ಪ್ರಚಲಿತ

ಸಿಎಂಗೆ ಐಟಿ ಶಾಕ್! ಸಿದ್ದರಾಮಯ್ಯ ಬೆಡ್ ರೂಂನಲ್ಲಿ ಸಿಕ್ಕ ಹಣವೆಷ್ಟು ಗೊತ್ತಾ..? ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಸಿಎಂ ಇಬ್ರಾಹಿಂ..!

ಭ್ರಷ್ಟರು, ಭ್ರಷ್ಟರು ಎಂದು ವಿರೋಧ ಪಕ್ಷಗಳ ನಾಯಕರ ಕಡೆಗೆ ಬೆರಳು ತೋರಿಸಿ ಹಿಯಾಳಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಿನ್ನೆ ಐಟಿ ಶಾಕ್ ಬಿಸಿ ಮುಟ್ಟಿಸಿದೆ. ಚುನಾವಣಾ ಅಖಾಡದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖರ್ಚು ಮಾಡಲು ಇಟ್ಟಿರುವ ಹಣಗಳನ್ನು ಐಟಿ ಇಲಾಖೆ ವಶಪಡಿಸಿಕೊಂಡಿದೆ.

ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2 ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಸೋಲಿನ ಭೀತಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡು ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಶತಾಯ ಗತಾಯ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಈ ಬಾರಿ ಸೋಲಿಸಲೇ ಬೇಕು ಎಂದು ಪಣ ತೊಟ್ಟಿರುವ ಭಾರತೀಯ ಜನತಾ ಪಕ್ಷ ಹಾಗೂ ಜನತಾ ದಳ 2 ಕ್ಷೇತ್ರದಲ್ಲೂ ಬಲಿಷ್ಟ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ. ಹೀಗಾಗಿ ಚುನಾವಣೆಗೆ ಭರ್ಜರಿ ಹಣಗಳನ್ನು ಖರ್ಚು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮೊರೆ ಹೋಗಿದ್ದಾರೆ.

ಹೈವೋಲ್ಟೇಜ್ ಕಣವಾಗಿರುವ ಬಾದಾಮಿಯಲ್ಲಿ ಇದೀಗ ಹಣದ ಹೊಳೆಯನ್ನೇ ಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರ್ಧರಿಸಿದ್ದು, ಇದಕ್ಕಾಗಿ ಕಮಿಷನ್ ತೆಗೆದುಕೊಂಡಿಟ್ಟಿರುವ ಹಣಗಳನ್ನೆಲ್ಲಾ ಖರ್ಚು ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ..! ಮೈಸೂರಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಯಾವ ಕಾರಣಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆಲುವು ಕಾಣೋದಿಲ್ಲ ಎಂಬ ವಿಚಾರ ಸ್ಪಷ್ಟವಾಗುತ್ತಲೇ ನಂತರ ಬಾದಾಮಿ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗುತ್ತಾರೆ.

ಆದೆರೆ ಆ ಕೂಡಲೇ ಭಾರತೀಯ ಜನತಾ ಪಕ್ಷ ಬಳ್ಳಾರಿ ಸಂಸದ ಶ್ರೀ ರಾಮುಲು ಅವರನ್ನು ಅಖಾಡಕ್ಕೆ ಇಳಿಸುತ್ತೆ. ಇದರಿಂದ ಕಂಗೆಟ್ಟು ಹೋಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣದ ಮೂಲಕ ಚುನಾವಣೆಯನ್ನು ಗೆಲ್ಲಲು ನಿರ್ಧರಿಸಿದ್ದಾರೆ.

ನಿನ್ನೆ ರಾತ್ರಿಯ ವೇಳೆ ಬಾದಾಮಿಯ ರೆಸಾರ್ಟ್‍ವೊಂದಕ್ಕೆ ದಾಳಿ ಮಾಡಿ ಚುನಾವಣೆಗೆ ಸಂಗ್ರಹಿಸಿಟ್ಟಿದ್ದ ದಾಖಲೆ ಇಲ್ಲದ ಹಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಾದಾಮಿ ಹೊರವಲಯದಲ್ಲಿರುವ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್‍ಗೆ ಸೇರಿದ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿದೆ. ರಾತ್ರಿ 11 ಗಂಟೆಯ ಸುಮಾರಿಗೆ ದಾಳಿ ನಡೆಸಿದ 10ಕ್ಕೂ ಅಧಿಕ ಐಟಿ ಅಧಿಕಾರಿಗಳ ತಂಡ ಕೊಠಡಿಯಲ್ಲಿದ್ದ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದೆ.

  ೧೫ ಲಕ್ಷಕ್ಕಿಂತಲೂ ಅಧಿಕ ರೂ ವಶಕ್ಕೆ..?

ಬಾದಾಮಿಯ ಈ ರೆಸಾರ್ಟ್‍ನಲ್ಲಿ ತಂಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಠಡಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಡ್ ರೂಂ ನಲ್ಲಿ ದಾಖಲೆ ಇಲ್ಲದ ಬರೋಬ್ಬರಿ 15 ಲಕ್ಷ ರೂಗಳು ಸಿಕ್ಕಿದ್ದು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಕೆಲವು ಮಹತ್ವದ ದಾಖಲೆಗಳನ್ನು ಕಲೆ ಹಾಕುತ್ತಿರುವ ಐಟಿ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಚಳಿ ಹುಟ್ಟಿಸಲು ಎಲ್ಲ ಕೆಲಸಗಳನ್ನೂ ನಡೆಸುತ್ತಿದ್ದಾರೆ. ಸಮಾಜವಾದಿ ಸಮಾಜವಾದಿ ಎಂದು ಕರೆಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡೆರಡು ಕ್ಷೇತ್ರಗಳಲ್ಲಿ ಕೋಟ್ಯಾಂತರ ರೂಗಳನ್ನು ವ್ಯಯಿಸಿ ತಾನೊಬ್ಬ ಸಮಾಜವಾದಿ ಅಲ್ಲ ಮಜವಾದಿ ಎಂಬುವುದನ್ನು ನಿರೂಪಿಸಿಬಿಟ್ಟಿದ್ದಾರೆ.

ಇಬ್ರಾಹಿಂ ಎಸ್ಕೇಪ್..!

ಇನ್ನು ಐಟಿ ಅಧುಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಇಬ್ರಾಹಿಂ ಅದೇ ಸ್ಥಳದಲ್ಲಿ ಇದ್ದಿದ್ದು ಅಧಿಕಾರಿಗಳು ಬೇಗ ಹೋಗಿಯಾರು ಎಂದೇ ತಿಳಿದುಕೊಂಡಿದ್ದರು. ಆದರೆ ಐಟಿ ಅಧಿಕಾರಿಗಳು ಜಾಗ ಖಾಲಿ ಮಾಡದ ಕಾರಣ ರಾತ್ರಿ 2 ಗಂಟೆಗೆ ಅಲ್ಲಿಂದ ತೆರಳಿದ್ದಾರೆ. ನಂತರ ನಾನು ರೆಸಾರ್ಟ್‍ಗೆ ಊಟ ಮಾಡಲು ಬಂದಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

ಒಟ್ಟಾರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರನ್ನು ಗೆಲ್ಲಲು ಕಾಂಚಾಣದ ಮೊರೆ ಹೋಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಐಟಿ ಇಲಾಖೆ ಸಖತ್ ಶಾಕ್‍ನ್ನು ನೀಡಿದ್ದು ಇದು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚುನಾವಣೆಗೂ ಭಾರೀ ಹೊಡೆತ ನೀಡುತ್ತೆ ಎಂದೇ ಹೇಳಲಾಗುತ್ತಿದೆ.ಐಟಿ ಅಧಿಕಾರಿಗಳು ನಂತರವೂ ತೀವ್ರ ಶೋಧದಲ್ಲಿ ತೊಡಗಿದ್ದು ರೆಸಾರ್ಟ್‍ಗೆ ಬಂದೋಬಸ್ತ್ ನೀಡಲಾಗಿದೆ. ಇನ್ನು ಕಾಂಗ್ರೆಸ್ ಕಾರ್ಯಕರ್ತರ ಎದೆಯಲ್ಲಿ ಭಾರೀ ನಡುಕ ಆರಂಭವಾಗಿದೆ.

-ಸುನಿಲ್ ಪಣಪಿಲ

Tags

Related Articles

Close