ಪ್ರಚಲಿತ

ಬ್ರೇಕಿಂಗ್: ಕಾಂಗ್ರೆಸ್‍ಗೆ ಓಟ್ ಹಾಕಬೇಡಿ ಎಂದ ಸಿಡಿದೆದ್ದ ಕಾಂಗ್ರೆಸ್ ನಾಯಕರು! ವೀರಶೈವರ ದಾಳಿಗೆ ಛಿದ್ರವಾಗುತ್ತಾ ಕಾಂಗ್ರೆಸ್?

ಬೇಡ ಬೇಡ ಅಂತ ಬೊಬ್ಬೆ ಬಿಟ್ರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಕೆಲ ಸಚಿವರು ಹಿಂದೂ ಧರ್ಮವನ್ನು ಒಡೆಯುವ ಕಾಯಕಕ್ಕೆ ಕೈ ಹಾಕಿಯೇ ಬಿಟ್ಟಿದ್ದರು. ಚುನಾವಣಾ ರಾಜಕೀಯ ಲಾಭಕ್ಕಾಗಿ ಧರ್ಮ ಒಡೆಯುವ ಕಾರ್ಯಕ್ಕೆ ಕೈ ಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ಅದೇ ತನ್ನ ವಿಭಜನಾ ನೀತಿಗೆ ಬೆಲೆ ತೆರುವಂತಾಗಿದೆ. ಯಾವ ಮತ ಬ್ಯಾಂಕ್ ಮೇಲೆ ಕಣ್ಣು ಹಾಕಿ ಮುಖ್ಯಮಂತ್ರಿಗಳು ಈ ನಿರ್ಧಾರವನ್ನು ತಳೆದಿದ್ದರೂ ಇದೀಗ ಅದೇ ಮತ ಕಾಂಗ್ರೆಸ್ ಪಕ್ಷದ ನಾಶಕ್ಕೂ ಕಾರಣವಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ವೀರಶೈವರು..!

ಲಿಂಗಾಯತ ಹಾಗೂ ವೀರಶೈವರು ಎರಡೂ ಒಂದೇ. ಒಂದೇ ಧರ್ಮವನ್ನು ಅಂಗೀಕರಿಸಿ ಎಂದು ಅದೆಷ್ಟೋ ವರ್ಷಗಳಿಂದ ನಾವು ಹೋರಾಟ ಮಾಡುತ್ತಿದ್ದೇವೆ. ಆದರೆ ಇದೀಗ ಸರ್ಕಾರ ನಮಗೆ ಮೋಸ ಮಾಡಿದೆ ಎಂದು ವೀರ ಶೈವ ಮಹಾಸಭಾ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ಲಿಂಗಾಯತ ಪ್ರತ್ಯೇಕ ಧರ್ಮದ ಶಿಫಾರಸ್ಸಿನ ವಿರುದ್ಧ ಇದೇ ಮೊದಲ ಬಾರಿಗೆ ಸಭೆ ನಡೆಸಿದ ವೀರಶೈವಾ ಮಹಾಸಭಾ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಕಾಂಗೆಸ್ ಮುಖಂಡ, ಮಾಜಿ ಕೇಂದ್ರ ಸಚಿವರಾದ ಶ್ಯಾಮನೂರು ಶಿವಶಂಕರಪ್ಪ ಈ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಲಿಂಗಾಯತ ಮತವನ್ನು ಪ್ರತ್ಯೇಕ ಧರ್ಮವನ್ನಾಗಿ ವಿಭಜನೆ ಮಾಡಿದ್ದು, ಇದರಲ್ಲಿ ವೀರಶೈವರನ್ನು ಕಡೆಗಣಿಸಲಾಗಿದೆ. ತನ್ನ ಓಟ್ ಬ್ಯಾಂಕ್‍ಗಾಗಿ ಲಿಂಗಾಯತರು ಹಾಗೂ ವೀರಶೈವರನ್ನು ಒಡೆದು ಆಳುವ ನೀತಿಗೆ ಮುಂದಾಗಿದ್ದ ಸಿದ್ದರಾಮಯ್ಯರ ವಿರುದ್ಧ ವೀರಶೈವ ಮಹಾಸಭಾ ಇಂದು ಸಿಡಿದೆದ್ದಿದೆ. ಇಂದು ವೀರಶೈವ ಮಹಾಸಭಾದ ಸಭೆ ನಡೆಸಿ ಮುಖಂಡರು ಸುದ್ಧಿಗೋಷ್ಟಿ ನಡೆಸಿದರು.

ಈ ವೇಳೆ ಮಾತನಾಡಿದ ವೀರಶೈವಾ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಶ್ಯಾಮನೂರು ಶಿವಶಂಕರಪ್ಪ “ಕೇಂದ್ರ ಸರ್ಕಾರಕ್ಕೆ ಮೊದಲು ಮನವಿಯನ್ನು ಸಲ್ಲಿಸಿದ್ದು ವೀರಶೈವ ಮಹಾಸಭಾದಿಂದಲೇ. ಅಂದು ವೀರಶೈವ ಲಿಂಗಾಯತ ಎಂದು ಪ್ರತ್ಯೇಕ ಧರ್ಮ ಮಾಡಿ ಎಂದು ವೀರಶೈವ ಮಹಾಸಭಾದಿಂದಲೇ ನಾವು ಬೇಡಿಕೆಯನ್ನು ಇಟ್ಟಿದ್ದೆವು. ಆದರೆ ಅಂದಿನ ಯುಪಿಎ ಸರ್ಕಾರ ನಮ್ಮ ಮನವಿಯನ್ನು ತಿರಸ್ಕರಿಸಿತ್ತು. ಆದರೆ ಇದೀಗ ಲಿಂಗಾಯತ ಧರ್ಮವೇ ಪ್ರತ್ಯೇಕ ಎಂದು ಹೇಳಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸನ್ನು ಕಳಿಸಿರುವ ರಾಜ್ಯ ಸರ್ಕಾರಕ್ಕೆ ಏನನ್ನಬೇಕು? ರಾಜ್ಯ ಸರ್ಕಾರದ ಈ ರೀತಿಯ ಧೋರಣೆ ಸರಿಯಲ್ಲ. ಇದನ್ನು ನಾವು ಖಂಡಿಸುತ್ತೇವೆ. ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಳಿಸಲಿದ್ದಾರೆ” ಎಂದು ಅವರು ಹೇಳಿದ್ದರೆ.

ಕಾಂಗ್ರೆಸ್‍ಗೆ ಓಟ್ ಹಾಕ್ಬೇಡಿ-ತಿಪ್ಪಣ್ಣ..

ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ವೀರಶೈವ ಮಹಾಸಭಾದ ಮುಖಂಡ ತಿಪ್ಪಣ್ಣ, “ವೀರಶೈವ ಸಮಾಜದವರು ತುಂಬಾನೆ ಬುದ್ಧಿವಂತರಾಗಿದ್ದಾರೆ. ಒಡೆದು ಆಳುವ ಕಾಂಗ್ರೆಸ್ ನೀತಿಯನ್ನು ನಮ್ಮ ಸಮಾಜ ಎಂದೂ ಒಪ್ಪುವುದಿಲ್ಲ. ಲಿಂಗಾಯತ ಹಾಗೂ ವೀರಶೈವರಲ್ಲಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸರ್ಕಾರ ಬಿರುಕನ್ನು ತಂದಿಟ್ಟಿದೆ. ಇದು ಒಳ್ಳೆಯದಲ್ಲ. ಮುಂದಿನ ದಿನಗಳಲ್ಲಿ ಜನರೇ ಇವರಿಗೆ ತಕ್ಕ ಪಾಠ ಕಳಿಸ್ತಾರೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ವೀರಶೈವ ಸಮಾಜದವರು ಓಟ್ ಹಾಕೋದಿಲ್ಲ. ಯಾರು ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಓಟ್ ಹಾಕಬೇಡಿ ಎಂದು ನಾನು ಈ ಮೂಲಕ ಕರೆ ಕೊಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮಲ್ಲಿಯೇ ತಾರತಮ್ಯವನ್ನುಂಟು ಮಾಡಿದ ಮುಖ್ಯಮಂತ್ರಿ ಸಿದ್ದರಮಯ್ಯರಿಗೆ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು” ಎಂದು ಬಹಿರಂಗವಾಗಿಯೇ ಘೋಷಿಸಿದ್ದಾರೆ.

ಒಟ್ಟಾರೆ ಇಂದಿನ ವೀರಶೈವ ಮಹಾಸಭಾದ ಸಭೆಯು ಕಾಂಗ್ರೆಸ್ ವಿರೋಧಿ ನಿರ್ಧಾರದೊಂದಿಗೆ ಅಂತ್ಯವಾಗಿದ್ದು, ಐತಿಹಾಸಿಕ ತೀರ್ಮಾನವನ್ನೇ ಕೈಗೆತ್ತಿಕೊಂಡಿದೆ. ಸ್ವತಃ ಕಾಂಗ್ರೆಸ್ ಮುಖಂಡರೇ ಇಂತಹಾ ಒಂದು ಹೇಳಿಕೆಗಳನ್ನು ನೀಡಿದ್ದು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಸಂಕಷ್ಟ ಎದುರಾಗಿದೆ. ಇದು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಭಾರೀ ಪೆಟ್ಟು ನೀಡಲಿದ್ದು ಕಾಂಗ್ರೆಸ್ ವೀರಶೈವರ ಮತಗಳನ್ನು ಕಳೆದುಕೊಳ್ಳುವ ಭೀತಿಗೆ ಎದುರಾಗಿದೆ.

-ಸುನಿಲ್ ಪಣಪಿಲ

Tags

Related Articles

Close