ಪ್ರಚಲಿತ

ಓಟ್‌ಬ್ಯಾಂಕ್‌ಗಾಗಿ ನಮ್ಮ ಪುರಾತನ ನಂಬಿಕೆಗಳನ್ನು ಅವಮಾನಿಸುತ್ತಿದೆ ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ ಹತ್ತು ವರ್ಷಗಳ ಎರಡು ಅವಧಿಯ ಆಡಳಿತದಲ್ಲಿ ದೇಶದಲ್ಲಿ ಸನಾತನ ಹಿಂದೂ ಧರ್ಮ, ದೇವರುಗಳು, ಹಿಂದೂ ಜನರು ನೆಮ್ಮದಿಯಿಂದ ನಿದ್ರಿಸುವಂತಹ ಸ್ಥಿತಿ ಇದೆ. ಹಿಂದೂ ಧರ್ಮ, ದೇವರುಗಳಿಗೆ ಸಂಬಂಧಿಸಿದ ಹಾಗೆಯೂ ಮಹತ್ವದ ಹಲವಾರು ಕ್ರಮಗಳನ್ನು ಕೈಗೊಂಡು ನ್ಯಾಯ ಒದಗಿಸಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆಯೇ ಸಲ್ಲಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ, ನವರಾತ್ರಿ ಸಮಯದಲ್ಲಿ ಉಪವಾಸ ಸೇರಿದಂತೆ ಇನ್ನಿತರ ದೈವಿಕ ಕಾರ್ಯಗಳನ್ನು ನಂಬಿಕೆಯಿಂದ ಮಾಡುವ ಪ್ರಧಾನಿ ಮೋದಿ ಅವರು ಹಿಂದೂ ಧರ್ಮದ ಮೇಲೆ ಅಪಾರ ನಂಬಿಕೆ, ಗೌರವ ಇರಿಸಿದ್ದಾರೆ ಎನ್ನಬಹುದು‌. ಹೀಗೆ ನೈಜ ದೇಶಭಕ್ತರಿಗೆ ಪ್ರಿಯವಾಗುವ ಹಲವಾರು ದಿಟ್ಟ ಕ್ರಮಗಳನ್ನು ಕೈಗೊಂಡ ಪ್ರಧಾನಿ ಮೋದಿ ಅವರನ್ನು ವಿರೋಧಿಸುವವರೂ ಇದ್ದಾರೆ. ಪ್ರಧಾ ನಿ ಮೋದಿ ಅವರು ಬಹುಸಂಖ್ಯಾತ ಹಿಂದೂಗಳಿಗೆ ಆಪ್ತವಾಗುವುದನ್ನು ಕಂಡು ಅವರ ವಿರುದ್ಧ ಮಸಲತ್ತು ನಡೆಸುವವರಿಗೂ ಕಡಿಮೆ ಇಲ್ಲ. ವಿರೋಧಿಗಳಂತೂ ಅವರು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಕಲ್ಲು ಹುಡುಕುವ ಕಾರ್ಯ ಮಾಡುತ್ತಿದ್ದಾರೆ ಎನ್ನುವುದು ಸತ್ಯ.

ಅವರ ಕೆಲಸಗಳನ್ನು ಜನರ ಮುಂದೆ ತಪ್ಪಾಗಿ ಚಿತ್ರಿಸುವ ಕೆಲಸವನ್ನು ಸಹ ವಿಪಕ್ಷಗಳು, ವಿರೋಧಿಗಳು ಮಾಡುತ್ತಿದ್ದಾರೆ. ಆ ಮೂಲಕ ತಮ್ಮ ಬೇಳೆ ಬೇಯಿಸಿಕೆೊಂಡು ಮತ ಪಡೆಯುವ ಚೀಪ್ ಟ್ರಿಕ್ಸ್ ಅನ್ನು ಬಳಕೆ ಮಾಡುತ್ತಿರುವುದು ನಿಜಕ್ಕೂ ನಾಚಿಗೇಡಿನ ಸಂಗತಿ.

ಅಯೋಧ್ಯೆಯ ಶ್ರೀರಾಮನಿಗೆ ನ್ಯಾಯ ಒದಗಿಸಿ, ಮಂದಿರ ನಿರ್ಮಾಣ ಮಾಡಿ ಕೊಟ್ಟ ಬಳಿಕ ಈಗ ಶ್ರೀಕೃಷ್ಣನಿಗೆ ನ್ಯಾಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸರ್ಕಾರ ಚಿಂತನೆ ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ಅವರು ಶೆಹಜಾದಾ ಸಾಗರದಲ್ಲಿ ಮುಳುಗಿರುವ ದ್ವಾರಕೆಗೆ ನೀರಿನೊಳಗೆ ತೆರಳಿ ಪೂಜೆ ಸಲ್ಲಿಸಿದ್ದರು. ಈ ವಿಷಯದಲ್ಲಿಯೂ ಕಾಂಗ್ರೆಸ್ ರಾಜಕೀಯ ಮಾಡಲು ಹೊರಟಿದ್ದು, ಕಾಂಗ್ರೆಸ್ ಪಕ್ಷದ ಸೋ ಕಾಲ್ಡ್ ಯುವ ನಾಯಕ ರಾಹುಲ್ ಗಾಂಧಿ ಅವರು ಈ ವಿಚಾರವನ್ನು ರಾಜಕೀಯ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತವಾಡಿದ್ದು, ಈ ವರ್ಷ ಆರಂಭದಲ್ಲಿ ನಾನು ಗುಜರಾತ್‌ನ ದ್ವಾರಕಾಯಲ್ಲಿ ನೀರೊಳಗೆ ಮುಳುಗಿ ಧ್ಯಾನಿಸಿದ್ದನ್ನು ರಾಹುಲ್ ಗಾಂಧಿ ಅಪಪ್ರಚಾರ ಮಾಡುತ್ತಿದ್ದಾರೆ. ತಮ್ಮ ಓಟ್‌ಬ್ಯಾಂಕ್‌ಗೆ ಫಲ ಸಿಗುವಂತೆ ಮಾಡಲು ಅವರು ಈ ವಿಷಯವನ್ನು ರಾಜಕೀಯಗೊಳಿಸಿದ್ದಾಗಿ ಅವರು ಕೆಂಡ ಕಾರಿದ್ದಾರೆ.

ಕಾಂಗ್ರೆಸ್ ಪಕ್ಷದ ಶೆಹಜಾದಾ ಎನ್ನುವ ಮೂಲಕ ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಮುದ್ರದ ಅಡಿಯಲ್ಲಿ ದ್ವಾರಕೆಯನ್ನು ಪುರಾತತ್ವ ಇಲಾಖೆಯವರೇ ಕಂಡುಕೊಂಡಿದ್ದಾರೆ. ಆ ದ್ವಾರಕೆಗೆ ನಾನು ನೀರಿನೊಳಕ್ಕೆ ಹೋಗಿ ಪೂಜೆ ಸಲ್ಲಿಸಿದೆ. ಆದರೆ ಕಾಂಗ್ರೆಸ್ ಪಕ್ಷ ನಾನು ತೆರಳಿದ ಪ್ರದೇಶದಲ್ಲಿ ಪೂಜೆ ಮಾಡಲು ಏನೂ ಇಲ್ಲ ಎಂದು ಬೊಗಳೆ ಬಿಡುತ್ತದೆ. ಕಾಂಗ್ರೆಸ್. ನವರು ಅಧಿಕಾರ, ಮತ ಬ್ಯಾಂಕ್‌ಗಾಗಿ ನಮ್ಮ ಸಂಸ್ಕೃತಿ, ಹಲವಾರು ತಲೆಮಾರುಗಳ ಹಿಂದಿನ ನಮ್ಮ ಸಂಪ್ರದಾಯವನ್ನು ಮರೆಯುತ್ತಿದ್ದಾರೆ. ನಮ್ಮ ನಂಬಿಕೆಗಳನ್ನು ತಿರಸ್ಕರಿಸಿದ್ದಾರೆ ಎಂದು ಅವರು ಕೆಂಡ ಕಾರಿದ್ದಾರೆ.

Tags

Related Articles

Close