ಪ್ರಚಲಿತ

ತವರು ಜಿಲ್ಲೆಯಲ್ಲೇ ಸೋಲೊಪ್ಪಿಕೊಂಡ ಸಿದ್ದರಾಮಯ್ಯ.!! ಪ್ರಚಾರದಿಂದಲೇ ಪಲಿತಾಂಶ ಕಂಡುಕೊಂಡರೇ ಸಿಎಂ.?!

ರಾಜ್ಯದಲ್ಲಿ ದಿನೇ ದಿನೇ ಕುತೂಹಲ ಕೆರಳಿಸುತ್ತಿರುವ ವಿಧಾನಸಭಾ ಚುನಾವಣೆ ಭಾರೀ ಸದ್ದು ಮಾಡುತ್ತಿದೆ. ರಾಜಕೀಯ ಪಕ್ಷಗಳ ಭರ್ಜರಿ ಪ್ರಚಾರವೂ ಈಗಾಗಲೇ ಆರಂಭವಾಗಿದೆ. ಭಾರೀ ಪೈಪೋಟಿಗೆ ಇಳಿದಿರುವ ರಾಜಕೀಯ ಪಕ್ಷಗಳು ಕರ್ನಾಟಕದಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿರುವುದರಿಂದ ಕಾಂಗ್ರೆಸ್ ಸೋಲಿನ ಭೀತಿ ತಪ್ಪಿದ್ದಲ್ಲ. ಇತ್ತ ಸಿದ್ದರಾಮಯ್ಯನವರು ಸರ್ವಾಧಿಕಾರದ ಆಡಳಿತ ನಡೆಸುತ್ತಿರುವುದರಿಂದ ಸ್ವತಃ ಕಾಂಗ್ರೆಸಿಗರೇ ಅಸಮಧಾನಗೊಂಡಿದ್ದಾರೆ ಎಂದರೆ ತಪ್ಪಾಗದು.

ಇಡೀ ದೇಶದಲ್ಲೇ ಪಕ್ಷ ವಿಸ್ತರಿಸಿಕೊಂಡು ಮುಂದುವರಿದಿರುವ ಬಿಜೆಪಿಗೆ ಕರ್ನಾಟಕ ಸವಾಲಾಗಿರುವುದು ಒಪ್ಪಿಕೊಳ್ಳಲೇ ಬೇಕು. ಮೋದಿ-ಷಾ ಮೋಡಿಗೆ ಕಾಂಗ್ರೆಸ್ ತತ್ತರಿಸಿರುವುದರಿಂದ ಕರ್ನಾಟಕವನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕು ಎಂದು ಹರಸಾಹಸ ಪಡುತ್ತಿದೆ.! ಇತ್ತ ಸಿದ್ದರಾಮಯ್ಯನವರು ತಾನೇ ಮುಂದಿನ ಬಾರಿಯೂ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಒಟ್ಟಾರೆಯಾಗಿ ಇಡೀ ದೇಶದ ಚಿತ್ತ ಕರ್ನಾಟಕದತ್ತ ನೆಟ್ಟಿದೆ ಎಂದರೆ ತಪ್ಪಾಗದು.

ತವರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ..!

ಈಗಾಗಲೇ ಪ್ರಚಾರಕ್ಕೆ ಇಳಿದಿರುವ ಸಿದ್ದರಾಮಯ್ಯನವರು ತಮ್ಮ ತವರು ಕ್ಷೇತ್ರವಾದ ಮೈಸೂರಿನಲ್ಲಿ ತಾವೇ ಸ್ಪರ್ಧಿಸುವುದಾಗಿ ಈಗಾಗಲೇ ಹೇಳಿಕೊಂಡಿದ್ದಾರೆ. ಅದಕ್ಕಾಗಿಯೇ ತಯಾರಿ ನಡೆಸುತ್ತಿರುವ ಸಿಎಂ ದೇವಾಲಯಗಳಿಗೆ ಭೇಟಿ ನೀಡಿ ಓಲೈಕೆ ರಾಜಕಾರಣಕ್ಕೆ ಮುಂದಾಗಿದ್ದಾರೆ. ಮೈಸೂರಿನಲ್ಲಿ ಸತತ ಕಾರ್ಯಕ್ರಮ , ಪಕ್ಷದ ಸಭೆ , ಕಾರ್ಯಕರ್ತರ ಭೇಟಿ ಹೀಗೆ ಸಾಲು ಸಾಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. ಆದರೆ ಸಿದ್ದರಾಮಯ್ಯನವರನ್ನು ತಮ್ಮ ತವರು ಜಿಲ್ಲೆಯಲ್ಲೇ ಮಣಿಸಲು ತಂತ್ರ ರೂಪಿಸಿರುವ ಬಿಜೆಪಿ ಚಾಣಕ್ಯ ಅಮಿತ್ ಷಾ, ಬಿಜೆಪಿಯಿಂದ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಸಲಿದ್ದಾರೆ. ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಿ ಬಿಜೆಪಿಯ ಬಾವುಟ ಹಾರಿಸುವುದು ಬಹುತೇಕ ಖಚಿತವಾಗಿದೆ.

ಸಿದ್ದರಾಮಯ್ಯನವರಿಗೆ ಬಿಗ್ ಶಾಕ್..!

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಇದೇ ಮೊದಲೇನಲ್ಲಾ. ಆದರೂ ಪಟ್ಟು ಬಿಡದ ಸಿಎಂ ಪದೇ ಪದೇ ಜಿಲ್ಲೆಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಇದೀಗ ಸ್ವತಃ ಸಿದ್ದರಾಮಯ್ಯನವರ ವಿರುದ್ಧ ಒಕ್ಕಲಿಗರು ತಿರುಗಿ ಬಿದ್ದಿದ್ದಾರೆ. ಸಿದ್ದರಾಮಯ್ಯನವರು ಆಡಳಿತದ ಅಹಂಕಾರದಿಂದ ನಡೆದುಕೊಂಡು ಬಂದಿದ್ದು, ಸಂಪೂರ್ಣವಾಗಿ ಒಕ್ಕಲಿಗರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ ಒಕ್ಕಲಿಗ ಸಮಾಜದ ಹಿರಿಯರು ಚಾಮುಂಡೇಶ್ವರಿಗೆ ಆಗಮಿಸಿದ ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಕ್ಕಲಿಗರು ಅಧಿಕವಾಗಿ ಇರುವ ಕ್ಷೇತ್ರಗಳಿಗೆ ಸಿದ್ದರಾಮಯ್ಯನವರು ಭೇಟಿಯೂ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡ ಒಕ್ಕಲಿಗ ಸಮಾಜದವರು ಸಿದ್ದರಾಮಯ್ಯನವರನ್ನು ಸೋಲಿಸುವುದೇ ನ‌ಮ್ಮ ಗುರಿ ಎಂದಿದ್ದಾರೆ.!

 

ಸಿದ್ದರಾಮಯ್ಯನವರು ಪ್ರಚಾರಕ್ಕೆ ತೆರಳಿದ ವೇಳೆ ಯಾವುದೇ ಸ್ವಾಗತವೂ ದೊರೆಯಲಿಲ್ಲ. ಮುಖ್ಯಮಂತ್ರಿಯಾಗಿ ಇದ್ದರೂ ಕ್ಯಾರೇ ಅನ್ನದ ಜಿಲ್ಲೆಯ ಜನತೆ ಸಿದ್ದರಾಮಯ್ಯನವರಿಗೆ ಛೀಮಾರಿ ಹಾಕಿದ್ದರೆ.

ಚಾಮುಂಡೇಶ್ವರಿಯ ೨೧ ಗ್ರಾಮಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯನವರಿಗೆ ಯಾವುದೇ ಕಾರಣಕ್ಕೂ ಗೆಲ್ಲುಲು ಬಿಡುವುದಿಲ್ಲ ಎಂದ ಒಕ್ಕಲಿಗರು ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದ್ದಾರೆ.! ಇದರಿಂದ ಇರುಸು-ಮುರಿಸು ಉಂಟಾಗಿದ್ದು , ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ.!

ಸಿದ್ದರಾಮಯ್ಯನವರ ತುಷ್ಡೀಕರಣದ ನೀತಿಗೆ ಇಡೀ ರಾಜ್ಯದ ಜನತೆ ತಿರುಗಿಬಿದ್ದಿದ್ದು , ಕಾಂಗ್ರೆಸ್ ಗೆ ಸೋಲು ಕಟ್ಟಿಟ್ಟಬುತ್ತಿ. ಆದ್ದರಿಂದಲೇ ಈಗಾಗಲೇ ಅನೇಕ ನಾಯಕರು ಬಿಜೆಪಿ ಸೇರ್ಪಡೆಯಾಗಿದ್ದು ಸಿದ್ದರಾಮಯ್ಯನವರ ಸರ್ವಾಧಿಕಾರದ ಆಡಳಿತಕ್ಕೆ ಛೀಮಾರಿ ಹಾಕಿದ್ದಾರೆ.!

–ಅರ್ಜುನ್

Tags

Related Articles

Close