ಪ್ರಚಲಿತ

ಖಾಲಿ ಸಭೆಯಲ್ಲಿ ಭಾಷಣ ಮಾಡಿದ ಸಿಎಂ..! ಈ ಬಾರಿ ಸೋಲು ಖಚಿತ ಎಂದು ಒಪ್ಪಿಕೊಂಡರೇ ಸಿದ್ದರಾಮಯ್ಯ..?!

ಅರೆರೆ, ಏನ್ರೀ ಇದು ಈ ರೀತಿಯಲ್ಲಿ ಮಾನ ಮರ್ಯಾದೆ ಎಲ್ಲಾ ಕಳೆದುಕೊಂಡರೂ ತೃಪ್ತಿ ಪಡದ ಈ ಕಾಂಗ್ರೆಸಿಗರು ಇನ್ನೇನು ಮಾಡಲು ಹೊರಟಿದ್ದಾರೆ ಎಂಬೂದೇ ಆಶ್ಚರ್ಯ..! ಕಾಂಗ್ರೆಸ್ ಗೆ ಕಾಂಗ್ರೆಸ್ಸೇ ಸಾಟಿ ಎಂಬೂದು ಮತ್ತೊಮ್ಮೆ ರುಜುವಾತು ಆಯಿತಲ್ಲಾ. ಇಡೀ ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡಿ , ರಾಜ್ಯವನ್ನು ನರಕದ ಕೂಪವನ್ನಾಗಿ ಮಾಡಿರುವ ಸಿದ್ದರಾಮಯ್ಯನವರಿಗೆ ಇದೀಗ ಸ್ವತಃ ತಮ್ಮ ಪಕ್ಷದ ಕಾರ್ಯಕರ್ತರಿಂದಲೇ ಛೀಮಾರಿ ಬಿದ್ದಿದೆ. ಕಾಂಗ್ರೆಸ್ ಇಂತಹ ಅವಮಾನ ಎದುರಿಸುತ್ತಿರುವುದು ಇದೇ ಮೊದಲೇನಲ್ಲಾ, ಆದರೂ ಒಬ್ಬ ಮುಖ್ಯಮಂತ್ರಿ ಆಗಿ ತನ್ನ ಪದಕ ಕಾರ್ಯಕರ್ತರೇ ಕ್ಯಾರೇ ಅನ್ನುತ್ತಿಲ್ಲ ಎಂದರೆ ಇವರ ಘನತೆ ಗೌರವ ಯಾವ ಮಟ್ಟದಲ್ಲಿ ಇದೆ ಎಂಬುದು ಅರಿವಾಗುತ್ತದೆ.!

ಇತ್ತೀಚೆಗೆ ಮೈಸೂರಿನಲ್ಲಿ ಪ್ರಚಾರಕ್ಕೆಂದು ತೆರಳಿದ ಸಿಎಂ ಸಿದ್ದರಾಮಯ್ಯನವರಿಗೆ ತಮ್ಮ ತವರು ಕ್ಷೇತ್ರದಲ್ಲೇ ಸ್ವಾಗತ ಸಿಗದೆ , ನೀರಸ ಪ್ರತಿಕ್ರಿಯೆ ವ್ಯಕ್ತವಾಗಿ ಸಿದ್ದರಾಮಯ್ಯನವರು ಪೇಚು ಮುಖ ಇಟ್ಡುಕೊಂಡು ವಾಪಾಸಾಗಿದ್ದರು. ಗ್ರಾಮಗಳಲ್ಲಿ ಪ್ರಚಾರಕ್ಕೆ ತೆರಳಿದ ಸಿದ್ದರಾಮಯ್ಯನವರಿಗೆ ಯಾವುದೇ ರೀತಿಯ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ, ಮೈಸೂರಿನಲ್ಲಿ ತಾನೇ ಸ್ಪರ್ಧಿಸುವುದಾಗಿ ಪದೇ ಪದೇ ಹೇಳಿಕೊಂಡಿರುವ ಸಿಎಂ ಗೆ ಅಲ್ಲಿನ ಜನರು ನೀಡಿದ ಪ್ರತಿಕ್ರಿಯೆ ನೋಡಿ ಕಂಗಾಲಾಗಿದ್ದರು.! ಇದೀಗ ಮತ್ತೊಮ್ಮೆ ಇಂತಹುದೇ ಘಟನೆ ನಡೆದಿದ್ದು , ಕಾಂಗ್ರೆಸ್ ಮತ್ತಷ್ಟು ಮುಜುಗರ ಪಡುವಂತಾಗಿದೆ.!

ರಾಹುಲ್ ಭಾಷಣ ಆರಂಭೀಸುತ್ತಲೇ ಕಾರ್ಯಕರ್ತರ ಪಲಾಯನ..!

ಹೌದು, ಪಕ್ಷದ ಪ್ರಚಾರ ಕಾರ್ಯದ ನಿಮಿತ್ತ ರಾಜ್ಯಾದ್ಯಂತ ಜನಾಶಿರ್ವಾದ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ , ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯನ್ನು ಇಟ್ಟುಕೊಂಡು ಪ್ರಚಾರ ಆರಂಭಿಸಿದೆ. ಆದರೆ ಎಲ್ಲೂ ತಮ್ಮ ನಿರೀಕ್ಷೆ ತಲುಪುತ್ತಿಲ್ಲ ಈ ಕಾಂಗ್ರೆಸಿಗರು.‌ ಯಾಕೆಂದರೆ ಜನಾಶಿರ್ವಾದ ಯಾತ್ರೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಮುಖ್ಯ ಭಾಷಣ ಮಾಡಲು ರಾಹುಲ್ ತಯಾರಾಗಿದ್ದರು. ಆದರೆ ರಾಹುಲ್ ಗೆ ಎದುರಾಗಿದ್ದು ಭಾರೀ ಅವಮಾನ, ಯಾಕೆಂದರೆ ರಾಹುಲ್ ವೇದಿಕೆ ಏರುತ್ತಿದ್ದಂತೆ ಸೇರಿದ್ದ ಕಾರ್ಯಕರ್ತರೆಲ್ಲಾ ಮನೆಗೆ ಹೊರಟು ನಿಂತಿದ್ದರು.

ಕಾಂಗ್ರೆಸ್ ಕಾರ್ಯಕ್ರಮಕ್ಕೂ ಮೊದಲು ಖ್ಯಾತ ಸಂಗೀತಕಾರ ಅರ್ಜುನ್ ಜನ್ಯ ಅವರ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದರು. ಇದಕ್ಕಾಗಿ ಸೇರಿದ ಜನರನ್ನೇ ತಮ್ಮ ಪಕ್ಷದ ಕಾರ್ಯಕ್ರಮಕ್ಕೂ ಇರಿಸುವಂತೆ ಮಾಡುವ ಉಪಾಯ ಹೂಡಿದ್ದರು ಈ ಕಾಂಗ್ರೆಸಿಗರು. ಆದರೆ ತಮ್ಮ ಐಡಿಯಾ ಉಲ್ಟಾ ಪಲ್ಟಾ ಆಗಿದೆ. ಸಂಗೀತ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ರಾಹುಲ್ ಭಾಷಣ ಆರಂಭಿಸಿದರು. ಆದರೆ ಕಾರ್ಯಕರ್ತರು ಯಾರೂ ಸಭೆಯಲ್ಲಿ ಕೂರಲಿಲ್ಲ.

ಸಂಗೀತ ಕಾರ್ಯಕ್ರಮ ಮುಗಿಯುತ್ತಲೇ ರಾಹುಲ್ ಭಾಷಣ ಶುರು ಮಾಡಿದರೂ ಕೂಡ ಯಾವೊಬ್ಬ ಕಾರ್ಯಕರ್ತನೂ ನಿಲ್ಲಲಿಲ್ಲ, ಸೇರಿದ್ದವರೆಲ್ಲಾ ಎದ್ದು ಹೋಗುತ್ತಿರುವುದನ್ನು ಕಂಡ ನಾಯಕರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.‌ಇದರಿಂದ ಪೊಲೀಸರು ಕಾರ್ಯಕ್ರಮದ ಸುತ್ತಲೂ ಗೇಟ್ ಬಂದ್ ಮಾಡಿ ಕಾರ್ಯಕರ್ತರನ್ನು ತಡೆಯುವ ಪ್ರಯತ್ನ ಮಾಡಿದ್ದರು. ಆದರೆ ಸೇರಿದ್ದ ಸಾವಿರಾರು ಕಾರ್ಯಕರ್ತರು ಆಕ್ರೋಶಗೊಂಡು ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾರೆ.

ತಡೆಯಲು ಯತ್ನಿಸಿದ ಪೊಲೀಸರನ್ನು ದಾಟಿ ಗೇಟ್, ಬ್ಯಾರಿ ಕೇಡ್ ಗಳನ್ನು ಮುರಿದು ಕಾರ್ಯಕರ್ತರು ಹೊರ ನಡೆದಿದ್ದಾರೆ. ಇದರಿಂದಾಗಿ ಪೊಲೀಸರ ಯಾವುದೇ ಪ್ರಯತ್ನವೂ ಫಲಿಸಲಿಲ್ಲ. ಇದನ್ನು ಕಂಡ ರಾಹುಲ್ ಗಾಂಧಿ ತಮ್ಮ ಮಾತಿಗೆ ಬೇಗನೆ ಪೂರ್ಣ ವಿರಾಮ ಹಾಕುವಂತಾಯಿತು. ರಾಹುಲ್ ನಂತರದಲ್ಲಿ ಸಿಎಂ ಸಿದ್ದರಾಮಯ್ಯನವರು ಮಾತು ಆರಂಭಿಸಿದರು, ಆದರೆ ಸಭೆಯಲ್ಲಿ ಯಾವೊಬ್ಬ ಕಾರ್ಯಕರ್ತನೂ ಇಲ್ಲದೆ ಕೇವಲ ಖಾಲಿ ಸಭೆಗೆ ಭಾಷಣ ಮಾಡುವಂತಾಯಿತು. ಮುಖ್ಯಮಂತ್ರಿಯಾಗಿ ಯಾವ ರೀತಿಯಲ್ಲಿ ಜನರು ಸಿದ್ದರಾಮಯ್ಯನವರನ್ನು ಸ್ವೀಕರಿಸಿದ್ದಾರೆ ಎಂಬುವುದಕ್ಕೆ ಈ ಜನಾಶಿರ್ವಾದ ಯಾತ್ರೆಯೇ ಸಾಕ್ಷಿ..!

ತಮ್ಮ ಪಕ್ಷದ ಮುಖಂಡರು ಮಾತನಾಡಲಿದ್ದಾರೆ ಎಂದರೆ ಸಾಕು , ಲಕ್ಷ ಲಕ್ಷ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸುತ್ತಾರೆ. ಆದರೆ ಕಾಂಗ್ರೆಸ್ ಗೆ ಈ ಭಾಗ್ಯ ಇಲ್ಲ , ಯಾಕೆಂದರೆ ಕಾಂಗ್ರೆಸ್ ಮುಖಂಡರು ಮಾತನಾಡುತ್ತಿದ್ದಂತೆ ಸ್ವತಃ ತಮ್ಮ ಪಕ್ಷದ ಕಾರ್ಯಕರ್ತರೇ ನಿಲ್ಲುವುದಿಲ್ಲ ಎಂದಾದರೆ ಇನ್ನು ಸಾರ್ವಜನಿಕರು ಸೇರುವುದು ಅಸಾಧ್ಯವೇ ಸರಿ. ಅದೇನೇ ಆಗಲಿ ಈ ಬಾರಿಯ ವಿಧಾನಸಭಾ ಚುನಾವಣೆ ಎಲ್ಲಾ ರೀತಿಯಲ್ಲೂ ರಂಗೇರುತ್ತಿದ್ದು ಭಾರೀ ಕುತೂಹಲ ಕೆರಳಿಸಿದೆ..!

–ಅರ್ಜುನ್

 

Tags

Related Articles

Close