ಪ್ರಚಲಿತರಾಜ್ಯ

ಬಿಗ್ ಬ್ರೇಕಿಂಗ್: ಸಿಎಂ ತವರಿನಲ್ಲಿ ಮೋದಿ ಘರ್ಜನೆ!! ಮತ್ತೆ ಕಾಂಗ್ರೆಸ್‍ನ್ನು ಝಾಡಿಸಿದ ನಮೋ.. 10% ಕಮಿಷನ್ ಬಗ್ಗೆ ನಮೋ ಹೇಳಿದ್ದೇನು..? ಇಲ್ಲಿದೆ ಮೋದಿ ಮಾತಿನ ಸಂಪೂರ್ಣ ವಿವರ…

ಪ್ರಧಾನಿ ನರೇಂದ್ರ ಮೋದಿಯವರು ಇಂದು ಕರ್ನಾಟಕ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ತವರಿಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಟ ನಡೆಯೋದಿಲ್ಲ ಎಂದು ಬೊಬ್ಬಿರಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಟಾಂಗ್ ನೀಡಿದ್ದಾರೆ. ಕೆಲ ದಿನಗಳ ಹಿಂದೆ ತಾನೇ ಬೆಂಗಳೂರಿನಲ್ಲಿ ಆರ್ಭಟಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು ಮುಖ್ಯಮಂತ್ರಿಗಳ ತವರಿನಲ್ಲೇ ಅಬ್ಬರಿಸಿ ತಮ್ಮ ತಾಕತ್ತು ಪ್ರದರ್ಶಿಸಿದ್ದಾರೆ.

ಪ್ರಧಾನಿ ಮೋದಿಗೆ ಮೈಸೂರು ಮಲ್ಲಿಗೆ…

ಮೈಸೂರಿನಲ್ಲಿ ನಡೆಯುತ್ತಿರುವ ಭಾರತೀಯ ಜನತಾ ಪಕ್ಷದ ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿಯವರನ್ನು ಸನ್ಮಾನಿಸಲಾಯಿತು. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಧಾನಿ ಮೋದಿಯವರನ್ನು ಸನ್ಮಾನಿಸಿದರು. ಈ ವೇಳೆ ಮೈಸೂರು ಮಲ್ಲಿಗೆ, ಗಣಪತಿಯ ವಿಗ್ರಹ, ಮೈಸೂರು ಪೇಟ ಹಾಗೂ ಶಾಲು, ಹಾರ ಹಾಕಿ ಸನ್ಮಾನಿಸಲಾಯಿತು.

ಕನ್ನಡದಲ್ಲಿ ಭಾಷಣ ಆರಂಭಿಸಿದ ನಮೋ…

ಪ್ರಧಾನಿ ನರೇಂದ್ರ ಮೋದಿ ಎಂದಿನಂತೆ ಇಂದು ಕನ್ನಡದಲ್ಲಿ ಭಾಷಣವನ್ನು ಆರಂಭಿಸಿದ್ದಾರೆ. ಕನ್ನಡದಲ್ಲಿ ತಮ್ಮ ಭಾಷಣವನ್ನು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿಯವರು ಮಾತೆ ಚಾಮುಂಡೇಶ್ವರಿಗೆ ನನ್ನ ನಮನಗಳು ಎಂದರು. “ಮೈಸೂರಿನ ನನ್ನ ಪ್ರೀತಿಯ ಬಂಧು ಭಗಿನಿಯರೇ… ನಿಮಗೆಲ್ಲಾ ನನ್ನ ಪ್ರೀತಿಯ ನಮಸ್ಕಾರಗಳು. ಮಾತೆ ಚಾಮುಂಡೇಶ್ವರಿಗೆ ನನ್ನ ಪ್ರಣಾಮಗಳು” ಎಂದು ಕನ್ನಡದಲ್ಲೇ ಮಾತನಾಡಿದ್ದಾರೆ.

ಮತ್ತೆ ಅಬ್ಬರಿಸಿದ ಪ್ರಧಾನಿ ನರೇಂದ್ರ ಮೋದಿ…

ಕೆಲ ದಿನಗಳ ಹಿಂದೆ ತಾನೇ ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತಿನ ಪ್ರಹಾರವನ್ನೇ ಹರಿಸಿದ್ದ ಪ್ರಧಾನಿ ನರೇಂದ್ರ ಇಂದು ಮತ್ತೆ ಮೈಸೂರಿನಲ್ಲಿ ಅಬ್ಬರಿಸಿದ್ದಾರೆ. ಇಂದು ನೇರವಾಗಿ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಆರ್ಭಟಿಸಿದ್ದ ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗವಾಗಿ ಝಾಡಿಸಿದ್ದಾರೆ.

ನಮೋ ಮಂತ್ರ…

* ಮೈಸೂರಿನ ನನ್ನ ಪ್ರೀತಿಯ ಬಂಧು ಭಗಿನಿಯರೇ… ನಿಮಗೆಲ್ಲಾ ನನ್ನ ಪ್ರೀತಿಯ ನಮಸ್ಕಾರಗಳು…

* ಮಾತೆ ಚಾಮುಂಡೇಶ್ವರಿಗೆ ನನ್ನ ಪ್ರಣಾಮಗಳು.

* ರಾಷ್ಟ್ರಕವಿ ಕುವೆಂಪು, ಸರ್.ಎಂ.ವಿಶ್ವೇಶ್ವರಯ್ಯನವರಂತಹ ಧೀಮಂತ ನಾಯಕರು ಜೀವಿಸಿದ ನಾಡು ಇದು.

* ಮೈಸೂರು ದಸರಾ ಜಗತ್ತಿನ ಶ್ರೇಷ್ಟ ಹಬ್ಬವಾಗಿದೆ. ಇಲ್ಲಿನ ರಾಜರ ಕೊಡುಗೆ ಅಪಾರವಾಗಿದೆ.

* ಮೈಸೂರು ದೇಶಕ್ಕೆ ಸದ್ಭಾವನೆಯನ್ನು ಹರಡುವ ನಗರವಾಗಿದೆ.

* ಇಂದು ಮೈಸೂರಿನಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದೇನೆ. ಇದು ನನ್ನ ಸೌಭಾಗ್ಯ. ಇದು ಮತ್ತೆ ಮುಂದುವರೆಯುತ್ತದೆ.

* ಮೈಸೂರಿನಲ್ಲಿ ಹೊಸ ರೈಲಿನ ಕ್ರಾಂತಿಯಾಗುತ್ತಿದೆ. ಮೈಸೂರು-ಉದಯಪುರ ರೈಲು ಎರಡು ರಾಜ್ಯಗಳ ಜೋಡಣೆ. ಕರ್ನಾಟಕ ರಾಜಸ್ಥಾನ ರಾಜ್ಯಗಳು ಈ ಮೂಲಕ ಒಂದಾಗ್ತಿವೆ.

* ಉದಯಪುರ ನೋಡುವವರು ಮೈಸೂರನ್ನೂ ನೋಡಬಹುದು.

* ರೈಲ್ವೇ ಆಧುನೀಕರಣ ಹೊಸ ಧಿಕ್ಕು ದೆಸೆಗೆ ನಾಂದಿಯಾಗುತ್ತಿದೆ.

* ಕರ್ನಾಟಕದಲ್ಲಿ ರೈಲ್ವೇ ಇಲಾಖೆಗೆ ವೇಗ ಸಿಗುತ್ತಿದೆ.

* ಪ್ರವಾಸೋಧ್ಯಮ ಪಾಲಿಗೆ ಈ ಯೋಜನೆ ಬೆನ್ನೆಲುಬು.

* 9 ಲಕ್ಷ ಕೋಟಿಯ ಯೋಜನೆಗಳನ್ನು ನಾವು ಜಾರಿಗೆ ತಂದಿದ್ದೇವೆ. ಹಳೆಯ ಯೋಜನೆಗಳಿಗೆ ಜೀವ ತುಂಬುತ್ತಿದ್ದೇವೆ.

* ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ 6 ಲೇನ್ ಮಾರ್ಗವಾಗಿ ಪರಿವರ್ತನೆಯಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 7ಸಾವಿರ ಕೋಟಿ ರೂಗಳನ್ನು ಮೀಸಲಿಟ್ಟಿದ್ದೇವೆ.

* 4600 ಕೋಟಿ ವೆಚ್ಚದಲ್ಲಿ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಿದ್ದೇವೆ.

* 800 ಕೋಟಿ ವೆಚ್ಚದಲ್ಲಿ ಸಾಟಲೈಟ್ ರೈಲ್ವೇ ನಿಲ್ದಾಣವಾಗಲಿದೆ.

* ಮೈಸೂರಿನ ವಿಶ್ವ ದರ್ಜೆಯ ರೈಲ್ವೇ ನಿಲ್ದಾಣವನ್ನು ನಾಗರಹಳ್ಳಿಯಲ್ಲಿ ನಿರ್ಮಿಸಲಿದ್ದೇವೆ.

* ಈ ಸರ್ಕಾರ ಈ ರಾಜ್ಯದಲ್ಲಿ ಎಷ್ಟು ದಿನ ಇರುತ್ತೋ ಅಷ್ಟು ಈ ರಾಜ್ಯಕ್ಕೆ ಕೆಟ್ಟದು.

* ಶಿಲಾನ್ಯಾಸ, ಉಧ್ಘಾಟನೆ ಮಾಡೋದು ಮಾತ್ರವೇ ಕೆಲಸವಲ್ಲ.

* ಸಂವಿಧಾನ ಬದ್ಧ ಸರ್ಕಾರಕ್ಕೆ ಎಲ್ಲರ ಹೊಣೆ ಇರಬೇಕು.

* ನೀವು ಸಮಾಜದ ಭಾವನೆಗಳಿಗೆ ಪೆಟ್ಟು ತರುವ ಪಾಪ ಮಾಡುತ್ತಿದ್ದೀರಿ.(ಸಿದ್ದರಾಮಯ್ಯನವರಿಗೆ)

* 60 ವರ್ಷಗಳ ಕಾಲ ಆಡಳಿತ ಮಾಡಿದ ನಿಮ್ಮ ಬಾಯಿಗೆ ಬೀಗ ಹಾಕಿದವರು ಯಾರು..?

* ಸಮಾಜವನ್ನು ಒಡೆಯುವವರು ಮಾಡುತ್ತಿರುವ ಕೆಲಸಗಳನ್ನು ನೀವು ನಂಬುತ್ತೀರಾ..? (ಜನತೆಗೆ ಪ್ರಶ್ನೆ)

* ಕರ್ನಾಟಕದಲ್ಲಿ ಅಭಿವೃದ್ಧಿಯ ವೇಗದ ಅವಶ್ಯಕತೆ ಇದೆ. ಆದರೆ ಈ ಸರ್ಕಾರದಿಂದ ಅದು ಸಾಧ್ಯವಾಗುತ್ತಿಲ್ಲ.

* ಕರ್ನಾಟಕ ಆಡಳಿತಗಾರರಿಗೆ ತಮ್ಮ ಕುರ್ಚಿಯದ್ದೇ ಚಿಂತೆ.

* 60 ವರ್ಷದಲ್ಲಿ ಏನೆಲ್ಲಾ ಸಾಧನೆ ಮಾಡಿದ್ದೀರಿ ಹೇಳಿ…

* ಬೆಂಗಳೂರಿನಲ್ಲಿ ಭಾಷಣ ಮಾಡಿದ್ದಾಗ 10 ಪರ್ಸೆಂಟ್ ಸರ್ಕಾರ ಎಂದು ಹೇಳಿದ್ದೆ.

* ನನ್ನ ಹೇಳಿಕೆಗೆ ಹಲವರು ಬೇಸರ ಮಾಡಿಕೊಂಡಿದ್ದರು. ಕೆಲವರು ಕರೆಯನ್ನೂ ಮಾಡಿದ್ದರು.

* ಆದರೆ ಇದು 10% ಅಲ್ಲ, ಅದಕ್ಕಿಂತ ಹೆಚ್ಚು ಪರ್ಸೆಂಟ್ ಸ್ವೀಕರಿಸುವ ಸರ್ಕಾರವಾಗಿದೆ.

* ನಿಮಗೆ ಕಮಿಷನ್ ಸರ್ಕಾರ ಬೇಕೋ ಅಥವಾ ಗುರಿ ಹೊಂದಿರುವ ಸರ್ಕಾರ ಬೇಕೋ..?

* ಇಲ್ಲಿ ಕಂತೆ ಕಂತೆ ನೋಟುಗಳು, ಡೈರಿಗಳು ಸಿಗುತ್ತವೆ. ಆದರೆ ಈ ಬಗ್ಗೆ ಈ ಸರ್ಕಾರಕ್ಕೆ ಮುಜುಗರವಿಲ್ಲ. ಇದು ಲಜ್ಜೆ ಗೆಟ್ಟ ಸರ್ಕಾರವಾಗಿದೆ.

* ಕೆಲವರ ಕಡೆಯಿಂದ ಬಂಡಲ್ ಬಂಡಲ್ ಹಣಗಳು ಸೀಜ್ ಆಗುತ್ತಿವೆ. ಅದೆಲ್ಲಾ ಎಲ್ಲಿಂದ ಬಂತು?

* ಇಂತಹ ಜನರಿಗೆ ಶಿಕ್ಷೆ ಕೊಡಬೇಡವೇ..?

* ಕರ್ನಾಟಕಕ್ಕೆ ಈ ಕೆಟ್ಟ ಸರ್ಕಾರದಿಂದ ಮುಕ್ತಿ ಬೇಕೋ ಬೇಡವೋ..?

* ಇಂತವರನ್ನು ಬೆಂಬಲಿಸಿದರೆ ನಿಮ್ಮ ಮೇಲೆ ಮತ್ತಷ್ಟು ಕಳಂಕ ಅಂಟಿಕೊಂಡಿರುತ್ತದೆ.

* ಇವರಿಗೆ ಇಲ್ಲಿ ರಾಜಕೀಯ ಮಾಡೋದು ಹಾಗೂ ದಿಲ್ಲಿಯ ನಾಯಕರನ್ನು ಖುಷಿಯಲ್ಲಿಡೋದು ಮಾತ್ರವೇ ಕೆಲಸವಾಗಿದೆ.

* ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಕಲಿತಿದ್ದನ್ನು ಬೆಂಗಳೂರಿಗೆ ಹೋದಾಗ ಮರೆಯುತ್ತಿದ್ದಾರೆ.

* ಇಂತಹಾ ಮುಖ್ಯಮಂತ್ರಿ, ಇಂತಹಾ ಸರ್ಕಾರ ನಿಮಗೆ ಬೇಕಾ?

* ನಮ್ಮ ಮುದ್ರಾ ಯೋಜನೆಯ ಲಾಭ ಇಲ್ಲಿನ ಎಷ್ಟೋ ಯುವಕರಿಗೆ ಸಿಕ್ಕಿದೆ.

* 3 ಕೋಟಿಗೂ ಅಧಿಕ ಹೊಸ ಉಧ್ಯಮಿಗಳು ತಮ್ಮ ಕಾಲ ಮೇಲೆ ತಾವು ನಿಂತುಕೊಂಡಿದ್ದಾರೆ.

* ಒಂದಲ್ಲಾ ಒಂದು ಹಗರಣ, ಭ್ರಷ್ಟಾಚಾರ ಈ ರಾಜ್ಯದಲ್ಲಿ ನಡೆಯುತ್ತಲೇ ಇದೆ.

* 2022ಕ್ಕೆ ನಾವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಆ ಸಮಯದಲ್ಲಿ ಭಾರತ ಹೇಗಿರಬೇಕು..?

* ಆ ಸಮಯದಲ್ಲಿ ಭಾರತದ ಯಾವುದೇ ಕುಟುಂಬಕ್ಕೂ ಮನೆ ಇಲ್ಲದಂತೆ ಆಗಬಾರದು. 2022ಕ್ಕೆ ಹೊಸ ಭಾರತ ನಿರ್ಮಾಣವಾಗಬೇಕು. ಇದಕ್ಕಾಗಿ ನಮ್ಮ ಸರ್ಕಾರ ಪಣ ತೊಟ್ಟಿದೆ. ನಮ್ಮ ಕನಸು ನನಸು ಮಾಡಲು ದೊಡ್ಡ ಯೋಜನೆಗಳೊಂದಿಗೆ ಮುನ್ನುಗ್ಗುತ್ತಿದ್ದೇವೆ.

* ಕರ್ನಾಟಕದಲ್ಲಿಯೂ ಯಾವ ಕುಟುಂಬವೂ ಮನೆ ಇಲ್ಲದಂತೆ ಆಗಬಾರದು. ಈ ಕಾರಣಕ್ಕಾಗಿ ಕರ್ನಾಟಕದಲ್ಲಿ ನಾವು ಬದಲಾವಣೆಯನ್ನು ತರಬೇಕಾಗಿದೆ.

* ಇಲ್ಲಿನ ನಾಯಕರು ಹೇಳಿದ ಸುಳ್ಳನ್ನೇ ಮತ್ತೆ ಮತ್ತೆ ಹೇಳ್ತಾರೆ.

* ಇಲ್ಲಿಗೆ ಬಂದವರು ದೊಡ್ಡ ದೊಡ್ಡ ಭಾಷಣ ಮಾಡಿ ಹೋಗುತ್ತಾರೆ.

* ರಾಜ್ಯದಲ್ಲಿ ಕಮಿಷನ್ ಸರ್ಕಾರ ಬೇಕೋ ಅಥವಾ ಮಿಷನ್ ಸರ್ಕಾರ ಬೇಕೋ..?

* ನಮ್ಮ ಯೋಜನೆಗಳಿಗೆ ಕರ್ನಾಟಕ ಸರ್ಕಾರದಿಂದ ಅಡ್ಡಿಯಾಗುತ್ತಿದೆ.

* ಕನಾಟಕದಲ್ಲಿ 4 ಕೋಟಿ ಕುಟುಂಬಗಳಿಗೆ ವಿದ್ಯುತ್ ಇಲ್ಲ. ಈ ಕುಟುಂಬಗಳು ಇನ್ನೂ 18ನೇ ಶತಮಾನದಂತೆ ಜೀವನವನ್ನು ನಡೆಸುತ್ತಿದೆ.

* 50 ವರ್ಷ ಒಂದೇ ಕುಟುಂಬ ದೇಶದಲ್ಲಿ ಅಧಿಕಾರ ನಡೆಸುತ್ತಿದೆ. ಇಷ್ಟು ವರ್ಷ ಕೆಲಸ ಮಾಡವರು ಈಗ ಕೆಲಸ ಮಾಡುತ್ತೇವೆ ಎಂದರೆ ಅದು ಶೋಭೆ ತರುತ್ತದೆಯೆ? ಇವರನ್ನು ನಂಬಬಹುದೇ..?

* ದೆಹಲಿಯ ಹೈಕಮಾಂಡ್‍ಗಳನ್ನು ಕುಷಿಯಾಗಿಡೋದೇ ಇವರ ಕೆಲಸವಾಗಿದೆ.

* ಜನ್ ಧನ್ ಯೋಜನೆ ಕೇವಲ ಜನರ ಕೈಗೆ ಪಾಸ್ ಬುಕ್ ಕೊಡುವುದಲ್ಲ. ಜನರಲ್ಲಿ ಆತ್ಮ ವಿಶ್ವಾಸ ಹಾಗೂ ಎಲ್ಲರಂತೆ ನಾನೂ ಎಂದು ತಿಳಿಯಲು ಈ ಯೋಜನೆ ಜಾರಿಗೆ ತಂದಿದ್ದೇವೆ.

* ಸರ್ಕಾರಿ ಕೆಲಸಕ್ಕೆ ಸಂದರ್ಶನ ಕೇವಲ ಹೆಸರಿಗಷ್ಟೇ… ತಂದೆ ತಾಯಿಯ ಆಭರಣಗಳನ್ನು ಅಡ ಇಟ್ಟು ಲಂಚ ಕೊಡಬೇಕಾಗಿತ್ತು. ಆದರೆ ನಾವು ಬಂದಮೇಲೆ ಸಂದರ್ಶನವನ್ನೇ ರದ್ದು ಮಾಡಿದ್ದೇವೆ. ಮೆರಿಟ್ ಮೇಲೆಯೇ ಸರ್ಕಾರಿ ಕೆಲಸವನ್ನು ನೀಡಿ ಲಂಚಾವತರ ಬಂದ್ ಮಾಡಿ ಬಿಟ್ಟಿದ್ದೇವೆ. ಒಂದು ಸಂದರ್ಶನ ನಡೆಸಲು ಜನ ಎಷ್ಟು ಕಷ್ಟ ಪಡುತ್ತಾರೆ. ಆದರೆ ಈ ಲಂಚ ಅನ್ನೋದು ಅವರ ಆಸೆಗಳನ್ನು ಕಿತ್ತು ತಿನ್ನುತ್ತಿತ್ತು. ಆದರೆ ಈಗ ಎಲ್ಲವೂ ಪಾರದರ್ಶಕವಾಗಿಯೇ ನಡೆಯುತ್ತಿದೆ.

* ಈ ಸರ್ಕಾರವನ್ನು ಕಿತ್ತೊಗೆಯಲು ಬೂತ್ ಮಟ್ಟದ ಕೆಲಸಗಳ ಅಗತ್ಯ ಇದೆ. ಹೊಸ ಯುವಕರನ್ನು ಭಾರತೀಯ ಜನತಾ ಪಕ್ಷಕ್ಕೆ ಸೇರಿಸಿಕೊಳ್ಳಬೇಕಾಗಿದೆ. ಬೇರೆ ಬೇರೆ ಸಮುದಾಯದವರನ್ನು ಬಿಜೆಪಿಗೆ ಸೇರಿಸಿ.
* ದೇಶವನ್ನು ಮುನ್ನಡೆಸುವುದು ಎಲ್ಲರ ಕರ್ತವ್ಯವಾಗಿದೆ.

ಇದು ಇಂದು ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳ ತವರು ಮೈಸೂರಿನಲ್ಲಿ ಅಬ್ಬರಿಸಿದ ಮಾತುಗಳು. ತಮ್ಮ ಮಾತಿನ ಕೊನೆಗೆ ಮತ್ತೆ ಕನ್ನಡದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ “ಈ ಬಾರಿ ಬಿಜೆಪಿ ಗೆಲ್ಲಿಸಿ” ಎಂದು ಐದಾರು ಬಾರಿ ಕೂಗಿ ಕೂಗಿ ಹೇಳಿದರು. ಮೋದಿ ಮಾತಿಗೆ ಉಧ್ಘೋಷಗಳು ಮುಗಿಲು ಮುಟ್ಟುತ್ತಿತ್ತು. ಮೋದಿ ಮೋದಿ ಝೇಂಕಾರ ಮೈಸೂರಿನ ಮೂಲೆ ಮೂಲೆಯಲ್ಲೂ ಮಾರ್ಧನಿಸುತ್ತಿತ್ತು. ಇದು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸರ್ಕಾವನ್ನು ಕಿತ್ತೊಗೆಯಲು ಸಂದೇಶವನ್ನೇ ಸಾರುತ್ತಿತ್ತು.

-ಸುನಿಲ್ ಪಣಪಿಲ

Tags

Related Articles

Close