ಪ್ರಚಲಿತ

ಬ್ರೇಕಿಂಗ್! ಪರಂ ಜೊತೆ ಸೇರಿ ಸಿದ್ದರಾಮಯ್ಯ ವಿರುದ್ದ ತೊಡೆ ತಟ್ಟಿದ ಕಾಂಗ್ರೆಸ್ ಹೈಕಮಾಂಡ್! ಸಿಎಂ ಗೆ ಭಾರೀ ಆಘಾತ!!!

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ತನಗೆ ಬೇಕಾದ ಹಾಗೆ ಅಧಿಕಾರಕ್ಕೆ ನಡೆಸುತ್ತಾ ಬಂದಿದ್ದಾರೆ. ಆದರೆ ತಮ್ಮದೇ ಪಕ್ಷದಲ್ಲಿ ಮುಖ್ಯಮಂತ್ರಿಗಳಿಗೆ ಮೂಗುದಾರ ಹಾಕಲು ಕಾಂಗ್ರೆಸ್ ಹೈಕಮಾಂಡ್ ಸಜ್ಜಾಗಿ ನಿಂತಿದೆ. ಇದು ಸ್ವತಃ ಕಾಂಗ್ರೇಸ್ ಅಧ್ಯಕ್ಷ ರನ್ನೇ ಧಿಕ್ಕರಿಸಿ ಚುನಾವಣಾ ಪ್ರಚಾರವನ್ನು ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಭಾರೀ ಹಿನ್ನೆಡೆಯಾಗಿದೆ.

ಟಿಕೆಟ್ ವಿಚಾರಕ್ಕೆ ಕೈ ಹಾಕಬೇಡಿ ಎಂದ ಉಸ್ತುವಾರಿ!!!

ಹೌದು. ಕರ್ನಾಟಕ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಗ್ ಶಾಕ್ ನ್ನೇ ನೀಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮಗೆ ಬೇಕಾದವರಿಗೆಲ್ಲಾ ಟಿಕೆಟ್ ನೀಡಲು ಮುಂದಾಗಿದ್ದರು. ಆದರೆ ಇದೀಗ ಕರ್ನಾಟಕ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮುಖ್ಯಮಂತ್ರಿ ಗಳ ವಿರುದ್ಧ ವೇ ಹೊಸ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ಏಕಪಕ್ಷೀಯ ನಿರ್ಧಾರ ಕ್ಕೆ ಬ್ರೇಕ್ ಹಾಕಿದ್ದಾರೆ.

ನನ್ನ ಪ್ಲಾನಿಂಗ್ ಆದರೆ ಬಹುಮತ ಪಕ್ಕಾ ಎಂದರಂತೆ ಸಿಎಂ!

‘ನನ್ನ ಮಾತು ಕೇಳ್ರೀ… ಯಾರಿಗೆಲ್ಲಾ ಟಿಕೆಟ್ ಕೊಡಬೇಕು ಎಂದು ನಾನು ಈಗಾಗಲೇ ಪಟ್ಟಿ ಮಾಡಿದ್ದೇನೆ.೭ ಜನರನ್ನ ಬಿಟ್ಟು ಉಳಿದೆಲ್ಲಾ
ಶಾಸಕರಿಗೆ ಟಿಕೆಟ್‌ ನೀಡಬೇಕು. ಅದರ ಹಾಗೆ ಟಿಕೆಟ್ ಹಂಚಿಕೆ ಮಾಡಿದ್ರೆ ಈ ಬಾರಿ ಮತ್ತೆ ನಮ್ಮ ಪಕ್ಷ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಖಂಡಿತಾ ಬಹುಮತ ಬರುತ್ತದೆ’ ಇದು ಕಾಂಗ್ರೆಸ್ ಹೈಕಮಾಂಡ್ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಟ್ಟಿರುವ ಬೇಡಿಕೆ. ಇತ್ತೀಚೆಗೆ ರಾಹುಲ್ ಗಾಂಧಿ ಕರ್ನಾಟಕ್ಕೆ ಬಂದಾಗ ಹೇಳಿದ್ದರು. ಆದರೆ ಈ ಬೇಡಿಕೆಯನ್ನು ಕರ್ನಾಟಕ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವೇಣುಗೋಪಾಲ್ ತಳ್ಳಿಹಾಕಿದ್ದಾರೆ. ಟಿಕೆಟ್ ಹಂಚಿಕೆ ಕಾರ್ಯ ನಮಗೆ ಬಿಡಿ, ಪಕ್ಷದ ಪ್ರಚಾರದ ಬಗ್ಗೆ ಹೆಚ್ಚಿನ ಗಮನ ನೀಡಿ ಎಂದು ಕಡ್ಡಿ ಮುರಿದಂತೆ ಹೇಳಿ ಬಿಟ್ಟಿದ್ದಾರೆ. ಇದಿಷ್ಟು ಮಾತ್ರವಲ್ಲದೆ ಚುನಾವಣಾ ಕಾರ್ಯತಂತ್ರದ ನಿರ್ವಹಣಾ ವ್ಯವಸ್ಥೆಯನ್ನು ಪಕ್ಷವೇ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನೇರ ಸಂದೇಶವನ್ನೇ ನೀಡಿದ್ದಾರೆ.

ಅಧ್ಯಕ್ಷರನ್ನು ಕಡೆಗಣಿಸಿದ್ದ ಮುಖ್ಯಮಂತ್ರಿಗಳು…!

ಮುಖ್ಯಮಂತ್ರಿ ಸಿದ್ದರಾಮಯ್ಯ ಜನಾಶಿರ್ವಾದ ಯಾತ್ರೆಯನ್ನು ಮಾಡುತ್ತಾರೆ. ಈ ಯಾತ್ರೆ ಬಗ್ಗೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಗೇ
ಆಸಮಧಾನವಿರುತ್ತೆ. ಭಾರತೀಯ ಜನತಾ ಪಕ್ಷದ ಪ್ರಚಾರ ತಂತ್ರವನ್ನು ನಕಲು ಮಾಡೋದು ಬೇಡ ಎಂದು ಪರಮೇಶ್ವರ್ ಹೇಳಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನಪಟ್ಟನ್ನು ಬಿಡಲೇ ಇಲ್ಲ. ಹೀಗಾಗಿ ಜನಾಶಿರ್ವಾದ ಯಾತ್ರೆ ಎಂಬ ಹೆಸರಿನಲ್ಲಿ ಭಾರತೀಯ ಜನತಾ ಪಕ್ಷದ ಪ್ರಚಾರ ತಂತ್ರದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರವನ್ನು ಮಾಡಲು ಆರಂಭಿಸುತ್ತಾರೆ.

ಕೇವಲ ಈ ಮಾರ್ಗವನ್ನು ತುಳಿಯಲು ಪ್ರಚಾರದ ತಂತ್ರವಷ್ಟೇ ಕಾರಣವಾಗಿರಲಿಲ್ಲ. ಬದಲಾಗಿ ಈ ಯಾತ್ರೆಯನ್ನು ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ದಂತೆ ಮಾಡಿ ಈ ಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ರನ್ನು ಶಾಶ್ವತವಾಗಿ ಹಿಂಬದಿಗೆ ಸರಿಸುವ ಕೆಲಸವೂ ಸಿದ್ದರಾಮಯ್ಯರಿಂದ ಆಗಿತ್ತು. ಇದು ಪರಮೇಶ್ವರ್ ಗೆ ಭಾರೀ ಆಕ್ರೋಶ ವೇ ಭುಗಿಲೇಳುವಂತೆ ಮಾಡಿತ್ತು. ಈ ಹಿಂದೆ ಚುನಾವಣೆಯಲ್ಲಿ ಪರಮೇಶ್ವರ್ ರನ್ನು ಸೋಲಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಮತ್ತೆ ಅವರ ಸೋಲನ್ನೇ ಬಯಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಚಾರದಲ್ಲಿ ಪರಂ ಮುಂದೆ ಬಂದರೆ ಮುಂದಿನ ವಿಧಾನ ಸಭಾ
ಚುನಾವಣೆಯಲ್ಲಿ ಕಾಂಗ್ರೆಸ್ ಅಪ್ಪಿ ತಪ್ಪಿಯಾದರೂ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಪದವಿಗೇ ಕಣ್ಣಾಯಿಸಿದರೆ ಎಂಬ ಭಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೂರವಿಡುತ್ತಲೇ ಬಂದಿದ್ದರು.

ಪ್ರತಿತಂತ್ರ ರೂಪಿಸಿದ ಪರಂ..!!!

ಎಷ್ಟಾದರೂ ಕಾಂಗ್ರೆಸ್ ನ ರಾಜ್ಯದ ಅಧ್ಯಕ್ಷ ತಾನೇ. ಅವರು ಬಿಡ್ತಾರ. ಕಾಂಗ್ರೆಸ್ ಪಕ್ಷದಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸಿಕೊಳ್ಳಲು ಮತ್ತೆ ಮುಂದಾಗುತ್ತರೆ. ‘ಮುಖ್ಯಮಂತ್ರಿ ನೀವಾಗಿರಬಹುದು, ಆದರೆ ಪಕ್ಷದ ಮೈಕ್ ನನ್ನ ಕೈಯಲ್ಲಿದೆ. ನಾನು ಹೇಳಿದಂತೆಯೇ ನಡೆಯಬೇಕು’ ಎಂದು ಪರಂ ಮುಖ್ಯವಾದವು ಸಿದ್ದರಾಮಯ್ಯವರಿಗೆ ತೋರಿಸಿಕೊಡಲು ಮುಂದಾಗಿದ್ದಾರೆ. ಇದರ ಮೊದಲ ಹಂತವೇ ಟಿಕೆಟ್ ಹಂಚಿಕೆ ವಿಚಾರದಲ್ಲಿ ವೇಣುಗೋಪಾಲ್ ಜತೆಗೆ ಸೇರಿ ಮುಖ್ಯಮಂತ್ರಿ ಯವರನ್ನೇ ಕಟ್ಟಿಹಾಕಲು ಪ್ರಯತ್ನಿಸುತ್ತಿರುವುದು.

ಮೋದಿಯನ್ನು ಒಲಿಸ್ತಾರಾ ಪರಂ..?

ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸೋಲಿಸಲು ಈ ಬಾರಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅದ್ಯಾವ ತಂತ್ರಕ್ಕೂ ಮೊರೆ ಹೋಗಲ್ಲ ಎಂಬುವುದನ್ನು ಹೇಳೋಕೆ ಸಾಧ್ಯವಿಲ್ಲ. ಹೀಗಾಗಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತನ್ನ ಸೋಲಿಗೆ ಕಾರಣವಾದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಶತಾಯ ಗತಾಯ ಸೋಲಿಸಬೇಕೆಂಬ ಹಠದಿಂದ ಭಾರತೀಯ ಜನತಾ ಪಕ್ಷದ ಜೊತೆಗೆ ಒಳ ಒಪ್ಪಂಧ ಮಾಡಿಕೊಂಡರೂ ಅಚ್ಚರಿಯಿಲ್ಲ. ಮೋದಿ ಹವಾ ರಾಜ್ಯದಲ್ಲಿ ಸಖತ್ ಆಗಿ ವರ್ಕೌಟ್ ಆಗುತ್ತಿದ್ದು, ಮೋದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿದಿಸುವ ಕ್ಷೇತ್ರದಲ್ಲಿ ಹೆಚ್ಚು ಪ್ರೋತ್ಸಾಹಿಸಿ ಮುಖ್ಯಮಂತ್ರಿಯನ್ನು ಸೋಲಿಸಿಬಿಡೋದು ಪರಂ ಲೆಕ್ಕಾಚಾರ.

ಉಲ್ಟಾ ಹೊಡೆದ ಸಿಎಂ ಪ್ಲಾನ್..!!!

ಸಿಎಂ ಸಿದ್ದರಾಮಯ್ಯನವರ ಪ್ಲಾನ್ ಬಹಳನೇ ಇತ್ತು. ತನ್ನ ಆಪ್ತರಿಗೆ ಮಾತ್ರವಲ್ಲದೆ ಅವರ ಮಕ್ಕಳಿಗೂ ಟಿಕೆಟ್‌ ನೀಡುವ ಕುರಿತಾಗಿ ಭಾರೀ ಸರ್ಕಸ್ ಮಾಡಿದ್ದರು. ಗೃಹ ಸಚಿವ ರಾಮಲಿಂಗಾ ರೆಡ್ಡಿ ಸಹಿತ ಅನೇಕ ಸಚಿವ ಹಾಗೂ ಶಾಸಕರ ಮಕ್ಕಳಿಗೆ ಟಿಕೆಟ್ ಕೊಡುತ್ತೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆಯನ್ನು ನೀಡಿದ್ದರು. ಆದರೆ ಈ ಭರವಸೆಗೆ ಪರಂ ಗರಂ ಆಗಿದ್ದರು. ಈ ಕಾರಣದಿಂದಾಗಿಯೇ ಮುಖ್ಯಮಂತ್ರಿ ಗಳಿಗೆ ಬಿಟ್ಟಿದ್ದ ಹಗ್ಗವನ್ನು ಬಿಗಿದಿಡಲಾಯಿತು. ಏಕಪಕ್ಷೀಯವಾಗಿ ನಿರ್ಧಾರಕ್ಕೆ ಬರುತ್ತಿದ್ದ ಮುಖ್ಯಮಂತ್ರಿಗಳಿಗೆ ಮೂಗುದಾರವನ್ನು ಹಾಕಲಾಗಿತ್ತು. ಈ ಮೂಲಕ ಬೇಕಾಬಿಟ್ಟಿ ತಮಗೆ ಬೇಕಾದವಿಗೆ ಟಿಕೆಟ್ ನೀಡಲು ಇಚ್ಚಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರಕ್ಕೆ ಭಾರೀ ಹಿನ್ನಡೆಯಾಗಿದೆ.

ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಓಟಕ್ಕೆ ಇದೀಗ ಬ್ರೇಕ್ ಬಿದ್ದಿದ್ದು ಅವರನ್ನೇ ನಂಬಿಕೊಂಡಿದ್ದ ಟಿಕೆಟ್ ಆಕಾಂಕ್ಷಿಗಳಿಗೆ ಭಾರೀ ಆಘಾತವೇ ಆಗಿದೆ. ಈ ಮೂಲಕ ಈವರೆಗೆ ಸಿಎಂ ವರ್ತಿಸುತ್ತಿದ್ದ ಅಹಂಕಾರದ ಓಟಕ್ಕೆ ಬ್ರೇಕ್ ಬಿದ್ದಿದೆ.

-ಸುನಿಲ್ ಪಣಪಿಲ

Tags

Related Articles

Close