ಪ್ರಚಲಿತ

ಬ್ರೇಕಿಂಗ್! ಕುಮಾರಸ್ವಾಮಿಗೂ ದಕ್ಕಲಿಲ್ಲ ಮುಖ್ಯಮಂತ್ರಿ ಸ್ಥಾನ..! ಪ್ರಮಾಣವಚನಕ್ಕೂ ಮೊದಲೇ ಅಪಶಕುನ..!

ರಾಜ್ಯ ರಾಜಕೀಯ ವ್ಯವಸ್ಥೆಯಲ್ಲೇ ಈ ರೀತಿಯ ಸನ್ನಿವೇಶ ಎದುರಾದ ಉದಾಹರಣೆ ಇರಲಿಕ್ಕಿಲ್ಲ. ಚುನಾವಣೆ ಮುಗಿದು ಫಲಿತಾಂಶ ಹೊರ ಬಿದ್ದರೂ ಯಾವುದೇ ಪಕ್ಷ ಆಡಳಿತ ನಡೆಸಲಾಗದೆ ಪರದಾಡುವಂತಾಗಿದೆ. ‌ಭಾರತೀಯ ಜನತಾ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಆದರೂ ಬಹುಮತ ಸಾಧಿಸಲು ಸಾಧ್ಯವಾಗದೆ ಸರಕಾರ ರಚಿಸಲಾಗಲಿಲ್ಲ. ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರಕಾರ ರಚಿಸಲು ಮುಂದಾಗಿದೆ.‌ ಬಿಜೆಪಿಯಿಂದ ಬಿಎಸ್ ಯಡಿಯೂರಪ್ಪ ನವರು ಪ್ರಮಾಣವಚನ ಸ್ವೀಕರಿಸಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದರೂ ಬಹುಮತ ಸಾಬೀತು ಪಡಿಸಲು ಆಗದೆ ಇದೀಗ ರಾಜೀನಾಮೆ ನೀಡಿದ್ದಾರೆ. ಮೈತ್ರಿ ಮಾಡಿಕೊಂಡು ಅಧಿಕಾರದ ಆಸೆಯಿಂದ ಕಾಯುತ್ತಿರುವ ಕುಮಾರಸ್ವಾಮಿಗೂ ಇದೀಗ ಒಂದೊಂದೇ ಕಂಟಕ ಎದುರಾಗಿದೆ..!

ಪ್ರಮಾಣವಚನ ಮುಂದೂಡಿಕೆ..!

ಯಡಿಯೂರಪ್ಪ ನವರು ಮುಖ್ಯಮಂತ್ರಿ ಆದ ಎರಡೇ ದಿನಕ್ಕೆ ರಾಜೀನಾಮೆ ನೀಡಿ ಇಡೀ ರಾಜಕೀಯ ವ್ಯವಸ್ಥೆಯಲ್ಲೇ ಒಂದು ಅಚ್ಚಳಿಯದ ನೆನಪು ಮಾಡಿಟ್ಟರು. ಇತ್ತ ಅಧಿಕಾರ ಸಿಕ್ಕಿಯೇ ಬಿಟ್ಟಿತು ಎಂದು ಬೀಗುತ್ತಿರುವ ಕುಮಾರಸ್ವಾಮಿ ನಾಳೆ ಅಂದರೆ ಸೋಮವಾರ ಬೆಳಿಗ್ಗೆ ಬೆಂಗಳೂರಿನ ಕಂಠೀರವ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಲು ತಯಾರಿ ನಡೆಸಿದ್ದರು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದರೂ ಕೂಡ ಬಹುಮತ ಸಾಬೀತು ಪಡಿಸಲೇ ಬೇಕು. ಈಗಾಗಲೇ ಬಹುಮತಕ್ಕೆ ಬೇಕಾದ ಶಾಸಕರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಿದೆ ಆದರೂ ನಾಳಿನ ದಿನ ಏನಾಗುತ್ತದೆ ಎಂಬುದು ಕಾದು ನೋಡಬೇಕು.

Related image

ನಾಳೆ ರಾಜೀವ್ ಗಾಂಧಿ ಅವರ ಪುಣ್ಯತಿಥಿಯಾಗಿರುವುದರಿಂದ ಪ್ರಮಾಣವಚನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಗೈರಾಗುತ್ತಾರೆ. ಆದ್ದರಿಂದ ಕಾಂಗ್ರೆಸ್ ನಾಯಕರು ಈಗಾಗಲೇ ಈ ಬಗ್ಗೆ ಕುಮಾರಸ್ವಾಮಿ ಅವರ ಜೊತೆ ಮಾತುಕತೆ ನಡೆಸಿದ್ದು, ಬುಧವಾರ ಪ್ರಮಾಣವಚನ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ.

ಮುಖ್ಯಮಂತ್ರಿ ಆಗಿ ಕುಮಾರಸ್ವಾಮಿ ಅವರು ಪ್ರಮಾಣವಚನ ಸ್ವೀಕರಿಸಿದರೆ ಉಪಮುಖ್ಯಮಂತ್ರಿಯಾಗಿ ಜಿ ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನು ಸಚಿವ ಸಂಪುಟದ ಯಾರೂ ಕೂಡ ಮಂಗಳವಾರ ಪ್ರಮಾಣವಚನ‌ ಸ್ವೀಕರಿಸುವುದಿಲ್ಲ ಎನ್ನಲಾಗಿದೆ.‌

ಕುಮಾರಸ್ವಾಮಿಗೂ ದಿನಾಂಕ ಫಿಕ್ಸ್..!

ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೆ ಬಿಎಸ್ ಯಡಿಯೂರಪ್ಪ ನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಕುಮಾರಸ್ವಾಮಿಗೂ ಇದೇ ಪರೀಕ್ಷೆ ಎದುರಾಗಿದೆ. ಯಾಕೆಂದರೆ ಕುಮಾರಸ್ವಾಮಿ ಕೇವಲ ಮುಖ್ಯಮಂತ್ರಿ ಎಂದು ಘೋಷಿಸಲಾಗಿದೇ ಹೊರತು ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದ್ದರಿಂದ ಪ್ರಮಾಣವಚನ ಸ್ವೀಕರಿಸಿದ ನಂತರ ಬಹುಮತ ಸಾಬೀತಿಗೆ ದಿನಾಂಕ ನಿಗದಿ ಮಾಡಲಾಗುತ್ತದೆ. ವಿಶ್ವಾಸಮತಯಾಚನೆಯ ಬಳಿಕ ಸಂಪುಟದ ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ..!

ಆದ್ದರಿಂದ ಇನ್ನೂ ಕುಮಾರಸ್ವಾಮಿ ಅವರಿಗೂ ಮುಖ್ಯಮಂತ್ರಿ ಕುರ್ಚಿ ಕಣ್ಣೆದುರಿಗಿದೇ ಹೊರತು ಕೂರುವಂತಿಲ್ಲ.‌ ಒಂದೆಡೆ ಮೈತ್ರಿ ಸರಕಾರ, ಕಾಂಗ್ರೆಸ್ ನಾಯಕರೂ ಕೂಡ ಅಧಿಕಾರದ ಆಸೆಯಲ್ಲಿಯೇ ಇರುವುದರಿಂದ ಇನ್ನೂ ಎರಡು ದಿನಗಳಲ್ಲಿ ಏನಾಗುತ್ತದೆ ಎಂಬುದು ಕಾದುನೋಡಬೇಕಾಗಿದೆ..!

–ಅರ್ಜುನ್

Tags

Related Articles

Close