ಪ್ರಚಲಿತ

ಶಾಕಿಂಗ್! ಬರೋಬ್ಬರಿ ೨೦೦೦ ಕಾಂಗ್ರೆಸಿಗರು ಬಿಜೆಪಿಗೆ.! ನೆಲಕಚ್ಚಿರುವ ಕಾಂಗ್ರೆಸ್‍ಗೆ ಮತ್ತೊಂದು ಬಿಗ್ ಶಾಕ್!!

ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮೈತ್ರಿ ಸರಕಾರಕ್ಕೆ ದಿನ ಕಳೆದಂತೆ ಅಡೆತಡೆಗಳು ಹೆಚ್ಚಾಗುತ್ತಿದ್ದು, ಕುಮಾರಸ್ವಾಮಿ ಅವರಿಗೆ ಭಾರೀ ತಲೆನೋವಾಗಿದೆ. ಯಾಕೆಂದರೆ ಈಗಾಗಲೇ ಸಚಿಚ ಸ್ಥಾನ ವಂಚಿತ ಶಾಸಕರು ಸರಕಾರಕ್ಕೆ ಸೆಡ್ಡು ಹೊಡೆದಿದ್ದು, ನೇರವಾಗಿ ರಾಜೀನಾಮೆ ನೀಡುವ ಬೆದರಿಕೆಯೊಡ್ಡಿದ್ದರು. ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದ ಶಾಸಕರಿಗೆ ನಿರಾಸೆ ಉಂಟು ಮಾಡಿದ ಮೈತ್ರಿ ಸರಕಾರ ತಮಗೆ ಬೇಕಾದ ರೀತಿಯಲ್ಲಿ ಸಚಿವ ಸಂಪುಟ ರಚನೆ ಮಾಡಿಕೊಂಡಿತ್ತು. ಆದ್ದರಿಂದಲೇ ಆಕ್ರೋಶಗೊಂಡ ಶಾಸಕರು ಬಹಿರಂಗವಾಗಿಯೇ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಶಾಸಕರ ನಡೆಯಿಂದಲೇ ಕಂಗಾಲಾಗಿದ್ದ ಸರಕಾರಕ್ಕೆ ಇದೀಗ ಮತ್ತೊಂದು ಭಾರೀ ಹೊಡೆತ ಬಿದ್ದಿದೆ.!

೨೦೦೦ ಕಾರ್ಯಕರ್ತರು ಬಿಜೆಪಿ ಪಾಲು..!

ಕಾಂಗ್ರೆಸ್ ಅಧಿಕಾರಕ್ಕಾಗಿ ಜೆಡಿಎಸ್ ಜೊತೆ ಕೈಜೋಡಿಸಿಕೊಂಡಿರುವುದನ್ನು ವಿರೋಧಿಸುತ್ತಲೇ ಬಂದಿರುವ ಕೈ ಕಾರ್ಯಕರ್ತರು ಇದೀಗ ಪಕ್ಷಕ್ಕೆ ಗುಡ್ ಬೈ ಹೇಳಿ ಭಾರತೀಯ ಜನತಾ ಪಕ್ಷದ ಕಮಲ ಹಿಡಿದಿದ್ದಾರೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನೇತ್ರತ್ವದಲ್ಲಿ ಒಡಿಶಾದ ಬರಂಬಾ ಬ್ಲಾಕ್ ಕಾಂಗ್ರೆಸ್‌ನ ಬರೋಬ್ಬರಿ ಎರಡು ಸಾವಿರ ಕಾರ್ಯಕರ್ತರು ಬಿಜೆಪಿಗೆ ಅಧಿಕೃತವಾಗಿ ಸೇರ್ಪೇಗೊಂಡಿದ್ದಾರೆ.‌

ಈಗಾಗಲೇ ಕಾಂಗ್ರೆಸ್ ತೊರೆದು ಅನೇಕ ಮುಖಂಡರು ಮತ್ತು ಅವರ ಬೆಂಬಲಿಗರು ಬಿಜೆಪಿ ಸೇರಿದ್ದು, ಇದೀಗ ಮೈತ್ರಿ ಸರಕಾರದಲ್ಲಿ ಶಾಸಕರು ಕಿತ್ತಾಡಿಕೊಳ್ಳುತ್ತಿರುವ ಬೆನ್ನಲ್ಲೇ ಕಾರ್ಯಕರ್ತರು ಭಾರೀ ಹೊಡೆತ ನೀಡಿದ್ದಾರೆ. ಒಂದೆಡೆ ಕಾಂಗ್ರೆಸ್ ಶಾಸಕರು ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷಕ್ಕೆ ವಿರೋಧವಾಗಿ ನಿಂತಿದ್ದು, ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇ ಆದಲ್ಲಿ ಮೈತ್ರಿ ಸರಕಾರ ಮುರಿದುಬೀಳುವುದು ಗ್ಯಾರಂಟಿ. ಆದ್ದರಿಂದಲೇ ಪಕ್ಷದ ಮುಖಂಡರು ಶಾಸಕರ ಮನವೊಲಿಕೆಗೆ ನಾನಾ ರೀತಿಯ ಪ್ರಯತ್ನ ನಡೆಸುತ್ತಿದ್ದು, ಯಾವುದು ಕೂಡ ಫಲ ನೀಡುತ್ತಿಲ್ಲ. ಮೊದಲೇ ಈ ವಿಚಾರವಾಗಿ ಕಂಗೆಟ್ಟಿರುವ ಕುಮಾರಸ್ವಾಮಿ ಸರಕಾರಕ್ಕೆ ಇದೀಗ ಮತ್ತೊಂದು ಶಾಕ್ ಉಂಟಾಗಿದೆ.!

ಐಎಎಸ್‌ ಅಧಿಕಾರಿಯೂ ಬಿಜೆಪಿ ಪಾಳಯಕ್ಕೆ..!

ಕಾಂಗ್ರೆಸ್‌ನಿಂದ ಕೇವಲ ಎರಡು ಸಾವಿರ ಕಾರ್ಯಕರ್ತರು ಮಾತ್ರವೇ ಬಿಜೆಪಿ ಸೇರುತ್ತಿಲ್ಲ, ಬದಲಾಗಿ ಮಾಜಿ ಐಎಎಸ್‌ ಅಧಿಕಾರಿ ಅಶೀಕ್ ಕುಮಾರ್ ತ್ರಿಪಾಟಿ ಅವರೂ ಕೂಡ ಭಾರತೀಯ ಜನತಾ ಪಕ್ಷದ ವತಿಯಿಂದ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ತ್ರಿಪಾಟಿ ಅವರಿಗೆ ಅತೀ ಹೆಚ್ಚು ಬೆಂಬಲಿಗರೂ ಇರುವುದರಿಂದ ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ. ಈ ಬಗ್ಗೆ ಮಾತನಾಡಿದ ಧರ್ಮೇಂದ್ರ ಪ್ರಧಾನ್, ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡ ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ ಕೋರುತ್ತೇವೆ, ತ್ರಿಪಾಟಿ ಅವರ ಆಗಮನದಿಂದ ನಮ್ಮ ಪಕ್ಷ ಇನ್ನೂ ಬಲಿಷ್ಟವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ಆದ್ದರಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡಿದ್ದು, ಕಾಂಗ್ರೆಸ್‌ ತುಂಬಲಾರದ ನಷ್ಟ ಅನುಭವಿಸಿದೆ.!

–ಅರ್ಜುನ್

Tags

Related Articles

Close