ಪ್ರಚಲಿತ

ಬಿಗ್ ಬ್ರೇಕಿಂಗ್! ಮೈತ್ರಿ ಸರಕಾರದಲ್ಲಿ ಭಿನ್ನಮತ ಸ್ಫೋಟ..! ಸಭೆಯಲ್ಲೇ ಕಾಂಗ್ರೆಸ್ ಶಾಸಕರ ಆಕ್ರೋಶ..!

ಕಾಂಗ್ರೆಸ್ ಮತ್ತು ಜೆಡಿಎಸ್ ಅನಿವಾರ್ಯ ಕಾರಣಕ್ಕಾಗಿ ಮೈತ್ರಿ ಮಾಡಿಕೊಂಡು ಇದೀಗ ಸರಕಾರ ರಚನೆ ಮಾಡಿಕೊಂಡಿದ್ದರೂ ಕೂಡ , ಪದೇ ಪದೇ ಈ ಎರಡೂ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮೂಡುತ್ತಲೇ ಇದೆ.‌ ಒಂದೆಡೆ ಅತೀ ಹೆಚ್ಚು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಮೇಲುಗೈ ಸಾಧುಸಲು ಯತ್ನಿಸಿದರೆ, ಇತ್ತ ಜೆಡಿಎಸ್ ಶಾಸಕರೂ ಕೂಡ ತಾವು ಯಾರಿಗೂ ಕಡಿಮೆಯಿಲ್ಲ ಎಂಬಂತೆ ಕಾಂಗ್ರೆಸ್ ನಾಯಕರ ವಿರುದ್ಧ ಸಮರ ಸಾರುತ್ತಲೇ ಬಂದಿದ್ದಾರೆ.‌ ಈಗಾಗಲೇ ಕುಮಾರಸ್ವಾಮಿ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿಕೊಂಡಿದ್ದು, ಬಹುತೇಕ ಉನ್ನತ ಹುದ್ದೆಗಳು ಎಲ್ಲವೂ ಜೆಡಿಎಸ್ ಪಾಲಾಗಿದೆ.‌ಆದ್ದರಿಂದಲೇ ಭಾರೀ ಅಸಮಧಾನಗೊಂಡ ಕಾಂಗ್ರೆಸ್ ಶಾಸಕರು ಇದೀಗ ಬಹಿರಂಗವಾಗಿಯೇ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಮೈತ್ರಿ ಸರಕಾರದಲ್ಲಿ ಭಾರೀ ಕೋಲಾಹಲ ಎದ್ದಿದೆ..!

ಮೈತ್ರಿ ಸೂತ್ರದ ಬಳಿಕ ಕಾಂಗ್ರೆಸ್‌ನಲ್ಲೇ ಅಸಮಧಾನ..!

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತ್ರತ್ವದಲ್ಲಿ ಈಗಾಗಲೇ ಮೈತ್ರಿ ಸೂತ್ರದ ಸಭೆ ನಡೆದಿದ್ದು, ಇನ್ನು ಮುಂದೆ ಯಾವ ರೀತಿಯಲ್ಲಿ ಒಟ್ಟಾಗಿ ಸರಕಾರ ನಡೆಸಬಹುದು ಎಂಬ ವಿಚಾರವಾಗಿ ಚರ್ಚೆ ನಡೆಸಿದ್ದಾರೆ.‌ಆದರೆ ಸಭೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ವಲಯದಲ್ಲಿ ಭಾರೀ ಕೋಲಾಹಲವೇ ಎಬ್ಬಿದೆ. ಯಾಕೆಂದರೆ ಈಗಾಗಲೇ ಡಿಕೆ ಶಿವಕುಮಾರ್ ಅವರಿಗೆ ಇಂಧನ ಖಾತೆ ಕೈತಪ್ಪಿರುವುಕ್ಕೆ ಕಾಂಗ್ರೆಸ್ ಮುಖಂಡರು ಜೆಡಿಎಸ್ ವಿರುದ್ಧ ಕೆಂಡಕಾರುತ್ತಿದ್ದು, ಇದೀಗ ಸರಕಾರದ ಎಲ್ಲಾ ಮುಖ್ಯ ಸ್ಥಾನಗಳು ಜೆಡಿಎಸ್ ಪಾಲಾಗಿದೆ. ಆದ್ದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಮುಖಂಡರು ಕುಮಾರಸ್ವಾಮಿ ಮತ್ತು ತಮ್ಮದೇ ಪಕ್ಷದ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಾರೆ.

ಈಗಾಗಲೇ ಡಿಕೆ ಶಿವಕುಮಾರ್ ಅವರು ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಸ್ವತಃ ತಮ್ಮ ಪಕ್ಷದ ವಿರುದ್ಧವೇ ಕಿಡಿಕಾರಿದ್ದರು. ಆದ್ದರಿಂದ ಮೈತ್ರಿ ಮಾಡಿಕೊಂಡ ಎರಡೂ ಪಕ್ಷಗಳ ನಡುವೆ ಪದೇ ಪದೇ ವೈಮನಸ್ಸು ಮೂಡುತ್ತಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ಸರಕಾರ ಮುಂದುವರಿಸುತ್ತಾರೆ ಎಂಬುದೇ ರಾಜ್ಯದ ಜನರ ಮುಂದಿರುವ ಪ್ರಶ್ನೆ..!

ಅನಿವಾರ್ಯ ಸ್ಥಿತಿಯಲ್ಲಿ ಜೆಡಿಎಸ್ ಜೊತೆ ಮೈತ್ರಿ..!

ಚುನಾವಣೆಗೂ ಮೊದಲು ನರಿಗಳಂತೆ ಕಿತ್ತಾಡಿಕೊಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಇದೀಗ ಮೈತ್ರಿ ಮಾಡಿಕೊಂಡರೂ ಎರಡೂ ಪಕ್ಷಗಳ ಮುಖಂಡರಲ್ಲಿ ಅಸಮಧಾನ‌ ಎದ್ದು ಕಾಣುತ್ತಲೇ ಇದೆ.‌ ಯಾಕೆಂದರೆ ಇದೀಗ ಸ್ವತಃ ಡಿಸಿಎಂ ಜಿ ಪರಮೇಶ್ವರ್ ಅವರೇ ಹೇಳುವಂತೆ, ಜೆಡಿಎಸ್ ಜೊತೆ ಅನಿವಾರ್ಯ ಸ್ಥಿತಿಯಲ್ಲಿ ಮೈಜೋಡಿಸಿದಂತಾಗಿದೆ. ಇದೀಗ ಎಲ್ಲಾ ಉನ್ನತ ಹುದ್ದೆಗಳನ್ನು ಜೆಡಿಎಸ್ ಶಾಸಕರಿಗೇ ನೀಡುತ್ತಿದ್ದು, ಕಾಂಗ್ರೆಸ್ ನ್ನು ಕಡೆಗಣಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಸರಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಜೆಡಿಎಸ್ ನವರು ಎಲ್ಲಾ ದೊಡ್ಡ ಸ್ಥಾನಗಳನ್ನು ತಮಗೇಬೇಕು ಎಂದು ಒತ್ತಡ ಹೇರಿ ಪಡೆದುಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿದ್ದರೂ ಜೆಡಿಎಸ್ ನಂತಹ ಸಣ್ಣ ಪಕ್ಷದ ಮಾತು ಕೇಳಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ನಿಜಕ್ಕೂ ಬೇಸರದ ಸಂಗತಿ ಎಂದು ಹೇಳಿದ ಜಿ ಪರಮೇಶ್ವರ್, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು..!

ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದು ಒಂದು ವಾರ ಕಳೆದರೂ ಇನ್ನೂ ಮಂತ್ರಿ ಸ್ಥಾನಕ್ಜಾಗಿಯೇ ಪೈಪೋಟಿ ನಡೆಸುತ್ತಿರುವ ಎರಡೂ ಪಕ್ಷಗಳ ಶಾಸಕರ ನಡೆ ಗಮನಿಸಿದರೆ, ಮುಂದಿನ‌ ದಿನಗಳಲ್ಲಿ ಈ ನಾಯಕರು ಯಾವ ರೀತಿ ಅಭಿವೃದ್ಧಿ ಕಾರ್ಯ ನಡೆಸುತ್ತಾರೆ ಎಂಬುದು ಕಾದು ನೋಡಬೇಕಾಗಿದೆ…!

-ಅರ್ಜುನ್

Tags

Related Articles

Close