ಪ್ರಚಲಿತ

ಜೆಡಿಎಸ್ ಗೆ ಬಿಗ್ ಶಾಕ್!! ಕೈ ಜೋಡಿಸಿ ಒಂದೇ ತಿಂಗಳಲ್ಲಿ ಕೈ ಕೊಟ್ಟ ಬಿಎಸ್ ಪಿ!! ಮತ್ತೆ ಶುರುವಾಗಿದೆ ಜೆಡಿಎಸ್ ಗೆ ಸಂಕಷ್ಟ!

ಜೆಡಿಎಸ್ ಪಜ್ಷವೊಂದನ್ನು ನೋಡಿದರೆ ಅಯ್ಯೋ ಪಾಪ ಎನ್ನಿಸುತ್ತಿದೆ! ಯಾಕೆ ಗೊತ್ತಾ?! ಕರ್ನಾಟಕ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಒಂದಲ್ಲ ಒಂದು ತಲೆಬಿಸಿಯಾಗಿದೆ ಕುಮಾರಣ್ಣನಿಗೆ! ಇನ್ನೂ, ಬಿಜೆಪಿ ಸದ್ಯಕ್ಕೆ ಕಾಂಗ್ರೆಸ್ ನ ಹಗರಣವೊಂದನ್ನೇ ಹಿಡಿದು ಜಗ್ಗಾಡುತ್ತೊದೆ ಅಷ್ಟೆ! ಆದರೆ, ಯಾವಾಗ ಜೆಡಿಎಸ್ ನ ಸರದಿ ಬರುತ್ತೋ ಗೊತ್ತಿಲ್ಲ! ಅರ್ಧ ಬೆಂಗಳೂರು ಕುಮಾರ ಸ್ವಾಮಿಯವರ ಆಸ್ತಿ ಎನ್ನುವಷ್ಟು ಬೆಳೆದದ್ದಲ್ಲದೇ, ಜೆಡಿಎಸ್ ಗೆ ಸೇರ್ಪಡೆಯಾಗಬೇಕೆಂದರೆ, ಸೂಟ್ ಕೇಸ್ ನೀಡಬೇಕೆಂದು ಸ್ವತಃ ಕುಟುಂಬದವರೇ ಆದ ಪ್ರಜ್ವಲ್ ರೇವಣ್ಣ ಗುಡುಗಿದ್ದರೂ ಸಹ, ಸೂಟ್ ಕೇಸ್ ಸಂಸ್ಕೃತಿಯನ್ನು ಬಿಡಲೊಲ್ಲದ ಕುಮಾರ ಸ್ವಾಮಿಯವರಿಗೆ ತಕ್ಕನಾಗಿ ಬೆಂಬಲಕ್ಕೆ ನಿಂತಿದ್ದು ತಂದೆ ದೇವೇ ಗೌಡರು!! ಅದರಲ್ಲಿಯೂ, ಕೇವಲ ಸಂಸತ್ತಿನಲ್ಲಿ ಪ್ರಶ್ನೆ ಕೇಳಲೆಂದೇ ಇದ್ದಂತಿದ್ದ ಕುಮಾರಸ್ವಾಮಿಯವರಿಗೆ ಬಹುಷಃ ಸಮರ್ಪಕವಾದ ಉತ್ತರ ನೀಡುವುದು ಗೊತ್ತಿಲ್ಲವೆನ್ನುವುದಾದರೂ ಕೂಡ, ಕರ್ನಾಟಕದಲ್ಲಿ ಒಂದು ನಾಲ್ಕು ಕ್ಷೇತ್ರಗಳಲ್ಲಿ ಶಾಶ್ವತವಾದ ಗದ್ದುಗೆಯನ್ನು ಉಳಿಸಿಕೊಂಡಿತ್ತು ಜೆಡಿಎಸ್! ಅದೂ ಸಹ ಅಭಿವೃದ್ಧಿಯ ವಿಚಾರವಾಗಲ್ಲ, ಬದಲಿಗೆ ಜಾತಿವಾರು ಲೆಕ್ಕಾಚಾರದಲ್ಲಿ!!

ಮೊದ ಮೊದಲು, ಜೆಡಿಎಸ್ ಯಾವುದೇ ಕಾರಣಕ್ಕೂ ಯಾವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪುಂಗಿ ಬಿಗಿದಿದ್ದ ಜೆಡಿಎಸ್ ಗೆ ಕೊನೆಗೇನೆನ್ನಿಸಿತೋ?! ಸೀದಾ ದೆಹಲಿಗೆ ಹೋಗಿದ್ದೇ ರಾಷ್ಟ್ರೀಯ ಪಕ್ಷವಾದ ಬಿಎಸ್ ಪಿ ಯ ಜೊತೆ ಕೈ ಜೋಡಿಸಿದ್ದಲ್ಲದೇ, ಸುದ್ದಿಗೋಷ್ಟಿಯನ್ನೂ ಕರೆದಿತ್ತು! ತಮ್ಮ ಪಕ್ಷದ ಯೋಜನೆಯನ್ನೆಲ್ಲ ಒಂದೇ ಉಸಿರಿಗೆ ಹೇಳಿದ್ದ ಜೆಡಿಎಸ್ , ಪ್ರಾದೇಶಿಕ ಪಕ್ಷಗಳ ಜೊತೆ ಸೇರಿ ಕರ್ನಾಟಕದಲ್ಲಿ ಜೆಡಿಎಸ್ ಗದ್ದುಗೆ ಸ್ಥಾಪಿಸಲೇ ಬೇಕೆಂದು ಹಠ ಹಿಡಿದಿದ್ದು ಗೊತ್ತೇ ಇದೆ ಬಿಡಿ! ಆದರೆ , ಈಗ ಜೆಡಿಎಸ್ ಗೆ ಬಹುದೊಡ್ಡ ಆಘಾತ ಎದುರಾಗಿದೆ!!

ಕರ್ನಾಟಕದಲ್ಲಿ ಬಿಎಸ್ ಪಿ ಜೊತೆ ಮೈತ್ರಿ!! ಅತ್ತ ಉತ್ತರ ಪ್ರದೇಶದಲ್ಲಿ ಬಿಎಸ್ ಪಿಯ ಜೊತೆ ಕತ್ತರಿ!

ಪಾಪ! ರಾಷ್ಟ್ರೀಯ ಪಕ್ಷ ವಾದ ಬಿಎಸ್ ಪಿಯ ಜೊತೆ ಸೇರಿ, ತಾನೂ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಬಹುದೆಂದು ಕೊಂಡಿದ್ದ ಜೆಡಿಎಸ್ ಈಗ ತಲೆಮೇಲೆ ಕೈ ಹೊತ್ತು ಕೂರುವ ಹಾಗಾಗಿದೆ!! ಯಾಕೆ ಗೊತ್ತಾ?! ಉತ್ತರ ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಬಿಎಸ್ ಪಿ ನಾಯಕರು ಪಕ್ದ ಬಿಟ್ಟು
ನಡೆದಿದ್ದಾರೆ! ಕೆಲವರು ಬಿಜೆಪಿಗೆ ಸೇರ್ಪಡೆ ಆಗಿದ್ದರೆ, ಇನ್ನು ಕೆಲವರು ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದಾರೆ! ಒಟ್ಟಾರೆಯಾಗಿ, ಬಿಎಸ್ ಪಿಯನ್ನು ಸಂಪೂರ್ಣವಾಗಿ ದಿವಾಳಿ ಎಬ್ಬಿಸಿರುವ ಮಾಜಿ ನಾಯಕರಿಂದ, ಇತ್ತ ಕರ್ನಾಟಕದಲ್ಲಿಯೂ ಸಹ, ಬಿಎಸ್ ಪಿ ನಾಯಕರು ಪಕ್ಷ ಬಿಟ್ಟು ನಡೆದಿದ್ದಾರೆ!! ಇದು, ರಾಜಕೀಯ ದೃಷ್ಟಿಯಿಂದ ನೋಡುವುದಾದರೆ, ಜೆಡಿಎಸ್ ಗೆ ಬಹುದೊಡ್ಡ ಹೊಡೆತವೇ!! ಯಾಕೆ ಹೇಳಿ?! ಬಿಎಸ್ ಪಿಯ ನಾಯಕರೇ ಪಕ್ಷ ಬಿಟ್ಟು ನಡೆದರೆ, ಇನ್ನು ಬಿಎಸ್ ಪಿ ತನ್ನ ಬೆಲೆ ಕಳೆದುಕೊಳ್ಳುವುದಲ್ಲದೇ, ಈಗಾಗಲೇ ಕ್ಷೇತ್ರಗಳನ್ನು ನಿರ್ಧರಿಸಿರುವ ಜೆಡಿಎಸ್ ಮತ್ತೆ ಹೊಸ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕಾಗುತ್ತದೆ! ಮತ್ತು, ಅಭ್ಯರ್ಥಿ ಗೆದ್ದೇ ಬಿಡುತ್ತಾನೆಂದೂ ಹೇಳುವುದು ಕಷ್ಟವಾದ್ದರಿಂದ, ಚುನಾವಣೆಗೆ ಇನ್ನು ಎರಡು ತಿಂಗಳಿರುವಾಗಲೇ ಬಿಎಸ್ ಪಿ ಕೈ ಕೊಟ್ಟಿದೆ!!

ಉತ್ತರ ಪ್ರದೇಶದಲ್ಲಿ ಸಮಾಜವಾದಿಯ ಪಕ್ಷವೊಂದು ಠೇವಣಿ ಕಳೆದುಕೊಂಡರೆ, ಅದರ ನೇರ ಪ್ರಭಾವ ಆಗುವುದು ಕರ್ನಾಟಕದ ಮೇಲೆ!! ಜೊತೆಗೆ, ಮೈತ್ರಿ ಮಾಡಿಕೊಂಡ ಜೆಡಿಎಸ್ ನ ಮೇಲೆ! ಮೈತ್ರಿ ಮಾಡಿಕೊಳ್ಳುವ ಮುಂಚೆ ಯೋಚಿಸಿದ್ದ ಕುಮಾರ ಸ್ವಾಮಿಯವರಿಗೆ ಈಗ ಸಂಕಷ್ಟಕ್ಕಿಟ್ಟುಕೊಂಡಿದೆಯಷ್ಟೇ!!

ವಾಸ್ತವವಾಗಿ ರಾಜಕೀಯದಲ್ಲಿ ಇದಃಮಿತ್ಥಂ ಎಂದು ಹೇಳಲು ಸಾಧ್ಯವೇ ಇಲ್ಲ ಬಿಡಿ! ಯಾರು ಯಾವಾಗ ಹೇಗೆ ತಿರುಗಿ ಬೀಳುತ್ತಾರೋ, ಯಾವ ಪಕ್ಷ ಗೆಲ್ಲುತ್ತದೆಯೋ, ಯಾವ ಪಕ್ಷಕ್ಕೆ ಜನ ಮತ ನೀಡುತ್ತಾರೋ, ಅಧಿಕಾರ ಹಿಡಿಯಲು ಏನೇನು ಹುನ್ನಾರಗಳು ನಡೆಯುತ್ತವೆಯೋ!! ಅಬ್ಬಾ! ರಾಜಕೀಯವೆಂದರೆ ಚದುರಂಗದಾಟ!! ಆದರೆ, ಇವತ್ತು ಸಮಾಜವನ್ನು ನಿಯಂತ್ರಿಸುತ್ತಿರುವುದೂ ಕೂಡ ಇದೇ ರಾಜಕೀಯ ಎಂದರೆ ತಪ್ಪಾಗಲಾರದು!

ಕರ್ನಾಟಕದಲ್ಲಿ ಮುಂಬರುವ ಚುನಾವಣೆಗೆ ಈಗಾಗಲೇ ಎಲ್ಲಾ ತಯಾರಿಗಳೂ ನಡೆಯುತ್ತಿದೆ! ಪ್ರತಿ ದಿನವೂ ರಾಜಕೀಯ ರಂಗದಿಂದ ಸಾರ್ವಜನಿಕರಿಗೊಂದು ಹೊಸ ಹೊಸ ವಿದ್ಯಮಾನಗಳು! ಜೊತೆಗೆ, ಚುನಾವಣೆ ಹತ್ತಿರ ಬಂದಿರುವಂತೆ ಕೆಲ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲಿದೆ! ಗೆಲ್ಲುವುದು ಸೋಲುವುದು ಬೇರೆ ಚಿಂತೆ! ಆದರೆ, ಮತಗಳನ್ನಂತೂ ಒಡೆಯುವ ಹುನ್ನಾರವೊಂದು ಸದ್ದಿಲ್ಲದೆ ಸಾಗಿದೆ! ದಿನ ಬೆಳಗಾಗುವುದರೊಳಗೆ ಹೊಸ ಪಕ್ಷಗಳು ಹುಟ್ಟಿಕೊಂಡಿವೆ. ಇನ್ನು ಕೆಲ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಮುಂದಾಗಿತ್ತು!! ಅಂತಹ ಪಕ್ಷಗಳಲ್ಲಿ ಜೆಡಿಎಸ್ ಕೂಡಾ ಒಂದು!!

ಮೊದಲನೆಯದಾಗಿ, ಜೆಡಿಎಸ್ ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ನಿಗುರಿಬಿಡುತ್ತದೆ! ಕಾರ್ಯಕರ್ತರೆಲ್ಲ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಾ ಹೂ ಎಂದು
ಒಮ್ಮೆ ದಾಂಧಲೆ ಎಬ್ಬಿಸಿ, ಕುಮಾರಣ್ಣನ ಪರ್ವ ಎಂದು ಇದ್ದಕ್ಕಿದ್ದಂತೆ ಪ್ರಚಾರಕ್ಕಿಳಿದು ಬಿಡುತ್ತಾರೆ! ಸಾಮಾಜಿಕ ಜಾಲತಾಣಗಳಲ್ಲೆಲ್ಲ ಇದ್ದಕ್ಕಿದ್ದ ಹಾಗೆ ಕುಮಾರಸ್ವಾಮಿ ಮತ್ತು ದೇವೇ ಗೌಡರು ರಾರಾಜಿಸಿ ಬಿಡುತ್ತಾರೆ! ಅಷ್ಟೇ! ಚುನಾವಣೆ ಮುಗಿಯಿತೋ, ಅಲ್ಲಿಗೆಲ್ಲ ಬಂದ್!!

ಇಷ್ಟು ದಿನವೂ ಹೀಗೆ ಇದ್ದ ಜೆಡಿಎಸ್ ಮೊನ್ನೆ ಮೈಸೂರಿನಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮೇಯರ್ ಚುನಾವಣೆಯಲ್ಲಿ ಭಾಗ್ಯವತಿಯನ್ನು ಗೆಲ್ಲಿಸಿದ್ದು ಕಾಂಗ್ರೆಸ್ ಗೆ ತೀರಾ ಮುಖಭಂಗವಾಗಿ ಹೋಗಿತ್ತು ! ಅದಲ್ಲದೇ, ರಾಜ್ಯದಲ್ಲಿಯೂ ಸಹ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಯಾಗುತ್ತದೆಂಬ ಸುದ್ದಿ ಹರಡಿತ್ತು, ಆದರೆ, ಜೆಡಿಎಸ್ ನ ಮನವೊಲಿಸಲು ಸಕಲ ತಯಾರಿ ನಡೆಸಿದ್ದ ಕಾಂಗ್ರೆಸ್ ಸಭೆ ಕೂಡಾ ನಡೆಸಿತ್ತಷ್ಟೇ!! ಆದರೀಗ ಜೆಡಿಎಸ್ ನ ದೇವೇ ಗೌಡರ ನಡೆಗೆ ಇಡೀ ರಾಜ್ಯ ಅಚ್ಚರಿಗೊಳಗಾಗಿತ್ತು!!

ದಿಕ್ಕು ಬದಲಿಸಿತ್ತು ಜೆಡಿಎಸ್!!

ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎನ್ನುತ್ತಿದ್ದ ಜೆಡಿಎಸ್, ಸಾಧ್ಯವಾದರೆ ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದಿತ್ತು! ಕೊನೆಗೆ ಮತ್ತೆ ತನ್ನ ವರಸೆ ಬದಲಿಸಿ ಇನ್ನೇನೋ ಹೇಳಿತ್ತು!. ಕೊನೆಗೆ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಜೆಡಿಎಸ್ ಕೂಡಾ ಮೈತ್ರಿಗೆ ಮುಂದಾಗಿದ್ದು ರಾಷ್ಟ್ರೀಯ ಪಕ್ಷವಾದ ಬಿಎಸ್ಪಿ ಜೊತೆಗೆ!!

ಹಾ! ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಪ್ರಾದೇಶಿಕ ಪಕ್ಷಗಳ ಜೊತರ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿದರೆ ಪ್ರಾದೇಶಿಕ ಪಕ್ಷಗಳು ಅಧಿಕಾರವನ್ನು ಹಿಡಿಯಲು ಸುಲಭವಾಗುತ್ತದೆ. ಇದೇ ಹಾದಿಯಲ್ಲಿ ಮುಂದುವರೆದರೆ, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸಬಹುದು ಎಂದು ಹೊಂಚು ಹಾಕಿದ್ದ ಕುಮಾರ ಸ್ವಾಮಿಯವರ ಯೋಜನೆ ಈಗ ತಲೆಕೆಳಗಾಗುವ ಎಲ್ಲಾ ಸೂಚನೆಯೂ ಕಾಣುತ್ತಿದೆ!!

ಜೆಡಿಎಸ್ ನ ಸದ್ಯದ ಆರೋಪವೊಂದೇ! ರಾಷ್ಟ್ರೀಯ ಪಕ್ಷಗಳು ಜನರ ಹಿತಾಸಕ್ತಿಯನ್ನು ಕಾಪಾಡುತ್ತಿಲ್ಲವೆಂಬುದೊಂದೆ! ಆದರೆ, ಜೆಡಿಎಸ್ ಏನಾದರೂ ಸ್ವಲ್ಪವಾದರೂ ಆಡಳಿತಕ್ಕೆ ಯೋಗ್ಯವಾಗಿದ್ದಿದ್ದರೆ ಕೇವಲ ಪ್ರಾದೇಶಿಕ ಪಕ್ಷವಾಗಿ ಮಾತ್ರವೇ ಉಳಿಯುತ್ತಿರಲಿಲ್ಲ ಎಂಬುದೂ ಅಷ್ಟೇ ಸತ್ಯ!! ದೇವೇ ಗೌಡರು ಪ್ರಧಾನಿಯಾದಾಗಲೇ ಜೆಡಿಎಸ್ ನನ್ನು ರಾಷ್ಟ್ರೀಯ ಪಕ್ಷವನ್ನಾಗಿ ಮಾಡಲು ಅವಕಾಶ ಸಿಕ್ಕಿತ್ತಲ್ಲವಾ?! ಆದರೆ ಜನ ಮೂಸಿಯೂ ನೋಡದ ಕಾರಣ ಕೇವಲ ಕರ್ನಾಟಕಕ್ಕೇ ಸೀಮಿತವಾಗಿದ್ದು ಜೆಡಿಎಸ್ ಪಕ್ಷ!!

ಜೆಡಿಎಸ್ ದೊಂದು ಬಹುದೊಡ್ಡ ಸಮಸ್ಯೆ ಏನೆಂದರೆ ಸಿದ್ಧಾಂತಗಳೇ ಇಲ್ಲದ ವೈಯುಕ್ತಿಕ ನಿರ್ಧಾರಗಳ ಅಡಳಿತ!! ಅತ್ತವದೇವೇ ಗೌಡರು ಮಾಯಾವತಿ ಎಂದರೆ ಇತ್ತ ಕುಮಾರಣ್ಣ ನೋ ಮೈತ್ರಿ ಎಂಬ ಹೇಳಿಕೆ ಕೊಡುತ್ತಾರೆ! ಅತ್ತ ದಾಯಾದಿಗಳಾದ ರೇವಣ್ಣ ಇನ್ನೊಂದು ಹೇಳಿಕೆ ಕೊಡುತ್ತಾರೆ! ಕೊನೆಗೆ ಸೋತು ಸುಣ್ಣವಾಗೋದು ಪಾಪ! ನಂಬಿಕೊಂಡ ಕಾರ್ಯಕರ್ತರು. ಅಕಸ್ಮಾತ್ ಏನಾದರೂ ಬಿಎಸ್ ಪಿ ತನ್ನ ಠೇವಣಿಯನ್ನೂ ಕಳೆದುಕೊಳ್ಳುವ ಸ್ಥಿತಿ ತಲುಪಿದರೆ, ಜೆಡಿಎಸ್ ಅಧಿಕಾರಕ್ಕೆ ಬರುವುದು ಕನಸೇ ಸರಿ ಎಂಬುದು ಬಹುತೇಕರ ಅಂಬೋಣವಾದರೂ, ಕುಮಾರಸ್ವಾಮಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬಹುದು ಎಂಬುದರ ಮೇಲೆ ಜೆಡಿಎಸ್ ನ ಭವಿಷ್ಯ ನಿರ್ಧಾರವಾಗಲಿದೆ!

ಅಷ್ಟಕ್ಕೂ ಬಿಎಸ್ ಪಿ ಹೆಸರಿಗಷ್ಟೇ ರಾಷ್ಟ್ರೀಯ ಪಕ್ಷ!!

ಉತ್ತರ ಪ್ರದೇಶದಲ್ಲೀಗ ಬಿಎಸ್ಪಿಯ ಯುಗ ಬಹುತೇಕ ಮುಗಿದಿದೆ! ಅದಲ್ಲದೇ ,ರಾಷ್ಟ್ರೀಯ ಪಕ್ಷ ಎಂದೆನಿಸಿಕೊಂಡ ಬಿಎಸ್ಪಿ ಮುಂಚೆ ಇಂದಲೂ ಯಾವ ಸ್ವಾಗತಾರ್ಹವಾದ ಅಧಿಕಾರವನ್ನು ನೀಡಿಲ್ಲ. ಅದಲ್ಲದೇ, ಭಾರತದಲ್ಲಿ ಬಹುತೇಕ ರಾಜ್ಯಗಳಲ್ಲಿ ಬಿಎಸ್ ಪಿಯ ಅಸ್ತಿತ್ವವೇ ಇಲ್ಲದಿರುವಾಗ, ಪ್ರಾದೇಶಿಕ ಪಕ್ಷಗಳು ಇಂತಹ ಪಕ್ದ ಜೊತೆ ಮೈತ್ರಿ ಮಾಡಿಕೊಂಡರೆ ಮತಗಳು ಭಾಗವಾಗಬಹುದೇ ಹೊರತು, ಅಧಿಕಾರವಂತೂ ಅಲ್ಲ.!!

Source : Public Tv

– ಪೃಥು ಅಗ್ನಿಹೋತ್ರಿ

Tags

Related Articles

Close