ಪ್ರಚಲಿತ

ಬ್ರೇಕಿಂಗ್! ಸೋಲಿನ ಭೀತಿಯಲ್ಲಿ ಮೃತ ಮಗನ ಪತ್ನಿಯನ್ನು ಎಳೆದು ತಂದ ಸಿದ್ದರಾಮಯ್ಯ..! ಸೊಸೆಗೆ ಜೈ ಅನ್ನುತ್ತಾರಾ ಮತದಾರರು..?

ಈ ಬಾರಿ ತಿಪ್ಪರಲಾಗ ಹಾಕಿದ್ರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲೋದು ಖಚಿತವಾಗಿದೆ. ಆರಂಭದಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ಮುಯಖ್ಯಮಂತ್ರಿ ಸಿದ್ದರಾಮಯ್ಯ ನಂತರ ಅಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದು ತಿಳಿದ ತಕ್ಷಣವೇ ಅಲ್ಲಿಂದ ಮತ್ತೊಂದು ಟಿಕೆಟ್ ಪಡೆದು ಬಾದಾಮಿಗೆ ತೆರಳುತ್ತಾರೆ. ಆದರೆ ಯಾವಾಗ ಬಳ್ಳಾರಿ ಕಿಂಗ್ ಶ್ರೀ ರಾಮುಲು ಬಾದಾಮಿ ಟಿಕೆಟ್ ಪಡೆದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಚುನಾವಣಾ ಅಖಾಡಕ್ಕೆ ಇಳಿಯುತ್ತಾರೋ ಅಂದಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮತ್ತೆ ಭಯ ಕಾಡಲಾರಂಭಿಸಿದೆ.

ಮಗನ ಪತ್ನಿಯನ್ನು ಎಳೆದು ತಂದ ಸಿದ್ದರಾಮಯ್ಯ..!

ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್‍ನ ಜಿಟಿ ದೇವೇಗೌಡರ ಎದುರು ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲೋದು ಖಚಿತ ಎಂಬ ಮಾಹಿತಿ ಸಿದ್ದರಾಮಯ್ಯರಿಗೆ ಅರಿವಾದ ನಂತರ ಅವರು ಬಾದಾಮಿ ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅಲ್ಲೂ ಸೋಲುತ್ತೇನೆ ಎಂಬ ಮಾಹಿತಿಯ ನಂತರ ಇದೀಗ ಸಿಕ್ಕ ಸಿಕ್ಕವರನ್ನೆಲ್ಲಾ ಒಟ್ಟು ಸೇರಿಸಿ ತನ್ನ ಪರವಾಗಿ ಪ್ರಚಾರ ನಡೆಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಸ್ಟಾರ್ ಪ್ರಚಾರಕರು ಬಹತೇಕ ಮೈಸೂರಿನಲ್ಲೇ ಬೀಡು ಬಿಟ್ಟಿದ್ದಾರೆ.

ಇಂದು ಗುಜರಾತ್‍ನಲ್ಲಿ ಸಿಂಪತಿ ಕ್ರಿಯೇಟ್ ಮಾಡಿ ಮೋಸದಿಂದ ಗೆಲುವನ್ನು ಕಂಡಂತಹ ಜಿಗ್ನೇಶ್ ಮೇವಾನಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಪ್ರಚಾರ ಮಾಡಲು ಮೈಸೂರಿಗೆ ಆಗಮಿಸಿ ಬಾಯಿಗೆ ಬಂದ ಹಾಗೆ ಪ್ರಧಾನಿ ಮೋದಿ ಹಾಗೂ ಭಾರತೀಯ ಜನತಾ ಪಕ್ಷವನ್ನು ನಿಂದಿಸಿ ತೆರಳಿದ್ದಾನೆ. ಹೀಗೆ ಒಬ್ಬೊಬ್ಬರನ್ನೇ ಛೂ ಬಿಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ತನ್ನ ಮಗನ ಪತ್ನಿಯನ್ನೇ ಎಳೆದು ತಂದಿದ್ದಾರೆ.

ಹೌದು… ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚುನಾವಣಾ ಅಖಾಡದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೃತ ಮಗ ದಿ.ರಾಕೇಶ್ ಸಿದ್ದರಾಮಯ್ಯನವರ ಪತ್ನಿ ಸ್ಮಿತಾ ರಾಕೇಶ್ ಪ್ರಚಾರಕ್ಕೆ ಇಳಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲೋದು ಖಚಿತವಾಗುತ್ತಲೇ ಅವರ ಮಗನ ಪತ್ನಿಯನ್ನೂ ಎಳೆದು ತಂದು ಪ್ರಚಾರ ಮಾಡುವಂತೆ ಸೂಚಿಸಿದ್ದಾರೆ. ಈ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ದಿ.ರಾಕೇಶ್ ಸಿದ್ದರಾಮಯ್ಯನವರ ಪತ್ನಿ ಸ್ಮಿತಾ ರಾಕೇಶ್ ತನ್ನ ಮಾವನ ಪರವಾಗಿ ಮೈಸೂರಿನ ಚಾಮುಂಡೇಶ್ವರಿಯಲ್ಲಿ ಮತ ಕೇಳುತ್ತಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಆಲನಹಳ್ಳಿ ಬಡಾವಣೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಅವರ ಮಗನ ಹೆಂಡತಿ ಸ್ಮಿತಾ ರಾಕೇಶ್ ಮತಪ್ರಚಾರ ನಡೆಸಿದ್ದಾರೆ. ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿರುವ ಸ್ಮಿತಾ ರಾಕೇಶ್ ತನ್ನ ಮಾವನ ಪರವಾಗಿ ಮತ ಭೇಟೆ ನಡೆಸುತ್ತಿದ್ದಾರೆ. ಶತಾಯ ಗತಾಯ ಗೆಲ್ಲಲೇ ಬೇಕು ಎಂಬ ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿ ತನ್ನ ಕುಟುಂಬ ಸದಸ್ಯರನ್ನೂ ಎಳೆದು ತಂದು ಚುನಾವಣಾ ಪ್ರಚಾರವನ್ನು ನಡೆಸುತ್ತಿದೆ.

ಸೋಲಿನ ಭೀತಿಯಿಂದ ಹತಾಶರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ತನ್ನ ಕುಟುಂಬ ಸದಸ್ಯರೆಲ್ಲರನ್ನೂ ಚುನಾವಣಾ ಅಖಾಡಕ್ಕೆ ಎಳೆದು ತಂದು ತನ್ನ ಪರವಾಗಿ ಮತ ಕೇಳುವಂತೆ ಮಾಡುತ್ತಿದ್ದಾರೆ. ಆದರೆ ಮತದಾರ ಮಾತ್ರ ತಾನು ಜೆಡಿಎಸ್ ಅಭ್ಯರ್ಥಿ ಜಿಟಿ ದೇವೇಗೌಡರಿಗೇ ಮತ ಹಾಕೋದು ಎಂದು ಹೇಳುತ್ತಿದ್ದಾನೆ. ಚಾಮುಂಡೇಶ್ವರಿಯ ಕೃಪೆ ಯಾರ ಮೇಲಿದೆ ಎಂಬುವುದನ್ನು ಮೇ 15ರ ವರೆಗೆ ಕಾದು ನೋಡಬೇಕಾಗಿದೆ.

-ಸುನಿಲ್ ಪಣಪಿಲ

Tags

Related Articles

Close