ಪ್ರಚಲಿತ

ಬಿಗ್ ಬ್ರೇಕಿಂಗ್: ಸಿದ್ದು ತವರಿಗೆ ಲಗ್ಗೆಯಿಡಲಿದ್ದಾರೆ ಪ್ರಧಾನಿ ಮೋದಿ!! ಚಾಮುಂಡಿಗೆ ಎನ್ನುತ್ತಾರಾ “ನಮೋ”..? ಸಿಎಂಗೆ ನಡುಕವುಂಟಾಗಿದ್ದು ಯಾಕೆ ಗೊತ್ತಾ?!

ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಯ ಕಾವು ಜೋರಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವೂ ಜೋರಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಲೇ ಬೇಕು ಎಂದು ಟೊಂಕ ಕಟ್ಟಿ ನಿಂತಿದ್ದಾರೆ ಕಮಲ ಪಡೆಯ ನಾಯಕರು. ಹೀಗಾಗಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರನ್ನು ಕರ್ನಾಟಕಕ್ಕೆ ಕರೆತಂದು ಅಬ್ಬರದ ಪ್ರಚಾರ ಮಾಡಿಸುವಲ್ಲಿ ನಿರತರಾಗಿದ್ದಾರೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈಗಾಗಲೇ ಒಂದೊಂದು ಸುತ್ತಿನ ಮತ ಭೇಟೆಯನ್ನು ಮಾಡಿ ತೆರಳಿದ್ದಾರೆ.

ಸಿದ್ದು ತವರಿಗೆ ಲಗ್ಗೆಯಿಡಲಿದ್ದಾರೆ ನಮೋ…

ಎಸ್… ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಈ ಬಾರಿಯ ಹೆಜ್ಜೆ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರಿಗೆ ಲಗ್ಗೆ ಇಡಲಿದೆ. ಮುಖ್ಯಮಂತ್ರಿಗಳ ತವರು ಮೈಸೂರಿನಲ್ಲಿ ಈ ಬಾರಿ ನರೇಂಧ್ರ ಮೋದಿ ಮ್ಯಾಜಿಕ್ ಮಾಡಲಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೇ ನೇರ ಟಾಂಗ್ ಕೊಡಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. ಈ ಮೂಲಕ ಮುಖ್ಯಮಂತ್ರಿಗಳ ತವರಿನಲ್ಲೇ ಸಿದ್ದರಾಮಯ್ಯರಿಗೆ ಚಳಿ ಹುಟ್ಟಿಸಲು ಮುಂದಾಗಿದ್ದಾರೆ. ಇದೇ ತಿಂಗಳು 19ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೈಸೂರಿಗೆ ಆಗಮಿಸಲಿದ್ದು ಕಾಂಗ್ರೆಸ್ ನಾಯಕರಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನಡುಕ ಉಂಟಾಗಿದೆ.

 

ಫೆಬ್ರವರಿ 18ಕ್ಕೆ ಮೈಸೂರಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿಯವರು 19ಕ್ಕೆ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾ ಮಸ್ತಕಾಭಿಶೇಕದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾದ ಇಇಎಸ್ ಆಸ್ಪತ್ರೆ ಹಾಗೂ ಮೈಸೂರು ರೈಲನ್ನು ಉಧ್ಘಾಟಿಸಲಿದ್ದಾರೆ. ನಂತರ ಮೈಸೂರಿನಲ್ಲಿ ಆಯೋಜಿಸಿರುವ ಭಾರತೀಯ ಜನತಾ ಪಕ್ಷದ ಬೃಹತ್ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಲಿದ್ದಾರೆ.

ಚಾಮುಂಡಿಗೆ ನಮೋ ಎನ್ನುತ್ತಾರಾ..?

ವಿಶ್ವ ವಿಖ್ಯಾತ ಚಾಮುಂಡಿ ದೇವಿಯ ದರ್ಶನವನ್ನು ಪ್ರಧಾನಿ ನರೇಂದ್ರ ಮೋದಿಯವರು ಪಡೆಯುತ್ತಾರಾ ಎನ್ನುವ ಪ್ರಶ್ನೆಯೂ ಮೂಡುತ್ತಿದೆ. ಮೋದಿಯವರ ಮೈಸೂರು ಕಾರ್ಯಕ್ರಮದ ವೇಳಾ ಪಟ್ಟಿಯಲ್ಲಿ ಈ ಕಾರ್ಯಕ್ರಮ ಇಲ್ಲವಾಗಿದ್ದು, ತಕ್ಷಣ ಭೇಟಿ ನೀಡುವ ಸಂಭವವೂ ಇದೆ ಎನ್ನಲಾಗಿದೆ. ಹೀಗಾಗಿ ಮೈಸೂರಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.

 

ಬೆಂಗಳೂರಿನಲ್ಲಿ ಚಳಿ ಹುಟ್ಟಿಸಿದ್ದ ಮೋದಿ…

ಫೆಬ್ರವರಿ 4ರಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದ್ದರು. ಕಾಂಗ್ರೆಸ್‍ನ ನೀಚ ರಾಜಕಾರಣದ ಪರಿಣಾಮದಿಂದ ಪ್ರಧಾನಿ ನರೇಂದ್ರ ಮೋದಿಯವರ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ರಾಜ್ಯದಾದ್ಯಂತ ಬಂದ್ ಹಾಗೂ ಪ್ರತಿಭಟನೆಗಳಿಗೆ ಕರೆ ಕೊಟ್ಟಿದ್ದರು. ಆದರೆ ಆಗಲೇ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಂದ್ ನಡುವೆಯೂ ನಡೆದ ಅದ್ಭುತ ಜಾಥಾವನ್ನು ಕಂಡಿದ್ದ ಕನ್ನಡ ಪರ ಸಂಘಟನೆಗಳಿಗೆ ಹಾಗೂ ಸ್ವಯಂಘೋಷಿತ ನಾಯಕ ವಾಟಾಳ್ ನಾಗರಾಜ್‍ನಂತಹ ಭ್ರಷ್ಟರಿಗೆ ಪ್ರಧಾನಿ ಮೋದಿಯವರನ್ನು ತಡೆಯಲು ಕಷ್ಟವಾಯಿತು. ಬಂದ್ ನಡುವೆಯೂ ಭಾರತೀಯ ಜನತಾ ಪಕ್ಷಗಳ ಅಬ್ಬರವನ್ನು ನೋಡಿದ್ದ ಕಾಂಗ್ರೆಸ್‍ನ ನಾಯಕರು ಪ್ರಧಾನಿ ಮೋದಿಯವರನ್ನು ತಡೆಯುವ ಗೋಜಿಗೆ ಹೋಗಲಿಲ್ಲ.

ಮೋದಿಯನ್ನು ಟೀಕಿಸಿದ್ದ ಸಿದ್ದರಾಮಯ್ಯ…!

ಬೆಂಗಳೂರಿನಲ್ಲಿ ಆರ್ಭಟಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಟೀಕಾಪ್ರಹಾರವನ್ನೇ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಪ್ರತಿ ಮಾತನ್ನೂ ಹುಡುಕಿ ಹುಡುಕಿ ಸುಳ್ಳು ಸುಳ್ಳು ಟೀಕೆಗಳನ್ನು ಮಾಡುತ್ತಿದ್ದರು. ಆದರೆ ಪ್ರಧಾನಿ ಮೋದಿಯವರು ಈಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರಿಗೇ ಎಂಟ್ರಿ ಕೊಡಲಿದ್ದು ಭಾರೀ ಸಂಚಲನವನ್ನೇ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‍ನ ಘಟಾನುಘಟಿ ನಾಯಕರಿಗೇ ಭಾರೀ ತಲೆ ನೋವಾಗಿ ಪರಿಣಮಿಸಿದೆ. ಅದೆಷ್ಟೇ ಚುನಾವಣಾ ಸ್ಟಾಟರ್ಜಿ ನಡೆಸಿದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷವನ್ನು ಎದುರಿಸಲು ಸಾಧ್ಯವಿಲ್ಲ ಎಂಬುವುದು ಮನದಟ್ಟಾಗಿದೆ.

ನಂಬರ್ ವನ್ ರಾಜ್ಯಕ್ಕೆ ಸ್ವಾಗತ ಎಂದಿದ್ದ ಮುಖ್ಯಮಂತ್ರಿ…

ಫೆಬ್ರವರಿ 4ರಂದು ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿ ನಂತರ ಮೋದಿ ಆಗಮನ ಖಚಿತವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕಕ್ಕಾಬಿಕ್ಕಿಯಾಗಿದ್ದರು. ಈ ವೇಳೆ ದಾರಿ ದೋಚದ ಅವರು ಬೆಂಗಳೂರಿನಾದ್ಯಂತ ಮೋದಿ ಬರುವ ದಾರಿಯುದ್ದಕ್ಕೂ ತನ್ನದೇ ಬ್ಯಾನರ್‍ಗಳನ್ನು ಹಾಕಿಕೊಂಡು ಶೋ ಮಾಡಲು ಮುಂದಾದರು. “ನಂಬರ್ 1 ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿಗೆ ಸ್ವಾಗತ” ಎಂದು ತನ್ನದೇ ಭಾವಚಿತ್ರವನ್ನು ಹಾಕಿಕೊಂಡು ಪೋಸು ಕೊಡಲು ಮುಂದಾದರು. ಆದರೆ ಇದ್ಯಾವುದೂ ವರ್ಕೌಟ್ ಆಗಲೇ ಇಲ್ಲ. ಮೋದಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಅಬ್ಬರಿಸಿದ್ದರು.

ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಈಗ ಸಿದ್ದರಾಮಯ್ಯರ ತವರು ಮೈಸೂರಿಗೆ ಆಗಮಿಸುತ್ತಿದ್ದು, ಮುಖ್ಯಮಂತ್ರಿಗಳು ಸಹಿತ ಕಾಂಗ್ರೆಸ್ ನಾಯಕರ ಎದೆಯಲ್ಲಿ ಢವ ಢವ ಶುರುವಾಗಿದೆ. ಮಾತ್ರವಲ್ಲದೆ ಮೈಸೂರಿನಲ್ಲಿ ತಾನು ಸ್ಥಾಪಿಸಲು ಹೊರಟಿದ್ದ ಸಾಮ್ರಾಜ್ಯಕ್ಕೆ ಪ್ರಧಾನಿ ಮೋದಿ ಎಲ್ಲಿ ಕಲ್ಲು ಹಾಕುತ್ತಾರೋ ಎಂಬ ಭಯವೂ ಮುಖ್ಯಮಂತ್ರಿಗಳನ್ನು ಕಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಪದೇ ಪದೇ ಟೀಕಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ತನ್ನ ತವರು ಕ್ಷೇತ್ರದಲ್ಲೆ ಮೋದಿ ಅಬ್ಬರವನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹೊಡೆದ ಎಂದರೆ ತಪ್ಪಾಗಲಾರದು.

-ಸುನಿಲ್ ಪಣಪಿಲ

Tags

Related Articles

Close