ಪ್ರಚಲಿತ

ಕಾಂಗ್ರೆಸ್ ಸಚಿವನಿಗೆ ಛೀಮಾರಿ ಹಾಕಿ ಮೋದಿಗೆ ಜೈಕಾರ ಹಾಕಿದ ಜನತೆ.! ಪ್ರಚಾರಕ್ಕೆ ತೆರಳಿದ ಕೈ ಸಚಿವರಿಗೆ ಬಿತ್ತು ಭಾರೀ ಹೊಡೆತ.!

ಚುನಾವಣೆ ಸಮೀಪಿಸುತ್ತಿದ್ದಂತೆ ಬೀದಿ ನಾಟಕ ಆರಂಭಿಸಿರುವ ಕಾಂಗ್ರೆಸ್ ಗೆ ರಾಜ್ಯದ ಜನತೆ ಸಖತ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಾ ಇದ್ದಾರೆ. ಚುನಾವಣಾ ದಿನಾಂಕ ಘೋಷಣೆಯ ನಂತರದಲ್ಲಿ ಅಭ್ಯರ್ಥಿಗಳ ಹೆಸರನ್ನೂ ಕಾಂಗ್ರೆಸ್ ಬಿಡುಗಡೆಗೊಳಿಸಿದೆ. ಇದಾದ ಕೂಡಲೇ ಬಹಳ ಹುಮ್ಮಸ್ಸಿನಿಂದ ಪ್ರಚಾರಕ್ಕಿಳಿದ ಕಾಂಗ್ರೆಸ್ ನಾಯಕರಿಗೆ ಸಾರ್ವಜನಿಕರಿಂದಲೇ ಛೀಮಾರಿ ಬೀಳುತ್ತಿದ್ದು, ಪಕ್ಷದ ಮುಖಂಡರಿಗೆ ಭಾರೀ ತಲೆನೋವಾಗಿದೆ. ಈಗಾಗಲೇ ಸಿದ್ದರಾಮಯ್ಯನವರ ವಿರುದ್ಧ ರಾಜ್ಯದ ಜನತೆ ತಿರುಗಿ ಬಿದ್ದಿದ್ದು, ಇದೀಗ ಪ್ರಚಾರಕ್ಕೆ ಆಗಮಿಸಿದ ಕೈ ಸಚಿವರಿಗೆ ಕ್ಷೇತ್ರದ ಜನರು‌ ಛೀಮಾರಿ ಹಾಕಿ ಪ್ರಧಾನಿ ಮೋದಿಗೆ ಜೈಕಾರ ಕೂಗಿದ ಘಟನೆ ಇಂದು ನಡೆದಿದೆ.

ಕಾಂಗ್ರೆಸ್ ಸಚಿವನಿಗೆ ಬಿತ್ತು ಧಿಕ್ಕಾರ..!

ರಾಜ್ಯ ಕಾಂಗ್ರೆಸ್ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದಂತಹ ಎಚ್.‌ಆಂಜನೇಯ ಇಂದು ರಾಯಚೂರು, ಚಿತ್ರದುರ್ಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಪಕ್ಷದ ಪ್ರಚಾರಕ್ಕೆಂದು ತೆರಳಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಆದ್ದರಿಂದಲೇ ಭಾರೀ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಹೋದಲ್ಲೆಲ್ಲಾ ವಿರೋಧ ವ್ಯಕ್ತವಾಗುತ್ತಿದ್ದು, ರಾಜ್ಯ ಸರಕಾರದ ಜನವಿರೋಧಿ ನೀತಿಯ ಫಲ ಸಿಕ್ಕಂತಾಗಿದೆ. ಎಚ್ .ಆಂಜನೇಯ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಸ್ವತಃ ಸಿದ್ದರಾಮಯ್ಯನವರಿಗೆ ರಾಜ್ಯದ ಜನರು ಈ ಹಿಂದೆ ಛೀಮಾರಿ ಹಾಕಿದ್ದು, ಇದೀಗ ರಾಜ್ಯ ಸರಕಾರದ ಸಚಿವರಿಗೆ ತಮ್ಮ ಕ್ಷೇತ್ರದ ಜನ ವಿರೋಧ ವ್ಯಕ್ತಪಡಿಸಿದ್ದಾರೆ.

ಇಂದು ತನ್ನ ಸಂಗಡಿಗರ ಜೊತೆ ಪ್ರಚಾರಕ್ಕೆಂದು ತೆರಳಿದ ಆಂಜನೇಯರನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು ಇಷ್ಟು ವರ್ಷ ನಮ್ಮ ನೆನಪೇ ಇರದ ನೀವು ಈಗ ಚುನಾವಣೆಗೆ ಮತ ಯಾಚಿಸಲು ಯಾವ ಮುಖ ಇಟ್ಟುಕೊಂಡು ಬಂದಿದ್ದೀರಾ? ಎಂದು ವಿರೋಧ ವ್ಯಕ್ತಪಡಿಸಿದರು.

ಸಚಿವನಿಗೆ ಛೀಮಾರಿ ಹಾಕಿ ಮೋದಿಗೆ ಜೈ ಎಂದ ಜನತೆ..!

ಎಚ್. ಆಂಜನೇಯ ಕಾಂಗ್ರೆಸ್ ಪ್ರಚಾರಕ್ಕೆ ಬೀದಿಗಿಳಿದಿದ್ದರು. ಬಹಳ‌ ಹುಮ್ಮಸ್ಸಿನಿಂದ ಹೊರಟ ಸಚಿವನಿಗೆ ಎದುರಾಗಿದ್ದು ಭಾರೀ ಹೊಡೆತ. ಯಾಕೆಂದರೆ ಆಂಜನೇಯ ಆಗಮಿಸುತ್ತಿದ್ದಂತೆ ಕ್ಷೇತ್ರದ ಜನ ಪ್ರಧಾನಿ ಮೋದಿಗೆ ಜೈಕಾರ ಕೂಗಿದರು. ಕಾಂಗ್ರೆಸಿಗರ ಎದುರೇ ಮೋದಿ ಮೋದಿ ಮೋದಿ ಎಂದು ಕೂಗಲು ಆರಂಭಿಸಿದರು. ‌ಇದರಿಂದ ಕಂಗಾಲಾದ ಸಚಿವ ಪೇಚೆಗೆ ಸಿಲುಕಿದರು. ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಾಸ್ ನಡೆದ ಎಚ್.ಆಂಜನೇಯ ತಲೆತಗ್ಗಿಸುವಂತಾಯಿತು.

ಪ್ರಧಾನಿ ಮೋದಿ ಬಿಜೆಪಿಯ ಪ್ರಚಾರಕ್ಕೆ ಇನ್ನೂ ರಾಜ್ಯಕ್ಕೆ ಆಗಮಿಸಿಲ್ಲ. ಮೋದಿ ಆಗಮನಕ್ಕಾಗಿ ಇಡೀ ರಾಜ್ಯದ ಜನತೆ ಯಾವ ರೀತಿಯಲ್ಲಿ ಕಾಯುತ್ತಿದ್ದಾರೆ ಎಂಬುದು ಅರಿವಾಗುತ್ತದೆ.

ಎಲ್ಲಾ ರೀತಿಯಲ್ಲೂ ಕಾಂಗ್ರೆಸ್ ನ್ನು ರಾಜ್ಯದ ಜನತೆ ವಿರೋಧಿಸುತ್ತಾರೆ ಎಂಬುವುದಕ್ಕೆ ಈ ಘಟನೆ ಸಣ್ಣ ಉದಾಹರಣೆ ಅಷ್ಟೇ. ಯಾಕೆಂದರೆ ಸ್ವತಃ ಸಿದ್ದರಾಮಯ್ಯನವರ ಭಾಷಣದ ವೇಳೆಯೇ ಸಭೆಯಲ್ಲಿ ಸೇರಿದ್ದ ಜನ ಮೋದಿಗೆ ಜೈಕಾರ ಹಾಕಿರುವ ಘಟನೆ ಈ ಹಿಂದೆ ನಡೆದಿತ್ತು. ಅಂತೂ ರಾಜ್ಯದ ಜನತೆ ಕಾಂಗ್ರೆಸ್ ನ್ನು ಕಿತ್ತೊಗೆಯಲು ಎಲ್ಲಾ ತಯಾರಿ ನಡೆಸಿದ್ದು, ಈ ಬಾರಿಯ ಚುನಾವಣೆ ಭಾರೀ ಸದ್ದು ಮಾಡುತ್ತಿದೆ.!!

–ಅರ್ಜುನ್

 

Tags

Related Articles

Close