ಪ್ರಚಲಿತ

ಬಿಗ್ ಬ್ರೇಕಿಂಗ್! ಕೇವಲ ಒಂದು ಗಂಟೆಯಲ್ಲಿ ರೈತರಿಗೆ ಗುಡ್ ನ್ಯೂಸ್ ನೀಡಿದ ಸಿಎಂ ಯಡಿಯೂರಪ್ಪ… ರೈತರ ಸಾಲ ಮನ್ನಾ…

ಯಾವುದೇ ಸಂಶಯವಿಲ್ಲ. ತಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 24 ಗಂಟೆಯ ಒಳಗೆ ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತೇನೆ. ಇಲ್ಲವಾದಲ್ಲಿ 25 ಗಂಟೆಗಳಲ್ಲಿ ನಾನು ರಾಜೀನಾಮೆ ನೀಡುತ್ತೇನೆ ಎಂದು ಯಡಿಯೂರಪ್ಪ ಹೇಳಿಕೊಂಡಿದ್ದರು. ಆದರೆ ಇದೀಗ ಅಧಿಕಾರ ಸ್ವೀಕರಿಸಿದ ಕೇವಲ ಒಂದೂವರೆ ಗಂಟೆಯ ಒಳಗಾಗಿ ರಾಜ್ಯದ ರೈತರ ಸಾಲ ಮನ್ನಾ ಘೋಷಣೆ ಮಾಡಿ ರಾಜ್ಯದ ರೈತರಿಗೆ ಮೊದಲ ಬಾರಿಗೇ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಈ ಹಿಂದೆ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಯಡಿಯೂರಪ್ಪ ಮೊದಲ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಬಗ್ಗೆ ಅನೇಕ ಚರ್ಚೆಗಳೂ ನಡೆದಿದ್ದವು. ಅಧಿಕಾರ ಹಿಡಿಯಲು ಯಡಿಯೂರಪ್ಪನವರು ಸುಳ್ಳು ಹೇಳುತ್ತಿದ್ದಾರೆ ಮರುಳಾಗಬೇಡಿ ಎಂದು ವಿರೋಧ ಪಕ್ಷದ ನಾಯಕರು ಪ್ರಚಾರ ಮಾಡಿದ್ದವು.

Image result for yeddyurappa

ಆದರೆ ಯಡಿಯೂರಪ್ಪನವರು ಇದಕ್ಕೆ ತಕ್ಕ ಉತ್ತರ ನೀಡಿದ್ದರು. “ತಾನು ಅಧಿಕಾರಕ್ಕೆ ಬರುವ, ಅರ್ಥಾತ್ ತಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ 24 ಗಂಟೆಗಳ ಒಳಗಾಗಿ ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡುತ್ತೇನೆ. ಒಂದು ವೇಳೆ ಅದು ನನ್ನಿಂದ ಅಸಾಧ್ಯವಾಗಿದೆ ಎನ್ನವುದಾದರೆ 25ನೇ ಗಂಟೆಯಲ್ಲೇ ನಾನು ರಾಜೀನಾಮೆ ನೀಡುತ್ತೇನೆ” ಎಂದು ಗಂಟಾಘೋಷವಾಗಿ ಹೇಳಿದ್ದರು.

ಸಹಿ ಹಾಕಿಯೇ ಬಿಟ್ಟರು ನೂತನ ಸಿಎಂ…

ಅಧಿಕಾರ ಸ್ವೀಕರಿಸಿ ಕೇವಲ ಒಂದೂವರೆ ಗಂಟೆಯ ಒಳಗಾಗಿ ಅತಿ ದೊಡ್ಡ ನಿರ್ಧಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಕೈಗೊಂಡಿದ್ದಾರೆ. ಈ ಹಿಂದೆ ತಾನು ಘೋಷಿಸಿದಂತೆ ಅಧಿಕಾರಕ್ಕೆ ಬಂದ 24 ಗಂಟೆಯ ಒಳಗೆ ಅಂದರೆ ಕೇವಲ ಒಂದೂವರೆ ಗಂಟೆಯಲ್ಲೇ ಸಾಲ ಮನ್ನಾ ಎಂಬ ಘೋಷಣೆಯ ಕಡತಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ರಾಜ್ಯದ ರೈತರಿಗೆ ಶುಭ ಸುದ್ಧಿ ನೀಡಿದ್ದಾರೆ. 

ರಾಜ್ಯದ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಡಿರುವ ಬರೋಬ್ಬರಿ 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಘೋಷಣೆ ಮಾಡಿದ್ದಾರೆ. ರಾಜ್ಯದ ರೈತರು ವಿವಿಧ ಕಾರಣಗಳಿಂದ ರಾಜ್ಯದ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಮಾಡಿರುವ ಕೃಷಿ ಸಾಲವನ್ನು ಬೇಷರತ್ತಾಗಿ ನೂತನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಮನ್ನಾ ಮಾಡಿದ್ದಾರೆ

Image result for yeddyurappa.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ 50 ಸಾವಿರ ರೂಗಳಷ್ಟು ಸಾಲ ಮನ್ನಾ ಮಾಡಿದ್ದರು. ಅದೂ ಸಹಕಾರಿ ಬ್ಯಾಂಕ್‍ಗಳಲ್ಲಿ ಮಾಡಿರುವ ಸಾಲ ಮಾತ್ರ. ಆದರೆ ಅದೂ ನೆಟ್ಟಗೆ ನಡೆಯಲೇ ಇಲ್ಲ. ವಿವಿಧೆಡೆ ಸಾಲ ಮನ್ನಾ ಆಗಲೇ ಇಲ್ಲ. ಇದರಿಂದ ರೈತರು ಆಕ್ರೋಶಗೊಂಡಿದ್ದರು. ಇದು ಕೇವಲ ಚುನಾವಣಾ ಗಿಮಿಕ್ ಎಂಬುವುದು ಗುಟ್ಟಾಗಿ ಉಳಿದಿರಲಿಲ್ಲ.

ಇದೀಗ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿಎಸ್ ಯಡಿಯೂರಪ್ಪನವರು ಕೇವಲ ಒಂದು ಗಂಟೆಯಲ್ಲಿ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಿದ್ದಾರೆ. ಇದು ಆರಂಭ, ಅಭಿವೃದ್ಧಿ ಇನ್ನಷ್ಟೇ ನಡೆಯಬೇಕಿದೆ ಎನ್ನುವ ಸಂದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ನೀಡಿದ್ದಾರೆ.

-ಸುನಿಲ್ ಪಣಪಿಲ

Tags

Related Articles

Close