ಪ್ರಚಲಿತ

ಬಿಎಸ್‍ವೈ ಆಯ್ಕೆ.. ಸರ್ಕಾರ ರಚನೆಗೆ ಬಿಜೆಪಿ ಸನ್ನಿಹಿತ! ರಾಜ್ಯಪಾಲರೆದುರು ಹಕ್ಕು ಮಂಡಿಸಿದ ಬಿಜೆಪಿ ಶಾಸಕರು..!

ಅದೇನೇ ಆದರೂ ಈ ಬಾರಿ ಅಧಿಕಾರದ ಗದ್ದುಗೆಯನ್ನು ಏರಿಯೇ ತೀರುತ್ತೇವೆ ಎಂದು ಹಠ ಹಿಡಿದಿರುವ ಭಾರತೀಯ ಜನತಾ ಪಕ್ಷ ಇದೀಗ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದೆ. ನಿನ್ನೆಯಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಅಲ್ಲೋಲ ಕಲ್ಲೋಲವೇ ನಡೆಯುತ್ತಿದ್ದು, ಇಂದು ಮತ್ತಷ್ಟು ಕುತೂಹಲಕಾರ ಘಟನೆಗಳಿಗೆ ಸಾಕ್ಷಿಯಾಗಿವೆ. ಕಣ್ಣಾ ಮುಚ್ಚಾಲೆ ಆಟವಾಗಿರುವ ರಾಜ್ಯ ರಾಜಕೀಯ ಬೆಳವಣಿಗೆ ಇಂದು ಕ್ಲೈಮಾಕ್ಸ್ ಹಂತಕ್ಕೆ ತಲುಪುವ ಸಾಧ್ಯತೆ ಇದೆ. 

ಶಾಸಕಾಂಗಿ ಪಕ್ಷದ ನಾಯಕನಾಗಿ ಯಡಿಯೂರಪ್ಪ ಆಯ್ಕೆ…

ಇನ್ನು ಇಂದು ಭಾರತೀಯ ಜನತಾ ಪಕ್ಷದ ಶಾಸಕಾಂಗ ಸಭೆಯ ನಾಯಕನಾಗಿ ಬಿಎಸ್ ಯಡಿಯೂರಪ್ಪ ಆಯ್ಕೆಯಾಗಿದ್ದಾರೆ. ಭಾರತೀಯ ಜನತಾ ಪಕ್ಷ ಸರ್ಕಾರ ರಚಿಸಿದರೆ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಲಿರುವ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನು ಸಹಜವಾಗಿಯೇ ಭಾರತೀಯ ಜನತಾ ಪಕ್ಷದ ಆಶಸಕರು ಆಯ್ಕೆ ಮಾಡಿಕೊಂಡಿದ್ದಾರೆ.

Image result for yeddyurappa happy

ಶಾಸಕಾಂಗ ಪಕ್ಷದ ಸಭೆ ಮುಗಿಸಿದ ಕೂಡಲೇ ಯಡಿಯೂರಪ್ಪ ಹಾಗೂ ಭಾರತೀಯ ಜನತಾ ಪಕ್ಷದ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿರುವ ಯಡಿಯೂರಪ್ಪ ಹಾಗೂ ನಾಯಕರು ಸರ್ಕಾರ ರಚನೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

104 ಶಾಸಕರ  ಬಎಂಬಲ ಇರುವ ಪತ್ರವನ್ನು ರಾಜ್ಯಪಾಲರಿಗೆ ನೀಡಿರುವ ಯಡಿಯೂರಪ್ಪ ಹಾಗೂ ಪಕ್ಷದ ನಾಯಕರು, ಭಾರತೀಯ ಜನತಾ ಪಕ್ಷದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಕಾರಣ ನಮಗೆ ಸರ್ಕಾರ ರಚನೆ ಮಾಡಲು ಮತ್ತು ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿದೆ. ಈ ಬಗ್ಗೆ 2 ಪತ್ರಗಳನ್ನು ಭಾರತೀಯ ಜನತಾ ಪಕ್ಷದ ನಿಯೋಗ ರಾಜ್ಯಪಾಲರಿಗೆ ನೀಡಿ ವಿನಂತಿಸಿದೆ.

ರಾಜ್ಯಪಾಲರ ಭೇಟಿಯ ನಂತರ ಸುದ್ಧಿಗಾರರ ಮುಂದೆ ಮಾತನಾಡಿದ ಯಡಿಯೂರಪ್ಪ ನಾವು ಸರ್ಕಾರ ರಚಿಸುತ್ತೇವೆ ಎಂದು ಹೇಳಿದ್ದಾರೆ. “ನಾವು ಈ ಬಾರಿ ಸರ್ಕಾರವನ್ನು ರಚಿಸುತ್ತೇವೆ. ಈ ಬಗ್ಗೆ ರಾಜ್ಯಪಾಲರ ಬಳಿ ಮನವಿ ಮಾಡಿದ್ದೇವೆ. ಹೀಗಾಗಿ ನಮಗೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ನೀಡಬೇಕು. ಪ್ರಮಾಣ ವಚನದ ನಂತರ ನಾವು ಬಹುಮತವನ್ನು ಸಾಭೀತುಪಡಿಸುತ್ತೇವೆ” ಎಂದು ಹೇಳಿದ್ದಾರೆ.

ರಾಜ್ಯಪಾಲರ ಆಹ್ವಾನ..!

ಇನ್ನು ಭಾರತೀಯ ಜನತಾ ಪಕ್ಷದ ಮನವಿಯಂತೆ ಸರ್ಕಾರ ರಚಿಸಲು ಭಾರತೀಯ ಜನತಾ ಪಕ್ಷಕ್ಕೆ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ. ಚುನಾವಣೆಯಲ್ಲಿ ಆಯ್ಕೆಯಾದ ಅತಿದೊಡ್ಡ ಪಕ್ಷಕ್ಕೆ ಸಾಂಪ್ರದಾಯದಂತೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ. ಒಂದು ವಾರದ ಒಳಗಾಗಿ ಬಹುಮತ ಸಾಭೀತು ಮಾಡಲು ಅವಕಾಶ ಇದೆ. ಅದರ ಒಳಗಾಗಿ ಬಹುಮತವನ್ನು ಘೋಷಿಸಬೇಕು ಎಂದು ಷರತ್ತು ವಿಧಿಸುವ ಮೂಲಕ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ.

Image result for vajubhai vala

ಈ ಮಧ್ಯೆ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ನಾವೇ ಸರ್ಕಾರ ರಚಿಸೋದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ನಮ್ಮ ಪಕ್ಷದ ರಣತಂತ್ರಗಳನ್ನು ಇದೀಗ ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲ. ಆದರೆ ಮುಂದಿನ ಸರ್ಕಾರವನ್ನು ರಚಿಸೋದು ನಾವೇ. ಈ ಬಗ್ಗೆ ಯಾವುದೇ ಸಂಶಯ ಬೇಡ” ಎಂದು ಹೇಳಿದ್ದಾರೆ.ಕಾಂಗ್ರೆಸ್ ಹಾಗೂ ಜನತಾ ದಳದ ಶಾಸಕರ ರೆಸಾರ್ಟ್ ರಾಜಕೀಯದ ನಡುವೆಯೇ ಭಾರತೀಯ ಜನತಾ ಪಕ್ಷದ ರಾಜ್ಯಪಾಲರ ಭೇಟಿ ಎರಡು ವಿರೋಧ ಪಕ್ಷಗಳಿಗೆ ಅತಿ ದೊಡ್ಡ ಶಾಕ್‍ನ್ನೇ ನೀಡಿದೆ. ಈ ಎಲ್ಲಾ ಬೆಳವಣಿಗಳನ್ನು ಗಮನಿಸುವಾಗ ಭಾರತೀಯ ಜನತಾ ಪಕ್ಷ ಸರ್ಕಾರ ರಚಿಸೋದು ನಿಶ್ಚಿತ ಎಂಬಂತಾಗಿದೆ.

-ಸುನಿಲ್ ಪಣಪಿಲ

Tags

Related Articles

Close