ಪ್ರಚಲಿತ

ಬಿಗ್ ಬ್ರೇಕಿಂಗ್: ಕಾಂಗ್ರೆಸ್ ಅಭ್ಯರ್ಥಿ ಮೇಲೆ ಎಫ್‍ಐಆರ್..! ಬಂಧನವಾಗುತ್ತಾರಾ ಕಾಂಗ್ರೆಸ್ ಶಾಸಕ? ಕಾಂಗ್ರೆಸ್ ಕೌಂಟ್ ಡೌನ್ ಸ್ಟಾರ್ಟ್…!

ಕಳೆದ 5 ವರ್ಷದಲ್ಲಿ ಅನುಭವಿಸಿದ ಅಧಿಕಾರದ ಮದ ಹಾಗೂ ಅಹಂಕಾರದ ಪಾಪಗಳು ಚುನಾವಣೆ ಹತ್ತಿರ ಬರುತ್ತಿರುವಾಗಲೂ ಕಾಂಗ್ರೆಸ್ ಪಕ್ಷವನ್ನು ಸುತ್ತುವರೆಯುತ್ತಿದೆ. ಹತ್ಯೆ, ಸುಲಿಗೆ, ಅತ್ಯಾಚಾರ ಪ್ರಕರಣಗಳ ಪಾಪವು ಇದೀಗ ಕಾಂಗ್ರೆಸ್ ಪಕ್ಷವನ್ನು ಚುನಾವಣೆ ಹತ್ತಿರ ಬರುತ್ತಿರುವಾಗಲೇ ಮುಗಿಸುತ್ತಿದೆ. 

ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಎಫ್‍ಐಆರ್..!

ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಜಾಲಹಳ್ಳಿ ಎಂಬಲ್ಲಿ ಪತ್ತೆಯಾದ ರಾಶಿ ರಾಶಿ ನಕಲಿ ಓಟರ್ ಕಾರ್ಡ್‍ಗಳ ಕುರಿತು ನಡೆಯುತ್ತಿರುವ ವಿಚಾರಣೆ ಇದೀಗ ಸ್ವತಃ ಕಾಂಗ್ರೆಸ್ ಶಾಸಕನಿಗೇ ಉರುಳಾಗಿ ಕಾಡಿದೆ. ಇನ್ನೇನು ಚುನಾವಣೆ ಬಂದಾಗಿದೆ, ಇನ್ನೆರಡು ದಿನದಲ್ಲಿ ಮತದಾರರು ತನ್ನ ಹಣೆಬರಹವನ್ನು ನಿರ್ಧರಿಸಲಿದ್ದಾರೆ, ಈ ಮಧ್ಯೆ ಕಾಂಗ್ರೆಸ್ ಶಾಸಕ ಹಾಗೂ ರಾಜ ರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರ ವಿರುದ್ಧ ಭಾರೀ ಆಪಾದನೆಯೊಂದು ಕೇಳಿ ಬಂದಿದ್ದು, ಪತ್ತೆಯಾದ ರಾಶಿ ರಾಶಿ ನಕಲಿ ಓಟ್ ಕಾರ್ಡ್ ಮುನಿರತ್ನ ಚುನಾವಣೆ ಗೆಲ್ಲಲು ಹೂಡಿದ್ದ ತಂತ್ರಗಾರಿಕೆ ಎಂದೆಲ್ಲಾ ಕೇಳಿ ಬರುತ್ತಿತ್ತು.

ಭಾರತೀಯ ಜನತಾ ಪಕ್ಷದ ನಾಯಕರು ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರ ಮೇಲೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ದೂರಿನನ್ವಯ ವಿಚಾರಣೆಯನ್ನು ಕೈಗೆತ್ತಿಕೊಂಡ ರಾಜ್ಯ ಚುನಾವಣಾ ಆಯೋಗ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರ ಮೇಲೆ ಎಫ್.ಐ.ಆರ್ ದಾಖಲಿಸಿಕೊಂಡಿದೆ.

ನಿನ್ನೆ ತಾನೇ ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಜಾಲಹಳ್ಳಿ ಫ್ಲಾಟ್ ಒಂದರಲ್ಲಿ ರಾಶಿ ರಾಶಿ ನಕಲಿ ಓಟರ್ ಕಾರ್ಡ್‍ಗಳು ಪತ್ತೆಯಾಗಿದ್ದವು. ಈ ನಕಲಿ ಓಟ್ ಕಾರ್ಡುಗಳು ಕೇರಳ ಮೂಲದ ವ್ಯಕ್ತಿಗಳ ಭಾವಚಿತ್ರ ಹಾಗೂ ಅವರ ದಾಖಲೆಗಳನ್ನು ಹೊಂದಿತ್ತು. ಚುನಾವಣೆಯಲ್ಲಿ ಗೆಲ್ಲಲು ತಂತ್ರ ಹೂಡಿರುವ ಕಾಂಗ್ರೆಸ್ 50 ಸಾವಿರಕ್ಕೂ ಅಧಿಕ ಓಟ್ ಕಾರ್ಡುಗಳನ್ನು ತಯಾರಿಸಿ ಮತಚಾಲಾಯಿಸಿ ಸುಲಭ ಜಯವನ್ನು ದಕ್ಕಿಸಿಕೊಳ್ಳುವುದು ಕಾಂಗ್ರೆಸ್ ಲೆಕ್ಕಾಚಾರವಾಗಿತ್ತು.

ಆದರೆ ಕಾಂಗ್ರೆಸ್ ನಾಯಕರ ಈ ಕುತಂತ್ರ ದಂಧೆಯನ್ನು ಮನಗಂಡ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ನಕಲಿ ಓಟ್ ಕಾರ್ಡುಗಳನ್ನು ಕೂಡಿಟ್ಟಿದ್ದ ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಜಾಲಹಳ್ಳಿಯ ಫ್ಲಾಟ್‍ಗೆ ಧಿಡೀರ್ ಎಂಟ್ರಿ ನೀಡಿ ಅಕ್ರಮವನ್ನು ಬಯಲಿಗೆಳೆದಿದ್ದರು. ಈ ಕೂಡಲೇ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಪರಸ್ಪರ ಕೆಸರೆರೆಚಾಟವನ್ನು ಆರಂಭಿಸಿದ್ದರು.

ಈ ಪ್ರಕರಣಕ್ಕೆ ಸಂಭಂದಿಸಿದಂತೆ ರಾಷ್ಟ್ರೀಯ ನಾಯಕರೆಲ್ಲಾ ಜಿದ್ದಿಗೆ ಬಿದ್ದು ಸುದ್ಧಿಗೋಷ್ಟಿ ನಡೆಸಿ ನಾವವರಲ್ಲ ಎಂದು ಹೇಳಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿಯ ಮೇಲೆ ಎಫ್.ಐ.ಆರ್. ದಾಖಲಿಸಿ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರ ಮೇಲೆಯೂ ಎಫ್.ಐ.ಆರ್ ದಾಖಲಿಸಿದ್ದು ಮುನಿರತ್ನ 14ನೇ ಆರೋಪಿ ಎಂದು ನಮೂದಿಸಿದೆ.

ಒಟ್ಟಾರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರ ಒಂದೊಂದೇ ಹಗರಣಗಳು ಬಯಲಾಗುತ್ತಿದ್ದು ಇದೀಗ ನಕಲಿ ಓಟ್ ಕಾರ್ಡ್ ಮೂಲಕ ಮೋಸದ ಜಾಲವೇ ಬಯಲಾಗಿದೆ. ಇನ್ನೇನು ಚುನಾವಣೆಗೆ 2 ದಿನ ಬಾಕಿ ಇರುವಾಗಲೇ ಕಾಂಗ್ರೆಸ್ ಕರ್ಮಕಾಂಡ ಬಯಲಾಗಿದ್ದು ಮುನಿರತ್ನ ಬಂಧನವಾಗುಲವ ಲಕ್ಷಣಗಳೂ ಗೋಚರಿಸುತ್ತಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಅತಿ ದೊಡ್ಡ ಹಿನ್ನೆಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

-ಸುನಿಲ್ ಪಣಪಿಲ

Tags

Related Articles

Close