ಪ್ರಚಲಿತ

ಬಿಗ್ ಬ್ರೇಕಿಂಗ್! ಆಪರೇಷನ್ ಕಮಲಕ್ಕೆ ಬೆಚ್ಚಿಬಿದ್ದ ಕಾಂಗ್ರೆಸ್! ಕೈ ಶಾಸಕರು ಬಿಜೆಪಿಗೆ!?

ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಬಹುಮತ ಪಡೆಯಲಾಗದ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆಯಾದರೂ ಸರಕಾರ ರಚನೆ ಮಾಡಲಾಗದೆ ಪರದಾಡುವಂತಾಗಿದೆ. ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು , ಯಾವುದೇ ಕಾರಣಕ್ಕೂ ಬಿಜೆಪಿಗೆ ಅಧಿಕಾರ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಇತ್ತ ಬಿಜೆಪಿ ನಾಯಕರು ಸರಕಾರ ರಚಿಸಿಯೇ ಸಿದ್ದ ಎಂದು ಶಪಥ ಮಾಡಿದ್ದು, ರಾಷ್ಟ್ರೀಯ ನಾಯಕರೇ ಕರ್ನಾಟಕದತ್ತ ಲಗ್ಗೆ ಇಟ್ಟಿದ್ದಾರೆ..!

ಆಪರೇಷನ್ ಕಮಲ ಶುರು..!

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲೇ ಹೊಸ ಸಂಚಲನ ಮೂಡಿಸಿದೆ. ಈ ಎರಡೂ ಪಕ್ಷಗಳು ಕೈಜೋಡಿಸಿ ಸರಕಾರ ರಚಿಸಲು ತಯಾರಿ ನಡೆಸುತ್ತಿದ್ದರೆ , ಇತ್ತ ಬಿಜೆಪಿಯಿಂದ ಆಪರೇಷನ್ ಕಮಲ ಶುರುವಾಗಿದೆ.‌ ಬಿಜೆಪಿ ಚಾಣಕ್ಯ ಅಮಿತ್ ಷಾ ಮಾಡಿರುವ ತಂತ್ರಕ್ಕೆ ಬೆಚ್ಚಿಬಿದ್ದಿರುವ ಕಾಂಗ್ರೆಸ್ ಇದೀಗ ಏನೂ ಮಾಡಲಾಗದೆ , ತಮ್ಮ ಶಾಸಕರನ್ನು ಪಕ್ಕದ ರಾಜ್ಯಗಳಿಗೆ ರೆಸಾರ್ಟ್‌ನಲ್ಲಿ ಕಾಪಾಡಿಕೊಳ್ಳಲು ನಿರ್ಧರಿಸಿದೆ. ಆದರೆ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಗಾಳ ಹಾಕುತ್ತಿದ್ದು ಸರಕಾರ ರಚನೆಗೆ ಬೇಕಾಗಿರುವ ಎಂಟು ಸ್ಥಾನಗಳನ್ನು ಪಡೆದುಕೊಳ್ಳಲು ತಂತ್ರ ರೂಪಿಸಿದೆ.!

Image result for amit shah

ಇಂದು ರಾಜ್ಯಕ್ಕೆ ಆಗಮಿಸಲಿರುವ ಅಮಿತ್ ಷಾ ಕೂಡಾ ಈ ಬಗ್ಗೆಯೇ ಚರ್ಚೆ ನಡೆಸಲಿದ್ದು, ಸರಕಾರ ರಚನೆಗೆ ಬೇಕಾದ ಎಲ್ಲಾ ರೀತಿಯ ತಯಾರಿ ನಡೆಸಿಕೊಳ್ಳಲಿದ್ದಾರೆ.

ಕಾಂಗ್ರೆಸ್‌ನಿಂದ ನಾಲ್ಕು ಶಾಸಕರು ಬಿಜೆಪಿಗೆ..!

ನಿನ್ನೆಯಿಂದಲೇ ಭಾರೀ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದಿಂದ ಶಾಸಕರನ್ನು ತಮ್ಮತ್ತ ಸೆಳೆಯುವ ಕಾರ್ಯ ಬಿಜೆಪಿ ಆರಂಭಿಸಿದ್ದು, ಇದೀಗ ಕಾಂಗ್ರೆಸ್ ನ ನಾಲ್ಕು ಶಾಸಕರು ಬಿಜೆಪಿಗೆ ಸೇರುವ ಮುನ್ಸೂಚನೆಯೂ ದೊರಕಿದಂತಿದೆ. ಹೈದರಾಬಾದ್-ಕರ್ನಾಟಕ ಭಾಗದ ನಾಲ್ಕು ಶಾಸಕರಿಗೆ ಗಾಳ ಹಾಕಿರುವ ಬಿಜೆಪಿ, ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಆನಂದ್ ಸಿಂಗ್, ಶಾಸಕ ನಾಗೇಂದ್ರ, ಎಮ್‌ವೈ ಪಾಟೀಲ್, ರಾಜಶೇಖರ್ ಪಾಟೀಲ್ ಹುಮ್ನಾಬಾದ್ ಅವರು ಇದೀಗ ಕಾಂಗ್ರೆಸ್ ಸಂಪರ್ಕಕ್ಕೂ ಸಿಗದೆ ಇರುವುದರಿಂದ ಬಿಜೆಪಿ ಅವರಿಗೂ ಗಾಳ ಹಾಕಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಕಟ್ಟುನಿಟ್ಟಾಗಿ ಇಂದು ನಡೆಯುವ ಸಭೆಗೆ ಹಾಜರಾಗುವಂತೆ ಆದೇಶಿಸಿದ್ದರೂ ಈ ನಾಲ್ವರು ಮಾತ್ರ ಕಾಂಗ್ರೆಸ್ ಸಂಪರ್ಕಕ್ಕೆ ಸಿಗದೇ ಇರುವುದರಿಂದ ಕಾಂಗ್ರೆಸ್‌ನಲ್ಲೂ ಭಾರೀ ಕೋಲಾಹಲ ಉಂಟಾಗಿದೆ..!

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದಾಗಿ ಸ್ವತಃ ಅಸಮಧಾನಗೊಂಡ ಶಾಸಕರು ಈಗಾಗಲೇ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿರುವ ವಿಪಕ್ಷ ನಾಯಕ ಈಶ್ಷರಪ್ಪ , ಬಿಜೆಪಿ ಸರಕಾರ ರಚನೆ ಮಾಡಲು ಶಾಸಕರ ಸಮ್ಮತಿ ಇದೆ ಎಂದು ಭರವಸೆ ನೀಡಿದ್ದಾರೆ‌.! ಈಗಾಗಲೇ ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರ ಟೀಂ ರಚನೆಯಾಗಿದ್ದು, ಕರ್ನಾಟಕದಲ್ಲಿ ಸರಕಾರ ರಚಿಸಿಯೇ ಸಿದ್ದ ಎಂದು ಪಣತೊಟ್ಟಿದ್ದಾರೆ..!

–ಅರ್ಜುನ್

Tags

Related Articles

Close