ಪ್ರಚಲಿತ

ಕಾಂಗ್ರೆಸ್ ವಾರ್ ರೂಮ್ ನಲ್ಲಿ ಬಿಜೆಪಿ ದರ್ಬಾರ್..! ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಗೆ ಛೀಮಾರಿ ಹಾಕಿದ ರಾಜ್ಯದ ಜನತೆ..!

ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬೇಕೆಂದು ನಾನಾ ಬಗೆಯ ಕಸರತ್ತು ಆರಂಭಿಸಿರುವ ಕಾಂಗ್ರೆಸ್ ಗೆ ಪ್ರತಿಯೊಂದು ಪ್ರಯತ್ನದಲ್ಲೂ ಹಿನ್ನಡೆಯಾಗುತ್ತಲೇ ಇದೆ. ಈಗಾಗಲೇ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇರುವುದನ್ನು ಮನಗಂಡಿರುವ ರಾಜ್ಯ ಸರಕಾರ ತಮ್ಮದೇ ಕೆಲವೊಂದು ಸಾಮಾಜಿಕ ಜಾಲತಾಣದ ವೆಬ್ ಸೈಟ್ ಗಳಲ್ಲಿ ಮತದಾರರು ಯಾರ ಪರ ಇದ್ದಾರೆ ಎಂಬುವುದನ್ನು ಪರೀಕ್ಷಿಸಲು ಪೋಲ್ ಒಂದನ್ನು ತಯಾರಿಸಿ ವೋಟ್ ತಮ್ಮ ಇಷ್ಟ ಪಕ್ಷಕ್ಕೆ ವೋಟ್ ಮಾಡುವಂತೆ ಕೇಳಿಕೊಂಡಿತ್ತು. ಕಾಂಗ್ರೆಸ್ ಲೆಕ್ಕಾಚಾರ ಪ್ರಕಾರ ತಾವು ಮಾಡಿರುವ ಪೋಲ್ ತಮ್ಮದೇ ಫೇಸ್‌ಬುಕ್‌ ಪೇಜ್ ನಲ್ಲಿ ಇರುವುದರಿಂದ ಕಾಂಗ್ರೆಸ್ ಗೆ ಹೆಚ್ಚಿನ ವೋಟ್ ಬೀಳಬಹುದು ಎಂಬುದಾಗಿತ್ತು. ಆದರೆ ಅಲ್ಲಿ ನಡೆದದ್ದೇ ಬೇರೆ..!

ಕಾಂಗ್ರೆಸ್ ಅಂಗಳದಲ್ಲಿ ಬಿಜೆಪಿ ಹವಾ..!

ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಾ ಇದ್ದಾರೆ. ಅದೇ ರೀತಿ ‘ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಕಮಿಟಿ – ಐ ಟಿ ಸೆಲ್’ ಎಂಬ ಫೇಸ್‌ಬುಕ್‌ ಪೇಜ್ ನಲ್ಲಿ ಈ ಬಾರಿ ಕರ್ನಾಟಕದಲ್ಲಿ ಯಾರು ಜಯಗಳಿಸುತ್ತಾರೆ ಎಂಬ ಶೀರ್ಷಿಕೆಯೊಂದಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಯ ಹೆಸರನ್ನು ನಮೂದಿಸಲಾಗಿತ್ತು. ಇದು ಕೇವಲ ಕಾಂಗ್ರೆಸ್ ಕಾರ್ಯಕರ್ತರೇ ಇರುವ ಪೇಜ್ ಆಗಿದ್ದು , ಅಡ್ಮಿನ್ ಗಳ ಪ್ರಕಾರ ಕಾಂಗ್ರೆಸ್ ಗೆ ಹೆಚ್ಚು ವೋಟ್ ಬೀಳಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ ಈ ಪೇಜ್ ನ ಲಿಂಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ತಕ್ಷಣ ವೋಟ್ ಮಾಡಲು ಆರಂಭಿಸಿದ್ದಾರೆ. ಇದರಿಂದಾಗಿ ಈವರೆಗೆ ಒಟ್ಟು ೨,೫೪೧ ವೋಟ್ ಬಿದ್ದಿದ್ದು ಇದರಲ್ಲಿ ಶೇಕಡಾ ೭೫ರಷ್ಟು ಜನ ಬಿಜೆಪಿ ಪರ ವೋಟ್ ಮಾಡಿದ್ದರೆ, ಕೇವಲ ೨೫ರಷ್ಟು ಜನ ಕಾಂಗ್ರೆಸ್ ಗೆ ವೋಟ್ ಹಾಕಿದ್ದಾರೆ.

ಬಿಜೆಪಿ ಕಾರ್ಯಕರ್ತರ ಘರ್ಜನೆಗೆ ಮಂಕಾದ ಕಾಂಗ್ರೆಸ್..!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಸೂಚನೆಯಂತೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಹೇಳಿದ ದಿನದಿಂದಲೇ ಬಿಜೆಪಿ ಪರ ಹೊಸ ಅಲೆಯೇ ಸೃಷ್ಟಿಯಾಗಿದೆ. ಏನೇ ನಡೆದರು ಅದನ್ನು ಫೇಸ್‌ಬುಕ್‌, ವಾಟ್ಸಾಪ್ ಗಳಲ್ಲಿ ಹಂಚಿಕೊಂಡು ಪ್ರತಿಯೊಬ್ಬ ಜನರಿಗೂ ತಿಳಿಯುವಂತೆ ಮಾಡಲಾಗುತ್ತದೆ. ಕಾಂಗ್ರೆಸ್ ಕೂಡಾ ಬಿಜೆಪಿ ಉಪಾಯವನ್ನೇ ನಕಲಿ ಹೊಡೆದಿದ್ದು ತಾವೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿ ಇದ್ದೇವೆ ಎಂದು ತೋರ್ಪಡಿಸಿಕೊಳ್ಳಲು ಈ ರೀತಿ ಮಾಡಿದ್ದರು. ಆದರೆ ತಮ್ಮದೇ ಪೇಜ್ ನಲ್ಲಿ ಕೇವಲ ಶೇಕಡಾ ೨೫ ವೋಟ್ ಪಡೆದ ಕಾಂಗ್ರೆಸ್ ಗೆ ಭಾರೀ ಮುಖಭಂಗ ಉಂಟಾಗಿದೆ.

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನ್ನು ಸೋಲಿಸಲು ಯಾವ ರೀತಿ ಸಜ್ಜಾಗಿದ್ದಾರೆ ಎಂಬುವುದಕ್ಕೆ ಇದೊಂದು ಸಣ್ಣ ಉದಾಹರಣೆಯಷ್ಟೇ..! ಯಾಕೆಂದರೆ ಕಾಂಗ್ರೆಸ್ ನ ಮೈದಾನ , ಕಾಂಗ್ರೆಸ್ ನ ಆಟಗಾರರು , ಕಾಂಗ್ರೆಸ್ ನದ್ದೇ ತೀರ್ಪುಗಾರರು , ಆದರೆ ಹೊಡಿಬಡಿ ಆಟ ಮಾತ್ರ ಬಿಜೆಪಿಯವರದ್ದಾಗಿತ್ತು ಎಂಬುದು ಮಾತ್ರ ಸುಳ್ಳಲ್ಲ..!

–ಅರ್ಜುನ್

Tags

Related Articles

Close