬ್ಬರಿಸಿದ್ದ ಅಷ್ಟೂ ಪ್ರಶ್ನೆಗಳಿಗೂ ಉತ್ತರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಹಿತ ಅದೆಷ್ಟೋ ಕಾಂಗ್ರೆಸ್ ಸಚಿವರುಗಳು ಈ ಒಂದು ಪ್ರಶ್ನೆಗೆ ಉತ್ತರಿಸಿಲ್ಲ. ಆ ಪ್ರಶ್ನೆಯೇ ಮೋದಿ ಆರೋಪಿಸಿದ್ದ 10% ಸರ್ಕಾರ ಎಂಬ ಪ್ರಶ್ನೆ.

ಹೌದು… ಪ್ರಧಾನಿ ಮೋದಿಯವರು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಗಂಭೀರ ಆರೋಪಗಳನ್ನೇ ನಡೆಸಿದ್ದರು. “ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಬೇಗೆಯಲ್ಲಿ ಬೇಯುತ್ತಿದೆ. ಇಲ್ಲಿನ ಮುಖ್ಯಮಂತ್ರಿ ಸಹಿತ ಎಲ್ಲಾ ಸಚಿವರುಗಳು ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದ್ದಾರೆ. ಇಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ 10% ಸರ್ಕಾರ. ಇಲ್ಲಿ ಬಿಡುಗಡೆಯಾಗುವ ಪ್ರತಿಯೊಂದು ಅನುದಾನದ ಮೇಲೂ 10% ಕಮಿಷನ್ ಅನ್ನು ಕಾಂಗ್ರೆಸ್ ಪಕ್ಷಕ್ಕೆ ಹಿಂತಿರುಗಿಸುವ ಕ್ರಮ ಇದೆ. ಈ ಸರ್ಕಾರದಿಂದ ಬಿಡುಗಡೆಯಾಗುವ ಪ್ರತಿಯೊಂದು ಅನುದಾನದಲ್ಲೂ ಭ್ರಷ್ಟಾಚಾರ ಅಡಗಿದೆ” ಎಂದು ಆರೋಪಿಸಿದ್ದರು.

ಮೋದಿ ಆರೋಪವನ್ನು ಒಪ್ಪಿಕೊಂಡ ಮುಖ್ಯಮಂತ್ರಿಗಳು..?

ಪ್ರಧಾನಿ ನರೇಂದ್ರ ಮೋದಿಯವರು ಆರೋಪಿಸಿದ್ದ ಅಷ್ಟೂ ಆರೋಪಗಳಿಗೂ ಉತ್ತರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ನಾಯಕರು ಈ 10% ಕಮಿಷನ್ ಬಗ್ಗೆ ಉತ್ತರಿಸಲೇ ಇಲ್ಲ. ಆದರೆ ಇಂದು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ಆರೋಪಗಳಿಗೆ ಪರೋಕ್ಷವಾಗಿ ಹೌದು ಎಂದಿದ್ದಾರೆ.

ಬೆಂಗಳೂರಿನ ಶಕ್ತಿ ಭವನದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮಾಧ್ಯಮ ಮಿತ್ರರು ಸುತ್ತುವರಿಯುತ್ತಾರೆ. ಈ ವೇಳೆ ಗಲಿಬಿಲಿಗೆ ಒಳಗಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರೋಕ್ಷವಾಗಿ ಮೋದಿ ಆರೋಪವನ್ನು ಒಪ್ಪಿಕೊಂಡಿದ್ದಾರೆ. “ಕಮಿಷನ್ ಬಗ್ಗೆ ದಾಖಲೆ ಇರುತ್ತೇನ್ರೀ? ಯಾರೋ ಲಂಚಾ ಪಡೆದಿದ್ದಾರೆ ಅಂತ ಇಟ್ಕೊಳ್ಳಿ, ಅದ್ಕೆಲ್ಲಾ ದಾಖಲೆ ಇಟ್ಟುಕೊಳ್ಳುತ್ತಾರಾ? ಹಾಗೇ ಕಮಿಷನ್ ತಗೊಂಡ್ರೆ ಅದಕ್ಕೆಲ್ಲಾ ದಾಖಲೆ ಇರೋಲ್ಲ. ನಮ್ಮ ಬಳಿ ಕಮಿಷನ್ ವ್ಯವಹಾರದ ಬಗ್ಗೆ ಯಾವುದೇ ದಾಖಲೆಗಳು ಇಲ್ಲಾ. ಆಗಿರಲೂ ಬಹುದು” ಎಂದು ಉತ್ತರಿಸಿದ್ದಾರೆ.

10% ಸರ್ಕಾರ ಎಂದಿದ್ದ ನಮೋ..!

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣ ಕಾಂಗ್ರೆಸ್ ಪಕ್ಷವನ್ನು ಅಕ್ಷರಷಃ ಬೆಚ್ಚಿ ಬೀಳಿಸಿತ್ತು. ಮೋದಿ ಮಾಡಿದ ಮೋಡಿಗೆ ಕಮಲ ಪಡೆಯ ಕಾರ್ಯಕರ್ತರು ಉತ್ಸಾಹದಲ್ಲಿ ತೇಲುತ್ತಿದ್ದರೆ ಕಾಂಗ್ರೆಸ್ ನಾಯಕರು ಮೋದಿ ಮಾಡಿದ ಆರೋಪಕ್ಕೆ ಹೇಗೆ ಉತ್ತರ ನೀಡೋದು ಎಂಬ ಗೊಂದಲದಲ್ಲಿ ಮುಳುಗಿದ್ದರು.

ಈ ಮಧ್ಯೆ ಪ್ರಧಾನಿ ಮೋದಿ ಕರ್ನಾಟಕ ರಾಜ್ಯ ಸರ್ಕಾರದ ಮೇಲೆ ಅತಿದೊಡ್ಡ ಆರೋಪವನ್ನು ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ 10% ಸರ್ಕಾರ ಎಂದು ಝಾಡಿಸಿದ್ದರು. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚೃರದಲ್ಲಿ ಮುಳುಗಿ ಹೋಗುತ್ತಿದೆ.10% ಕಮಿಷನ್ ಪಡೆದು ಅನುದಾನ ಬಿಡುಗಡೆಗೊಳಿಸುತ್ತಿರುವ ಈ ಸರ್ಕಾರವನ್ನು ರಾಜ್ಯದಿಂದ ಕಿತ್ತೊಗೆಬೇಕು ಎಂದು ಅಬ್ಬರಿಸಿದ್ದರು.

ಚಡಪಡಿಸಿದ ಕಾಂಗ್ರೆಸ್..!

ಮೋದಿಯವರ ಈ ಆರೋಪಕ್ಕೆ ಕಾಂಗ್ರೆಸ್ ಪಕ್ಷ ತತ್ತರಿಸಿ ಹೋಗುತ್ತೆ. ರಾಜ್ಯ ಕಾಂಗ್ರೆಸ್ ಸರ್ಕಾರ 10% ಸರ್ಕಾರ ಎಂಬ ಆರೋಪಕ್ಕೆ ಮಾಧ್ಯಮಗಳು ಮುಖ್ಯಮಂತ್ರಿ ಸಿದ್ದರಾಮ್ಯ ಸಹಿತ ಕಾಂಗ್ರೆಸ್ ನಾಯಕರಿಗೆ ಪ್ರಶ್ನೆಗಳ ಸುರಿಮಳೆಗಳನ್ನೇ ಕೇಳುತ್ತಾರೆ. ಆದರೆ ಇದಕ್ಕೆಲ್ಲ ಜಾಣ್ಮೆಯಿಂದ ಉತ್ತರಿಸಿದ್ದ ಕಾಂಗ್ರೆಸ್ ನಾಯಕರು ತಮ್ಮ ಸಾಧನೆಯನ್ನು ಬಿಚ್ಚಿಡುತ್ತಾರೆ. ಆದರೆ ಪ್ರಧಾನಿ ಮೋದಿಯವರು ಆರೋಪಿಸಿದ್ದ ಬ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನಾಯಕರು ಸೊಲ್ಲೆತ್ತುವುದಿಲ್ಲ. ನಾವು 10% ವ್ಯವಹಾರ ಮಾಡಿಲ್ಲ ಎಂದೇ ಉತ್ತರಿಸುತ್ತಾರೆ.

ಸಮೀಕ್ಷೆಯ ಮೊರೆ ಹೋದ ಮಾಧ್ಯಮಗಳು…

ಮೋದಿ ಮಾಡಿದ ಆ ಒಂದೇ ಒಂದು ಆರೋಪವನ್ನು ಹಿಡಿದುಕೊಂಡ ಮಾಧ್ಯಮಗಳು ಸಮೀಕ್ಷೇಯ ಮೊರೆ ಹೋಗುತ್ತವೆ. ಆರೋಪ ಪ್ರತ್ಯಾರೋಪಗಳನ್ನು ಗಮನಿಸಿದ ಮಾಧ್ಯಮ ನೇರವಾಗಿ ಜನರಿಂದಲೇ ಉತ್ತರ ಕೇಳುವ ಕಾರ್ಯಕ್ಕೆ ಇಳಿಯುತ್ತಾರೆ. ಮೋದಿ ಮಾಡಿದ ಆ ಒಂದು ಪ್ರಶ್ನೆಗೆ ಜನರ ಬಳಿ ಉತ್ತರ ಕೇಳಿದ್ದವು ರಾಜ್ಯದ ಪ್ರಮುಖ ಮಾಧ್ಯಮಗಳು.

ಟಿವಿ9 ಸಮೀಕ್ಷೆಗೆ ಬೆಚ್ಚಿ ಬಿದ್ದ ಕಾಂಗ್ರೆಸ್..!

ರಾಜ್ಯದ ಪ್ರಮುಖ ಸುದ್ಧಿವಾಹಿನಿಯಾದ ಟಿವಿ9 ಜನರ ಮುಂದೆ ಈ ಪ್ರಶ್ನೆಯನ್ನಿಟ್ಟು ಉತ್ತರ ಕೇಳುತ್ತದೆ. ಟಿವಿ9 ನಡೆಸಿದ ಈ ಸಮೀಕ್ಷೆಯಲ್ಲಿ ಜನ ಅದ್ಭುತವಾಗಿ ಪ್ರತಿಕ್ರಿಯಿಸಿದ್ದು ಮೋದಿ ಮಾತಿಗೆ ಜೈ ಅಂದಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತೀವ್ರ ಮುಖಭಂಗವಾಗಿದೆ. “ಸಿದ್ದರಾಮಯ್ಯ ಅವರದ್ದು 10% ಸರ್ಕಾರ ಎಂಬ ಮೋದಿ ಆರೋಪವನ್ನು ನೀವು ಒಪ್ಪುತ್ತೀರಾ?” ಎಂಬ ಮಾಧ್ಯಮ ಪ್ರಶ್ನೆ ಕೇಳಿತ್ತು. ಮಾಧ್ಯಮ ಕೇಳಿದ ಈ ಪ್ರಶ್ನೆಗೆ ಬರೋಬ್ಬರಿ 73%ಕ್ಕೂ ಅಧಿಕ ಮಂದಿ ಮೋದಿ ಹೇಳಿದ್ದು ಸತ್ಯ ಎಂದು ಮೋದಿ ಮಾತಿಗೆ ಜೈ ಎಂದಿದ್ದಾರೆ. 73%ರಷ್ಟಿದ್ದ ಮತಗಳು ಗಣನೀಯವಾಗಿ ಮೋದಿ ಪರವಾಗಿ ಏರುತ್ತಲೇ ಇತ್ತು. ಒಂದೊಂದು ಮತಗಳು ಏರುತ್ತಿದ್ದಂತೆಯೇ ಕಾಂಗ್ರೆಸ್ ಸರ್ಕಾರದ ಪತನವನ್ನು ತೋರಿಸುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಭಾರೀ ಮುಖಭಂಗವೇ ಆಗಿತ್ತು. ಇದು ಮೋದಿಗೆ ಕರ್ನಾಟಕದಲ್ಲಿ ಸಿಕ್ಕ ಭಾರೀ ಯಶಸ್ಸು ಎಂದೇ ಪರಿಗಣಿಸಲಾಗುತ್ತಿದೆ.

10%ಅಂದರೆ ಏನು ಗೊತ್ತಾ?

ಸರ್ಕಾರದಿಂದ ಶಾಸಕರುಗಳಿಗೆ ಹಾಗೂ ಸಚಿವರಿಗೆ ಭಾರೀ ಮೊತ್ತದ ಅನುದಾನಗಳು ಬಿಡುಗಡೆಯಾಗುತ್ತದೆ. ಹೀಗೆ ಬಿಡುಗಡೆ ಅನುದಾನದಲ್ಲಿ 10%ಹಣವನ್ನು ಸರ್ಕಾರ ರಚಿಸುವ ಪಕ್ಷಕ್ಕೆ ಅಥವಾ ಮುಖ್ಯಮಂತ್ರಿಗಳಿಗೆ ನೀಡಬೇಕು. ಇದು ಪಕ್ಷದ ರಾಷ್ಟ್ರೀಯ ನಿಧಿಗೆ ಕಪ್ಪವಾಗಿ ಹೋಗುತ್ತದೆ. ಈ ಹಣದಿಂದ ಪಕ್ಷ ಚುನಾವಣೆಗಳಿಗೆ ಖರ್ಚು ಮಾಡುತ್ತದೆ.

ಬಯಲಾಗಿತ್ತು ಕಾಂಗ್ರೆಸ್ ಕಪ್ಪದ ಕಥೆ..!

ಈಗಾಗಲೇ ಕಾಂಗ್ರೆಸ್ಸಿಗೆ ಕಪ್ಪ ಸಂದಿರುವ ವಿಚಾರ ಬಯಲಾಗಿದೆ. ಈ ಹಿಂದೆ ಅಮಿತ್ ಶಾ ಕರ್ನಾಟಕಕ್ಕೆ ಬಂದಾವಾಗ ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ಸಂದಿರುವ ಬಗ್ಗೆ ಕಾಂಗ್ರೆಸ್ ಎಮ್.ಎಲ್.ಸಿ.ಯ ಡೈರಿಯ ಬಗ್ಗೆ ಉಲ್ಲೇಖಿಸಿದ್ದರು. ಈವಾಗ ಮೋದಿ ಆಗಮಿಸಿ ಕರ್ನಾಟಕಲ್ಲಿ ಪರ್ಸೆಂಟೇಜ್ ಆಡಳಿತದ ಬಗ್ಗೆ ಬಹಿರಂಗಪಡಿಸಿದ್ದಾರೆ.

ಎಲ್ಲವನ್ನೂ ಒಪ್ಪಿಕೊಂಡರಾ ಮುಖ್ಯಮಂತ್ರಿಗಳು?

ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ಎಲ್ಲವೂ ಅಡಗಿದೆ. ಮುಖ್ಯಮಂತ್ರಿಗಳು ಬೆಂಗಳೂರಿನ ಶಕ್ತಿ ಭವನದಲ್ಲಿ ಹೇಳಿದ ಅಷ್ಟೂ ಮಾತುಗಳೂ ರಾಜ್ಯ ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಪ್ರದರ್ಶಿಸಿತ್ತು. “ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಯಾರಾದರೂ ಇಟ್ಟುಕೊಳ್ಳುತ್ತಾರಾ? ನಮ್ಮಲ್ಲಿ ಭ್ರಷ್ಟಾಚಾರದ ಯಾವುದೇ ದಾಖಲೆಗಳು ಇಲ್ಲ. ಹಾಗೆನೇ ಮೋದಿ ಆರೋಪಿಸಿದ 10% ವ್ಯವಹಾರದ ಬಗ್ಗೆನೂ ದಾಖಲೆಗಳು ಇಲ್ಲ. ಈ ಬಗ್ಗೆ ದಾಖಲೆ ಕೊಡಿ ಅಂದ್ರೆ ನಾನು ಎಲ್ಲಿಂದ ಕೊಡ್ಲಿ?” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಆಧಾರ ರಹಿತವಾಗಿ ಯಾವುದನ್ನೂ ಮಾತನಾಡೋದಿಲ್ಲ ಎಂಬುವುದು ಧಿಟವಾಗಿದೆ. ಹಾಗೂ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ ಸರ್ಕಾರದ 10% ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪೇಚಿಗೆ ಸಿಲುಕಿದ್ದು ಈ ರೀತಿಯ ಹೇಳಿಕೆನ್ನು ನೀಡಿದ್ದಾರೆ. ಇದು ಮೋದಿಯವರ ಸ್ಪಷ್ಟ ಆರೋಪದ ಪ್ರತೀಕ ಎಂಬುವುದು ಸತ್ಯ.

-ಸುನಿಲ್ ಪಣಪಿಲ

Tags

Related Articles

Close