ಪ್ರಚಲಿತ

ಬಿಗ್ ಬ್ರೇಕಿಂಗ್!! ಕರ್ನಾಟಕದ ಜನರಿಗೆ ಸುಪ್ರೀಂ ಕೋರ್ಟ್ ನಿಂದ ಸಿಹಿ ಸುದ್ದಿ!! ಜಾನಪದ ಕ್ರೀಡೆಯನ್ನು ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯ!!

ಕರ್ನಾಟಕದ ಜಾನಪದ ಕ್ರೀಡೆಯಾದ ಕಂಬಳವನ್ನು ಹೇಗಾದರು ಮಾಡಿ ನಿಷೇಧಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ‘ಪೇಟಾ ಸಂಘಟನೆಯು’ ಪದೇ ಪದೇ ಕಂಬಳದ ವಿರುದ್ಧ ದೂರು ನೀಡುತ್ತಲೇ ಇದೆ. ಅದೆಷ್ಟೋ ವರ್ಷಗಳ ಇತಿಹಾಸವಿರುವ ಕಂಬಳ ತುಳುನಾಡಿನ ಪ್ರಮುಖ ಕ್ರೀಡೆ. ಇಂತಹ ಕ್ರೀಡೆಯಲ್ಲಿ ಕೋಣಗಳ ಮೇಲೆ ಹಿಂಸೆ ನಡೆಯುತ್ತದೆ ಎಂದು ಆರೋಪಿಸುತ್ತಿರುವ ಪೇಟಾ ಸಂಘಟನೆ ಕಂಬಳ ಮತ್ತು ಕಂಬಳ ಆಯೋಜಕರ ಮೇಲೆ ದೂರು ಹಾಕಿ ಕೋರ್ಟ್ ಮೆಟ್ಟಲು ಏರುವಂತೆ ಮಾಡಿದೆ..!

ಪೇಟಾ ಸಂಘಟನೆಯವರಿಗೆ ಪ್ರಾಣಿಗಳ ಬಗ್ಗೆ ಭಾರೀ ಕರುಣೆ ಇದೆ, ಇಬರಿಗೆ ಪ್ರಾಣಿಗಳ ಹಕ್ಕುಗಳ ಬಗ್ಗೆ ಕಾಳಜಿ ಇದೆ ಎಂದು ಎಲ್ಲರೂ ಭಾವಿಸಿಕೊಂಡಿದ್ದರು. ಆದರೆ ಇವರ ಕರುಣೆ -ಕಾಳಜಿ ಕೇವಲ ಬೂಟಾಟಿಕೆಗೆ ಎಂಬೂದು ಸಾಬೀತಾಗುತ್ತಲೇ ಇದೆ. ಯಾಕೆಂದರೆ ವಿದೇಶಗಳಿಂದ ಹಣ ಪಡೆದು ನಡೆಸುತ್ತಿರುವ ಪೇಟಾ ಸಂಘಟನೆ ವಿನಾಃ ಕಾರಣ ಕಂಬಳದ ವಿರುದ್ಧ ದೂರು ನೀಡುತ್ತಿದೆ..!

ಈ ಹಿಂದೆಯೂ ಅನೇಕ ಬಾರಿ ಕಂಬಳದ ವಿರುದ್ಧ ಸಲ್ಲಿಸಿದ್ದ ಅರ್ಜಿಯ ಕುರಿತ ವಿಚಾರಣೆಯನ್ನು ಮುಂದೂಡುತ್ತಲೇ ಬಂದಿತ್ತು.ಕಂಬಳ ನಡೆಸಲು ಅನುಮತಿ ನೀಡಿದ್ದರು ಹಲವಾರು ಷರತ್ತುಗಳನ್ನು ವಿಧಿಸಲಾಗಿತ್ತು..!ಕಂಬಳಕ್ಕೆ ನಿಷೇಧ ಹೇರಿದ ಸಮಯದಲ್ಲೂ ಕರಾವಳಿಯಲ್ಲಿ ಕಂಬಳಾಭಿಮಾನಿಗಳು ಹೋರಾಟ ನಡೆಸುವ ಮೂಲಕ ಪೇಟಾ ಸಂಘಟನೆಯನ್ನು ನಿಷೇಧಿಸುವಂತೆ ಹೇಳಿದ್ದರು.

ಇದೀಗ ಮತ್ತೆ ಕಂಬಳದ ಪರವಾಗಿ ತೀರ್ಪು ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯವು ಪೇಟಾದವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ.ಈ ಬಾರಿ ಕಂಬಳ ನಡೆಸಲು ರಾಷ್ಟ್ರಪತಿಗಳ ಅನುಮತಿ ಪಡೆದು ಕಂಬಳಕ್ಕೆ ಹಸಿರು ನಿಶಾನೆ ಹೊರಡಿಸಿದ್ದರು.ಇದಾಗಿಯೂ ಮತ್ತೆ ಈ ಪೇಟಾ ಸಂಘಟನೆಯು ಕಂಬಳದಲ್ಲಿ ಪ್ರಾಣಿಹಿಂಸೆ ನಡೆಯುತ್ತಿದೆ, ಆದ್ದರಿಂದ ಕಂಬಳವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.

ಆದರೆ ಪೇಟಾದವರ ಈ ದೂರನ್ನು ಒಪ್ಪದ ಕೋರ್ಟ್ ಕಂಬಳಕ್ಕೆ ತಡೆ ನೀಡಲು ನಿರಾಕರಿಸಿದೆ.ಕಂಬಳದ ಕುರಿತ ಬಿಲ್ ಈಗಾಗಲೇ ರಾಷ್ಟ್ರಪತಿಗಳ ಅಂಗಳದಲಿದ್ದು ,ರಾಷ್ಟ್ರಪತಿಗಳ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳುವ ಮೂಲಕ ರಾಜ್ಯ ಸರಕಾರ ಜಾರಿಗೊಂಡಿತ್ತು.ಕರಾವಳಿಯಿಂದ ಕಂಬಳದ ಪರ ಹೋರಾಟ ನಡೆದಾಗಲೂ ಸಿದ್ದರಾಮಯ್ಯ ಸರಕಾರ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸಲು ಯತ್ನಿಸಿತ್ತು..!

ಇದೀಗ ವಿಚಾರಣೆಯನ್ನು ಫೆಬ್ರವರಿ ೧೪ಕ್ಕೆ ಮುಂದೂಡಿದ ಕೋರ್ಟ್ ಕಂಬಳಕ್ಕೆ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಹೇಲಿದೆ.ಕಂಬಳ ಋತು ಮಕ್ತಾಯವಾಗಿದೆ , ಆದ್ದರಿಂದ ಕಂಬಳಕ್ಕೆ ತಡೆ ಹಿಡಿಯಲು ಪ್ರಯತ್ನಿಸುತ್ತುರುವ ಪೇಟಾ ಸಂಘಟನೆಗೆ ತೀವ್ರ ಹಿನ್ನಡೆಯಾಗಿದೆ. ಪ್ರತೀ ವರ್ಷವೂ ಕಂಬಳದ ಸಮಯದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗುತ್ತದೆ ಎಂದು ದೂರುವ ಪೇಟಾ ಸಂಘಟನೆಗೆ ಕೋಣಗಳನ್ನು ಅದರ ಯಜಮಾನರು ವರ್ಷವಿಡೀ ತಮ್ಮ ಸ್ವಂತ ಮಕ್ಕಳಂತೆ ಸಾಕುವುದು ಮಾತ್ರ ಕಣ್ಣಿಗೆ ಕಾಣುತ್ತಿಲ್ಲ.

ಕಂಬಳದ ಕೋಣಗಳಿಗೆ ಹೊಡೆದು ಹಿಂಸಿಸಲಾಗುತ್ತದೆ ಎನ್ನುವ ಪೇಟಾ ಸಂಘಟನೆಗೆ ಕೋಣಗಳನ್ನು ದನಗಳನ್ನು ಕೊಂದು ಕಡಿದು ಹಾಕಿ ಸಾಯಿಸುತ್ತಾರಲ್ಲಾ , ಇದೇಕೆ ಕಾಣುತ್ತಿಲ್ಲ…? ಕೇವಲ ಹೆಸರು ಹಣ ಗಳಿಸುವ ದುರುದ್ದೇಶದಿಂದ ವಿದೇಶಿ ಕೈಗಳ ಜೊತೆ ಸೇರಿಕೊಂಡು ಭಾರತದ ಸಂಸ್ಕ್ರತಿಯನ್ನು ನಾಶ ಮಾಡಲು ಹುನ್ನಾರ ನಡೆಸುತ್ತಿದೆ..!

ನೂರಾರು ವರ್ಷಗಳಿಂದ ಕರಾವಳಿಯಲ್ಲಿ ಆಚರಿಸಿಕೊಂಡು ಬರುತ್ತಿದ್ದ ಕಂಬಳವನ್ನು ಪ್ರಾಣಿ ದಯಾ ಸಂಘದ ಕೆಲವು ಬುದ್ಧಿಜೀವಿಗಳಿಂದ ಕಡೆಗಣಿಸಲ್ಪಟ್ಟಿತ್ತು. ಸುಪ್ರಿಂ ಕೋರ್ಟ್ ಹಾಗೂ ಸರ್ಕಾರಗಳಿಗೆ ದೂರುಗಳನ್ನು ನೀಡಿದ್ದ ಪ್ರಾಣಿ ದಯಾ ಸಂಘದವರು ಕಂಬಳಕ್ಕೆ ತಡೆ ನೀಡುವಂತೆ ಕೋರಿದ್ದರು. 2 ವರ್ಷ ರಾಜ್ಯ ಸರ್ಕಾರದ ಆದೇಶದ ಮೇರೆಗೆ ನಿಷೇಧಕ್ಕೊಳಪಟ್ಟ ಕರಾವಳಿಗರ ಜನಪದ ಕ್ರೀಡೆ ಕಂಬಳ ಈಗ ಮತ್ತೊಮ್ಮೆ ಮೇಳೈಸಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ನಂತರ, ಕಾನೂನು ಮಂತ್ರಿಯಾಗಿದ್ದ ಕರಾವಳಿಯವರೇ ಆಗಿದ್ದ ಡಿ.ವಿ.ಸದಾನಂದ ಗೌಡ ಅವರ ಮುತುವರ್ಜಿಯಲ್ಲಿ ಕಂಬಳದ ಉಳಿವಿಗಾಗಿ ಬೇರೆನೇ ಕಾನೂನನ್ನೂ ರಚಿಸಲಾಗಿತ್ತು. ಈ ಮೂಲಕ ಕಂಬಳ ಕಾನೂನು ಬದ್ಧವಾಗಿ ನಡೆಯಲು ತೊಡಕಾಗಿದ್ದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿದ್ದವು.

ಆದರೆ ಪ್ರಾಣಿ ದಯಾ ಸಂಘದವರು ಮತ್ತೆ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರಿಂದ ಕಂಬಳಕ್ಕೆ ಮತ್ತೆ ನಿರಾಸೆಯಾಗಿತ್ತು. ಆದರೆ ಈಗ ಸುಪ್ರೀಂ ಕೋರ್ಟ್ ಕಂಬಳವನ್ನು ನಿಷೇಧಿಸಬೇಕು ಎಂಬ ಪ್ರಾಣಿ ದಯಾ ಸಂಘದವರ ಅರ್ಜಿಯನ್ನು ತಿರಸ್ಕರಿಸಿ ಕಂಬಳವನ್ನು ಎತ್ತಿಹಿಡಿದು ಆದೇಶ ನೀಡಿದೆ. ಕಂಬಳ ಒಂದು ಜನಪದ ಕ್ರೀಡೆ. ಹೀಗಾಗಿ ಅದನ್ನು ಉಳಿಸಿಕೊಂಡು ಹೋಗುವುದೇ ಸೂಕ್ತ ಎಂದು ಅಭಿಪ್ರಾಯ ಪಟ್ಟು ಕಂಬಳದ ಪರವಾದ ನಿಲುವನ್ನು ವ್ಯಕ್ತಪಡಿಸಿದೆ.

ಕಂಬಳದ ನಿಯೋಗ ,ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲು ಮುಂತಾದವರು ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಕಂಬಳಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು.ನರೇಂದ್ರ ಮೋದಿಯವರು ಈ ಬಗ್ಗೆ ಕಂಬಳ ನಡೆಸಲು ಅವಕಾಶ ಮಾಡಿಕೊಡಲು ಸತತ ಪ್ರಯತ್ನ ಪಡುತ್ತಲೇ ಇದ್ದರು‌. ಈ ಬಗ್ಗೆ ರಾಷ್ಟ್ರಪತಿಗಳ ಅಂಗೀಕಾರವೂ ಕಂಬಳದ ಪರವಾಗಿಯೇ ಇದ್ದುದರಿಂದ ಕೋರ್ಟ್ ಕೂಡಾ ಕಂಬಳದ ಪರವಾಗಿ ತೀರ್ಪು ನೀಡಿದೆ.

ಆದರೆ ಪೇಟಾ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.ಇದರಿಂದಾಗಿ ಪದೇ ಪದೇ ಕಂಬಳಕ್ಕೆ ಅಡ್ಡಿಪಡಿಸುತ್ತಿರುವ ಪೇಟಾ ಸಂಘಟನೆಗೆ ಮುಖಭಂಗವಾಗಿದೆ…!

  • arjun
Tags

Related Articles

Close