ಪ್ರಚಲಿತ

ಬ್ರೇಕಿಂಗ್! ರಾಹುಲ್ ಗಾಂಧಿಯ ಇವನರ್ವ ಮಂತ್ರಕ್ಕೆ ಟಾಂಗ್ ಕೊಟ್ಟ ನಮೋ…! ರಾಗಾ ಗೆ ತೀವ್ರ ಮುಖಭಂಗ..!

ನರೇಂದ್ರ ಮೋದಿ ತನ್ನ ಭಾಷಣದ ವೈಶಿಷ್ಟ್ಯದಿಂದಲೇ ಮನೆಮಾತಾಗಿದ್ದು ಹೊಸ ವಿಚಾರವೇನಲ್ಲ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಆಯಾ ಭಾಷೆಯನ್ನು ಉಪಯೋಗಿಸಿ ಜನರ ಮನವನ್ನು ಗೆಲ್ಲುವ ಮೋದಿ ಚಾಣಾಕ್ಷತನ ಹೊಸದೇನಲ್ಲ. ಈ ಬಾರಿ ಮತ್ತೆ ನರೇಂದ್ರ ಮೋದಿ ಇಂತಹಾ ಒಂದು ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ.

ಕರ್ನಾಟಕದಲ್ಲಿ ವಿಧಾನ ಸಭೆ ಚುನಾವಣೆ ಕಾವೇರುತ್ತಿದೆ. ರಾಜ್ಯದಲ್ಲಿ ಭ್ರಷ್ಟ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಕೆಳಗಿಳಿಸಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದು ಮತ್ತೆ ರಾಜ್ಯದಲ್ಲಿ ಕಮಲದ ಕಹಳೆಯನ್ನು ಮೊಳಗಿಸಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ ಭಾರತೀಯ ಜನತಾ ಪಕ್ಷದ ನಾಯಕರು. ಈ ಕಾರಣಕ್ಕಾಗಿ ಕೊನೇ ಘಳಿಗೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಚುನಾವಣಾ ಅಖಾಡಕ್ಕಿಳಿಸಿ ಸರ್ಕಾರ ಬದಲಿಸಿ-ಬಿಜೆಪಿ ಗೆಲ್ಲಿಸಿ ಎಂಬ ಮಂತ್ರವನ್ನು ಪಠಿಸುತ್ತಿದ್ದಾರೆ.

ಬಸವಣ್ಣನ ವಚನ ಹೇಳಿದ ನಮೋ..!

ಈ ಹಿಂದೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಬಸವಣ್ಣನ ವಚನವನ್ನು ತಪ್ಪು ತಪ್ಪಾಗಿ ಹೇಳಿ ಪೇಚಿಗೆ ಸಿಲುಕಿದ್ದರು. “ಬಸವಣ್ಣ ನೇ ಕಹಾ ತಾ, ಇವನರ್ವ ಇವನರ್ವ ಇವನರ್ವ, ಇವನಂಬ್ವ ಇವನಂಬ್ವ,ಇವನಂಬ್ವ” ಎಂದು ಬಸವಣ್ಣನವರ ವಚನವನ್ನೇ ತಿರುಚಿಬಿಟ್ಟಿದ್ದರು. ಇದು ರಾಜ್ಯದಲ್ಲಿ ಭಾರೀ ತಮಾಷೆಗೂ ಕಾರಣವಾಗಿತ್ತು. ಈ ರೀತಿಯ ವಚನವನ್ನೂ ಬಸವಣ್ಣನವರು ಹೇಳಿದ್ದಾರಾ ಎಂದು ಗೇಲಿ ಮಾಡುತ್ತಿದ್ದರು. ಬಸವಣ್ಣನವರ ಈ ಭಾಷಣದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರ್ ಆಗಿತ್ತು.

ವಚನವನ್ನು ಹೇಳಲು ಬಾರದ ರಾಹುಲ್ ಗಾಂಧಿಗೆ ಈ ಉಸಾಬರಿ ಯಾಕೆ? ಕನ್ನಡಕ್ಕೆ ಮಾತ್ರವಲ್ಲ ಅವರು ಬಸವಣ್ಣನಿಗೇ ಅವಮಾನವನ್ನು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಇದು ಸ್ವತಃ ಕಾಂಗ್ರೆಸ್ಸಿಗರೇ ನಾಚಿ ತಲೆತಗ್ಗಿಸುವಂತೆ ಮಾಡಿತ್ತು.

ಇದು ಮಾತ್ರವಲ್ಲದೆ ಮಂಗಳೂರಿನ ಕಾಂಗ್ರೆಸ್ ಸಮಾವೇಶದಲ್ಲೂ ರಾಹುಲ್ ಗಾಂಧಿ ಯಡವಟ್ಟು ಮಾಡಿಕೊಂಡಿದ್ದರು. “ಬಸವಣ್ಣನೇ ಕಹಾ ತಾ ನುಡಿಡಂಟೆ ನಡೆ” ಎಂದು ತಪ್ಪಾಗಿ ಹೇಳುವ ಮೂಲಕ ಭಾರೀ ಮುಜುಗರಕ್ಕೀಡಾಗಿದ್ದರು. ಈ ವೀಡಿಯೋ ಕೂಡಾ ರಾಜ್ಯದಾದ್ಯಂತ ಟ್ರೋಲ್ ಆಗಿತ್ತು.

ಇದೀಗ ಕರ್ನಾಟಕ ರಾಜ್ಯ ಚುನಾವಣಾ ಪ್ರಚಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ರಾಹುಲ್ ಗಾಂಧಿಗೆ ನೇರ ಟಾಂಗ್ ನೀಡಿದ್ದಾರೆ. ಅಂದು ರಾಹುಲ್ ಗಾಂಧಿ ತಪ್ಪು ತಪ್ಪಾಗಿ ಉಚ್ಛರಿಸಿದ್ದ ಬಸವಣ್ಣನವರ ವಚನವನ್ನು ಸ್ಪಷ್ಟವಾಗಿ ಉಚ್ಛರಿಸುವ ಮೂಲಕ ರಾಹುಲ್ ಗಾಂಧಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ವಿಜಯಪುರದ ಬಬಲೇಶ್ವರದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದಲ್ಲಿ ಮೋದಿ ಬಸವಣ್ಣನ ವಚನವನ್ನು ಪಠಿಸಿದ್ದಾರೆ. “ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ… ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ” ಎಂದು ಸ್ಪಷ್ಟವಾಗಿ ಉಚ್ಛರಿಸುವ ಮೂಲಕ ನಕಲಿ ಕನ್ನಡ ಪ್ರೇಮಿ ಹಾಗೂ ಅಸಲಿ ಕನ್ನಡ ಪ್ರೇಮಕ್ಕೂ ವ್ಯತ್ಯಾಸವನ್ನೂ ಹಾಗೂ ಭಾಷೆಯ ಮೇಲಿರುವ ಹಿಡಿತವನ್ನೂ ಜಗದ್ಜಾಹೀರುಗೊಳಿಸಿದ್ದಾರೆ. 

ಇದು ಕಾಂಗ್ರೆಸ್ ನಾಯಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಮಾನವನ್ನು ಉಂಟು ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಹಿಂದೆ ರಾಹುಲ್ ಗಾಂಧಿ ಸರ್.ಎಂ.ವಿಶ್ವೇಶ್ವರಯ್ಯನವರ ಹೆಸರನ್ನು 5 ಬಾರಿ ಹೇಳಿಯೂ ತಪ್ಪಾಗಿ ಉಚ್ಚರಿಸಿದ್ದರು. “ವಿಶ್ವೇಶ್, ವಿಶ್ವ್, ಈಸರಯ್ಯ…” ಎನ್ನುವ ಮೂಲಕ ಮತ್ತೆ ಪೇಚಿಗೆ ಸಿಲುಕಿದ್ದರು. ಇದು ಕೂಡಾ ಭಾರೀ ಟ್ರೋಲ್ ಆಗಿತ್ತು. ನಂತರ ಪ್ರಧಾನಿ ಮೋದಿ ಕೂಡಾ ತಮ್ಮ ಭಾಷಣದಲ್ಲಿ  ರಾಹುಲ್ ಗಾಂಧಿಯ ಕಾಲೆಳೆದಿದ್ದರು. ರಾಗಾ ನೆಟ್ಟಗೆ ವಿಶ್ವೇಶ್ವರಯ್ಯನವರ ಹೆಸರನ್ನು 5 ಬಾರಿ ಹೇಳಲು ಕಲಿಯಲಿ ಎಂದು ಟಾಂಗ್ ನೀಡಿದ್ದರು. ಇದು ಭಾರೀ ವೈರಲ್ ಆಗಿದ್ದರು.

ಒಟ್ಟಾರೆ ನಮೋ ವಾಗ್ದಾಳಿಯೊಂದಿಗೆ ರಾಹುಲ್ ಗಾಂಧಿಯ ಕಾಲೆಳೆಯುವ ತಂತ್ರಗಾರಿಕೆಯೂ ಸಖತ್ ಆಗಿ ಮಾರ್ಧನಿಸುತ್ತಿದ್ದು, ಟ್ರೋಲ್ ಪ್ರಿಯರಿಗೆ ಕಲ್ಲು ಸಕ್ಕರೆ ಸಿಕ್ಕಂತಾಗಿದೆ. ಇಂದು ಮತ್ತೆ ಬಸವಣ್ಣನವರ ವಚನವನ್ನು ಸ್ಪಷ್ಟವಾಗಿ ಉಚ್ಚರಿಸಿದ್ದು ರಾಹುಲ್ ಗಾಂಧಿಗೆ ತೀವ್ರ ಮುಖಭಂಗವಾಗಿದ್ದು ಮಾತ್ರವಲ್ಲದೆ ಅವರನ್ನು ಸಮರ್ಥಿಸುತ್ತಿರುವ ಕಾಂಗ್ರೆಸ್ ನಾಯಕರಿಗೂ ಭಾರೀ ಮುಖಭಂಗವಾಗಿದ್ದರಲ್ಲಿ ಯಾವುದೇ ಅನುಮಾನವೇ ಇಲ್ಲ.

-ಸುನಿಲ್ ಪಣಪಿಲ

Tags

Related Articles

Close