ಪ್ರಚಲಿತ

ಬಯಲಾಯಿತು ಕಾಂಗ್ರೆಸ್ ಕಳ್ಳ ಮುಖ…! ದಾವಣಗೆರೆಯಲ್ಲಿ ಸೋಲಿನ ಭೀತಿಯಲ್ಲಿ ಕಾಂಗ್ರೆಸ್ ಡಬಲ್ ಗೇಮ್…!

ಈ ಬಾರಿ ಗೆಲ್ಲದಿದ್ದರೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಿಸಲು ಸಾಧ್ಯವೇ ಇಲ್ಲ. ಈಗಾಗಲೇ ರಾಹುಲ್ ಗಾಂಧಿ ನೇತೃತ್ವದಲ್ಲಿ ಎಲ್ಲಾ ರಾಜ್ಯಗಳಲ್ಲೂ ಕಮಲವನ್ನು ಅರಳಿಸುವಂತೆ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲಿ ಇದು ಮರುಕಳಿಸಿದರೆ ಭಾರತೀಯ ಜನತಾ ಪಕ್ಷದ ಕಾಂಗ್ರೆಸ್ ಮುಕ್ತ ಕರ್ನಾಟಕ ಕನಸು ನನಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಕಾಂಗ್ರೆಸ್ ಪಕ್ಷದ ವಲಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸಂದೇಶಗಳು. ಇದು ಕೇವಲ ಸಂದೇಶ ಮಾತ್ರವಲ್ಲ ಬದಲಾಗಿ ನೈಜ ವಿಚಾರ… ಹೀಗಾಗಿ ಕಾಂಗ್ರೆಸ್ ಈ ಬಾರಿ ಶತಾಯ ಗತಾಯ ಗೆಲ್ಲಲೇ ಬೇಕು ಎನ್ನುವ ಉದ್ದೇಶದಿಂದ ವಾಮಾಮಾರ್ಗ ಹಿಡಿದಿದ್ದು ಹೊಸ ವಿಚಾರವೇನಲ್ಲ. ಆದರೆ ಚುನಾವಣಾ ಸಂದರ್ಭದಲ್ಲೂ ಕಾಂಗ್ರೆಸ್ ತನ್ನ ನೀಚ ಕೆಲಸವನ್ನು ಮುಂದುವರೆಸಿದ್ದು ಬಣ್ಣ ಬಟ ಬಯಲಾಗಿದೆ.

ದಾವಣಗೆರೆ ದಕ್ಷಿಣದಲ್ಲಿ ಭಾರೀ ಹಂಚಿಕೆ..!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನಾಯಕರಿಂದ ಭಾರೀ ಹಣ ಹಂಚಿಕೆ ಮಾಡಲಾಗಿದೆ. ಈ ಬಾರಿ ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿರುವ ಕಾಂಗ್ರೆಸ್ ಇಂತಹಾ ಕೆಲಸಗಳಿಗೆ ಕೈ ಹಾಕಿದೆ. ಚುನಾವಣೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ವಿಫಲರಾಗಿರುವ ಕಾಂಗ್ರೆಸಿಗರು ಈ ಕೃತ್ಯಕ್ಕೆ ಕೈ ಹಾಕಿಸಿಕ್ಕಿ ಬಿದ್ದಿದ್ದು ಇದೀಗ ಕಳ್ಳತನದ ವೀಡಿಯೋ ಸಖತ್ ವೈರಲ್ ಅಗಿದೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ಯಾಮನೂರ್ ಶಿವಶಂಕರಪ್ಪ ಅವರಿಗೆ ಈ ಬಾರಿಯ ಗೆಲುವು ಸುಲಭದ ಮಾತಲ್ಲ ಎಂಬ ಮನದಟ್ಟಾಗಿದೆ.ಹೀಗಾಗಿ ಪ್ರಚಾರದ ವೇಳೆ ಭಾರೀ ಹಣ ಹಂಚಿಕೆ ಮಾಡಲಾಗಿತ್ತು. ಆದರೂ ಚುನಾವಣೆಯಲ್ಲಿ ಭಯಭೀತರಾಗಿರುವ ಶ್ಯಾಮನೂರು ಶಿವಶಂಕರಪ್ಪ ಹಣ ಹಂಚಿಕೆಯ ಮೂಲಕ ಓಟ್ ಪಡೆಯಲು ಮುಂದಾಗಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಜಾದ್ ನಗರ ಎಂಬಲ್ಲಿ ಈ ಕಳ್ಳಾಟ ನಡೆದಿದ್ದು ಕೃತ್ಯ ಮಾಧ್ಯಮಗಳಲ್ಲಿ ಸುದ್ದಿಯಾಗಿವೆ. ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚುವ ದೃಶ್ಯಗಳನ್ನು ಸ್ಥಳೀಯರು ಸೆರೆಹಿಡಿದಿದ್ದು ಕಾಂಗ್ರೆಸ್ ಬಣ್ಣ ಬಯಲಾಗಿದೆ. ಒಬ್ಬ ಮತದಾರನಿಗೆ ತಲಾ ೫೦೦ರೂಪಾಯಿಂತೆ ಹಂಚಿಕೆ ಮಾಡಲಾಗಿದೆ.

ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಯಶವಂತ ರಾವ್ ಜಾದವ್ ಅವರನ್ನು ಈ ಬಾರಿ ಮಣಿಸುವುದು ಸುಲಭದ ಮಾತಲ್ಲ. ಈ ಬಾರಿ ಶ್ಯಾಮನೂರು ಶಿವಶಂಕರಪ್ಪ ಸೋಲೋದು ಖಚಿತವಾಗಿದೆ. ಕಠಿಣ ಸ್ಪರ್ಧೆಯನ್ನು ಒಡ್ಡಿದ್ದರು. ಬಹುತೇಕ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಯಶವಂತ ರಾವ್ ಜಾದವ್ ಗೆಲುವಿನ ಹೊಸ್ತಿಲಲ್ಲೇ ಇದ್ದಾರೆ. ಈ ಮಾಹಿತಿಯೇ ಕಾಂಗ್ರೆಸ್ ಅಭ್ಯರ್ಥಿ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ನಿದ್ದೆಗೆಡಿಸಿದೆ.

ಒಟ್ಟಾರೆ ಈ ಬಾರಿ ಕಮಲ ಅರಳುವುದು ಖಚಿತವಾಗಿದ್ದು ಕಾಂಗ್ರೆಸ್ ನಾಯಕರ ಚಳಿ ಬಿಡಿಸಿದಂತಾಗಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಹಣ ಹಂಚಿಕೆ ಯ ಮೊರೆ ಹೋಗಿದ್ದಾರೆ. ಆದರೆ ಜನ ಬುದ್ದಿವಂತರಾಗಿದ್ದೂ ಕಾಂಗ್ರೆಸ್ ಪಕ್ಷವನ್ನು ಸೋಲಿಸದೆ ಬಿಡೋದಿಲ್ಲ ಎಂಬ ಜಿದ್ದಿಗೆ ಬಿದ್ದಿದ್ದಾರೆ.

ಸುನಿಲ್ ಪಣಪಿಲ

Tags

Related Articles

Close