ಪ್ರಚಲಿತ

ವಿದ್ಯಾರ್ಥಿಗಳಿಗೆ ಬಿಗ್ ಗಿಫ್ಟ್ ಕೊಟ್ಟ ರಾಜ್ಯ ಬಿಜೆಪಿ!! ಬಿಜೆಪಿ ಕೊಟ್ಟ ಆ ಗಿಫ್ಟ್ ಯಾವುದು ಗೊತ್ತಾ?!

ಈಗಾಗಲೇ ಚುನಾವಣೆಗೆ ಬೆರಳಣಿಕೆಯಷ್ಟು ದಿನಗಳು ಮಾತ್ರ ಬಾಕಿಯಿದ್ದು ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿತ್ತು!! ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಬಿಜೆಪಿಯೂ  ಕೂಡ “ನಮ್ಮ ಕರ್ನಾಟಕ ನಮ್ಮ ವಚನ” ಎಂಬ ಶೀರ್ಷಿಕೆಯಡಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವಂತಹದ್ದು ಎಲ್ಲರಿಗೂ ತಿಳಿದೇ ಇದೆ!! ಬಿಜೆಪಿಯ ಪ್ರಣಾಳಿಕೆಯಲ್ಲಿ ಪ್ರತಿ ಕ್ಷೇತ್ರಕ್ಕೂ ಅಭೂತಪೂರ್ವ ಕೊಡುಗೆಯನ್ನೇ ನೀಡಿದ್ದಾರೆ!! ಇಷ್ಟು ವರ್ಷಗಳ ಕಾಲ ಆಡಳಿತ ನಡೆಸಿದರೂ ಕಾಂಗ್ರೆಸ್ ಮಾಡಲಾಗದ್ದನ್ನು ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶಿಕ್ಷಣ ಕ್ಷೇತ್ರದಲ್ಲಿ ಅಭೂತ ಪೂರ್ವ ಕೊಡುಗೆಯನ್ನು ನೀಡುವುದರ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲಿದ್ದಾರೆ!!

ಕರ್ನಾಟಕ ಶಾಲಾ-ಕಾಲೇಜು ಶುಲ್ಕ ನಿಯಂತ್ರಣ ಪ್ರಾಧಿಕಾರದ” ಸ್ಥಾಪನೆ: 

ಈಗಾಗಲೇ ಅದೆಷ್ಟೋ ಮಕ್ಕಳು ಶಿಕ್ಷಣ ಪಡೆಯುವಲ್ಲಿಯೇ ವಂಚಿತರಾಗಿದ್ದಾರೆ!! ಯಾಕೆಂದರೆ ಕೆಲ ಶಾಲಾ ಕಾಲೇಜುಗಳಲ್ಲಿ ಡೊನೇಶನ್ ಪಡೆಯುವ ಮೂಲಕ ಅನೇಕ ಬಡ ಮಕ್ಕಳು ಶಿಕ್ಷಣ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ!! ಡೊನೇಶನ್ ಹಾವಳಿಯಿಂದ ತಮಗೆ ಬೇಕಾದ ಶಿಕ್ಷಣವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ.. ಇದರಿಂದ ಶಿಕ್ಷಣವನ್ನು ಮುಂದುವರಿಸಲಾಗದೆ ಅವರು ಬೇರೆ ಕೆಲಸದತ್ತ ಮುಖ ಮಾಡಿದ ಉದಾಹರಣೆ ಅದೆಷ್ಟೋ!! ಕೇವಲ ಶ್ರೀಮಂತ್ರ ಮಕ್ಕಳಿಗೆ ಮಾತ್ರ ಡೊನೇಶನ್ ನೀಡಿ ಪಡೆಯಬಹುದಾದ ಶಿಕ್ಷಣಕ್ಕೆ ಇದೀಗ ಬಿಜೆಪಿ ಬ್ರೇಕ್ ಹಾಕಿದೆ!! ಮುಂದಿನ ಚುನಾವಣೆಯಲ್ಲಿ  ಬಿಜೆಪಿ ಜಯಗಳಿಸಿದರೆ ಕರ್ನಾಟಕ ಶಾಲಾ ಕಾಲೇಜುಗಳ ಶುಲ್ಕ ನಿಯಂತ್ರಣ ಪ್ರಾಧಿಕಾರ ಸ್ಥಾಪನೆ ಮಾಡಲಿದ್ದಾರೆ!! ಕರ್ನಾಟಕದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಏನಾದರೂ ಅಧಿಕಾರವಹಿಸಿಕೊಂಡಲ್ಲಿ ಖಂಡಿತ ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಬದಲಾವಣೆ ಕಂಡುಬರುವುದಂತು ಸತ್ಯ!!

* 70 ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನಿರ್ಮಾಣ: 

ಈಗಾಗಲೇ ಅದೆಷ್ಟೋ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತರಾಗಿ ಕೂಲಿ ಕೆಲಸಕ್ಕೆ ಹೋಗುವ ಮಕ್ಕಳನ್ನು ಅಲ್ಲಲ್ಲಿ ಕಾಣಬಹುದು!! ಅದಕ್ಕೆಲ್ಲಾ ಪ್ರಮುಖ ಕಾರಣವೆಂದರೆ  ಬಡತನ!! ಈ ಬಡತನದಿಂದಾಗಿ ಅವರಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ!! ಅದೆಷ್ಟೋ ಮಕ್ಕಳಿಗೆ ಆಸೆ ಇದ್ದರೂ ಕಾಲೇಜುಗಳಿಗೆ ಹೋಗಲು ಸಾಧ್ಯವಾಗುವುತ್ತಿಲ್ಲ! ಒಂದು ವೇಳೇ ಹೋಗೋಣ ಎಂದರೂ ಅಲ್ಲಿನ ಡೊನೇಶನ್ ಕೇಳಿದರೆ ಯಾವ ಬಡ ಮಕ್ಕಳೂ ಕಾಲೇಜು ಮೆಟ್ಟಿಲು ಹತ್ತುವಂತಿಲ್ಲ!! ಅದಲ್ಲದೆ ಸತತವಾಗಿ 70 ವರ್ಷಗಳಲ್ಲಿ ಇಡೀ ದೇಶವನ್ನು ಆಳ್ವಿಕೆ ಮಾಡಿದರೂ ಸಹ ಕಾಂಗ್ರೆಸ್ ಇಲ್ಲಿಯವರೆಗೆ ಒಂದೇ ಒಂದು  ಕಾಲೇಜು ಕಟ್ಟಲು ಸಾಧ್ಯವಾಗಿರಲಿಲ್ಲ!! ಆದರೆ ಕರ್ನಾಟಕದಲ್ಲಿ ಇನ್ನೂ ಬಿಜೆಪಿ ಅಧಿಕಾರದಲ್ಲಿ ಇಲ್ಲದೇ ಇದ್ದರೂ ಮುಂದೆ ಬಿಜೆಪಿಯೇ ಅಧಿಕಾರದ ಗದ್ದುಗೆಯನ್ನು ಏರುತ್ತದೆ ಎಂಬ ನಂಬಿಕೆಯಿಂದ ಇಡೀ ಶಿಕ್ಷಣ ಕ್ಷೇತ್ರದಲ್ಲೇ ಅಭೂತಪೂರ್ವ ಬದಲಾವಣೆಯನ್ನು ಮಾಡ ಹೊರಟಿದ್ದಾರೆ!!

Image result for bjp manifesto 2018

* ಕಾಲೇಜು ವಿದ್ಯಾರ್ಥಿಗಳಿಗೆ ಲಾಪ್‍ಟಾಪ್ ವಿತರಣೆ!!

ಈಗಾಗಲೇ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾಗಿ ಅದರಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ವಿತರಣೆ ಮಾಡುತ್ತೇವೆ ಎಂದು ಘೋಷಿಸಿದ್ದರು ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಮಾತ್ರ ಲಾಪ್ ಟಾಪ್ ವಿತರಣೆ ಮಾಡಲು ಮುಂದಾಗಿದ್ದು ಇದು ಪ್ರತೀ ಕಾಲೇಜು ವಿದ್ಯಾರ್ಥಿಗಳಿಗೂ ಉಪಯೋಗಕಾರಿಯಾಗಲಿದೆ!! ಯಾಕೆಂದರೆ ಪ್ರತೀ ಯೊಬ್ಬ ವಿದ್ಯಾರ್ಥಿಯೂ ಕೂಡಾ ಸ್ಮಾರ್ಟ್ ಪೋನ್‍ಗಿಂತ ಲಾಪ್‍ಟಾಪ್ ಹೆಚ್ಚು ಉಪಯೋಗಕಾರಿಯಾಗಲಿದೆ ಎಂದು  ಸ್ವತಃ ವಿದ್ಯಾರ್ಥಿಗಳೇ ಹೇಳಿದ್ದಾರೆ!!

* ವೃತ್ತಿಪರ ಕೋರ್ಸುಗಳನ್ನು ಹೊರತುಪಡಿಸಿ ಪದವಿ ಮಟ್ಟದವರೆಗೆ ಎಲ್ಲ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣ:

ಯಡಿಯೂರಪ್ಪ ಸರಕಾರ ಈ ಮುಂಚೆಯೂ ಅಸ್ತಿತ್ವದಲ್ಲಿದ್ದಾಗಲೂ ಕೂಡಾ ಪ್ರತೀಯೊಂದು ವಿದ್ಯಾರ್ಥಿ ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ಧೇಶವೇ ಬಿಜೆಪಿ ಸರಕಾರದ ಪಟ್ಟು!! ಹೀಗಾಗಿ ಈ ಬಾರಿ ಮತ್ತೆ ಯಡಿಯೂರಪ್ಪ ಸರಕಾರ ಅಧಿಕಾರದ ಚುಕ್ಕಾಣಿಯನ್ನು ಹಿಡಿದಲ್ಲಿ ವೃತ್ತಿಪರ ಕೋರ್ಸುಗಳನ್ನು ಹೊರತುಪಡಿಸಿ ಪದವಿ ಮಟ್ಟದವರೆಗೆ ಎಲ್ಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣವನ್ನು ನೀಡಲು ಮುಂದಾಗಿದ್ದಾರೆ!!

* ಉನ್ನತ ಶಿಕ್ಷಣ ಪಡೆಯುವ ಬಿಪಿಎಲ್ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ. ಪದವಿ ವಿದ್ಯಾರ್ಥಿಗಳಿಗೆ ರೂ 3 ಲಕ್ಷ ಮತ್ತು ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ರೂ 5 ಲಕ್ಷದವರೆಗೂ ಸಾಲ. 

ಈಗಾಗಲೇ ಹಲವಾರು ವಿದ್ಯಾರ್ಥಿಗಳು ಹೆಚ್ಚಿನ ಅಂಕವನ್ನು ಪಡೆದಿದ್ದರೂ ಸಹ ಅಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಬಡತನ ಎಂಬ ಭೂತ ಅವರನ್ನು ಬಿಡುತ್ತಿಲ್ಲ!! ಅದಕ್ಕಾಗಿಯೇ ಇಲ್ಲಿಯವರೆಗೆ ಕಾಂಗ್ರೆಸ್ ಮಾಡಲಾಗದ್ದನ್ನು ಬಿಜೆಪಿಯು ಬಡ ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದೆ ಉನ್ನತ ಶಿಕ್ಷಣವನ್ನು ಪಡೆಯುವ ಬಿಪಿಎಲ್ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ನೀಡಲು ಮುಂದಾಗಿದ್ದು ಇದು ಬಡ ವಿದ್ಯಾರ್ಥಿಗಳ ಭವಿಷ್ಯವನ್ನೇ ಬದಲಾಯಿಸುತ್ತದೆ!! ಪದವಿ ವಿದ್ಯಾರ್ಥಿಗಳಿಗೆ ರೂ 2ಲಕ್ಷ ಮತ್ತು ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ರೂ 5 ಲಕ್ಷವರೆಗೆ ಸಾಲ ನೀಡಲಾಗುವುದು!!

* 8,9,10 ನೇ ತರಗತಿಯ ಎಸ್‍ಸಿ /ಎಸ್‍ಟಿ ಹೆಣ್ಣು ಮಕ್ಕಗಳಿಗೆ ನಗದು/ಎಸ್‍ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್

ಈ ಹಿಂದೆಯೂ ಯಡಿಯೂರಪ್ಪ ಸರಕಾರ ಎಸ್‍ಸಿ/ ಎಸ್‍ಟಿ ವಿದ್ಯಾಥಿಗಳಿಗೆ ಅನೇಕ ಸವಲತ್ತುಗಳನ್ನು ನೀಡುತ್ತನೇ ಬಂದಿದೆ!! ಹಾಗಾಗಿ ಈ ಬಾರಿಯೂ ಎಸ್‍ಸಿ/ಎಸ್‍ಟಿ ಹೆಣ್ಣು ಮಕ್ಕಳಿಗೆ ನಗದು ಹಾಗೂ ಎಸ್‍ಸಿ/ಎಸ್‍ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ನೀಡಲು ಮಂದಾಗಿದೆ!!

* ರಾಜ್ಯದ ಸರಕಾರಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣದ ಭರವಸೆ:

ಪ್ರಸ್ತುತ ಕಾಂಗ್ರೆಸ್ ಸರಕಾರದ ಅಧಿಕಾರವದಿಯಲ್ಲಿರುವ ಇಡೀ ರಾಜ್ಯದಲ್ಲಿ ಯಾವ ಒಂದು ಕಾಲೇಜಿನಲ್ಲೂ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿಲ್ಲ! ಆದರೆ ಈ ಬಾರಿ ಯಡಿಯೂರಪ್ಪ ಸರಕಾರ ಅಧಿಕಾರ ವಹಿಸಿಕೊಂಡರೆ ಇಡೀ ರಾಜ್ಯದ ಸರಕಾರಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣದ ಭರವಸೆಯನ್ನು ನೀಡಿದ್ದಾರೆ!!

* 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಪಾಹಾರ ಯೋಜನೆ ಜತೆಗೆ 2 ಜತೆ ಸಮವಸ್ತ್ರ ವಿತರಣೆ.

ಈ ಬಾರಿಯ ಚುನಾವಣೆಯಲ್ಲಿ ಯಡಿಯೂರಪ್ಪ ಸರಕಾರ  ಅಧಿಕಾರಕ್ಕೆ ಬಂದರೆ 1 ರಿಂದ 10 ನೇ ತರಗತಿಯ ಪ್ರತೀ ವಿದ್ಯಾರ್ಥಿಗಳಿಗೂ  ಉಪಹಾರ ಯೋಜನೆ ಜತೆಗೆ 2 ಜತೆ ಸಮವಸ್ತ್ರ ವಿತರಣೆ ಮಾಡಲು ತಯಾರಾಗಿದ್ದು ವಿದ್ಯಾರ್ಥಿಯ ಸಂಪೂರ್ಣ ಭವಿಷ್ಯವನ್ನೇ ಬದಲಾಯಿಸಲಿದೆ!!

* ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕ್ರೀಡಾ ಸೌಲಭ್ಯಕ್ಕೆ 100 ಕೋಟಿ ಮೀಸಲು:

ಕ್ರೀಡೆ ಎನ್ನುವಂತಹದ್ದು ಪ್ರತೀ ವಿದ್ಯಾರ್ಥಿಗಳಿಗೂ ಅಚ್ಚು ಮೆಚ್ಚು ಆದರೆ ಕೆಲ ಮಕ್ಕಳು ಇದರಿಂದ ವಂಚಿತರಾಗುತ್ತಿರುವುದನ್ನು ಈಗಾಗಲೇ ನಾವು ಗಮನಿಸುತ್ತಿದ್ದೇವೆ!! ಈಗಾಗಲೇ ಪ್ರತೀ ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳೂ ಇಂತಹ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದು ಖಾಸಗಿ ಶಾಲಾ – ಕಾಲೇಜುಗಳಲ್ಲಿ ಮಾತ್ರ ಶ್ರೀಮಂತ ಮಕ್ಕಳಿಗೆ ಕ್ರೀಡೆಗೆ ಹೆಚ್ಚಿನ ಅವಕಾಶ ದೊರಕುತ್ತಿದೆಯೇ ಹೊರತು ಬಡ ವಿದ್ಯಾರ್ಥಿಗಳು ಮಾತ್ರ ತಮ್ಮ ಪ್ರತಿಭೆಯನ್ನು ಅದುಮಿಕೊಂಡ ಬದುಕಬೇಕಾಗುತ್ತದೆ!! ಇದಕ್ಕೆ ಬ್ರೇಕ್ ಹಾಕಲೆಂದೇ ಯಾವ ಬಡ ವಿದ್ಯಾರ್ಥಿಗಳೂ ಕ್ರೀಡೆಯಿಂದ ವಂಚಿತರಾಗಬಾರದು ಎಂಬ ಉದ್ಧೇಶದಿಂದ ಯಡಿಯೂರಪ್ಪ ಸರಕಾರ ಏನಾದರೂ ಈ ಬಾರಿ ಅಧಿಕಾರವಹಿಸಿಕೊಂಡರೆ ಸರಕಾರಿ ಶಾಲಾ ಕಾಲೇಜುಗಳಲ್ಲಿ ಕ್ರೀಡಾ ಸೌಲಭ್ಯಕ್ಕೆ 100 ಕೋಟಿ ರೂಪಾಯಿಯನ್ನು ಮೀಸಲಿಡಲು ಮುಂದಾಗಿದೆ!!

ಹೀಗೆ ಕಾಂಗ್ರೆಸ್ ಆಡಳಿತದಲ್ಲಿ ಮಾಡಿದ್ದು ಗೂಂಡಾಗಿರಿ, ಹಗರಣಗಳು ಮಾತ್ರ ದೇಶದ ಅಭಿವೃದ್ಧಿ ಮಾಡಿದ್ದು ಏನೂ ಇಲ್ಲ!! ಶಿಕ್ಷಣ ಕ್ಷೇತ್ರದಲ್ಲಿ ಯಾವ ಬದಲಾವಣೆ ಮಾಡದ ಈ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಬೇಕು ಎಂಬುವುದೇ ಎಲ್ಲರ ಆಶಯ!! ಈ ಬಾರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಮಾತ್ರ ಈ ಬಾರಿ ಕರ್ನಾಟಕ ಬದಲಾವಣೆಯಾಗಲು ಸಾಧ್ಯ ಎಂಬುವುದನ್ನು ಅರಿಯಬೇಕು!!

  • ಪವಿತ್ರ
Tags

Related Articles

Close