ಪ್ರಚಲಿತ

ಗುಡ್ ನ್ಯೂಸ್! ಮದರಾಸಗಳಿಗೆ ಕೇಂದ್ರದಿಂದ ಭಾರೀ ಆಘಾತ.! ಅಕ್ರಮವಾಗಿ ಕಾರ್ಯನಿರ್ವಹಿಸುವ ಮದರಾಸಗಳಿಗಿಲ್ಲ ಉಳಿಗಾಲ..!

ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಮದರಾಸಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಅದೆಷ್ಟೋ ಪ್ರಕರಣಗಳು ದಾಖಲಾಗಿತ್ತು. ಆದರೆ ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆಯಲ್ಲೇ ತೊಡಗಿಕೊಂಡಿದ್ದರಿಂದ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಮೋದಿ ಸರಕಾರ ಅಧಿಕಾರ ವಹಿಸಿಕೊಂಡ ನಂತರ ಯಾವುದೇ ಅಕ್ರಮ ಚಟುವಟಿಕೆಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಂಡು ಎಲ್ಲಾ ಅಕ್ರಮಗಳನ್ನು ತಡೆಯುತ್ತಿದ್ದಾರೆ. ಇದೀಗ ಕೇಂದ್ರ ಸರಕಾರದ ಕಣ್ಣು ಮದರಾಸಗಳ ಮೇಲೆ ಬಿದ್ದಿದೆ. ಯಾಕೆಂದರೆ ಮದರಾಸಗಳಲ್ಲಿ ಶಿಕ್ಷಣದ ನೆಪದಲ್ಲಿ ಮುಸ್ಲಿಂ ಮಕ್ಕಳಿಗೆ ದೇಶವಿರೋಧಿ ಚಟುವಟಿಕೆಗಳಿಗೆ ಪ್ರೇರಣೆ ನೀಡಲಾಗುತ್ತಿದೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಆದರೆ ಯಾವ ಸರಕಾರ ಕೂಡ ಇದರ ವಿರುದ್ಧ ಕ್ರಮ ಕೈಗೊಳ್ಳದೆ ಉಡಾಫೆ ತೋರುತ್ತಿದ್ದರು. ಆದ್ದರಿಂದಲೇ ಅಕ್ರಮವಾಗಿ ಮದರಾಸಗಳು ಕಾರ್ಯನಿರ್ವಹಿಸಲು ಆರಂಭಿಸಿದ್ದವು. ಆದರೆ ಇದೀಗ ಕೇಂದ್ರದ ಆದೇಶದ ಪ್ರಕಾರ ಅಕ್ರಮ ಮದರಾಸಗಳಿಗೆ ಬೀಗ ಬೀಳುವುದು ಗ್ಯಾರಂಟಿ.!

 

ದೇಶದಲ್ಲಿ ಮದರಾಸಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೂ ಯಾವುದು ಕೂಡ ಸರಕಾರದ ಅಧೀನದಲ್ಲಿ ಇಲ್ಲದೇ ಇರುವುದರಿಂದ ಕೇಂದ್ರ ಸರಕಾರ ಖಡಕ ಆದೇಶ ನೀಡಿದೆ. ಯಾಕೆಂದರೆ ಮದರಾಸಗಳು ಕಾರ್ಯನಿರ್ವಹಿಸುವ ಬಗ್ಗೆ ಯಾವುದೇ ಸರಕಾರ ಪ್ರಶ್ನಿಸಿರಲಿಲ್ಲ. ಆದ್ದರಿಂದಲೇ ಮದರಾಸಗಳು ರಾಜಾರೋಷವಾಗಿ ತಲೆಎತ್ತುತ್ತಿವೆ, ಆದರೆ ಇದೀಗ ಕೇಂದ್ರ ಸರಕಾರ ಮದರಾಸಗಳ ಮೇಲೆ ನಿಗಾ ಇಟ್ಟಿದ್ದು, ಯಾವುದೇ ಅಕ್ರಮಗಳಿಗೆ ಅವಕಾಶ ಇಲ್ಲ ಎಂಬ ಕಠಿಣ ಸಂದೇಶವನ್ನು ರವಾನಿಸಲಾಗಿದೆ.!

ಮದರಸಾ ಮಂಡಳಿಯಲ್ಲಿ ನೊಂದಣಿ ಕಡ್ಡಾಯ..!

ಈವರೆಗೆ ಮದರಸಾಗಳಿಗೆ ಯಾವುದೇ ನೊಂದಣಿ ಪ್ರಕ್ರಿಯೆಗಳು ಇರಲಿಲ್ಲ. ಆದ್ದರಿಂದಲೇ ಊರಿಗೆರೆಡು ಮದರಸಾಗಳು ತಲೆ ಎತ್ತುತ್ತಿದ್ದವು. ಅದಕ್ಕಾಗಿಯೇ ಇದೀಗ ಮೋದಿ ಸರಕಾರ ಪ್ರತಿಯೊಂದು ಮದರಸಾಗಳು ಮದರಸಾ ಮಂಡಳಿಗೆ ನೊಂದಣಿ ಮಾಡಿಕೊಳ್ಳುವಂತೆ ಆದೇಶಿಸಿದ್ದಾರೆ. ಯಾಕೆಂದರೆ ಅತೀ ಹೆಚ್ಚಿನ ಮದರಸಾಗಳು ಸರಕಾರದ ಗಣನೆಗೆ ಸಿಗದೆ ಕಾರ್ಯನಿರ್ವಹಿಸುತ್ತಿದೆ. ಆದರೆ ಸರಕಾರದ ಸವಲತ್ತುಗಳನ್ನು ಪಡೆಯುತ್ತಿದ್ದ ಮದರಸಾಗಳಿಗೆ ಇದೀಗ ಕಂಟಕ ಎದುರಾಗಿದೆ. ಯಾಕೆಂದರೆ ಕಡ್ಡಾಯವಾಗಿ ಮದರಸಾಗಳು ನೊಂದಣಿ ಮಾಡಲೇಬೇಕು ಎಂದಿರುವ ಸರಕಾರದ ಆದೇಶದ ಪ್ರಕಾರ ಅಕ್ರಮವಾಗಿ ಕಾರ್ಯನಿರ್ವಹಿಸುವ ಮದರಸಾಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಕೇಂದ್ರದ ಈ ಆದೇಶಕ್ಕೆ ಮದರಸಾಗಳು ನೊಂದಣಿ ಮಾಡಲೇಬೇಕಾದ ಅನಿವಾರ್ಯತೆ ಇದೆ, ಇಲ್ಲವಾದಲ್ಲಿ ಅಂತಹ ಮದರಾಸಗಳು ರದ್ದಾಗುವುದು ಖಂಡಿತ.!

ಮದರಸಾ ಮಂಡಳಿಗೆ ಈಗಿರುವ ಮದರಸಾಗಳು ನೊಂದಣಿ ಮಾಡದೇ ಇದ್ದರೆ ರಾಜ್ಯಗಳ ಶಿಕ್ಷಣ ಮಂಡಳಿಗೆ ಕಡ್ಡಾಯವಾಗಿ ನೊಂದಣಿ ಮಾಡಬೇಕು. ಯಾಕೆಂದರೆ ದೇಶದಲ್ಲಿ ಅತೀ ಹೆಚ್ಚು ಮದರಸಾಗಳು ಸರಕಾರದ ಪರವಾನಗಿ ಪಡೆಯದೆ ಕಾರ್ಯನಿರ್ವಹಿಸುತ್ತಿದೆ. ಮದರಾಸಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಬದಲು ದೇಶದ್ರೋಹದ ಕಡೆ ಗಮನ ಸೆಳೆಯುತ್ತದೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬಂದ ಕಾರಣ ಇದೀಗ ಕೇಂದ್ರ ಸರಕಾರ ಕಠಿಣ ನಿರ್ಧಾರ ಕೈಗೊಂಡಿದೆ.

ಈಗಾಗಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ರಾಜ್ಯದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುವ ಮದರಸಾಗಳಿಗೆ ಬೀಗ ಜಡಿದಿದ್ದು, ಸರಕಾರದ ಕಣ್ಣು ತಪ್ಪಿಸಿ ತೆರಿಗೆ ವಂಚಿಸುತ್ತಿದ್ದ ಎಲ್ಲಾ ಮದರಸಾಗಳನ್ನೂ ಶಾಶ್ವತವಾಗಿ ರದ್ದುಗೊಳಿಸಿದ್ದಾರೆ. ಅದೇ ರೀತಿ ಇದೀಗ ಕೇಂದ್ರ ಸರಕಾರ ದಿಟ್ಟ ನಿರ್ಧಾರ ಕೈಗೊಂಡಿದ್ದು, ದೇಶಾದ್ಯಂತ ಅಕ್ರಮವಾಗಿ ಚಾಲ್ತಿಯಲ್ಲಿರುವ ಮದರಾಸಗಳಿಗೆ ಕಂಟಕ ಬಂದಂತಾಗಿದೆ ಎಂಬುದು ಸ್ಪಷ್ಟ..!

–ಅರ್ಜುನ್

Tags

Related Articles

Close