ಪ್ರಚಲಿತ

ಕಾಂಗ್ರೆಸ್ ಪಕ್ಷಕ್ಕೆ ಅತಿದೊಡ್ಡ ಮುಜುಗರ..! ಕಾಂಗ್ರೆಸ್ ಶಾಸಕನಿಂದಲೇ “ಉಗ್ರಾ” ವತಾರ ಬಯಲು…!

ಈಗಾಗಲೇ ಜೆಡಿಎಸ್ ಜೊತೆಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿರುವ ಕಾಂಗ್ರೆಸ್ ಗೆ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮುಜುಗರವಾಗಿದೆ. ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಭಾರತೀಯ ಜನತಾ ಪಕ್ಷದ ನಾಯಕರು ಕೋಟಿ ಕೋಟಿ ಆಮಿಷವನ್ನು ಒಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಬಿಡುಗಡೆಗೊಳಿಸಿದ್ದರು. ಆದರೆ ಒಂದೇ ದಿನದಲ್ಲಿ ಉಗ್ರಪ್ಪನ ನಕಲಿ ಉಗ್ರಾವತಾರ ಅಸಲಿ ಮುಖ ಅನಾವರಣವಾಗಿದೆ. ಉಗ್ರಪ್ಪ ಬಹಿರಂಗಗೊಳಿಸಿರುವ ಆಡಿಯೋ ನಕಲಿ ಎಂದು ಸ್ವತಃ ಕಾಂಗ್ರೆಸ್ ನಾಯಕರೇ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರ ಪತ್ನಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ಕರೆ ಮಾಡಿ ಕೋಟಿ ಕೋಟಿ ರೂಪಾಯಿ ಗಳ ಆಮಿಷ ಒಡ್ಡಿ ತಮ್ಮ ಪಕ್ಷದ ಪರ ನಿಲ್ಲುವಂತೆ ಹೇಳಿಕೊಂಡಿದ್ದರು ಎಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಸುದ್ದಿಗೋಷ್ಟಿ ನಡೆಸಿ ಹೇಳಿದ್ದರು.

ಭಾರತೀಯ ಜನತಾ ಪಕ್ಷಕ್ಕೆ ಬಹುನತ ಸಾಬೀತು ಪಡಿಸಲು ಕೆಲ ಸ್ಥಾನಗಳ ಅವ್ಯಕತೆ ಇತ್ತು. ಈ ಕಾರಣಕ್ಕಾಗಿ ಭಾರತೀಯ ಜನತಾ ಪಕ್ಷದ ನಾಯಕರು ಕುದುರೆ ವ್ಯಾಪಾರ ನಡೆಸಿದ್ದಾರೆ ಎಂದು ಆಡಿಯೋ ಬಿಡುಗಡೆಗೊಳಿಸಿ ಆರೋಪಿಸಿದ್ದರು. ಆದರೆ ಈ ಆರೋಪಕ್ಕೆ ಸ್ವತಃ ಯಲ್ಲಾಪುರ ಶಾಸಕ ಶಿವರಾಮ್ ಅವರೇ ಉತ್ತರ ನೀಡಿ ತನ್ನ ಪಕ್ಷದ ನಾಯಕನ ವಿರುದ್ದವೇ ಕೆಂಡಕಾರಿದ್ದಾರೆ.

ಸುಳ್ಳು ಎಂದ ಕಾಂಗ್ರೆಸ್ ಶಾಸಕ..!

ನಿನ್ನೆ ತಾನೇ ಕಾಂಗ್ರೆಸ್ ನಾಯಕ ಉಗ್ರಪ್ಪ ಆಡಿಯೋ ಬಿಡುಗಡೆಗೊಳಿಸಿ ಆರೋಪಿಸಿದ ಆರೋಪಕ್ಕೆ ಇಂದು ಸ್ವತಃ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ್ ಅವರೇ ಉತ್ತರ ನೀಡಿದ್ದಾರೆ. ಈ ಬಗ್ಗೆ ತನ್ನ ಫೇಸ್ ಬುಕ್ ವಾಲ್ ನಲ್ಲಿ ಬರೆದುಕೊಂಡಿರುವ ಶಾಸಕ ಹೆಬ್ಬಾರ್ ಉಗ್ರಪ್ಪ ರ ಉಗ್ರಾವತಾರಕ್ಕೆ ಕಿಡಿಕಾರಿದ್ದಾರೆ.

“ನನ್ನ ಹೆಂಡತಿಯ ಧ್ವನಿಯೂ ಅಲ್ಲ, ಹೆಂಡತಿಗೆ ಯಾರ ಫೋನ್ ಕಾಲ್ ಬಂದೂ ಇಲ್ಲ.

ಮಾನ್ಯರೇ,

ಇವತ್ತು ನ್ಯೂಸ್ ಚಾನೆಲ್ ಗಳಲ್ಲಿ ನನ್ನ ಹೆಂಡತಿ ಯೊಂದಿಗೆ ಭಾರತೀಯ ಜನತಾ ಪಕ್ಷದ ವರು ನಡೆಸಿದ್ದಾರೆ ಎನ್ನಲಾಗುವ ಟೇಪ್ ಬಿಡುಗಡೆ ವಿಚಾರ ಸದನದಲ್ಲಿದ್ದ ತನಗೆ ತಡವಾಗಿ ಬೆಳಕಿಗೆ ಬಂದಿದೆ. ಇದು ನನ್ನ ಹೆಂಡತಿಯ ಧ್ವನಿಯೂ ಅಲ್ಲ. ಮತ್ತು ನನ್ನ ಹೆಂಡತಿ ಗೆ ಯಾರ ಫೋನ್ ಕಾಲ್ ಬಂದೂ ಇಲ್ಲ. ರಾಜಕೀಯ ಕಾರಣಕ್ಕಾಗಿ ಈ ರೀತಿಯ ಸುಳ್ಳು ಟೇಪ್ ಯಾರೇ ಬಿಡುಗಡೆ ಮಾಡಿದರೂ ಅದಕ್ಕೆ ನನ್ನ ದಿಕ್ಕಾರ. ಆ ಆಡಿಯೋ ಟೇಪ್ ಫೇಕ್… ಇದನ್ನು ನಾವು ಖಂಡಿಸುತ್ತೇನೆ. ನನ್ನ ಕ್ಷೇತ್ರದ ಜನತೆ ಮತ್ತೊಮ್ಮೆ ನನಗೆ ಸೇವೆ ಮಾಡಲು ಅವಕಾಶ ನೀಡಿದ್ದಾರೆ.ಅವರಿಗೆ ಧನ್ಯವಾದಗಳು. ನನ್ನ ಜನಪರ ಕೆಲಸಗಳು ಮುಂದುವರೆಯಲಿದೆ” ಎಂದು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಫೇಸ್ ಬುಕ್ ವಾಲ್ ನಲ್ಲಿ ಬರೆದುಕೊಂಡಿದ್ದಾರೆ.

ಮಿಮಿಕ್ರಿಗಳಿಗೆ ಕಾಂಗ್ರೆಸ್ ಮೊರೆ…!

ಈ ಮಧ್ಯೆ ಕಾಂಗ್ರೆಸ್ ಪಕ್ಷದಿಂದ ಮಿಮಿಕ್ರಿ ಮಾಡುವವರ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ‌. ಭಾರತೀಯ ಜನತಾ ಪಕ್ಷದ ನಾಯಕರನ್ನು ಕುದುರೆ ವ್ಯಾಪಾರಕ್ಕೆ ಇಳಿದಿದೆ ಎಂಬುವುದನ್ನು ನಿರೂಪಿಸಲು ಈ ತಂತ್ರಕ್ಕೆ ಕಾಂಗ್ರೆಸ್ ಮೊರೆ ಹೋಗಿದ್ದು ಇದೀಗ ಸಾಭೀತಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದೆ.

-ಸುನಿಲ್ ಪಣಪಿಲ

Tags

Related Articles

Close