ಪ್ರಚಲಿತ

ಅಚ್ಛೇ ದಿನ್!! ಭಾರತೀಯ ರೈಲ್ವೆ ಸುರಕ್ಷತೆಯಲ್ಲಿ ಹೊಸ ದಾಖಲೆ ನಿರ್ಮಿಸಿದ ಮೋದಿ ಸರ್ಕಾರ!!

ರೈಲ್ವೆ ಸಾರಿಗೆಯ ಅಭಿವೃದ್ದಿಯೇ ಭಾರತದ ಪ್ರಗತಿಯ ಮೂಲಮಂತ್ರವಾಗಿದ್ದು, ರೈಲ್ವೆ ಇಲಾಖೆಯ ಅಭಿವೃದ್ದಿಯಿಂದ ಮಾತ್ರ ಭಾರತದ ಪ್ರಗತಿ ಉತ್ತುಂಗಕ್ಕೇರಲು ಸಾಧ್ಯ ಎನ್ನುವ ಮಾತಿತ್ತು!! ಆದರೆ ಭಾರತ ಸಂಚಾರದ ಜೀವನಾಡಿಯಾಗಿರುವ ಮತ್ತು ಅತಿ ದೊಡ್ಡ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೆಯಲ್ಲಿ ಪದೇ ಪದೇ ಹಳಿ ತಪ್ಪುವಿಕೆ, ಅಪಘಾತ, ಭಾರೀ ಪ್ರಮಾಣದ ಸಾವು-ನೋವಿಗಾಗಿ ಸದಾ ಟೀಕೆಗೆ ಗುರಿಯಾಗುವ ಭಾರತೀಯ ರೈಲ್ವೆ ಸುರಕ್ಷತೆಯಲ್ಲಿ ಇದೀಗ ಹೊಸ ದಾಖಲೆ ನಿರ್ಮಿಸಿದೆ ಎಂದರೆ ನಂಬ್ತೀರಾ??

ಆದರೆ ಇದನ್ನು ನಂಬಲೇಬೇಕು!! ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಏರಿದಂದಿನಿಂದಲೂ ದೇಶ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆಯಲ್ಲದೇ ದೇಶದ ಅತೀ ದೊಡ್ಡ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೇ ಇಲಾಖೆಯು ಇದೀಗ ಹೊಸ ದಾಖಲೆಯನ್ನು ನಿರ್ಮಿಸುವುದರೊಂದಿಗೆ ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಇಡೀ ದೇಶವೇ ಕೊಂಡಾಡುವಂತಾಗಿದ್ದಂತೂ ಮಾತ್ರ ಅಕ್ಷರಶಃ ನಿಜ.

ಯಾಕೆಂದರೆ ಪದೇ ಪದೆ ಹಳಿ ತಪ್ಪುವುದು, ಅಪಘಾತ, ಬಿರುಕು ಬಿಡುವ ಹಳಿಗಳಿಂದ ಭಾರಿ ಪ್ರಮಾಣದ ಸಾವು ನೋವು ಸಂಭವಿಸಿ ತೀವ್ರ ಟೀಕೆಗೆ ರೈಲ್ವೆ ಇಲಾಖೆ ಗುರಿಯಾಗುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ರೈಲ್ವೆ ಸುರಕ್ಷತೆಯ ದೃಷ್ಟಿಯಿಂದ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಮತ್ತು ಕ್ರಮಬದ್ಧವಾದ ಜಾರಿಯಿಂದ ಸಾವು ನೋವುಗಳಲ್ಲಿ ಗಣನೀಯ ಇಳಿಕೆಯಾಗಿದೆ.

ಕಳೆದ 35 ವರ್ಷಗಳಲ್ಲೇ ಮೊದಲ ಬಾರಿಗೆ ರೈಲ್ವೆ ಅಪಘಾತಗಳ ಪ್ರಮಾಣ ಎರಡಂಕಿಗೆ ಇಳಿದಿದ್ದು, 2017-18ನೇ ಹಣಕಾಸು ವರ್ಷದಲ್ಲಿ ಮಾರ್ಚ್ 31ರವರೆಗೆ ಕೇವಲ 73 ಅಪಘಾತಗಳು ಸಂಭವಿಸಿವೆ. ಅಷ್ಟೇ ಅಲ್ಲದೇ 2016-2017ನೇ ಸಾಲಿನಲ್ಲಿ ದೇಶಾದ್ಯಂತ ಒಟ್ಟಾರೆ 104 ಅಪಘಾತಗಳು ಸಂಭವಿಸಿದ್ದವು. ಇದಕ್ಕೆ ಹೋಲಿಸಿದರೆ 2017-18ರಲ್ಲಿ ಅಪಘಾತಗಳ ಪ್ರಮಾಣ ಶೇ.29ರಷ್ಟು ಇಳಿಕೆಯಾಗಿದೆ. ಅದೇ ರೀತಿ ರೈಲ್ವೆ ಹಳಿ ತಪ್ಪುವಿಕೆ ಪ್ರಮಾಣ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ 39ಕ್ಕೆ ಇಳಿಕೆಯಾಗಿರುವುದು ಗಮನಾರ್ಹ ಸಂಗತಿ.

ರೈಲ್ವೆ ಇಲಾಖೆ ರೈಲು ಸುರಕ್ಷತೆ ದೃಷ್ಟಿಯಿಂದ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಮೂರು ದಶಕಗಳಲ್ಲೇ ಕಾಣದಂತಹ ಹೊಸ ದಾಖಲೆ ಸೃಷ್ಟಿಸಿರುವ ಮೂಲಕ ಕಳೆದ 35 ವರ್ಷಗಳಲ್ಲೇ ಮೊದಲ ಬಾರಿಗೆ ರೈಲ್ವೆ ಅಪಘಾತಗಳ ಪ್ರಮಾಣ ಎರಡಂಕಿಗೆ ಇಳಿದಿರುವುದೇ ಹೆಮ್ಮೆಯ ವಿಚಾರವಾಗಿದೆ!! ಇನ್ನು 1968-1969ರಲ್ಲಿ ಮೊದಲ ಬಾರಿಗೆ ರೈಲ್ವೆ ಅಪಘಾತಗಳ ಸಂಖ್ಯೆ 1000ಕ್ಕಿಂತ ಕೆಳಗೆ ಇಳಿದಿತ್ತು. ಆ ವರ್ಷ ಅಪಘಾತದ ಪ್ರಮಾಣ 908ಕ್ಕೆ ಇಳಿಕೆಯಾಗಿತ್ತು. ಅದಕ್ಕೂ ಮುನ್ನ ಪ್ರತಿ ವರ್ಷ 1000ಕ್ಕೂ ಹೆಚ್ಚು ಅಪಘಾತಗಳು ನಡೆಯುವುದು ಸರ್ವೇ ಸಾಮಾನ್ಯ ಎನಿಸಿತ್ತು.

ಈಗಾಗಲೇ ದೇಶದಲ್ಲಿ ಉದ್ಯೋಗ ಸೃಷ್ಟಿಸುವುದರ ಜೊತೆಗೆ ಹಲವಾರು ಕ್ಷೇತ್ರಗಳಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಭಾರತದಲ್ಲಿ ಆರಂಭವಾಗಲಿದ್ದು, ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಮೋದಿ ಅವರು ಅಹಮದಾಬಾದ್‍ನಲ್ಲಿ ಬುಲೆಟ್ ರೈಲು ಯೋಜನೆಗೆ ಅಡಿಗಲ್ಲು ಹಾಕುವ ಮೂಲಕ ಚಾಲನೆ ನೀಡಿದ್ದರು!! ಕಳೆದ ಕೆಲವರ್ಷಗಳಿಂದ ನೋಡುತ್ತಿದ್ದರೆ, ಸಂಭವಿಸುತ್ತಿರುವ ರೈಲು ಅಪಘಾತಗಳಿಂದಲೇ ಹಲವಾರು ರೈಲು ಸಚಿವರು ತಮ್ಮ ಖಾತೆ ಕಳೆದುಕೊಂಡಿದ್ದಾರೆ ಅಥವಾ ಅವರಾಗಿಯೇ ರಾಜೀನಾಮೆ ನೀಡಿ ಹಿಂದೆ ಸರಿದಿದ್ದಾರೆ.

ಅಷ್ಟೇ ಅಲ್ಲದೇ, ಇತ್ತೀಚಿನ ದಿನಗಳಲ್ಲಿ ರೈಲ್ವೇ ಅಪಘಾತ ಹಾಗೂ ಹಳಿತಪ್ಪಿದ ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಅತ್ಯುನ್ನತ ಹಾಗೂ ಹೆಚ್ಚು ಭದ್ರತೆ ಇರುವ ಬುಲೆಟ್ ರೈಲು ಯೋಜನೆ ಆರಂಭವಾಗುತ್ತಿರುವ ಮೂಲಕ ರೈಲ್ವೇ ವ್ಯವಸ್ಥೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಈ ಯೋಜನೆಯಿಂದ ಪ್ರಯಾಣಿಕರ ಸುರಕ್ಷತೆ, ಸಂಚಾರದ ವೇಗ, ಗ್ರಾಹಕರಿಗೆ ಅತ್ಯುತ್ತಮ ಸೇವೆ ಹಾಗೂ ತಂತ್ರಜ್ಞಾನ, ಕೌಶಲ್ಯ ಹಾಗೂ ಮಾನದಂಡಗಳ ವಿಚಾರದಲ್ಲಿ ಭಾರತೀಯ ರೈಲ್ವೆ ವಿಶ್ವದ ಪ್ರಮುಖ ರೈಲ್ವೆಗಳ ಪೈಕಿ ಒಂದಾಗಲು ಸಹಾಯಕಾರಿಯಾಗಲಿದೆ. ಹಾಗಾಗಿ ಈ ಬುಲೆಟ್ ರೈಲು ಯೋಜನೆ ಭಾರತದ ಸಾರಿಗೆ ಇತಿಹಾಸವನ್ನೇ ಬದಲಿಸುವ ನಿರೀಕ್ಷೆಯೂ ಇದೆ.

ಆದರೆ ನರೇಂದ್ರ ಮೋದಿ ಸರ್ಕಾರವು ಅಧಿಕಾರದ ಗದ್ದುಗೆಯನ್ನು ಏರಿದಂದಿನಿಂದಲೂ ರೈಲು ಸಾರಿಗೆ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಕ್ರಮ ಕೈಗೊಂಡಿದೆಯಲ್ಲದೇ, ಕೆಲ ವರ್ಷದಿಂದ ರೈಲ್ವೆ ಸುರಕ್ಷತೆಗೆ ಆದ್ಯತೆ ನೀಡಿರುವುದೇ ಅಪಘಾತ ಪ್ರಮಾಣ ಇಳಿಕೆಗೆ ಪ್ರಮುಖ ಕಾರಣ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ರೇಲ್ವೆ ಸುರಕ್ಷತೆಗೆ 7,267 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದು ಮತ್ತು ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರುವುದು ಗಮನಾರ್ಹ ಸಂಗತಿಯಾಗಿದೆ!!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2018-19ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಲ್ಲಿ, ಹಣಕಾಸು ಸಚಿವ ಅರುಣ್ ಜೇಟ್ಲಿ ಭಾರತ ಸದ್ಯದಲ್ಲಿಯೇ ಆರ್ಥಿಕವಾಗಿ 5ನೇ ಅತ್ಯಂತ ಸುಭದ್ರ ರಾಷ್ಟ್ರವಾಗಲಿದೆ ಎಂದು ಹೇಳಿದ್ದರು!! ದೇಶಕ್ಕೆ ಹೆಚ್ಚಿನ ಆದಾಯ ನೀಡುವ ರೈಲ್ವೆ ವಿಚಾರವಾಗಿ ಬಜೆಟ್ ಮಂಡಿಸಿರುವ ಹಣಕಾಸು ಸಚಿವರು, 2017ರ ಸೆಪ್ಟೆಂಬರ್ ನಲ್ಲಿ ಬುಲೆಟ್ ಟ್ರೈನ್ ಗಾಗಿ ಅಡಿಗಲ್ಲು ಹಾಕಲಾಗಿರುವ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದರು!!

ಆದರೆ ಇದೀಗ ಪದೇ ಪದೇ ಹಳಿ ತಪ್ಪುವಿಕೆ, ಅಪಘಾತ, ಹೀಗೆ ಸದಾ ಟೀಕೆಗೆ ಗುರಿಯಾಗುವ ಭಾರತೀಯ ರೈಲ್ವೆ ಇಲಾಖೆಯೂ ಇದೀಗ ಅಪಘಾತಗಳ ಪ್ರಮಾಣಗಳಲ್ಲಿ ಶೇ.29ರಷ್ಟು ಇಳಿಕೆಯಾಗುವ ಮೂಲಕ ಸುರಕ್ಷತೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ ಎಂದರೆ ಅದಕ್ಕಿಂತಲೂ ಹೆಮ್ಮೆಯ ವಿಚಾರ ಮತ್ತೊಂದಿಲ್ಲ!!

source: suvarna news

– ಅಲೋಖಾ

 

Tags

Related Articles

Close